ಪಂಚಾಯತ್ ರಾಜ್ ಸಚಿವಾಲಯ
ದೇಶಾದ್ಯಂತ ಕೋವಿಡ್ – 19 ಸಾಂಕ್ರಾಮಿಕ ರೋಗ ಪರೀಕ್ಷಿಸಲು ದೇಶದ ಎಲ್ಲ ಜಿಲ್ಲಾಡಳಿತಗಳು ಮತ್ತು ಗ್ರಾಮ ಪಂಚಾಯ್ತಿಗಳು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ
Posted On:
20 APR 2020 12:57PM by PIB Bengaluru
ದೇಶಾದ್ಯಂತ ಕೋವಿಡ್ – 19 ಸಾಂಕ್ರಾಮಿಕ ರೋಗ ಪರೀಕ್ಷಿಸಲು ದೇಶದ ಎಲ್ಲ ಜಿಲ್ಲಾಡಳಿತಗಳು ಮತ್ತು ಗ್ರಾಮ ಪಂಚಾಯ್ತಿಗಳು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ
ಸಲಹಾ ಸಮೀತಿಗಳ ರಚನೆ; ರೋಗದ ಕುರಿತು ಜಾಗೃತಿ ಮೂಡಿಸುವ ಗೋಡೆ ಬರಹಗಳು, ಸ್ಥಳೀಯವಾಗಿ ಮಾಸ್ಕಗಳ ತಯಾರಿಕೆ ಮತ್ತು ವಿತರಣೆ, ಅಗತ್ಯವಿರುವವರಿಗೆ ಉಚಿತ ಊಟ ಮತ್ತು ಪಡಿತರ ವಿತರಣೆ ಮತ್ತು ಸಾರ್ವಜನಿಕ ಸ್ಥಳಗಳ ನೈರ್ಮಲ್ಯೀಕರಣ ಮುಂತಾದ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ
ದೇಶಾದ್ಯಂತ ಹರಡಿರುವ ಕೋವಿಡ್ – 19 ಸಾಂಕ್ರಾಮಿಕ ರೋಗ ಪರೀಕ್ಷಿಸಲು ದೇಶದ ಎಲ್ಲ ಜಿಲ್ಲಾಡಳಿತಗಳು ಮತ್ತು ಗ್ರಾಮ ಪಂಚಾಯತಿಗಳು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ. ಉತ್ತಮ ಅಭ್ಯಾಸಗಳ ಉದಾಹರಣೆಗಳಾಗಿ ಇತರರು ಪಾಲಿಸಬಹುದಾದ ಕೆಲವು ಉಪಕ್ರಮಗಳೆಂದರೆ –
- ಮಧ್ಯ ಪ್ರದೇಶ: ಆಜೀವಿಕಾ ಯೋಜನೆ, ಗ್ರಾಮಪಂಚಾಯ್ತಿಗಳಿಗೆ ವಿತರಿಸಲೆಂದು ಮಾಸ್ಕ್ ಗಳನ್ನು ಹೊಲಿಯುವ ಕಾರ್ಯದಲ್ಲಿ ರಾಜಘಡ ಜಿಲ್ಲೆ ತೊಡಗಿಸಿಕೊಂಡಿದೆ. ಭೋಪಾಲ್ ಜಿಲ್ಲೆಯ ಹುಜೂರ್ ಹೋಬಳಿಯ ಆಚಾರ್ ಪುರ ಗ್ರಾಮ ಪಂಚಾಯ್ತಿಯ ಸರಪಂಚರು ಗ್ರಾಮಸ್ಥರಿಗೆ ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ನರಸಿಂಗ್ ಪುರ ಜಿಲ್ಲೆಯ ಚಿಚೋಲಿ ಬ್ಲಾಕ್ ನ ಖಮರಿಯಾ ಪಂಚಾಯತ್ ನಲ್ಲಿ ಗೋಡೆಗಳ ಮೇಲೆ ವರ್ಣಚಿತ್ರ ಬಿಡಿಸಲಾಗಿದೆ.
- ತಮಿಳು ನಾಡು : ಪಂಚಾಯತ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತಿರುಪ್ಪುರ್ ಬ್ಲಾಕ್ ನ ಮಂಗಳಂ ಪಂಚಾಯತ್ ಪ್ರದೇಶದಲ್ಲಿ ನೈರ್ಮಲ್ಯೀಕರಣ ಮಾಡಲಾಗುತ್ತಿದೆ.
- ನಾಗಾಲ್ಯಾಂಡ್ : ರಾಜ್ಯ ಸರ್ಕಾರದ ಮುಖ್ಯ ಕಾರ್ದರ್ಶಿ ಶ್ರೀ ತೆಮ್ಜೆನ್ ಟಾಯ್(ಐಎಎಸ್) ಅವರ ನೇತೃತ್ವದಲ್ಲಿ 17 ಮಾರ್ಚ್ 2020 ರಂದು ಕೋವಿಡ್ – 19 ಬಗ್ಗೆ ವಿಶೇಷ ಸಲಹಾ ಗುಂಪನ್ನು (ಎಸ್ ಎ ಜಿ) ರಚಿಸಲಾಗಿದೆ ಮತ್ತು ಇದರ ಮೂಲಕ ನಾಗಾಲ್ಯಾಂಡ್ ರಾಜ್ಯದಲಲ್ಇ ಕೋವಿಡ್ – 19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಿದ್ಧತೆ ಮತ್ತು ಸರ್ಕಾರಕ್ಕೆ ಸಲಹೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ದೀಮಾಪುರ್ ನ ಕುಬುಟು ಬ್ಲಾಕ್ ನ ಸೊಝುಕು ಗ್ರಾಮದಲ್ಲಿ ಎಸ್ ಹೆಚ್ ಜಿ ಕ್ಸಾಕ್ಯೂ ಅವರ ನೇತೃತ್ವದಲ್ಲಿ ವಸತಿ ಇಲ್ಲದ ಜನರಿಗೆ ಗ್ರಾಮ ಮಟ್ಟದಲ್ಲಿ ಆಹಾರವನ್ನು ಬೇಯಿಸಿ ನೀಡಲಾಗುತ್ತಿದೆ ಮತ್ತು ದೀಮಾಪುರ್ ನ ಚುಮುಕೆಡಿಮಾ ಬ್ಲಾಕ್ ನ ಸಿಗ್ನಲ್ ಅಂಗಾಮಿ ಗ್ರಾಮದಲ್ಲಿ ಸ್ಥಳೀಯ ಸಂಸ್ಥೆಯೊಂದು ದಿನಗೂಲಿ ಕಾರ್ಮಿಕರಿಗೆ 10 ಕೆಜಿ ಅಕ್ಕಿಯನ್ನು ವಿತರಿಸುತ್ತಿದೆ.
***
(Release ID: 1616484)
Visitor Counter : 306
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu