PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 20 APR 2020 6:25PM by PIB Bengaluru

ಕೋವಿಡ್-19: ಪಿ  ಬಿ ದೈನಿಕ ವರದಿ

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

  • ದೇಶದಲ್ಲಿ ಇದುವರೆಗೆ 17,265 ಕೋವಿಡ್ -19 ದೃಢೀಕೃತ ಪ್ರಕರಣಗಳು ವರದಿಯಾಗಿವೆ. 2547 ಮಂದಿ  ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಾಗತಿಕ ಸಾಂಕ್ರಾಮಿಕದಿಂದಾಗಿ ಇದುವರೆಗೆ 543 ಸಾವುಗಳು ಸಂಭವಿಸಿವೆ.
  • ಲಾಕ್ ಡೌನ್ ಗೆ ಮೊದಲಿನ ವಾರದಲ್ಲಿ 3.4 ಪ್ರಮಾಣದಲ್ಲಿ ದುಪ್ಪಟ್ಟಾಗುತ್ತಿದ್ದ ದರಕ್ಕೆ ಹೋಲಿಸಿದರೆ ಈಗ ಅದು 7.5  ಕ್ಕೆ ಸುಧಾರಣೆಯಾಗಿದೆ.
  • ಭಾರತ ಯುವ ರಾಷ್ಟ್ರವಾಗಿದ್ದುಅನ್ವೇಷಣಾ ಉತ್ಸಾಹಕ್ಕೆ ಪ್ರತೀಕವಾಗಿದೆ, ಅದು ಹೊಸ ಕೆಲಸದ ಸಂಸ್ಕೃತಿಯನ್ನು ಒದಗಿಸುವಲ್ಲಿ ನಾಯಕತ್ವ ಸ್ಥಾನದಲ್ಲಿ ನಿಲ್ಲಬಲ್ಲದು ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.
  • ಜೀವನಾವಶ್ಯಕ ವಸ್ತುಗಳ ಇಡೀ ಪೂರೈಕೆ ಸರಪಳಿ ಸುಸೂತ್ರವಾಗಿ ಚಲಿಸುವಂತೆ ಖಾತ್ರಿಪಡಿಸಲು ರಾಜ್ಯಗಳಿಗೆ ಎಂ.ಎಚ್.. ಸೂಚನೆ.
  • ಕೋವಿಡ್ -19 ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯಗಳ ಹೋರಾಟದ ಪ್ರಯತ್ನಗಳನ್ನು ಒಗ್ಗೂಡಿಸಲು ಮತ್ತು ಪರಿಸ್ಥಿತಿಯ ಮೌಲ್ಯಮಾಪನ ಮಾಡಲು ಕೇಂದ್ರದಿಂದ  6 ಅಂತರ-ಸಚಿವಾಲಯ ತಂಡಗಳ ರಚನೆ
  • ತಳ ಮಟ್ಟದ ಆಡಳಿತದ ಬಳಕೆಗಾಗಿ ವೈದ್ಯರು, ಆರೋಗ್ಯ ವೃತ್ತಿಪರರು ಮತ್ತು ಸ್ವಯಂಸೇವಕರ  ಆನ್ ಲೈನ್ ದತ್ತಾಂಶಗಳ ಕ್ರೋಢೀಕರಣ.
  • ಕೋವಿಡ್ -19 ನಿಭಾಯಿಸಲು ಪರಸ್ಪರ ಗೌರವಾರ್ಹ ಮತ್ತು ಉಪಯುಕ್ತ ಸಹಯೋಗ ಮತ್ತು ಸಹಕಾರಕ್ಕೆ ಜಿ-20 ಸಭೆಯಲ್ಲಿ ಆರೋಗ್ಯ ಸಚಿವರ ಕರೆ.

 

ಕೋವಿಡ್ -19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಪ್ ಡೇಟ್ 

ದೇಶದಲ್ಲಿ ಒಟ್ಟು 17,265 ಕೋವಿಡ್ -19  ದೃಢೀಕೃತ ಪ್ರಕರಣಗಳು ವರದಿಯಾಗಿವೆ. ಒಟ್ಟು 2547 ಮಂದಿ ಅಂದರೆ ಒಟ್ಟು ಪ್ರಕರಣಗಳಲ್ಲಿ 14.75  % ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ ಕೋವಿಡ್ -19 ರಿಂದ  543 ಸಾವುಗಳು ಸಂಭವಿಸಿವೆ. ಕೋವಿಡ್ -19 ರ ದುಪ್ಪಟ್ಟು ದರ ವನ್ನು ಕಳೆದ 7 ದಿನಗಳಲ್ಲಿ ಆದ ಬೆಳವಣಿಗೆಯನ್ನು ಪರಿಗಣಿಸಿ ಲೆಕ್ಕಾಚಾರ ಮಾಡಲಾಗುತ್ತದೆ. ಅದರನ್ವಯ ಲಾಕ್ ಡೌನಿಗೆ ಮೊದಲು ಭಾರತದ ದುಪ್ಪಟ್ಟು ದರ ವಾರವೊಂದಕ್ಕೆ 3.4 ರಷ್ಟಿತ್ತು , ಈಗ 2020 ರ ಏಪ್ರಿಲ್ 19 ರಂದು (ಕಳೆದ ಏಳು ದಿನಗಳ) ಇದು 7.5 ಕ್ಕೆ ಸುಧಾರಿಸಿದೆ.

ವಿವರಗಳಿಗೆhttps://pib.gov.in/PressReleasePage.aspx?PRID=1616526

ಕೋವಿಡ್-19 ಸಮಯದಲ್ಲಿ ಬದುಕು

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಿಂಕ್ಡಿನ್ ನಲ್ಲಿ  ಯುವಕರಿಗೆ ಮತ್ತು ವೃತ್ತಿಪರರಿಗೆ ಆಸಕ್ತಿದಾಯಕವಾಗಬಲ್ಲ ಕೆಲವು ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.“ ಇಂದು ಜಗತ್ತು ಹೊಸ ವ್ಯಾಪಾರದ ಮಾದರಿಗಳನ್ನು ಎದುರು ನೋಡುತ್ತಿದೆ. ಯುವಕರ ದೇಶವಾಗಿರುವ ಭಾರತವು ಅನ್ವೇಷಣಾ ಉತ್ಸಾಹಕ್ಕೆ ಪ್ರತೀಕವಾಗಿದೆ, ಅದು ಹೊಸ ಕೆಲಸದ ಸಂಸ್ಕೃತಿಯನ್ನು ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸಬಲ್ಲದು ಎಂದು ಅವರು ಹೇಳಿದ್ದಾರೆ. ಈ ಹೊಸ ವ್ಯಾಪಾರ ಮತ್ತು ಕೆಲಸದ ಸಂಸ್ಕೃತಿಯನ್ನು ತಾನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಿರುವುದಾಗಿ ಹೇಳಿದ ಪ್ರಧಾನ ಮಂತ್ರಿ ಅವರು ಅದನ್ನು ಹೊಂದಾಣಿಕೆ, ದಕ್ಷತೆ, ಒಳಗೊಳ್ಳುವಿಕೆ, ಅವಕಾಶ ಮತ್ತು ವಿಶ್ವವ್ಯಾಪಕತೆಯ ಮೂಲಕ ಮರುವ್ಯಾಖ್ಯಾನಿಸಬಹುದಾಗಿದೆ ಎಂದಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1616295

ಕೋವಿಡ್ -19 ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ರಾಜ್ಯಗಳ ಹೋರಾಟದ ಪ್ರಯತ್ನಗಳನ್ನು ಒಗ್ಗೂಡಿಸಲು ಮತ್ತು ಪರಿಸ್ಥಿತಿಯ ಮೌಲ್ಯಮಾಪನ ಮಾಡಲು ಕೇಂದ್ರದಿಂದ 6 ಅಂತರ -ಸಚಿವಾಲಯ ತಂಡಗಳ ರಚನೆ

