ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ರಸ್ತೆ ಸಚಿವಾಲಯದ ಜಾಲತಾಣದಲ್ಲಿ ಧಾಬಾಗಳು ಮತ್ತು ಟ್ರಕ್ ರಿಪೇರಿ ಅಂಗಡಿಗಳ ಪಟ್ಟಿ ಹೊಂದಿದ ಡ್ಯಾಶ ಬೋರ್ಡ್  ಬಿಡುಗಡೆ

Posted On: 20 APR 2020 4:49PM by PIB Bengaluru

ರಸ್ತೆ ಸಚಿವಾಲಯದ ಜಾಲತಾಣದಲ್ಲಿ ಧಾಬಾಗಳು ಮತ್ತು ಟ್ರಕ್ ರಿಪೇರಿ ಅಂಗಡಿಗಳ ಪಟ್ಟಿ ಹೊಂದಿದ ಡ್ಯಾಶ ಬೋರ್ಡ್  ಬಿಡುಗಡೆ

 

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂಒಆರ್ ಟಿ ಹೆಚ್) ತನ್ನ ಜಾಲತಾಣದಲ್ಲಿ ಎನ್ ಹೆಚ್ ಎ ಐ ರಾಜ್ಯಗಳು ತೈಲ ಮಾರುಕಟ್ಟೆ ಕಂಪನಿಗಳು ಮುಂತಾದ ಸಂಸ್ಥೆಗಳಿಂದ ದೇಶಾದ್ಯಂತ  ಲಭ್ಯವಿರುವ ಧಾಬಾಗಳು, ಮತ್ತು ಟ್ರಕ್ ರಿಪೇರಿ ಅಂಗಡಿಗಳ ಪಟ್ಟಿ ಮತ್ತು ವಿವರಗಳನ್ನು ಒದಗಿಸುವ ಡ್ಯಾಶ್ ಬೋರ್ಡ್ ಲಿಂಕನ್ನು ಸೃಷ್ಟಿಸಿದೆ. ಈ ಪಟ್ಟಿಯ ವಿವರಗಳನ್ನು https://morth.nic.in/dhabas-truck-repair-shops-opened-during-covid-19  ರಲ್ಲಿ ಪಡೆಯಬಹುದಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಘೋಷಿಸಲಾದ ಲಾಕ್ ಡೌನ್ ನ ಪ್ರಸ್ತುತ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಸರಕುಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸುವ ಪ್ರಯಾಣದ ನಡುವೆ ಟ್ರಕ್/ಸರಕು ಸಾಗಣೆ ವಾಹನ ಚಾಲಕರು ಮತ್ತು ಕ್ಲೀನರ್ ಗಳು ತಮ್ಮ ಪಯಣದಲ್ಲಿ ಅನುಕೂಲವಾಗಲೆಂದು ಈ ಕ್ರಮ ಕೈಗೊಳ್ಳಲಾಗಿದೆ. ಎಂಒಆರ್ ಟಿ ಹೆಚ್ ಜಾಲತಾಣದ ಲಿಂಕ್ ನಲ್ಲಿ ಪರಿಷ್ಕರಿಸಲಾದ ಮಾಹಿತಿಯನ್ನು ಒದಗಿಸಲು ವಿವಿಧ ಪಾಲುದಾರರೊಂದಿಗೆ ಅದರಲ್ಲೂ ವಿಶೇಷವಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಇತ್ಯಾದಿಗಳೊಂದಿಗೆ ನಿರಂತರ ಸಂಪರ್ಕವನ್ನು ನಿರ್ವಹಿಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಭ್ಯವಿರುವ  ಧಾಬಾಗಳು, ಮತ್ತು ರಿಪೇರಿ ಅಂಗಡಿಗಳ ಮಾಹಿತಿಯನ್ನು ಪಡೆಯಲು ವಾಹನ ಚಾಲಕರು ಮತ್ತು ಕ್ಲೀನರ್ ಗಳಿಗೆ ಸಹಾಯವಾಗುವಂತೆ ಎನ್ ಹೆಚ್ ಎ ಐ ಕೇಂದ್ರೀಕೃತ ಸಹಾಯವಾಣಿ ಸಂಖ್ಯೆ 1033 ಯನ್ನು ಕರೆಗಳನ್ನು ಉತ್ತರಿಸಲು ಸಕ್ರೀಯಗೊಳಿಸಿದೆ.

ಈ ಧಾಬಾಗಳು, ಮತ್ತು ರಿಪೇರಿ ಅಂಗಡಿಗಳು, ವಾಹನ ಚಾಲಕರು ಮತ್ತು ಕ್ಲೀನರ್ ಗಳು ಅಥವಾ ಸರಕು ಸಾಗಾಣೆ ಸರಪಳಿಯ ಯಾವುದೇ ವ್ಯಕ್ತಿಯು ಸಾಮಾಜಿಕ ಅಂತರವನ್ನು, ಮಾಸ್ಕ ಬಳಕೆ, ನೈರ್ಮಲ್ಯ ಇತ್ಯಾದಿಗಳ ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ಮತ್ತು ಆರೋಗ್ಯ ರಕ್ಷಣಾ ಶಿಷ್ಟಾಚಾರಗಳನ್ನು ಪಾಲಿಸಲೇಬೇಕು ಎಂದು ನಿರ್ದೇಶಿಸಲಾಗಿದೆ.

***(Release ID: 1616503) Visitor Counter : 46