ಗೃಹ ವ್ಯವಹಾರಗಳ ಸಚಿವಾಲಯ

ಮೊದಲಿನಂತೆ ಅವಶ್ಯಕ ವಸ್ತುಗಳ ಪೂರೈಕೆ ಮುಂದುವರಿಸಲು ಇ-ವಾಣಿಜ್ಯ ಕಂಪನಿಗಳಿಗೆ ಅವಕಾಶ

Posted On: 19 APR 2020 6:45PM by PIB Bengaluru

ಮೊದಲಿನಂತೆ ಅವಶ್ಯಕ ವಸ್ತುಗಳ ಪೂರೈಕೆ ಮುಂದುವರಿಸಲು ಇ-ವಾಣಿಜ್ಯ ಕಂಪನಿಗಳಿಗೆ ಅವಕಾಶ

ಇ-ವಾಣಿಜ್ಯ ಸೇರಿದಂತೆ ಎಲ್ಲ ಅಗತ್ಯ ಸರಕುಗಳ ಪೂರೈಕೆ ಸರಣಿ ಸುಗಮ ಕಾರ್ಯನಿರ್ವಹಣೆ ಖಾತ್ರಿಪಡಿಸುವಂತೆ ರಾಜ್ಯಗಳಿಗೆ ಸೂಚನೆ

 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಕೋವಿಡ್-19 ಎದುರಿಸಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲ ಸಚಿವಾಲಯಗಳು/ಇಲಾಖೆಗಳಿಗೆ ಹೊರಡಿಸಲಾಗಿರುವ ಸಮಗ್ರ ಪರಿಷ್ಕೃತ ಮಾರ್ಗಸೂಚಿಯಲ್ಲಿ ಕೆಲವು ವಿನಾಯಿತಿಗಳನ್ನು ನೀಡಿ, (https://www.mha.gov.in/sites/default/files/MHA%20order%20dt%2015.04.2020%2C%20with%20Revised%20Consolidated%20Guidelines_compressed%20%283%29.pdf) ಆದೇಶ ಹೊರಡಿಸಿದೆ.

ಅದು ಇಂದು ಹೊರಡಿಸಿರುವ ಆದೇಶದಲ್ಲಿ ನಿಯಮ 14(ವಿ)ನಲ್ಲಿನ ಸಮಗ್ರ ಪರಿಷ್ಕೃತ ಮಾರ್ಗಸೂಚಿಯಲ್ಲಿ ಇ-ವಾಣಿಜ್ಯ ಕಂಪನಿಗಳನ್ನು ಹೊರಗಿಡಲಾಗಿದೆ. ಈ ನಿಟ್ಟಿನಲ್ಲಿ ಇ-ವಾಣಿಜ್ಯ ಕಂಪನಿಗಳು ಅವಶ್ಯಕವಲ್ಲದ ವಸ್ತುಗಳ ಪೂರೈಕೆಗೆ ಮೊದಲಿನಂತೆ ನಿರ್ಬಂಧ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ ಆ ಕಂಪನಿಗಳು ಈ ಮಾರ್ಗಸೂಚಿಯ ನಿಯಮ 13(1)ರ ಅಡಿ ಈಗಾಗಲೇ ಅವಕಾಶ ನೀಡಿರುವಂತೆ ಅಗತ್ಯ ವಸ್ತುಗಳ ಪೂರೈಕೆ ಕಾರ್ಯಾಚರಣೆಗೆ ಅನುಮತಿ ಮುಂದುವರಿಯಲಿದೆ.

ಎಂಎಚ್ಎ ಈ ಕುರಿತ ಮಾಹಿತಿಯನ್ನು ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದೆ ಮತ್ತು ಇ-ವಾಣಿಜ್ಯ ಕಂಪನಿಗಳು ಸೇರಿದಂತೆ ಸಾರ್ವಜನಿಕರು ಹಾಗೂ ತಳಮಟ್ಟದ ಸಂಸ್ಥೆಗಳಿಗೆ ಈ ಕುರಿತು ಮಾಹಿತಿ ನೀಡಬೇಕು ಮತ್ತು ಅವಶ್ಯಕ ವಸ್ತುಗಳ ಇಡೀ ಪೂರೈಕೆ ಸರಣಿ ಸುಗಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಎಂಎಚ್ಎ ಹೊರಡಿಸಿರುವ ಆದೇಶದ ಅನುಸಾರ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳು ಹೊರಡಿಸಿರುವ ಮಾರ್ಗಸೂಚಿ/ಆದೇಶಗಳಲ್ಲಿ ಸೂಕ್ತ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿರುವ ಅಧಿಕೃತ ಸುತ್ತೋಲೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

 

***


(Release ID: 1616284) Visitor Counter : 279