ಕೇಂದ್ರ ಸರಕಾರವು 6 ಅಂತರ ಸಚಿವಾಲಯ ಕೇಂದ್ರೀಯ ತಂಡಗಳನ್ನು (.ಎಂ.ಸಿ.ಟಿ.ಎಸ್.) ರಚಿಸಿದೆ. ಪಶ್ಚಿಮ ಬಂಗಾಲ ಮತ್ತು ಮಹಾರಾಷ್ಟ್ರಗಳಿಗೆ ತಲಾ ಎರಡು, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಿಗೆ ತಲಾ ಒಂದೊಂದು ತಂಡಗಳನ್ನು ಸ್ಥಳದಲ್ಲಿಯೇ ಮೌಲ್ಯಮಾಪನ ಮಾಡಿ ಅದರ ಪರಿಹಾರಕ್ಕೆ ರಾಜ್ಯದ ಅಧಿಕಾರಿಗಳಿಗೆ ಅವಶ್ಯ ನಿರ್ದೇಶನಗಳನ್ನು ನೀಡಲು ಮತ್ತು ಸಾರ್ವಜನಿಕರ ವಿಸ್ತಾರ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಅವುಗಳ ವರದಿ ಸಲ್ಲಿಸುವುದಕ್ಕಾಗಿ ರಚಿಸಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1616478

ವಾಣಿಜ್ಯದ ಮೂಲಕ ಜೀವನಾವಶ್ಯಕ ಸರಕುಗಳ ಇಡೀ ಪೂರೈಕೆ ಸರಪಳಿಯ ಸುಸೂತ್ರ ಚಲನೆಯನ್ನು ರಾಜ್ಯಗಳು ಖಾತ್ರಿಪಡಿಸಬೇಕು

ಇದನ್ನು ಎಂ.ಎಚ್.. ಯು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಯಪಡಿಸಿದ್ದು, ಮಾತ್ರವಲ್ಲದೆ ಇದನ್ನು ಎಲ್ಲಾ ಕ್ಷೇತ್ರೀಯ ಏಜೆನ್ಸಿಗಳಿಗೆ ಸ್ಪಷ್ಟೀಕರಿಸುವಂತೆ ಹಾಗು ಸಾರ್ವಜನಿಕರಲ್ಲಿ ವ್ಯಾಪಕವಾಗಿ ಪ್ರಚುರಪಡಿಸುವಂತೆ , ಆ ಮೂಲಕ ಅವಶ್ಯಕ ಸರಕುಗಳ ಇಡೀ ಪೂರೈಕೆ ಸರಪಳಿಯು ಸುಸೂತ್ರವಾಗಿ ಮುಂದುವರಿಯುವುದನ್ನು, -ವಾಣಿಜ್ಯ ಮೂಲಕವೂ ಸೇರಿದಂತೆ  ಖಾತ್ರಿಪಡಿಸುವಂತೆಯೂ ಕೋರಿದೆ. ಎಂ.ಎಚ್... ಆದೇಶಗಳನ್ನು ಅನುಸರಿಸಿ  ರಾಜ್ಯ ಸರಕಾರಗಳು/ ಕೇಂದ್ರಾಡಳಿತ ಪ್ರದೇಶಗಳು ಹೊರಡಿಸುವ ಮಾರ್ಗದರ್ಶಿಗಳು/ ಆದೇಶಗಳನ್ನು ಸೂಕ್ತ ರೀತಿಯಲ್ಲಿ ಸರಿಯಾದ ಸ್ಥಿತಿಯನ್ನು ಪ್ರತಿನಿಧಿಸುವಂತೆ ಪರಿಷ್ಕರಿಸಲೂ  ಸೂಚಿಸಲಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1616284

ಕೋವಿಡ್-19 ನಿಯಂತ್ರಣ ಮತ್ತು ಅದರ ವಿರುದ್ದ ಹೋರಾಟಕ್ಕೆ ಸಂಕೀರ್ಣ ಮಾನವ ಸಂಪನ್ಮೂಲವನ್ನು ಹೊಂದುವುದಕ್ಕಾಗಿ ಆನ್ ಲೈನ್ ದತ್ತಾಂಶ ಕ್ರೋಢೀಕರಣ ವ್ಯವಸ್ಥೆಯನ್ನು ಸರಕಾರ ಆರಂಭಿಸಿದೆ

ಕೇಂದ್ರ ಸರಕಾರವು ಆಯುಷ್ ವೈದ್ಯರು ಸಹಿತ ವೈದ್ಯರು ದಾದಿಯರು, ಮತ್ತು ಇತರ ಆರೋಗ್ಯ ರಕ್ಷಣಾ ವೃತ್ತಿಪರರು, ಎನ್.ವೈ.ಕೆ.ಎಸ್., ಎನ್.ಸಿ.ಸಿ., ಎನ್.ಎಸ್.ಎಸ್., ಪಿ.ಎಂ.ಜಿ.ಕೆ.ವಿ.ವೈ., ಮಾಜಿ ಸೈನಿಕರು ಮತ್ತಿತರರನ್ನು ಒಳಗೊಂಡ ಆನ್ ಲೈನ್ ದತ್ತಾಂಶ ಕ್ರೋಢೀಕರಣ ವ್ಯವಸ್ಥೆಯನ್ನು https://covidwarriors.gov.in ರಲ್ಲಿ ಆರಂಭಿಸಿದೆ. ಇದು ರಾಜ್ಯಗಳು, ಜಿಲ್ಲೆಗಳು ಅಥವಾ ಮುನ್ಸಿಪಲ್ ಮಟ್ಟದಲ್ಲಿ ತಳಮಟ್ಟದ ಆಡಳಿತದ ಬಳಕೆಗೆ ಅನುಕೂಲ ಮಾಡಿಕೊಡಲಿದೆ. ಮಾಹಿತಿಯನ್ನು ಪ್ರದರ್ಶನ ಫಲಕಕ್ಕೆ (ಡ್ಯಾಶ್ ಬೋರ್ಡ್ ) ಅಪ್ ಲೋಡ್ ಮಾಡಲಾಗಿದೆ ಮತ್ತು ಇದನ್ನು ನಿಯಮಿತವಾಗಿ ನವೀಕರಿಸಲಾಗುತ್ತದೆ. ಕೋವಿಡ್ -19 ನಿಯಂತ್ರಣ ಮತ್ತು ಅದರ ವಿರುದ್ದ ಹೋರಾಟ ಮಾಡಲು ಈ ಸಂಕೀರ್ಣ ಮಾನವ ಸಂಪನ್ಮೂಲ ಮಾಹಿತಿ ಬಹಳ ಉಪಕಾರಿ.

