ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ನಿರ್ವಹಣೆಯ ಸ್ಥಿತಿ ಪರಿಶೀಲನೆಗೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಡಾ. ಹರ್ಷವರ್ಧನ್ ಭೇಟಿ

Posted On: 19 APR 2020 6:08PM by PIB Bengaluru

ಕೋವಿಡ್-19 ನಿರ್ವಹಣೆಯ ಸ್ಥಿತಿ ಪರಿಶೀಲನೆಗೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಡಾ. ಹರ್ಷವರ್ಧನ್ ಭೇಟಿ

ಲಾಕ್ ಡೌನ್ 2.0 ಸಂದರ್ಭದಲ್ಲಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದರಿಂದ ಕೋವಿಡ್ -19 ರ ಪ್ರಖರತೆ ತಗ್ಗಿ ಉತ್ತಮ ಫಲ ದೊರೆಯಲಿದೆ

ಇಂಥ ಸಮಯದಲ್ಲಿ ನಮ್ಮ ಆರೋಗ್ಯ ಯೋಧರ ಸೇವೆಗಳಿಗೆ ದೇಶ ಕೃತಜ್ಞವಾಗಿದೆ

ಚೇತರಿಕೆ ಪ್ರಮಾಣ ಹೆಚ್ಚುತ್ತಿರುವುದು ಭಾರತದಲ್ಲಿ ನಮ್ಮ ಮುಂಚೂಣಿ ಆರೋಗ್ಯ ಕಾರ್ಯಕರ್ತರು ನೀಡುತ್ತಿರುವ ಗುಣಮಟ್ಟದ ಸುಶ್ರೂಷೆಯನ್ನು ಬಿಂಬಿಸುತ್ತದೆ”: ಡಾ.ಹರ್ಷವರ್ಧನ್
 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಕೇಂದ್ರ ಸಚಿವ ಡಾ. ಹರ್ಷವರ್ಧನ್ ಇಂದು ಕೋವಿಡ್ – 19 ನಿರ್ವಹಣೆಯ ಸ್ಥಿತಿ ಪರಿಶೀಲನೆಗೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯ ಸನ್ನದ್ಧತೆಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಾಕಷ್ಟು ಐಸೋಲೇಶನ್ ವಾರ್ಡ್ ಗಳು ಮತ್ತು ಹಾಸಿಗೆಗಳನ್ನು ಹೊಂದಿದ 450 ಹಾಸಿಗೆಗಳ ಸಮರ್ಪಕ ಕೋವಿಡ್ 19 ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ.  

ಫ್ಲು ಕೋಣೆ (ವಿಭಾಗ), ಐಸೋಲೇಶನ್ ವಾರ್ಡ್ ಗಳು, ನಿಗಾವಣೆ ವಾರ್ಡ್ ಗಳು, ಗಂಭೀರ ಪ್ರದೇಶ/ಐಸಿಯು ಗಳು, ಕೋವಿಡ್ ಕಾರಿಡಾರ್, ಕೋವಿಡ್ ಪ್ರದೇಶ, ಕೋವಿಡ್ ಒಪಿಡಿ, ಕೋವಿಡ್ ಮಾದರಿ ಸಂಗ್ರಹಣಾ ಘಟಕ, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ವಸ್ತ್ರ ಬದಲಾವಣೆಗೆ ಸೌಲಭ್ಯಗಳಿಗೆ ಭೇಟಿ ನೀಡಿದರು. ಇಂಥ ವಾರ್ಡ್ ಗಳನ್ನು ನಿರ್ವಹಿಸುತ್ತಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ತಮ್ಮನ್ನು ತಾವು  ಸೋಂಕುನಿವಾರಣೆಗೊಳಿಸಿಕೊಳ್ಳಲು ಸ್ನಾನ, ಬಟ್ಟೆ ಬದಲಾಯಿಸಲು ಮತ್ತು ಸ್ಪ್ರೆ ದಂತಹ ವಿಶೇಷ ಸೌಲಭ್ಯಗಳನ್ನು ಆರ್ ಎಂ ಒ ವಸತಿಗೃಹದಲ್ಲಿ ಒದಗಿಸಿರುವುದಕ್ಕೆ ಅವರು ತೃಪ್ತಿ ವ್ಯಕ್ತಪಡಿಸಿದರು. ಸಂಚಾರ ಸಮಸ್ಯೆಗಳನ್ನು ತಪ್ಪಿಸಲು ಮತ್ತು ಅವರ ಕುಟುಂಬದವರಿಗೆ ಸೋಂಕು ಹರಡದಂತೆ ಕಾಪಾಡಲು ಆರೋಗ್ಯ ಕಾರ್ಯಕರ್ತರಿಗೆ ಹತ್ತಿರದ ಕೆಲ ವಸತಿಗೃಹಗಳಲ್ಲಿ ವಸತಿ ಮತ್ತು ಆಹಾರ ಸೌಲಭ್ಯ ಒದಗಿಸಲಾಗಿದೆ. ಕೋವಿಡ್ ರೋಗಿಗಳಿಗೆ ವಿಮಾನ ನಿಲ್ದಾಣದಲ್ಲಿ ಮತ್ತು ನರೇಲಾ ಕ್ವಾರೆಂಟೈನ್ ನಲ್ಲಿ ಸೇವೆ ಸಲ್ಲಿಸುವ ವೇಳೆ ಕೋವಿಡ್ ಪಾಸಿಟಿವ್ ಆಗಿ  ಪರಿವರ್ತನೆಗೊಂಡ ಸ್ವತಃ ವೈದ್ಯರೂ ಆದ ರೋಗಿಯನ್ನು ಕೋವಿಡ್ ವಾರ್ಡ್ ನಲ್ಲಿ ವಿಡಿಯೊ ಕಾನ್ಫೆರೆನ್ಸಿಂಗ್ ಮೂಲಕ ಸಚಿವರು ಮಾತನಾಡಿದರು. “ಅವರು ಧೃಡಕಾಯ ಹೊಂದಿದ್ದು ಆರೋಗ್ಯವಾಗಿದ್ದು ಆಸ್ಪತ್ರೆಯಲ್ಲಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಸ್ವತಃ ಕೋವಿಡ್ ನಿಂದ ಬಳಲುತ್ತಿದ್ದರೂ ಅವರ ಆತ್ಮಸ್ಥೈರ್ಯ ತುಂಬಾ ಸ್ಪೂರ್ತಿದಾಯಕವಾಗಿದೆಎಂದು  ಸಚಿವರು ಹೇಳಿದರು.

ಆಸ್ಪತ್ರೆಯ ವಿವಿಧ ವಾರ್ಡ್ ಗಳು ಮತ್ತು ಆವರಣವನ್ನು ವಿಸ್ತೃತವಾಗಿ ಅವಲೋಕನ ಮತ್ತು ಪರಿಶೀಲನೆ ನಡೆಸಿದ ನಂತರ ವಿವಿಧ ಘಟಕಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತೃಪ್ತಿವ್ಯಕ್ತಪಡಿಸಿದರು. “ಕಳೆದ ಕೆಲ ದಿನಗಳಲ್ಲಿ  ನಾನು ಕೋವಿಡ್ – 19 ರ ಸಿದ್ಧತೆಯ ಪರಿಶೀಲನೆಗೆ ಎಐಐಎಂಎಸ್(ದೆಹಲಿ), ಎಲ್ ಎನ್ ಜೆ ಪಿ. ಆರ್ ಎಂ ಎಲ್, ಸಫ್ದರ್ ಗಂಜ್, ಎಐಐಎಂಎಸ್ ಝಜ್ಜಾರ್ ಹೀಗೆ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇನೆ ಮತ್ತು ಈಗ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ ಹಾಗೂ ಸಾಂಕ್ರಾಮಿಕ ರೋಗದ ಪರಿಣಾಮಕಾರಿ ತಡೆಗೆ ಈ ಆಸ್ಪತ್ರೆಗಳು ಮಾಡಿಕೊಂಡಿರುವ ಸಿದ್ಧತೆಗಳನ್ನು ಕಂಡು ತೃಪ್ತಿಯಾಗಿದೆಎಂದು  ಅವರು ಹೇಳಿದರು.   

ಕೋವಿಡ್ -19 ರ ಜೊತೆ ವ್ಯವಹರಿಸುವಾಗ ವೈದ್ಯರು, ಸುಶ್ರೂಷಕಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ತೋರಿದ ಸಮಯ ಪ್ರಜ್ಞೆ, ಶ್ರಮ ಮತ್ತು ಸಮರ್ಪಣೆ ಮತ್ತು ಬದ್ಧತೆಯನ್ನು ಪ್ರಶಂಸಿಸಿದ ಡಾ. ಹರ್ಷವರ್ಧನ್ ಅವರು ಕೋವಿಡ್ – 19 ರ ರೋಗಿಗಳ ಚೇತರಿಕೆ ಮಾರ್ಚ್ 29 ರ ವಾರದಲ್ಲಿದ್ದ ಶೇ 8 ರಿಂದ ಈ ವಾರದಲ್ಲಿ ಶೇ 12 ಕ್ಕೇರಿದೆ. ಇದು ಹೆಚ್ಚೆಚ್ಚು ರೋಗಿಗಳು ಗುಣಮುಖರಾಗಿ ತಮ್ಮ ಮನೆಗಳಿಗೆ ಮರಳುತ್ತಿರುವುದನ್ನು ತೋರಿಸುತ್ತದೆ. ಇದು ನಮ್ಮ ಭಾರತದಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿಸುವ ಆರೋಗ್ಯ ಸಿಬ್ಬಂದಿ ನೀಡುತ್ತಿರುವ ಆರೈಕೆಯ ಗುಣಮಟ್ಟವನ್ನು ಬಿಂಬಿಸುತ್ತಿದೆ. ಅವರ ಯಶಸ್ಸಿಗೆ ನಾನು ಶುಭ ಹಾರೈಸುತ್ತೇನೆ. ಇಂಥ ಸಮಯದಲ್ಲಿ ನಿಮ್ಮ ಸೇವೆಗೆ ದೇಶ ನಿಮಗೆ ಋಣಿಯಾಗಿರುತ್ತದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ಆರೋಗ್ಯ ಸಿಬ್ಬಂದಿ ಎದೆಗುಂದದೆ ಕಾರ್ಯನಿರ್ವಹಿಸುತ್ತಿರುವುದನ್ನು ನೋಡುವುದು ಹೃದಯಸ್ಪರ್ಶಿಯಾಗಿದೆಎಂದು ಹೇಳಿದರು.       

