ನಾಗರೀಕ ವಿಮಾನಯಾನ ಸಚಿವಾಲಯ

ಲೈಫ್ ಲೈನ್ ಉಡಾನ್ ವಿಮಾನಗಳು, ಅವಶ್ಯಕ ವೈದ್ಯಕೀಯ ಸಾಮಗ್ರಿಗಳನ್ನು ದೇಶಾದ್ಯಂತ ಸರಬರಾಜು ಮಾಡುವಲ್ಲಿ 3 ಲಕ್ಷ ಕಿ ಮೀ ಗಿಂತ ಹೆಚ್ಚು ದೂರವನ್ನು ಕ್ರಮಿಸಿವೆ

Posted On: 20 APR 2020 3:16PM by PIB Bengaluru

ಲೈಫ್ ಲೈನ್ ಉಡಾನ್ ವಿಮಾನಗಳು, ಅವಶ್ಯಕ ವೈದ್ಯಕೀಯ ಸಾಮಗ್ರಿಗಳನ್ನು ದೇಶಾದ್ಯಂತ ಸರಬರಾಜು ಮಾಡುವಲ್ಲಿ 3 ಲಕ್ಷ ಕಿ ಮೀ ಗಿಂತ ಹೆಚ್ಚು ದೂರವನ್ನು ಕ್ರಮಿಸಿವೆ

 

ಲೈಫ್ ಲೈನ್ ಉಡಾನ್ ವಿಮಾನಗಳು 507.85 ಟನ್ ಅವಶ್ಯಕ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲು 3 ಲಕ್ಷ ಕಿ ಮೀ ಗಿಂತ ಹೆಚ್ಚು ದೂರವನ್ನು ಕ್ರಮಿಸಿವೆ.  ಏರ್ ಇಂಡಿಯಾ, ಏರ್ ಇಂಡಿಯಾಅಲಯೆನ್ಸ್ ಏರ್, ಐಎಎಫ್, ಮತ್ತು ಖಾಸಗಿ ಸಂಸ್ಥೆಗಳ 301 ವಿಮಾನಗಳು ಲೈಫ್ ಲೈನ್ ಉಡಾನ್ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂದಿನವರೆಗೆ 479.55 ಟನ್ ಗಳಷ್ಟು ಸರಕುಗಳನ್ನು ಸಾಗಿಸಲಾಗಿದೆ. ಇವುಗಳಲ್ಲಿ 184 ವಿಮಾನಗಳು ಏರ್ ಇಂಡಿಯಾ ಮತ್ತು ಅಲಯೆನ್ಸ್ ಏರ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸುವ ಮೂಲಕ ಕೊವಿಡ್ – 19 ವಿರುದ್ಧದ ಭಾರತದ ಹೋರಾಟಕ್ಕೆ ನೆರವು ಒದಗಿಸಲುಲೈಫ್ ಲೈನ್ ಉಡಾನ್ವಿಮಾನಗಳು ಎಂ ಸಿ ಮೂಲಕ ಕಾರ್ಯನಿರ್ವಹಿಸುತ್ತಿವೆ.

ಪವನ್ ಹನ್ಸ್ ನಿಯಮಿತ ಸಂಸ್ಥೆ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲದಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶಗಳಿಗೆ ನಿರ್ಣಾಯಕ ವೈದ್ಯಕೀಯ ಸಾಮಗ್ರಿಗಳು ಮತ್ತು ರೋಗಿಗಳನ್ನು ಸಾಗಿಸಲು ಕಾರ್ಯನಿರ್ವಹಿಸುತ್ತಿವೆ. 19 ಏಪ್ರಿಲ್ 2020 ರವರೆಗೆ ಪವನ್ ಹನ್ಸ್ ಹೆಲಿಕಾಪ್ಟರ್ ಗಳು 6537 ಕಿ. ಮೀ. ಗಳ ದೂರ ಕ್ರಮಿಸಿ 1.90 ಟನ್ ಗಳಷ್ಟು ಸರಕುಗಳನ್ನು ಸಾಗಿಸಿವೆ. ದೇಶೀಯ ಲೀಫ್ ಲೈನ್ ಉಡಾನ್ ಸಾಗಾಣೆ ಮಾಡುವ ಸರಕುಗಳಲ್ಲಿ, ಕೊವಿಡ್ – 19 ಗೆ ಸಂಬಂಧಿಸಿದ ಕಾರಕಗಳು, ಕಿಣ್ವಗಳು, ವೈದ್ಯಕೀಯ ಉಪಕರಣಗಳು, ಪರೀಕ್ಷಾ ಕಿಟ್ ಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ಮಾಸ್ಕ್ ಗಳು, ಕೈಗವಸುಗಳು ಮತ್ತು ಹೆಚ್ ಎಲ್ ಎಲ್ ಹಾಗೂ ಐ ಸಿ ಎಮ್ ಆರ್ ನ ಇತರ ಉಪಕರಣಗಳೂ ಸೇರಿದಂತೆ, ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳಿಂದ ಮನವಿ ಪಡೆಯಲಾದ ಸರಕುಗಳು ಮತ್ತು ಅಂಚೆ ಪ್ಯಾಕೆಟ್ ಗಳನ್ನು ಸಹ ಒಳಗೊಂಡಿದೆ.