ವಿವರಗಳಿಗೆ: https://pib.gov.in/PressReleasePage.aspx?PRID=1616279

ಜಿ-20 ಆರೋಗ್ಯ ಸಚಿವರ ಸಭೆಯು ಕೋವಿಡ್ -19 ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಿತು

ಕೋವಿಡ್ -19 ನಿಯಂತ್ರಣಕ್ಕೆ ಪರಸ್ಪರ ಗೌರವಾರ್ಹವಾದ ಮತ್ತು ಪ್ರಯೋಜನಕಾರಿಯಾದ ಸಹಯೋಗಗಳನ್ನು ಒಳಗೊಂಡ ಸಹಕಾರವನ್ನು ರೂಪಿಸಿಕೊಳ್ಳುವ ಅಗತ್ಯವನ್ನು 19 ರಾಷ್ಟ್ರಗಳ ಸರಕಾರಗಳ ಮತ್ತು ಯುರೋಪಿಯನ್ ಯೂನಿಯನ್ನಿನ (.ಯು.) ಅಂತಾರಾಷ್ಟ್ರಿಯ ವೇದಿಕೆಯಾದ   ಜಿ 20 ರಾಷ್ಟಗಳ ಆರೋಗ್ಯ ಸಚಿವರ ವೀಡಿಯೋ ಸಮ್ಮೇಳನದಲ್ಲಿ ಡಾ. ಹರ್ಷ ವರ್ಧನ ಅವರು ಒತ್ತಿ ಹೇಳಿದ್ದಾರೆಜಾಗತಿಕ ಆರೋಗ್ಯ ಕಾರ್ಯಪಟ್ಟಿಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ ಡಾ. ಹರ್ಷ ವರ್ಧನ ಅವರು ಭಾರತವು ಕೋವಿಡ್-19 ನಿವಾರಣೆಯ ನಿಟ್ಟಿನಲ್ಲಿ ಜಿ.20 ಸದಸ್ಯ ರಾಷ್ಟ್ರಗಳ ಜೊತೆ ಏಕೀಕೃತ ಪ್ರಯತ್ನಗಳನ್ನು ನಡೆಸುವುದನ್ನು ಎದುರು ನೋಡುತ್ತಿದೆ ಎಂದಿದ್ದಾರೆ.

ವಿವರಗಳಿಗೆ: https://pib.gov.in/PressReleasePage.aspx?PRID=1616305

ಕೋವಿಡ್ -19 ಲಾಕ್ ಡೌನ್ ಹೊರತಾಗಿಯೂ ರಸಗೊಬ್ಬರಗಳ ಉತ್ಪಾದನೆ ಮತ್ತು ಸಾಗಾಟ ರೈತರ ಬೇಡಿಕೆಗೆ ಸಾಕಾಗುವಷ್ಟಿದೆ

ಏಪ್ರಿಲ್ 14 ರಂದು , ಗರಿಷ್ಟ 41 ಸಂಖ್ಯೆಯ ರಸಗೊಬ್ಬರ ರೇಕುಗಳು ಸ್ಥಾವರ ಮತ್ತು ಬಂದರುಗಳಿಂದ ಹೊರಟಿವೆ. ಲಾಕ್ ಡೌನ್ ಅವಧಿಯಲ್ಲಿ ದಿನವೊಂದರಲ್ಲಿ ಮಾಡಲಾದ ದೊಡ್ಡ ಪ್ರಮಾಣದ ಸಾಗಾಟ ಇದಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1616239

ಲಾಕ್ ಡೌನ್ ಅವಧಿಯಲ್ಲಿ ಎಫ್.ಸಿ..ಯಿಂದ ಈಶಾನ್ಯ ಕಾರ್ಯಾಚರಣೆಗಳು

25 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಎಫ್.ಸಿ..ಯು 158 ರೈಲು ಲೋಡುಗಳ ಮೂಲಕ 4,42,000 ಎಂ.ಟಿ. ಆಹಾರ ಧಾನ್ಯಗಳನ್ನು ಈಶಾನ್ಯದ ರಾಜ್ಯಗಳಿಗೆ ಸಾಗಾಟ ಮಾಡಿದೆ. ಈ ಮೊದಲು ತಿಂಗಳಿಗೆ 80 ರೈಲು ಲೋಡುಗಳಷ್ಟು ಮಾತ್ರ ಸಾಗಾಟವಾಗುತ್ತಿತ್ತು, ಅದೀಗ ಅದರ ಸರಾಸರಿಯ ದುಪ್ಪಟ್ಟಾಗಿದೆ. ಎನ್..ಆರ್. ನ ದೂರ/ ದುರ್ಗಮ   ಪ್ರದೇಶಗಳನ್ನು ತಲುಪಲು ಬೃಹತ್ ಪ್ರಮಾಣದಲ್ಲಿ ರಸ್ತೆ ಸಾರಿಗೆಯನ್ನೂ ಇದಕ್ಕೆ ಪೂರಕವಾಗಿ ಒದಗಿಸಲಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1616277

ಪ್ರಧಾನ ಮಂತ್ರಿ ಮತ್ತು ಮಾಲ್ದೀವ್ಸ್ ಅಧ್ಯಕ್ಷರ ನಡುವೆ ದೂರವಾಣಿ ಸಂಭಾಷಣೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾಲ್ದೀವ್ಸ್ ಅಧ್ಯಕ್ಷ ಗೌರವಾನ್ವಿತ ಇಬ್ರಾಹಿಂ ಮೊಹಮ್ಮದ್ ಸೋಲ್ಹಿ ಅವರ ಜೊತೆ ದೂರವಾಣಿ ಸಂಭಾಷಣೆ ನಡೆಸಿದರು. ಅವರವರ ದೇಶದಲ್ಲಿ ಕೋವಿಡ್ -19  ರ ಈಗಿನ ಸ್ಥಿತಿ ಗತಿಯ ಬಗ್ಗೆ ಇಬ್ಬರು ನಾಯಕರೂ ಮಾಹಿತಿ ಹಂಚಿಕೊಂದರು. ಸಾರ್ಕ್ ದೇಶಗಳ ನಡುವೆ ಒಪ್ಪಿಕೊಳ್ಳಲಾದ ಸಮನ್ವಯ ಮಾದರಿಗಳನ್ನು ಸಕ್ರಿಯವಾಗಿ ಅನುಷ್ಟಾನಿಸಲಾಗುತ್ತಿರುವುದಕ್ಕೆ ಅವರು ತೃಪ್ತಿ ವ್ಯಕ್ತಪಡಿಸಿದರು.

ವಿವರಗಳಿಗೆhttps://pib.gov.in/PressReleasePage.aspx?PRID=1616468

ನರೇಲಾ ಕ್ವಾರಂಟೈನ್ ಕೇಂದ್ರಕ್ಕೆ ಸೇನೆಯ ನೆರವು

ದಿಲ್ಲಿಯಲ್ಲಿಯ ಕೋವಿಡ್ ಶಂಕಿತರ ನಿರ್ವಹಣೆಗಾಗಿ ದಿಲ್ಲಿಯಲ್ಲಿರುವ ನರೇಲಾ ಕ್ವಾರಂಟೈನ್ ಕೇಂದ್ರ ದೇಶದ ಬಹು ದೊಡ್ಡ ಕ್ವಾರಂಟೈನ್ ಕೇಂದ್ರವಾಗಿದೆ. 2020 ರ ಮಾರ್ಚ್ ಮಧ್ಯಭಾಗದಲ್ಲಿ ದಿಲ್ಲಿ ಸರಕಾರ ಇದನ್ನು   ಸ್ಥಾಪಿಸಿತು. 20 ರ ಏಪ್ರಿಲ್ 1 ರಿಂದ ನರೇಲಾ ಕ್ವಾರಂಟೈನ್ ಕೇಂದ್ರದಲ್ಲಿ ನಾಗರಿಕ ಆಡಳಿತಕ್ಕೆ ಸೇನಾ ವೈದ್ಯರು ಮತ್ತು ದಾದಿಯರು ಸಹಾಯ ನೀಡುತ್ತಿದ್ದಾರೆ. 20 ರ ಏಪ್ರಿಲ್ 16 ರಿಂದ ಸೇನೆಯು ಈ ಸೌಲಭ್ಯವನ್ನು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಿರ್ವಹಿಸುತ್ತಿದೆ. ಆ ಮೂಲಕ ದಿಲ್ಲಿ ಸರಕಾರದ ವೈದ್ಯರು ಮತ್ತು ಅರೋಗ್ಯ ಸಿಬ್ಬಂದಿಗಳಿಗೆ ಈ ಸೌಲಭ್ಯವನ್ನು ಹಗಲು  ಅವಧಿಯಲ್ಲಿ ನಿರ್ವಹಿಸುವ ಜವಾಬ್ದಾರಿಯಿಂದ ಬಿಡುಗಡೆ ದೊರೆತಂತಾಗಿದೆ .

ವಿವರಗಳಿಗೆ: https://pib.gov.in/PressReleasePage.aspx?PRID=1616287

ರಸ್ತೆ ಸಚಿವಾಲಯದ ಜಾಲತಾಣದಲ್ಲಿ ಧಾಬಾ ಮತ್ತು ಟ್ರಕ್ ದುರಸ್ತಿ ಅಂಗಡಿಗಳ ಡ್ಯಾಶ್ ಬೋರ್ಡ್

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ತನ್ನ ಜಾಲತಾಣದಲ್ಲಿ ಎನ್.ಎಚ್..., ರಾಜ್ಯಗಳು, ತೈಲ ಮಾರುಕಟ್ಟೆ ಕಂಪೆನಿಗಳಂತಹ ಸಂಸ್ಥೆಗಳು ದೇಶಾದ್ಯಂತ ಹೊಂದಿರುವ ಟ್ರಕ್ ದುರಸ್ತಿ ಅಂಗಡಿಗಳು ಹಾಗು ಧಾಬಾಗಳ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ಡ್ಯಾಶ್ ಬೋರ್ಡ್ ಸಂಪರ್ಕ ಕೊಂಡಿ ರೂಪಿಸಿ ಪ್ರಕಟಿಸಿವೆ. ಟ್ರಕ್/ ಸರಕು ಚಾಲಕರಿಗೆ ಮತ್ತು ಕ್ಲೀನರುಗಳಿಗೆ ದೇಶದ ವಿವಿಧೆಡೆ ಸರಕು ಸಾಗಾಣಿಕೆ, ಪೂರೈಕೆಗಾಗಿ ಕೋವಿಡ್ -19 ರ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್ ಡೌನ್ ನ ಅವಧಿಯಲ್ಲಿ , ಸವಾಲಿನ ಅವರ ಪ್ರಯಾಣದಲ್ಲಿ ಸಹಕಾರಿಯಾಗುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ

ವಿವರಗಳಿಗೆhttps://pib.gov.in/PressReleasePage.aspx?PRID=1616503

ಕೋವಿಡ್ -19 ವಿರುದ್ದ ಚಾಲ್ತಿಯಲ್ಲಿರುವ ಹೋರಾಟದಲ್ಲಿ ಕೈಜೋಡಿಸಲು ಕೇಂದ್ರೀಯ ವಿದ್ಯಾಲಯ ಸಂಘಟನೆಯು ವಿವಿಧ ಕ್ರಮಗಳನ್ನು ಕೈಗೊಂಡಿದೆ

ಇಂದಿನವರೆಗೆ , 80 ಕೇಂದ್ರೀಯ ವಿದ್ಯಾಲಯಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಬಳಸಲು ಅವುಗಳನ್ನು ವಿವಿಧ ಪ್ರಾಧಿಕಾರಿಗಳಿಗೆ ಬಿಟ್ಟು ಕೊಡಲಾಗಿದೆ. 32,247 ಮಂದಿ ಶಿಕ್ಷಕರು 7,07,312 ವಿದ್ಯಾರ್ಥಿಗಳಿಗೆ ವಿವಿಧ ಆನ್ ಲೈನ್ ವೇದಿಕೆಗಳ ಮೂಲಕ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ

ವಿವರಗಳಿಗೆ: https://pib.gov.in/PressReleasePage.aspx?PRID=1616509

 

ದೇಶದಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯಲು ಜಿಲ್ಲಾಡಳಿತಗಳು ಮತ್ತು ಗ್ರಾಮ ಪಂಚಾಯತ್ ಗಳು ದೇಶಾದ್ಯಂತ ವಿವಿಧ ಕಾರ್ಯಚಟುವಟಿಕೆಗಳಲ್ಲಿ ನಿರತವಾಗಿವೆ

ಸಲಹಾ ಸಮಿತಿಗಳ ರಚನೆ; ರೋಗದ ಬಗ್ಗೆ ಜಾಗೃತಿ ಮೂಡಿಸಲು ಗೋಡೆ ಚಿತ್ರಗಳ ರಚನೆ, ಮುಖಗವಸುಗಳನ್ನು ಸ್ಥಳೀಯವಾಗಿ ಹೊಲಿದು ವಿತರಣೆ, ಉಚಿತ ಆಹಾರ ವಿತರಣೆ/ ಅವಶ್ಯ ಇರುವವರಿಗೆ ಪಡಿತರ ಮತ್ತು ಸಾರ್ವಜನಿಕ ಸ್ಥಳಗಳ ನೈರ್ಮಲ್ಯೀಕರಣ ಸಹಿತ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1616484

ಕೋವಿಡ್ -19 ನಿರ್ವಹಣೆಯ ಪರಿಸ್ಥಿತಿಯನ್ನು ಪರಾಮರ್ಶಿಸಲು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಡಾ. ಹರ್ಷ ವರ್ಧನ್ ಭೇಟಿ

ಆಸ್ಪತ್ರೆ ಸಿದ್ದತೆಯ ನಿಟ್ಟಿನಲ್ಲಿ ಉದ್ಭವಿಸುತ್ತಿರುವ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು 450  ಹಾಸಿಗೆಗಳ ಕೋವಿಡ್ -19 ಆಸ್ಪತ್ರೆಯಾಗಿ ಸಾಕಷ್ಟು ಐಸೋಲೇಶನ್ ವಾರ್ಡ್ ಮತ್ತು ಹಾಸಿಗೆಗಳೊಂದಿಗೆ ಕಾರ್ಯಾಚರಿಸುತ್ತಿದೆ . ದೇಶದಲ್ಲಿ ಕೋವಿಡ್ -19 ನಿರ್ವಹಣೆ, ಪ್ರಸಾರ ತಡೆ ಮತ್ತು ರೋಗ ತಡೆಯನ್ನು ನಿಯಮಿತವಾಗಿ ಅತ್ಯುನ್ನತ ಮಟ್ಟದಲ್ಲಿ ರಾಜ್ಯ ಸರಕಾರಗಳ ಸಹಯೋಗದಲ್ಲಿ ನಿಗಾ ವಹಿಸಲಾಗುತ್ತಿದೆ ಎಂದು ಡಾ. ಹರ್ಷ ವರ್ಧನ ಅವರು ಹೇಳಿದ್ದಾರೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1616248