ಕೋವಿಡ್ – 19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆ ಕುರಿತು ರಾಜ್ಯಗಳ ಸಹಯೋಗದೊಂದಿಗೆ ತೀಕ್ಷ್ಣವಾಗಿ ಕಾಲ ಕಾಲಕ್ಕೆ ಗಮನಹರಿಸಲಾಗುತ್ತಿದೆ ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ. “ಕೆಲ ಸಮಯದಿಂದ ಹೊಸ ಪ್ರಕರಣಗಳ ಬೆಳವಣಿಗೆಯೂ ಸ್ಥಿರವಾಗಿದೆ. ಲಾಕ್ ಡೌನ್ ಮೊದಲು ಭಾರತದಲ್ಲಿ ಪ್ರತಿ 3 ದಿನಕ್ಕೆ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. ಇಂದು ಬೆಳಿಗ್ಗೆ 8 ಗಂಟೆಗೆ ನಾನು ಪಡೆದ ಮಾಹಿತಿಯಂತೆ ಕಳೆದ 7 ದಿನಗಳಿಂದ ಪ್ರತಿ 7.2 ದಿನಗಳಿಗೆ ಈ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಕಳೆದ 14 ದಿನಗಳಿಗೆ ಇದು 6.2 ಮತ್ತು ಕಳೆದ 3 ದಿನಗಳಿಗೆ ಇದು 9.7 ರಷ್ಟಿದೆ. ಪ್ರತಿದಿನ ಕೈಗೊಳ್ಳಲಾಗುವ ಪರೀಕ್ಷೆಗಳ ಸಂಖ್ಯೆ 14 ಪಟ್ಟು ಹೆಚ್ಚಾಗಿರುವುದರ ಹೊರತಾಗಿಯೂ ಪ್ರಕರಣಗಳ ಸಂಖ್ಯೆ ಈ ಮಟ್ಟಕ್ಕಿದೆ. ಅದೇ ರೀತಿ ರೋಗದ ಬೆಳವಣಿಗೆ ಅಂಶವನ್ನು ಗಮನಿಸಿದರೆ ಮಾರ್ಚ್ 15 ರಿಂದ 31 ರವೆಗೆ 2.1 ಆಗಿತ್ತು ಆದರೆ ಏಪ್ರಿಲ್ ನಲ್ಲಿ ಇದು 1.2 ಕ್ಕೆ ಇಳಿದಿದೆ. ಇದು ಶೇ 40 ರಷ್ಟು ಕುಸಿದಿದ್ದು ಉತ್ತಮ ಲಕ್ಷಣವಾಗಿದೆ. ಮತ್ತು ಇಡೀ ದೇಶಕ್ಕೆ ಉತ್ತೇಜನಕಾರಿಯಾಗಿದೆ. ಇದು ಕೋವಿಡ್ – 19 ರ ಒಟ್ಟಾರೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿಲ್ಲ ಮತ್ತು ಶೀಘ್ರದಲ್ಲೇ ಸ್ಥೀರಗೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ”. ಎಂದು ಕೂಡಾ ಡಾ. ಹರ್ಷವರ್ಧನ್ ಉಲ್ಲೇಖಿಸಿದ್ದಾರೆ.   

ಡಾ. ಹರ್ಷವರ್ಧನ್ ಅವರು ಲಾಕ್ ಡೌನ್ ವಿಸ್ತರಣಾ ಅವಧಿಯನ್ನು (ಮೇ 3 2020 ರವರೆಗೆ) ಅಕ್ಷರಶಃ ಉತ್ಸಾಹದಿಂದ ಪಾಲಿಸಬೇಕು ಹಾಗೂ ಸಾಂಕ್ರಾಮಿಕ ಸರಪಳಿಯನ್ನು ತುಂಡರಿಸಲು ಇದೊಂದು ಪರಿಣಾಮಕಾರಿ ಕ್ರಮವೆಂದು ಪರಿಗಣಿಸಬೇಕು ಎಂದು ಮನವಿ ಮಾಡಿಕೊಂಡರು. ಲಾಕ್ ಡೌನ್ 2.0 ಸಂದರ್ಭದಲ್ಲಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದರಿಂದ ಕೋವಿಡ್ -19 ಪ್ರಖರತೆಯನ್ನು ತಗ್ಗಿಸುವ ಮೂಲಕ ನಮಗೆ ಉತ್ತಮ ಫಲ ದೊರೆಯಲಿದೆ ಎಂದು ಹೇಳಿದ್ದಾರೆ. “ನಾವು ಯುದ್ಧಗಳನ್ನು ಜಯಿಸಿದ್ದೇವೆ. ಕೋವಿಡ್ – 19 ರ ವಿರುದ್ಧದ ಯುದ್ಧದಲ್ಲೂ ನಾವು ಖಂಡಿತ ಜಯಿಸುತ್ತೇವೆಎಂದು ಹೇಳಿದರು.

***



(Release ID: 1616248) Visitor Counter : 237