ಕಲ್ಲಿದ್ದಲು ಸಚಿವಾಲಯ

ಕೊವಿಡ್-19 ವಿರುದ್ಧದ ಹೋರಾಟಕ್ಕೆ ಕಲ್ಲಿದ್ದಲು ಮತ್ತು ಗಣಿಗಳ ಪಿ ಎಸ್ ಯು ಗಳು ಸಾಧ್ಯವಾದ ಎಲ್ಲ ಸಹಕಾರ ನೀಡುತ್ತಿದೆ: ಶ್ರೀ ಪ್ರಲ್ಹಾದ್ ಜೋಷಿ

Posted On: 20 APR 2020 3:20PM by PIB Bengaluru

ಕೊವಿಡ್-19 ವಿರುದ್ಧದ ಹೋರಾಟಕ್ಕೆ ಕಲ್ಲಿದ್ದಲು ಮತ್ತು ಗಣಿಗಳ ಪಿ ಎಸ್ ಯು ಗಳು ಸಾಧ್ಯವಾದ ಎಲ್ಲ ಸಹಕಾರ ನೀಡುತ್ತಿದೆ: ಶ್ರೀ ಪ್ರಲ್ಹಾದ್ ಜೋಷಿ

ಒಡಿಶಾದಲ್ಲಿ ಕೊವಿಡ್-19 ಕ್ಕಾಗಿ ಮೀಸಲಿರುವ ಎರಡು ಆಸ್ಪತ್ರೆಗಳಿಗೆ ನಾಲ್ಕೊ ಮತ್ತು ಎಂ ಸಿ ಎಲ್ ಹಣ ಒದಗಿಸಲಿವೆ

 

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್  ಮತ್ತು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಳ ಸಚಿವರಾದ ಶ್ರೀ ಪ್ರಲ್ಹಾದ್ ಜೋಷಿ ಅವರೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಒಡಿಶಾದ ಮುಖ್ಯಮಂತ್ರಿ ಶ್ರೀ ನವೀನ್ ಪಟ್ನಾಯಕ್ ಉದ್ಘಾಟಿಸಿದ, ಒಡಿಶಾದಲ್ಲಿ ಕೊವಿಡ್-19 ಗಾಗಿ ಮೀಸಲಿರಿಸಿರುವ ಎರಡು ಆಸ್ಪತ್ರೆಗಳಿಗೆ ರಾಷ್ಟ್ರೀಯ ಅಲ್ಯೂಮಿನಿಯಂ ಕಂಪೆನಿ (ನಾಲ್ಕೊ) ಮತ್ತು ಕೊಲ್ ಇಂಡಿಯಾ ಅಂಗ ಸಂಸ್ಥೆಯಾದ ಮಹಾನದಿ ಕೊಲ್ ಫೀಲ್ಡ್ಸ್ ನಿಯಮಿತ (ಎಂಸಿಎಲ್) ಸಂಪೂರ್ಣ ಧನ ಸಹಾಯ ಒಸಗಿಸಲಿದೆ.

ಕಲ್ಲಿದ್ದಲು ಮತ್ತು ಗಣಿ ಸಚಿವಾಲಯಗಳ ಪಿ ಎಸ್ ಯೂಗಳು ಕೊವಿಡ್-19 ವಿರುದ್ಧ ಹೋರಾಟಕ್ಕೆ ರಾಜ್ಯ ಸರ್ಕಾರಗಳಿಗೆ ಸಾಧ್ಯವಾದ ಎಲ್ಲ ಸಹಕಾರವನ್ನು ನೀಡುತ್ತಿರುವುದು ಹೆಮ್ಮೆಯ ವಷಯ. ಕೊವಿಡ್ ಸಂಬಂಧಿತ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಈ ಆಸ್ಪತ್ರೆಗಳು ಒಡಿಶಾ ಜನರಿಗೆ ಬಹಳ ಸಹಾಯಕರವಾಗಲಿವೆಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಳ ಸಚಿವರಾದ ಶ್ರೀ ಪ್ರಲ್ಹಾದ್ ಜೋಷಿ ಅವರು ಹೇಳಿದರು. ಒಡಿಶಾದ ನಬರಂಗ್ ಪುರ್ ಜಿಲ್ಲೆಯಲ್ಲಿ ಸ್ಥಾಪಿಸಲಾದ 200 ಹಾಸಿಗೆಗಳ ಆಸ್ಪತ್ರೆಗೆ ನಾಲ್ಕೊ ಧನ ಸಹಾಯ ಒಸಗಿಸಲಿದೆ ಮತ್ತು ರಾಜ್ಯದ ಅಂಗುಲ್ ಜಿಲ್ಲೆಯ ತಲ್ಚರ್ ನಲ್ಲಿರುವ 150 ಹಾಸಿಗೆಗಳ ಆಸ್ಪತ್ರೆಗೆ ಎಂ ಸಿ ಎಲ್ ಧನ ಸಹಾಯ ಒದಗಿಸುತ್ತದೆ. ಜೊತೆಗೆ ಆಸ್ಪತ್ರೆಯನ್ನು ಸ್ಥಾಪಿಸಲು ಎಂ ಸಿ ಎಲ್ ತನ್ನ ವೈದ್ಯಕೀಯ ಕಾಲೇಜಿನ ಮೂಲ ಸೌಕರ್ಯಗಳನ್ನೂ ಒದಗಿಸುತ್ತಿದೆ.

ಕೊವಿಡ್-19 ವಿರುದ್ಧ ಹೋರಾಡಲು ಜಿಲ್ಲಾ ಖನಿಜ ನಿಧಿ (ಡಿಎಂಎಫ್) ನಲ್ಲಿ ಲಭ್ಯವಿರುವ 30% ರಷ್ಟು ಉಳಿದ ನಿಧಿಯನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಒಡಿಶಾದಂತಹ ಶ್ರೀಮಂತ ಖನಿಜ ರಾಜ್ಯಕ್ಕೆ ಇದು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆಎಂದೂ ಕಲ್ಲಿದ್ದಲು ಮತ್ತು ಗಣಿಗಳ ಸಚಿವರು ತಿಳಿಸಿದರು.

 

https://ci3.googleusercontent.com/proxy/NAeEe6JnuMPIILiEllgwPMHEIHxCCcSWUUnc-BI8AbGOeQi5FERFaGd6ysEEFzW8nFBhE1TronGDISB2zlXrCDtVHHiIXpw0E9EOTjyAXkue2yas0STl=s0-d-e1-ft#https://static.pib.gov.in/WriteReadData/userfiles/image/image001089X.jpg

https://ci3.googleusercontent.com/proxy/VAyKaESeAQuE2ZQAcm8ophvyozRbPTJYuCxRDtPF_LidSf-Aa7Cuc4iDupkKJW0U1S4zPaoxEtIR66KK2wNvMiFM1B4rp-Za5nooEYVTfIPiGvslCihc=s0-d-e1-ft#https://static.pib.gov.in/WriteReadData/userfiles/image/image002DVUR.jpg

ನಾಲ್ಕೊ ಸಿಬ್ಬಂದಿ ತಮ್ಮ ಒಂದು ದಿನದ ಸಂಬಳವಾದ ಒಟ್ಟು ರೂ. 2.5 ಕೋಟಿಗಳನ್ನು ಒಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುಗೆಯಾಗಿ ನೀಡಿರುವುದು ಗಮನಾರ್ಹವಾಗಿದೆ. ಇತ್ತೀಚೆಗೆ ಒಡಿಶಾ ಸರ್ಕಾರ, ಭುಬನೇಶ್ವರದಲ್ಲಿ ಕೊವಿಡ್-19 ಗಾಗಿ ಪ್ರತ್ಯೇಕವಾಗಿ ಆರಂಭಿಸಿದ 500 ಹಾಸಿಗೆಗಳ ಆಸ್ಪತ್ರೆಗೆ ಎಂಸಿಎಲ್ ಈಗಾಗಲೇ ಧನ ಸಹಾಯ ಒಸಗಿಸುತ್ತಿದೆ. ಒಡಿಶಾದ ಝಾರ್ಸುಗುಡಾ ಜಿಲ್ಲೆಯಲ್ಲಿ, ಭಾರತದ ಈ ಕಲ್ಲಿದ್ದಲು ಸಂಸ್ಥೆ 50 ಹಾಸಿಗೆಗಳ ಐಸೊಲೇಶನ್ ಕೇಂದ್ರವನ್ನು ಸ್ಥಾಪಿಸಿದೆ. ತಮ್ಮ ಕಾರ್ಯಾಚರಣೆಯ ಪ್ರದೇಶದ ಸುತ್ತಮುತ್ತಲು ವಾಸಿಸುವ ಜನರು ಮತ್ತು ಕಲ್ಲಿದ್ದಲು ಗಣಿ ಕಾರ್ಮಿಕರಿಗೆ ಅಲ್ಕೊಹಾಲ್ ಆಧಾರಿತ ಸ್ಯಾನಿಟೈಸರ್ ಗಳು ಮತ್ತು ಮಾಸ್ಕ್ ಗಳನ್ನ ಒಸಗಿಸುವುದರ ಜೊತೆಗೆ, ಹೊರವಲಯದ ಪ್ರದೇಶಗಳನ್ನು ಸ್ವಚ್ಛಗೊಳಿಸಲು, ಕಂಪೆನಿಯು ಅತ್ಯಾಧುನಿಕ ಉಪಕರಣವಾದ “ಫಾಗ್ ಕೆನಾನ್” ಅನ್ನು ಸಹ ಸೇವೆಗಾಗಿ ನೀಡಿದೆ.

ನಾಲ್ಕೊ, ಗಣಿ ಸಚಿವಾಲಯ (ಎಂಒಎಂ) ದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸಾರ್ವಜನಿಕ ವಲಯದ ಒಂದು ಉದ್ಯಮವಾಗಿದೆ (ಸಿಪಿಎಸ್ಇ) ಮತ್ತು ಎಂಸಿಎಲ್, ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಲ್ಲಿದ್ದಲು ನಿಯಮಿತ (ಸಿಐಎಲ್) ನ ಅಂಗ ಸಂಸ್ತೆಯಾಗಿದೆ. ಭಾರತದಲ್ಲಿ 32% ಬಾಕ್ಸೈಟ್, 33% ಅಲ್ಯೂಮಿನಾ ಮತ್ತು 12% ಅಲ್ಯೂಮಿನಿಯಂ ಉತ್ಪಾದನೆಯನ್ನು ನಾಲ್ಕೊ ಮಾಡುತ್ತಿದೆ. ಭಾರತದ ಶೇಕಡಾ 80 ರಷ್ಟು  ಕಲ್ಲಿದ್ದಲನ್ನು ಸಿಐಎಲ್ ಉತ್ಪಾದಿಸುತ್ತಿದೆ.

***(Release ID: 1616494) Visitor Counter : 55