ರಕ್ಷಣಾ ಸಚಿವಾಲಯ

ನರೇಲಾ ಕ್ವಾರಂಟೈನ್‌ ಕೇಂದ್ರಕ್ಕೆ ಸೇನೆ ಬೆಂಬಲ

Posted On: 19 APR 2020 7:37PM by PIB Bengaluru

ನರೇಲಾ ಕ್ವಾರಂಟೈನ್ಕೇಂದ್ರಕ್ಕೆ ಸೇನೆ ಬೆಂಬಲ
 

ಕೋವಿಡ್ಶಂಕಿತರನ್ನು ಪ್ರತ್ಯೇಕವಾಗಿರಿಸಲು ದೆಹಲಿಯ ನರೆಲಾ ಕ್ವಾರಂಟೈನ್ಕೇಂದ್ರವನ್ನು ಮೀಸಲಿಡಲಾಗಿದೆ. ಇದು ದೇಶದಲ್ಲಿ ಅತಿ ದೊಡ್ಡ ಕೇಂದ್ರವಾಗಿದೆ. 2020 ಮಾರ್ಚ್ತಿಂಗಳ ಮಧ್ಯದಲ್ಲಿ ಕೇಂದ್ರವನ್ನು ಆರಂಭಿಸಲಾಯಿತು. ಆರಂಭದಲ್ಲಿ 250 ವಿದೇಶಿಯರನ್ನಿರಿಸಲಾಗಿತ್ತು. ಬಳಿಕ, ಹೆಚ್ಚುವರಿಯಾಗಿ ಮತ್ತೆ 1000 ಮಂದಿಯನ್ನು ನಿಜಾಮುದ್ದೀನ್ಮರ್ಕಾಜ್ನಿಂದ ಕರೆತರಲಾಯಿತು.

2020 ಏಪ್ರಿಲ್‌ 1ರಿಂದ ನರೇಲಾ ಕ್ವಾರಂಟೈನ್ಕೇಂದ್ರದಲ್ಲಿ ಸೇನೆಯ ವೈದ್ಯರು ಮತ್ತು ನರ್ಸಿಂಗ್ಸಿಬ್ಬಂದಿಯನ್ನೊಳಗೊಂಡ ತಂಡವು ಸಿವಿಲ್ಆಡಳಿತದ ಜತೆ ಕೈಜೋಡಿಸಿ ಸಹಾಯಹಸ್ತ ಚಾಚಿದೆ. 2020 ಏಪ್ರಿಲ್‌ 16ರಿಂದ ಸೇನೆಯು ಕೇಂದ್ರದ ನಿರ್ವಹಣೆಯನ್ನು ಬೆಳಿಗ್ಗೆ 8ರಿಂದ ಸಂಜೆ 8ಗಂಟೆಯವರೆಗೆ ಕೈಗೊಳ್ಳುತ್ತಿದೆ. ರಾತ್ರಿಯಲ್ಲಿ ಮಾತ್ರ ದೆಹಲಿ ಸರ್ಕಾರದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೇಂದ್ರದ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಾರೆ. ಆರ್ವೈದ್ಯಾಧಿಕಾರಿಗಳು ಮತ್ತು 18 ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ 40 ಸೇನೆಯ ತಂಡ ಸ್ವಯಂ ಪ್ರೇರಣೆಯಿಂದ ಕೇಂದ್ರದ ಆವರಣದಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ.

ಸೇನೆಯ ವೈದ್ಯಕೀಯ ತಂಡದ ವೃತ್ತಿಪರತೆ ಕೇಂದ್ರದಲ್ಲಿರುವವರ ಹೃದಯವನ್ನು ಗೆದ್ದಿದೆ. ಇಲ್ಲಿರುವವರು ಸೇನೆಯ ವೈದ್ಯಕೀಯ ತಂಡಕ್ಕೆ ಸಹಕಾರ ನೀಡುತ್ತಿದ್ದಾರೆ. ಮೂಲಕ ಎಲ್ಲ ವೈದ್ಯಕೀಯ ಪ್ರಕ್ರಿಯೆಗಳು ಸುಗಮವಾಗಿ ನಡೆಯುವಂತೆ ಕ್ರಮಕೈಗೊಂಡಿದ್ದಾರೆ. ಸದ್ಯ ಮರ್ಕಾಜ್ 932 ಸದಸ್ಯರು ಆರೈಕೆ ಕೈಗೊಳ್ಳಲಾಗಿದೆ. ಇವರಲ್ಲಿ 367 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಕೇಂದ್ರವನ್ನು ನಡೆಸುವಲ್ಲಿ ಸಿವಿಲ್ಆಡಳಿತ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ದೇಶದ ಎಲ್ಲ ನಾಗರಿಕರ ಸುರಕ್ಷತೆಗಾಗಿ ಕೊರೊನಾ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಸೇನೆಯು ಕೈಜೋಡಿಸಿದ್ದು, ಬದ್ಧತೆ ಮತ್ತು ದೃಢ ನಿರ್ಧಾರದಿಂದ ಪಾಲ್ಗೊಂಡಿದೆ.

***


(Release ID: 1616287) Visitor Counter : 212