ಆವಶ್ಯಕತೆ ಉಳ್ಳ ಜನರಿಗೆ ಭಾರತೀಯ ರೈಲ್ವೇಯಿಂದ 20 ಲಕ್ಷಕ್ಕೂ ಅಧಿಕ ಉಚಿತ ಊಟ ಒದಗಣೆ

ಕೋವಿಡ್ -19 ಅಂಗವಾಗಿ ಜಾರಿಯಲ್ಲಿರುವ ರಾಷ್ಟ್ರ ವ್ಯಾಪೀ ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ರೈಲ್ವೇಯು ವಿತರಿಸುತ್ತಿರುವ ಬಿಸಿಯೂಟದ ಸಂಖ್ಯೆ ಇಂದು ಎರಡು ಮಿಲಿಯನ್ ದಾಟಿತು. ಕೋವಿಡ್ -19  ಲಾಕ್ ಡೌನ್ ಜಾರಿಗೆ ಬಂದ ಬಳಿಕ 2020 ರ ಮಾರ್ಚ್ 28 ರಿಂದ ಅವಶ್ಯಕತೆ ಇರುವ ಜನರಿಗೆ ಬಿಸಿಯೂಟ ಒದಗಿಸಲು ಹಲವು ರೈಲ್ವೇ ಸಂಘಟನೆಗಳ 20.5 ಲಕ್ಷಕ್ಕೂ ಅಧಿಕ ರೈಲ್ವೇ ಸಿಬ್ಬಂದಿಗಳು ನಿರಂತರ ಶ್ರಮಿಸುತ್ತಿದ್ದಾರೆ. ರೈಲ್ವೇಯು ಐ.ಆರ್.ಸಿ.ಟಿ.ಸಿ. ಮೂಲದ ಅಡುಗೆ ಮನೆಗಳು ಆರ್.ಪಿ.ಎಫ್. ಸಂಪನ್ಮೂಲಗಳ ಮೂಲಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಪೇಪರ್ ಪ್ಲೇಟುಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಬೇಯಿಸಿದ ಆಹಾರವನ್ನು ಮಧ್ಯಾಹ್ನದ ಊಟದ ವೇಳೆಯಲ್ಲಿ ಒದಗಿಸುತ್ತದೆ ಮತ್ತು ರಾತ್ರಿ ಊಟವನ್ನು ಆಹಾರ ಪೊಟ್ಟಣಗಳಲ್ಲಿ ವಿತರಿಸುತ್ತದೆ. ಅವಶ್ಯಕತೆ ಇರುವವರಿಗೆ ಆಹಾರ ವಿತರಿಸುವಾಗ ಸಾಮಾಜಿಕ ಅಂತರ ಮತ್ತು ಸ್ವಚ್ಚತೆಯನ್ನು ಪಾಲಿಸಲಾಗುತ್ತದೆ.

ವಿವರಗಳಿಗೆhttps://pib.gov.in/PressReleasePage.aspx?PRID=1616516

ಕೋವಿಡ್ -19 ರ ವಿರುದ್ದ ಹೋರಾಡಲು ಕಲ್ಲಿದ್ದಲು ಮತ್ತು ಗಣಿಗಳ ಸಾರ್ವಜನಿಕ ರಂಗದ ಉದ್ದಿಮೆಗಳಿಂದ ಸಾಧ್ಯ ಇರುವ ಅತ್ಯುತ್ತಮ ಬೆಂಬಲ ನೀಡಿಕೆ: ಶ್ರೀ ಪ್ರಹ್ಲಾದ್ ಜೋಶಿ

ರಾಷ್ಟ್ರೀಯ ಅಲ್ಯುಮಿನಿಯಂ ಕಂಪೆನಿ (ನಾಲ್ಕೋ ) ಮತ್ತು ಕೋಲ್ ಇಂಡಿಯಾ ಅಂಗ ಸಂಸ್ಥೆಯಾದ ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್  (ಎಂ.ಸಿ.ಎಲ್.) ಗಳು ಒಡಿಶಾದಲ್ಲಿ ಎರಡು ಕೋವಿಡ್ -19 ಆಸ್ಪತ್ರೆಗಳಿಗೆ ಪೂರ್ಣ ಪ್ರಮಾಣದ ನಿಧಿಯನ್ನು ಒದಗಿಸಲಿವೆ. ಈ ಆಸ್ಪತ್ರೆಗಳನ್ನು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಒಡಿಶಾ ಮುಖ್ಯಮಂತ್ರಿ ಶ್ರೀ ನವೀನ್ ಪಾಟ್ನಾಯಕ್  ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಳ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ  ಅವರೊಡಗೂಡಿ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಆಸ್ಪತ್ರೆಗಳನ್ನು ಒಡಿಶಾ ಸರಕಾರ ಆರಂಭಿಸಿದೆ , ಇದನ್ನು ರಾಜ್ಯದ ವಿವಿಧ ವೈದ್ಯಕೀಯ ಆಸ್ಪತ್ರೆಗಳ ಸಹಾಯದೊಂದಿಗೆ ನಡೆಸಲಾಗುವುದು.  

ವಿವರಗಳಿಗಾಗಿhttps://pib.gov.in/PressReleasePage.aspx?PRID=1616494

ಕೋವಿಡ್ -19 ರ ವಿರುದ್ದದ ಹೋರಾಟದಲ್ಲಿ ಚಂಡೀಗಢ ನಗರವು ತ್ಯಾಜ್ಯ ಸಂಗ್ರಹ ಚಾಲಕರು ಮತ್ತು ವಾಹನಗಳನ್ನು ಟ್ರ್ಯಾಕ್ ಮಾಡಲು ಜಿ.ಪಿ.ಎಸ್. ಅಳವಡಿಕೆ ಮಾಡಲಾದ ಸ್ಮಾರ್ಟ್ ವಾಚ್ ಗಳು ಮತ್ತು ವಾಹನ ಟ್ರ್ಯಾಕಿಂಗ್ ಅಪ್ಲಿಕೇಶನುಗಳನ್ನು ಬಳಸುತ್ತಿದೆ

ಚಂಡೀಗಢದಲ್ಲಿ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗುತ್ತಿದ್ದಂತೆ, ನಗರವು ಪಾಸಿಟಿವ್ ಪ್ರಕರಣದ ಸಂಪರ್ಕಕ್ಕೆ ಬಂದ ಎಲ್ಲಾ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲು ಆರಂಭಿಸಿತು. ಕ್ವಾರಂಟೈನ್ ಮಾಡಲಾದ ವ್ಯಕ್ತಿಗಳ ಮೇಲೆ ಸಿ.ವಿ.ಡಿ.ಟ್ರ್ಯಾಕರ್ ಆಪ್ ಮೂಲಕ ನಿಗಾ ಇಡಲಾಯಿತು. ಕ್ವಾರಂಟೈನ್ ಮಾಡಲಾದ ಕುಟುಂಬಗಳಿಗೆ ಅವಶ್ಯಕ ಸಾಮಗ್ರಿಗಳನ್ನು ಪೂರೈಸಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಯಿತು.

ವಿವರಗಳಿಗೆ: https://pib.gov.in/PressReleasePage.aspx?PRID=1616393

ಭಾರತದ ವಿವಿಧ ಭಾಗಗಳಿಗೆ ಅವಶ್ಯ ವೈದ್ಯಕೀಯ ಸರಕನ್ನು ಪೂರೈಸಲು 3 ಲಕ್ಷ ಕಿಲೋ ಮೀಟರ್ ಹಾರಾಟ ಮಾಡಿದ ಲೈಫ್ ಲೈನ್ ಉಡಾನ್ ವಿಮಾನಗಳು

ಲೈಫ್ ಲೈನ್ ಉಡಾನ್ ವಿಮಾನಗಳು 507.85 ಟನ್ ಅವಶ್ಯಕ ವೈದ್ಯಕೀಯ ಸರಕು ಸಾಗಾಣಿಕೆಗೆ 3 ಲಕ್ಷ ಕಿಲೋ ಮೀಟರ್ ವಾಯು ದೂರವನ್ನು ಕ್ರಮಿಸಿವೆ. ಲೈಫ್ ಲೈನ್ ಉಡಾನ್ ಅಡಿಯಲ್ಲಿ ಏರಿಂಡಿಯಾ, ಅಲಯೆನ್ಸ್ ಏರ್ , ..ಎಫ್., ಮತ್ತು ಖಾಸಗಿ ಕ್ಯಾರಿಯರ್ ಗಳ 301 ವಿಮಾನಗಳು ಹಾರಾಟ ನಡೆಸಿವೆ

ವಿವರಗಳಿಗೆhttps://pib.gov.in/PressReleasePage.aspx?PRID=1616490

ಗ್ರಾಂ ನೆಗೆಟಿವ್ ಸೆಪ್ಸಿಸ್ ರೋಗದಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸಲು ಔಷಧಿ ಅಭಿವೃದ್ದಿಯ ಪ್ರಯತ್ನಗಳಿಗೆ  ಸಿ.ಎಸ್..ಆರ್. ಬೆಂಬಲ.

ಕೋವಿಡ್-19 ರಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಔಷಧಿಯ ಪರಿಣಾಮವನ್ನು ಮೌಲ್ಯಮಾಪನ ಮಾಡುವುದಕ್ಕಾಗಿ ಕ್ಲಿನಿಕಲ್ ಪರೀಕ್ಷೆಯನ್ನು ಆರಂಭಿಸಲು ಸಿ.ಎಸ್..ಆರ್ ಮುಂದಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1616379

ಉನಾದಲ್ಲಿ ಕ್ಯಾನ್ಸರಿನಿಂದ ಬಳಲುತ್ತಿದ್ದ ಮಗುವಿಗೆ ತುರ್ತಾಗಿ ಔಷಧಿಗಳನ್ನು ಪೂರೈಸಿದ ಇಂಡಿಯಾ ಪೋಸ್ಟ್.

ಹಿಮಾಚಲ ಪ್ರದೇಶದ ಉನಾದ ಎಂಟು ವರ್ಷದ ಬಾಲಕಿ ಶಾಲಿನಿ (ಹೆಸರು ಬದಲಿಸಲಾಗಿದೆ) ಕ್ಯಾನ್ಸರಿನಿಂದ ಬಳಲುತ್ತಿದ್ದು, ಇಂಡಿಯಾ ಪೋಸ್ಟ್ ಔಷಧಿಗಳನ್ನು ಪೂರೈಕೆ ಮಾಡಿದೆ,

ವಿವರಗಳಿಗೆ: https://pib.gov.in/PressReleasePage.aspx?PRID=1616242

 

ಪಿ.ಐ.ಬಿ. ಕ್ಷೇತ್ರ ಕಾರ್ಯಾಲಯಗಳ ಮಾಹಿತಿ

· ಪಂಜಾಬ್: ಪಂಜಾಬ್ ಮಂಡಿ ಮಂಡಳಿಯು ಇದುವರೆಗೆ ತನ್ನ ಅಧಿಕಾರಿಗಳಿಗೆ/ ಸಿಬ್ಬಂದಿಗಳಿಗೆ 1.50 ಲಕ್ಷ ಮುಖಗವಸು ಮತ್ತು 15,000 ಬಾಟಲಿಯಷ್ಟು ಸ್ಯಾನಿಟೈಸರನ್ನ್ನು ಒದಗಿಸಿ ಆರೋಗ್ಯ ಶಿಷ್ಟಾಚಾರವನ್ನು ಕಟ್ಟು ನಿಟ್ಟಾಗಿ ಅನುಸರಿಸಲು ವ್ಯಾಪಕ ವ್ಯವಸ್ಥೆಗಳನ್ನು ಮಾಡಿದೆ. ಇದರಿಂದ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಠಿಣ ಪರಿಸ್ಥಿತಿಯಲ್ಲಿ ಗೋಧಿ ಖರೀದಿಯನ್ನು ಸುಲಲಿತವಾಗಿ ಮತ್ತು ಯಾವುದೇ ಅಡೆ ತಡೆ ಇಲ್ಲದೆ ಮಾಡುವುದನು ಖಾತ್ರಿಪಡಿಸಲಾಗಿದೆ. ಪಂಜಾಬಿನ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸರಕಾರಿ ಇಲಾಖೆಗಳಿಗೆ ಮಹಿಳಾ ಸ್ವ ಸಹಾಯ ಗುಂಪುಗಳು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ನಿನಡಿ ತಯಾರಿಸಲಾದ ಮೂರು ಲಕ್ಷ ಮುಖಗವಸುಗಳನ್ನು ಒದಗಿಸಿದೆ.

