ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಎದುರಿಸಲು ಮತ್ತು ನಿಯಂತ್ರಿಸಲು ಗಂಭೀರ ಮಾನವ ಸಂಪನ್ಮೂಲ ಆನ್ ಲೈನ್ ದತ್ತಾಂಶ ಸಂಗ್ರಹ ಕಾರ್ಯ ಆರಂಭಿಸಿದ ಸರ್ಕಾರ

Posted On: 19 APR 2020 7:33PM by PIB Bengaluru

ಕೋವಿಡ್-19 ಎದುರಿಸಲು ಮತ್ತು ನಿಯಂತ್ರಿಸಲು ಗಂಭೀರ ಮಾನವ ಸಂಪನ್ಮೂಲ ಆನ್ ಲೈನ್ ದತ್ತಾಂಶ ಸಂಗ್ರಹ ಕಾರ್ಯ ಆರಂಭಿಸಿದ ಸರ್ಕಾರ

ಕೋವಿಡ್-19 ವಿರುದ್ಧ ಹೋರಾಟದ ನಾನಾ ಚಟುವಟಿಕೆಗಳಲ್ಲಿ ತೊಡಗಿರುವ ಮಾನವ ಸಂಪನ್ಮೂಲದ ರಾಜ್ಯ ಮತ್ತು ಜಿಲ್ಲಾವಾರು ಲಭ್ಯತೆಯ ವಿವರ ಡ್ಯಾಶ್ ಬೋರ್ಡ್ ನಲ್ಲಿ

ಮಾನವ ಸಂಪನ್ಮೂಲಕ್ಕೆ ಆನ್ ಲೈನ್ ವೇದಿಕೆಗಳನ್ನು ಬಳಸಿಕೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಕರೆ

ಐಗಾಟ್ ವೇದಿಕೆಯ ಮೂಲಕ ಆನ್ ಲೈನ್ ಆರೋಗ್ಯ ರಕ್ಷಣಾ ವೃತ್ತಿಪರ ತರಬೇತಿಗೆ ಒತ್ತು

 

ಭಾರತ ಸರ್ಕಾರ, ವೈದ್ಯರು, ಆಯುಷ್ ವೈದ್ಯರು, ನರ್ಸ್ ಗಳು ಇತರೆ ಆರೋಗ್ಯ ರಕ್ಷಣಾ ವೃತ್ತಿಪರರು, ಎನ್ ವೈಕೆ, ಎನ್ ಸಿಸಿ, ಎನ್ಎಸ್ಎಸ್, ಪಿಎಂಜಿಕೆವಿವೈ ಸ್ವಯಂ ಸೇವಕರು, ನಿವೃತ್ತ ಯೋಧರು ಸೇರಿದಂತೆ ರಾಜ್ಯ, ಜಿಲ್ಲಾ ಅಥವಾ ಸ್ಥಳೀಯ ಹಂತದಲ್ಲಿ ತಳಮಟ್ಟದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವವರ ಆನ್ ಲೈನ್ ದತ್ತಾಂಶ https://covidwarriors.gov.in ವನ್ನು ಸೃಷ್ಟಿಸಿದೆ. ಈ ಡ್ಯಾಶ್ ಬೋರ್ಡ್ ನಲ್ಲಿನ ಮಾಹಿತಿಯನ್ನು ನಿರಂತರವಾಗಿ ಅಪ್ ಡೇಟ್ ಮಾಡಲಾಗುತ್ತಿದೆ. ಕೋವಿಡ್-19 ನಿಯಂತ್ರಿಸಲು ಮತ್ತು ಎದುರಿಸಲು ಇದು ಗಂಭೀರ ಮಾನವ ಸಂಪನ್ಮೂಲ ಲಭ್ಯತೆಯ ಬಗ್ಗೆ ಮಾಹಿತಿ ನೀಡುತ್ತದೆ. ಎಂಎಸ್ಎಂಇ ಕಾರ್ಯದರ್ಶಿ ಮತ್ತು ಉನ್ನತಾಧಿಕಾರ ಸಮಿತಿ-4(ಮಾನವ ಸಂಪನ್ಮೂಲ ಕುರಿತ) ಅಧ್ಯಕ್ಷ ಶ್ರೀ ಅರುಣ್ ಕುಮಾರ್ ಪಾಂಡ ಮತ್ತು ಡಿಒಪಿಟಿ ಕಾರ್ಯದರ್ಶಿ ಡಾ. ಸಿ. ಚಂದ್ರಮೌಳಿ, ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಜಂಟಿಪತ್ರವನ್ನು ಬರೆದಿದ್ದಾರೆ. ಈ ಸಂವಹನದಲ್ಲಿ ಡ್ಯಾಶ್ ಬೋರ್ಡ್ ನಲ್ಲಿ ಆರೋಗ್ಯ ರಕ್ಷಣಾ ವೃತ್ತಿಪರರ ವಿವರಗಳ ದತ್ತಾಂಶವಿರುವುದು ಮತ್ತು ಸ್ವಯಂ ಸೇವಕರ ವಿವರಗಳನ್ನು ಹಂಚಿಕೊಳ್ಳಲಾಗಿದ್ದು, ಅವುಗಳನ್ನು ಬಳಸಿಕೊಳ್ಳಬಹುದಾಗಿದೆ. ಅದರಲ್ಲಿ ನೋಡಲ್ ಅಧಿಕಾರಿಗಳೂ ಸೇರಿದಂತೆ ಯಾವ್ಯಾವ ಗುಂಪುಗಳ ಮಾನವ ಸಂಪನ್ಮೂಲ ಜಿಲ್ಲಾವಾರು ಮತ್ತು ರಾಜ್ಯವಾರು ಲಭ್ಯವಿದೆ ಎಂಬುದು ಮತ್ತು ಅವರ ಸಂಪರ್ಕ ವಿವರಗಳನ್ನು ಒಳಗೊಂಡಿದೆ.

ಡ್ಯಾಶ್ ಬೋರ್ಡ್ ನಲ್ಲಿ ಹಲವು ಪ್ರಾಧಿಕಾರಗಳು ಸಿದ್ಧಪಡಿಸಿರುವ ಸಂಕಷ್ಟ ನಿರ್ವಹಣಾ/ತುರ್ತು ಸಂಕಷ್ಟ ನಿವಾರಣಾ ಯೋಜನೆಗಳನ್ನು ಆಧರಿಸಿ, ಲಭ್ಯವಿರುವ ಮಾನವ ಸಂಪನ್ಮೂಲ ಮತ್ತು ಪ್ರತಿ ಗುಂಪುಗಳ ನೋಡಲ್ ಅಧಿಕಾರಗಳ ವಿವರಗಳು ಲಭ್ಯವಿದೆ ಎಂದು ತಿಳಿಸಲಾಗಿದೆ. ಈ ದತ್ತಾಂಶದಲ್ಲಿ ಲಭ್ಯವಿರುವ ಸ್ವಯಂಸೇವಕರ ಸೇವೆಗಳನ್ನು ಬ್ಯಾಂಕ್, ಪಡಿತರ ವಿತರಣಾ ಮಳಿಗೆ, ಮಂಡಿ ಮತ್ತಿತರ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ವೃದ್ಧರು, ದಿವ್ಯಾಂಗರು ಮತ್ತು ನಿರಾಶ್ರಿತರಿಗೆ ಸಹಾಯ ಮಾಡಲು ಬಳಸಿಕೊಳ್ಳಬಹುದು. ಇದರಿಂದಾಗಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು, ಮಾನವ ಸಂಪನ್ಮೂಲವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಳಕೆಗಾಗಿ ನಿಯೋಜಿಸಲು ಸಹಾಯಕವಾಗುತ್ತದೆ.