  • ಹಿಮಾಚಲ ಪ್ರದೇಶ: ಆರೋಗ್ಯ ರಕ್ಷಣೆಗೆ ಸಂಬಂಧಿಸಿ ಆಯುಷ್ ಸಚಿವಾಲಯವು ಶಿಫಾರಸು ಮಾಡಿರುವ ಕೆಲವು ಸ್ವಯಂ ಶೂಶ್ರುಷಾ ಸಲಹಾ ಮಾರ್ಗದರ್ಶಿಗಳನ್ನು ಅನುಸರಿಸುವಂತೆ ಹಿಮಾಚಲಪ್ರದೇಶ ಸರಕಾರವು ನಾಗರಿಕರಿಗೆ ಮನವಿ ಮಾಡಿಕೊಂಡಿದೆ. ಮತ್ತು ಉಸಿರಾಟದ ಆರೋಗ್ಯಕ್ಕೆ ಸಂಬಂಧಿಸಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವಂತೆಯೂ ಅದು ಸಲಹೆ ಮಾಡಿದೆ.
  • ಅರುಣಾಚಲ ಪ್ರದೇಶ: ರಾಜ್ಯವು ಲಾಕ್ ಡೌನ್ ನಲ್ಲಿದ್ದು, ಉಲ್ಲಂಘನೆಗಾಗಿ 1669 ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. 492 ಮಂದಿಯನ್ನು ಬಂಧಿಸಲಾಗಿದೆ. 750 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ, ಒಟ್ಟು 161 ಎಫ್..ಆರ್.ಗಳನ್ನು ದಾಖಲಿಸಲಾಗಿದೆ ಮತ್ತು ದಂಡದ ರೂಪದಲ್ಲಿ 6.5 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ.
  • ಅಸ್ಸಾಂ: ರಾಜ್ಯದಿಂದ ಹೊರಗೆ ಸಿಕ್ಕಿ ಹಾಕಿಕೊಂಡಿರುವ 86,000 ಜನರಿಗೆ ತಲಾ 2000 ರೂಪಾಯಿಗಳನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ ಟ್ವೀಟ್ ಮಾಡಿದ್ದಾರೆ.
  • ಮಣಿಪುರ: ಇಂಫಾಲಾ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಿಗೆ ಹೊಸದಾಗಿ ರಚಿಸಲಾಗಿರುವ ವಿಶೇಷ ಗಸ್ತು ಘಟಕಗಳಿಗೆ ಹೊಸದಾಗಿ ಖರೀದಿಸಲಾದ 12 ಹೊಸ ಗಸ್ತು ವಾಹನಗಳನ್ನು ಮುಖ್ಯಮಂತ್ರಿ ಹಸ್ತಾಂತರಿಸಿದರು.
  • ಮಿಜೋರಾಂ: ಶಾಲಾ ಶಿಕ್ಷಣಕ್ಕಾಗಿರುವ ರಾಜ್ಯ ಮಂಡಳಿಯು ರಾಷ್ಟ್ರವ್ಯಾಪೀ ಚಾಲ್ತಿಯಲ್ಲಿರುವ ಲಾಕ್ ಡೌನ್ ಕಾರಣದಿಂದ ಏಪ್ರಿಲ್ 22 ರಿಂದ ಆರಂಭಗೊಳ್ಳಬೇಕಿದ್ದ 12 ನೇ ತರಗತಿಯ ಪರೀಕ್ಷೆಯನ್ನು ಮುಂದೂಡಿದೆ.
  • ನಾಗಾಲ್ಯಾಂಡ; ವಿಚಾರಣಾಧೀನ ಕೈದಿಗಳ ಪರಿಶೀಲನಾ ಸಮಿತಿಯ ಸಭೆಗಳು ವಿವಿಧ ಜಿಲ್ಲೆಗಳಲ್ಲಿ ನಡೆದಿವೆ. ಇದುವರೆಗೆ 109 ವಿಚಾರಣಾಧೀನ ಕೈದಿಗಳು  ಮತ್ತು 8 ಬಾಲಾಪರಾಧಿಗಳು ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾರೆ. ಕೋವಿಡ್- 19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
  • ನಾಗಾಲ್ಯಾಂಡ್ ; ಕೊಹಿಮಾ ಮತ್ತು ದಿಮಾಪುರ ಗಳು ಲಾಕ್ ಡೌನ್ ನಡುವೆ ಸಬ್ಬಾತ್ ದಿನವನ್ನು ಆಚರಿಸಿದವು. ಚರ್ಚ್ ಗಳಲ್ಲಿ ಧ್ವನಿವರ್ಧಕದಲ್ಲಿ ಧರ್ಮಗ್ರಂಥ ಓದುತ್ತಿರುವಂತೆ ನಿವಾಸಿಗಳು ಮನೆಯ ಬಾಗಿಲು ತೆರೆದು ಬಾಲ್ಕನಿ, ಟೆರೆಸುಗಳಲ್ಲಿ ಬಂದು ಪ್ರಾರ್ಥಿಸಿದರು.
  • ಸಿಕ್ಕಿಂ: ಸಿಕ್ಕಿಂನಲ್ಲಿ ವಿದ್ಯುತ್ ಗ್ರಿಡ್ ಎನ್ ಕೋವಿಡ್ -19 ರ ವಿರುದ್ದ ಹೋರಾಟಕ್ಕಾಗಿ 10 ವೆಂಟಿಲೇಟರುಗಳಿಗೆ 7.85 ಲಕ್ಷ ರೂಪಾಯಿಗಳ ದೇಣಿಗೆಯನ್ನು ಜಿಲ್ಲಾಧಿಕಾರಿ ಪಶ್ಚಿಮ ಅವರಿಗೆ ನೀಡಿದೆ. ಜಿಲ್ಲಾಧಿಕಾರಿ ಪೂರ್ವ ಮತ್ತು ಜಿಲ್ಲಾಧಿಕಾರಿ ಉತ್ತರ ಅವರಿಗೆ ಪಡಿತರ ಹಾಗು ಪಿ.ಪಿ.. ಕಿಟ್ ಗಳಿಗಾಗಿ ತಲಾ 7 ಲಕ್ಷ ರೂಪಾಯಿಗಳನ್ನು ಮತ್ತು ಜಿಲ್ಲಾಧಿಕಾರಿ ದಕ್ಷಿಣ ಅವರಿಗೆ ಇದೇ ಉದ್ದೇಶಕ್ಕಾಗಿ 3 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದೆ.
  • ತ್ರಿಪುರಾ: ರಾಜ್ಯ ಸರಕಾರವು ಇಂದು 16 ವಿವಿಧ ಕೈಗಾರಿಕೆಗಳು ಮತ್ತು ಕೈಗಾರಿಕಾ ಸ್ಥಾವರಗಳಿಗೆ  (ಸರಕಾರಿ ಮತ್ತು ಖಾಸಗಿ) ಕಾರ್ಯಾಚರಿಸಲು ಅನುಮತಿ ನೀಡಿದೆ. ಈ ಒಡಂಬಡಿಕೆಯನ್ವಯ ಈ ಸಂಸ್ಥೆಗಳು ಸರಕಾರದ ಮಾರ್ಗದರ್ಶಿಗಳ ಅನ್ವಯ ಅವುಗಳಿಗೆ ಬದ್ದವಾಗಿ ಕಾರ್ಯಾಚರಿಸಬಹುದಾಗಿದೆ.
  • ಕೇರಳ: ಕೇಂದ್ರ ಸರಕಾರದ ನಿರ್ದೇಶನಗಳನ್ವಯ ರಾಜ್ಯ ಸರಕಾರವು ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆಗಳನ್ನು ಸಮರ್ಪಕಗೊಳಿಸಿದೆ. ಕೊರೋನಾ ವೈರಸ್ ನಿಂದ ಗುಣಮುಖರಾದ ಇಟ್ಯಾಲಿಯನ್ ನಾಗರಿಕರೊಬ್ಬರು  ತನ್ನ ಕೃತಜ್ಞತೆಗಳನ್ನು ಸಲ್ಲಿಸಿ ರಾಜ್ಯಕ್ಕೆ ಶುಭವಿದಾಯ ಹೇಳಿದ್ದಾರೆ. 13 ಮಂದಿ ಗುಣಮುಖರಾಗಿದ್ದಾರೆ ಮತ್ತು ನಿನ್ನೆ 2 ಹೊಸ  ಪ್ರಕರಣಗಳು ವರದಿಯಾಗಿವೆ. 129 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ತಮಿಳುನಾಡು: ರಾಜ್ಯವು ಮೇ 3 ರವರೆಗೆ ಲಾಕ್ ಡೌನ್ ಕಾಯ್ದುಕೊಳ್ಳಲಿದೆ. ಕೋವಿಡ್ -19 ರಿಂದ ಮೃತಪಟ್ಟ ವೈದ್ಯರನ್ನು ಹೂಳಲಾಗಿದೆ ಎಂಬುದನ್ನು ಕಿಲ್ಪಾಕ್ ನ ಸ್ಥಳೀಯರು ನಿರಾಕರಿಸಿದ್ದಾರೆ. ಬಳಿಕ ಇನ್ನೊಂದು ಕಡೆ ಹೂಳಲಾಗಿದೆ. ಇಂದಿನವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 1477, ಸಾವುಗಳು 16, ಬಿಡುಗಡೆಯಾದವರು 411. ಚೆನ್ನೈ (290) ಕೊಯಮುತ್ತೂರು (133) ಮತ್ತು ತಿರುಪುರ (108) ಗಳಲ್ಲಿ ಗರಿಷ್ಟ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ.
  • ಕರ್ನಾಟಕ: ಇಂದು 5 ಹೊಸ ಪ್ರಕರಣಗಳು ದೃಢಪಟ್ಟಿವೆ, ಎಲ್ಲವೂ ಕಲಬುರ್ಗಿ ಜಿಲ್ಲೆಯವು. ಇಂದಿನವರೆಗೆ ಒಟ್ಟು ಪ್ರಕರಣಗಳು ; 395, ಸಾವುಗಳು 16, ಬಿಡುಗಡೆಯಾದವರು 112. ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಮತ್ತು ಪೊಲೀಸರ ಮೇಲೆ ಹಲ್ಲೆಯು ಕೊರೋನಾ ವೈರಸ್ ವಿರುದ್ದ ಹೋರಾಡುತ್ತಿರುವ ವಾರಿಯರ್ಸ್ ರಕ್ಷಣೆಗೆ ಕೇರಳ ಮತ್ತು ಉತ್ತರ ಪ್ರದೇಶ ಮಾದರಿಯಲ್ಲಿ ಸುಗ್ರೀವಾಜ್ಞೆ ತರಲು ಪ್ರೇಪಣೆ ನೀಡಿದೆ.
  • ಆಂಧ್ರ ಪ್ರದೇಶ: 75 ಹೊಸ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿವೆ, ಒಟ್ಟು ಪ್ರಕರಣಗಳ ಸಂಖ್ಯೆ 722 ಕ್ಕೇರಿಕೆ. ಸಾವಿನ ಸಂಖ್ಯೆ 20. ಇದುವರೆಗೆ 92 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪ್ರತೀ ವ್ಯಕ್ತಿಗೂ ಮೂರು ಮುಖಗವಸುಗಳನ್ನು ನೀಡುವ ರಾಜ್ಯದ ಉಪಕ್ರಮ ಎಸ್.ಎಚ್.ಜಿ. ಮೂಲಕ 16 ಕೋಟಿ ಮುಖಗವಸುಗಳನ್ನು ತಯಾರಿಸುವ ಯೋಜನೆಯಾಗಿದ್ದು, ಇದು 40 ಸಾವಿರ ಮಹಿಳೆಯರಿಗೆ ದಿನಕ್ಕೆ 500 ರೂ ಆದಾಯಕ್ಕೆ ದಾರಿ ಮಾಡಿಕೊಟ್ಟಿದೆ. ಪಾಸಿಟಿವ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳೆಂದರೆ ಕರ್ನೂಲು(174) ಗುಂಟೂರು (149) ಕೃಷ್ಣಾ (80) ನೆಲ್ಲೂರು ( 67) , ಚಿತ್ತೂರು (53 )
  • ತೆಲಂಗಾಣ: ಹೈದರಾಬಾದ್ ಮೂಲದ ಟಿ. ವರ್ಕ್ಸ್ ಸಂಸ್ಥೆ ಅನೇಕ ನವೋದ್ಯಮಗಳ ಜೊತೆಯಲ್ಲಿ ಸಹಯೋಗದೊಂದಿಗೆ ಬ್ಯಾಗ್ ವ್ಯಾಲ್ಯೂ ಗವಸುಗಳನ್ನು (ಬಿ.ವಿ.ಎಂ.) ಆಧರಿತ ವೆಂಟಿಲೇಟರುಗಳನ್ನು ತುರ್ತು ಸಂದರ್ಭದಲ್ಲಿ ಬಳಕೆಗಾಗಿ ಎನ್..ಎಂ.ಎಸ್. ಮಾರ್ಗದರ್ಶಿಗಳ ಅನ್ವಯ ಅಭಿವೃದ್ದಿಪಡಿಸಿದೆ. .ರಾಜ್ಯದಲ್ಲಿ ಮೇ 7 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 858 ಕ್ಕೆ ತಲುಪಿದೆ. ಆಕ್ಟಿವ್  ಪ್ರಕರಣಗಳ ಸಂಖ್ಯೆ 651. ಸಾವುಗಳು ;21, ಗುಣಮುಖರಾಗಿ ಬಿಡುಗಡೆಯಾದವರು: 186.
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳು 4,000 ದಾಟಿ 4,203 ಕ್ಕೆ ತಲುಪಿವೆ. ರಾಜ್ಯವು 223 ಸಾವುಗಳನ್ನು ದಾಖಲಿಸಿದೆ. ಇದುವರೆಗೆ 507 ಮಂದಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಪಾಸಿಟಿವ್ ಎಂದು ಕಂಡುಬಂದ ಮೂರನೇ ಎರಡರಷ್ಟು ಮಂದಿ ಪರೀಕ್ಷಾ ಸಮಯದಲ್ಲಿ ಯಾವುದೇ ಸೋಂಕಿನ ಲಕ್ಷಣಗಳನ್ನು ತೋರಿಸಿರಲಿಲ್ಲ.
  • ಗೋವಾ: ಇಂದು ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ 265 ಬ್ರಿಟಿಷ್ ರಾಷ್ಟ್ರೀಯರು ಯು.ಕೆ.ಗೆ ಪ್ರಯಾಣ ಬೆಳೆಸಿದರು. ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಿ ಪ್ರವಾಸಿಗರನ್ನು ಹೊರಗೆ ಕೊಂಡೊಯ್ಯುತ್ತಿರುವ 27 ನೇ ವಿಶೇಷ ವಿಮಾನ ಇದಾಗಿದೆ. ಮಾರ್ಚ್ 24 ರಂದು ಕೋವಿಡ್ -19 ರ ಲಾಕ್ ಡೌನ್ ಘೋಷಿಸಿದ ಬಳಿಕ ರಶ್ಯಾ, ಫ್ರಾನ್ಸ್, ಅಮೆರಿಕ, ಕೆನಡ ಸಹಿತ  ಒಟ್ಟು 5,000 ಕ್ಕೂ ಅಧಿಕ ವಿದೇಶಿ ಪ್ರವಾಸಿಗರನ್ನು ದೇಶದಿಂದ ಹೊರಗೆ ಕಳಿಸಲಾಗಿದೆ.
  • ಗುಜರಾತ್: 139 ಹೊಸ ಕೊರೊನಾವೈರಸ್ ಪ್ರಕರಣಗಳು ಗುಜರಾತಿನಲ್ಲಿ ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಈ ರೋಗ ಸೋಂಕಿತರ  ಒಟ್ಟು ಸಂಖ್ಯೆ 1,743 ಕ್ಕೇರಿದೆ. ಇಂದಿನವರೆಗೆ ಒಟ್ಟು ಸೋಂಕಿತರಲ್ಲಿ , 105 ಮಂದಿ ಗುಣಮುಖರಾಗಿದ್ದಾರೆ ಮತ್ತು 63 ಮಂದಿ ಮೃತಪಟ್ಟಿದ್ದಾರೆ. ಈ ನಡುವೆ ಮಲೇರಿಯಾ ನಿರೋಧಿ ಔಷಧಿ ಹೈಡ್ರೋಕ್ಸಿಲ್ ಕ್ಲೊರೋಕ್ವಿನ್ (ಎಚ್.ಸಿ.ಕ್ಯೂ.) ಗೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಗುಜರಾತಿನಲ್ಲಿರುವ ಔಷಧಿ ತಯಾರಿಕಾ ಕಂಪೆನಿಗಳು ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಈಡೇರಿಸಲು ಉತ್ಪಾದನೆಯನ್ನು ಹೆಚ್ಚಿಸಿವೆ. ಗುಜರಾತಿನ ಆಹಾರ ಮತ್ತು ಔಷಧಿ ನಿಯಂತ್ರಣ ಆಡಳಿತವು ರಾಜ್ಯದಲ್ಲಿ 13 ಫಾರ್ಮಾ ಕಂಪೆನಿಗಳಿಗೆ 20 ಉತ್ಪಾದನಾ ಪರವಾನಗಿಗಳನ್ನು ಮಂಜೂರು ಮಾಡಿದೆ.
  • ರಾಜಸ್ಥಾನ: ರಾಜಸ್ಥಾನದಲ್ಲಿ ಕೋವಿಡ್ 19  ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,478 ಕ್ಕೇರಿದೆ, ಇಂದಿನವರೆಗೆ 14 ಮಂದಿ ಮೃತಪಟ್ಟಿದ್ದಾರೆ. ಕೊರೊನಾವೈರಸ್ ಪ್ರಕರಣಗಳನ್ನು ನಿಯಂತ್ರಿಸಲು ರಾಜಸ್ಥಾನ ಸರಕಾರವು ಆರೋಗ್ಯ ಕ್ಷೇತ್ರದ ನವೋದ್ಯಮವಾದ ಮೆಡ್ ಕಾರ್ಡ್ಸ್ ಜೊತೆ ಸಮಗ್ರ ಪರಿಹಾರವಾದ ಆಯು ಮತ್ತು ಸೆಹತ್ ಸಥಿ ಆಪ್  ಮೂಲಕ  24*7  ಆನ್ ಲೈನ್ ವೈದ್ಯಕೀಯ ಸಲಹೆ ಮತ್ತು ಔಷಧಿ ಪೂರೈಕೆಗೆ ಸಹಭಾಗಿತ್ವ ಮಾಡಿಕೊಂಡಿದೆ.
  • ಮಧ್ಯಪ್ರದೇಶ: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,407 ಕ್ಕೇರಿದೆ. 131 ಮಂದಿ ಸಂಪೂರ್ಣ ಗುಣಮುಖರಾಗಿದ್ದರೆ, 72 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಇಂದೋರಿನಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಅಂದರೆ 890  ರೋಗಿಗಳಿದ್ದರೆ , ಬೋಪಾಲಿನಲ್ಲಿ 214 ರೋಗಿಗಳಿದ್ದಾರೆ.

 

ಕೋವಿಡ್-19 ಕುರಿತ ವಾಸ್ತವದ ಪರಿಶೀಲನೆ

***



(Release ID: 1616596) Visitor Counter : 330