ಅಲ್ಲದೆ ಪತ್ರದಲ್ಲಿ ಸಮಗ್ರ ಸರ್ಕಾರಿ ಆನ್ ಲೈನ್ ತರಬೇತಿ(ಐಗಾಟ್) ಪೋರ್ಟಲ್ (https://igot.gov.in) ಡಿಜಿಟಲ್ ವೇದಿಕೆಯಲ್ಲಿ ಆನ್ ಲೈನ್ ತರಬೇತಿಗೆ ಐಗಾಟ್ ಅನ್ನು ಹೆಚ್ಚಿನ ಮಟ್ಟದಲ್ಲಿ ಬಳಸಿಕೊಳ್ಳುವಂತೆ ಮತ್ತು ಆ ಮೂಲಕ ವೈದ್ಯರು, ನರ್ಸ್ ಗಳು, ಅರೆವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು, ತಂತ್ರಜ್ಞರು, ಆಯುಷ್ ವೈದ್ಯರು ಮತ್ತು ಸಿಬ್ಬಂದಿ ಹಾಗೂ ಇತರೆ ಮುಂಚೂಣಿ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರ ಸಾಮರ್ಥ್ಯವೃದ್ಧಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಈ ವೇದಿಕೆ ಯಾವುದೇ ಉಪಕರಣ(ಮೊಬೈಲ್/ಲ್ಯಾಪ್ ಟಾಪ್/ಡೆಸ್ಕ್ ಟಾಪ್)ದ ಮೂಲಕ ಯಾವುದೇ ಸಂದರ್ಭದಲ್ಲಿ ತರಬೇತಿ ಸಾಮಗ್ರಿ/ಮಾದರಿಯನ್ನು ಒದಗಿಸಲಿದೆ. ಈಗಾಗಲೇ 12 ಕೋರ್ಸ್ ಗಳ 44 ಮಾದರಿಗಳು ಲಭ್ಯವಿದ್ದು, ಅವುಗಳಿಗೆ ಸಂಬಂಧಿಸಿದ 105 ವಿಡಿಯೋಗಳು ಮತ್ತು 29 ದಾಖಲೆಗಳು ಲಭ್ಯವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದರಲ್ಲಿ ಕೆಲವು ಲಭ್ಯವಿರುವ ಕೋರ್ಸ್ ಗಳೆಂದರೆ ಕೋವಿಡ್-19ನ ಮೂಲ, ಸೋಂಕು ನಿಯಂತ್ರಣ ಮತ್ತು ನಿರ್ವಹಣೆ, ಪಿಪಿಇ ಬಳಕೆ, ಕ್ವಾರಂಟೈನ್ ಮತ್ತು ಐಸೋಲೇಶನ್ ಕೋವಿಡ್-19 ಪ್ರಕರಣಗಳ ನಿರ್ವಹಣೆ(ಎಸ್ಎಆರ್ ಐ, ಎಡಿಆರ್ ಎಸ್, ಸೆಪ್ಟಿಕ್ ಶಾಕ್), ಪ್ರಯೋಗಾಲಯ ಮಾದರಿ ಸಂಗ್ರಹ ಮತ್ತು ಪರೀಕ್ಷೆ ಐಸಿಯು ಆರೈಕೆ ಮತ್ತು ವೆಂಟಿಲೇಶನ್ ನಿರ್ವಹಣೆ ಇವು ಸೇರಿವೆ. ಪ್ರತಿ ದಿನ ಇನ್ನೂ ಹೆಚ್ಚಿನ ಮಾದರಿಗಳನ್ನು ಅಪ್ ಲೋಡ್ ಮಾಡಲಾಗುವುದು. ರಾಜ್ಯ/ಜಿಲ್ಲೆ/ಸ್ಥಳೀಯ ಸಂಸ್ಥೆಗಳು ಈ ನಿಗದಿತ ಗುರುತಿಸಲಾದ ಸಂಪನ್ಮೂಲಗಳನ್ನು ಇ-ಪೋರ್ಟಲ್ ಬಳಸಿ, ತುರ್ತು ಆಧಾರದಲ್ಲಿ ಅವರಿಗೆ ತರಬೇತಿ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಕೋವಿಡ್-19ನಿಂದ ಎದುರಾಗಿರುವ ಸವಾಲುಗಳನ್ನು ಹತ್ತಿಕ್ಕಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಹಾಗೂ ಯೋಜನೆಗಳನ್ನು ರೂಪಿಸಲು ಭಾರತ ಸರ್ಕಾರ 11 ಉನ್ನತಾಧಿಕಾರ ಸಮಿತಿಗಳನ್ನು ರಚನೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅದರಲ್ಲಿ ಉನ್ನತಾಧಿಕಾರ ಸಮಿತಿ-4ರ ನೇತೃತ್ವವನ್ನು ಎಂಎಸ್ಎಂಇ ಕಾರ್ಯದರ್ಶಿ ಡಾ. ಪಾಂಡ ಅವರಿಗೆ ವಹಿಸಿದ್ದು, ಆ ಸಮಿತಿ ದೇಶದಲ್ಲಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಮಾನವ ಸಂಪನ್ಮೂಲವನ್ನು ಗುರುತಿಸುವುದು ಮತ್ತು ಅವರ ಸಾಮರ್ಥ್ಯವೃದ್ಧಿ ಕೆಲಸವನ್ನು ನಿರ್ವಹಿಸುತ್ತಿದೆ.

***


(Release ID: 1616279) Visitor Counter : 276