ಈಶಾನ್ಯ ಪ್ರದೇಶ, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ಪ್ರದೇಶದ ರಾಜ್ಯಗಳಿಗೆ ವಿಶೇಷ ಗಮನಹರಿಸಲಾಗಿದೆ. ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರ, ಲದಾಖ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳಿಗಾಗಿ ಏರ್ ಇಂಡಿಯಾ ಮತ್ತು ಐಎಎಫ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕಾರ್ಗೊದ ಹೆಚ್ಚಿನ ಭಾಗ ವಿಮಾನದಲ್ಲಿ ಹೆಚ್ಚಿನ ಸ್ಥಳವನ್ನು ಆಕ್ರಮಿಸುವಂತಹ ಮಾಸ್ಕ್ ಗಳು, ಕೈಗವಸುಗಳು ಮತ್ತು ಇತರ ಉಪಭೋಗ್ಯದ ವಸ್ತುಗಳಂತಹ  ಹಗುರವಾದ ಮತ್ತು ದೊಡ್ಡ ಗಾತ್ರದ ಸರಕುಗಳನ್ನು ಹೊಂದಿದೆ. ಸೂಕ್ತ ಮುಂಜಾಗೃತೆಯೊಂದಿಗೆ ಪ್ರವಾಸಿಗರು ಕುಳಿತುಕೊಳ್ಳುವ ಸ್ಥಳದಲ್ಲಿ ಮತ್ತು ಓವರ್ ಹೆಡ್ ಕ್ಯಾಬಿನ್ ಗಳಲ್ಲಿ ಸರಕು ಶೇಖರಣೆಗೆ ವಿಶೇಷ ಪರವಾನಿಗೆ ಪಡೆಯಲಾಗಿದೆ.

ವಿವಿಧ ಪಾಲುದಾರರೊಂದಿಗೆ ಅಡೆತಡೆರಹಿತ ಸಮನ್ವಯತೆಯನ್ನು ಸಾಧಿಸಲು ಎಂಒಸಿಎ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ ಐ ಸಿ) ಲೈಫ್ ಲೈನ್ ಉಡಾನ್ ವಿಮಾನಗಳ ಸಮನ್ವಯತೆಗಾಗಿ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಿದೆ. ಲೈಫ್ ಲೈನ್ ಉಡಾನ್ ವಿಮಾನಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಾಹಿತಿಯನ್ನು https://esahaj.gov.in/lifeline_udan/public_info ಈ ಪೋರ್ಟಲ್ ನಲ್ಲಿ ಪ್ರತಿದಿನ ಪ್ರಕಟಿಸಲಾಗುವುದು.

ದೇಶೀಯ ಸರಕು ಸಾಗಿಸುವ ವಿಮಾನಯಾನ ನಿರ್ವಾಹಕರಾದ ಬ್ಲೂ ಡಾರ್ಟ್, ಸ್ಪೈಸ್ ಜೆಟ್ ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ಕಾರ್ಗೊ ವಿಮಾನಗಳ ಹಾರಾಟ ನಿರ್ವಹಿಸುತ್ತಿವೆ. ಸ್ಪೈಸ್ ಜೆಟ್ 6,29,325  ಕಿ. ಮೀ. ದೂರವನ್ನು ಮತ್ತು 3414 ಟನ್ ಗಳಷ್ಟು ಸರಕುಗಳನ್ನು 427 ಕಾರ್ಗೊ ವಿಮಾನಗಳ ಮೂಲಕ 24 ಮಾರ್ಚ್ ರಿಂದ 19 ಏಪ್ರಿಲ್ 2020 ನಡುವೆ ಸಾಗಾಟ ನಡೆಸಿತು.  ಇವುಗಳಲ್ಲಿ 135 ವಿದೇಶೀ ಕಾರ್ಗೊ ವಿಮಾನಗಳಾಗಿವೆ. ಬ್ಲೂ ಡಾರ್ಟ್ 1, 39, 179 ಕಿ. ಮೀ. ದೂರವನ್ನು ಮತ್ತು 2241 ಟನ್ ಗಳಷ್ಟು ಸರಕುಗಳನ್ನು 141 ದೇಶೀಯ ಕಾರ್ಗೊ ವಿಮಾನಗಳ ಮೂಲಕ, 25 ಮಾರ್ಚ್ ರಿಂದ 19 ಏಪ್ರಿಲ್ 2020 ನಡುವೆ ಸಾಗಾಟ ನಡೆಸಿತು. ಇಂಡಿಗೊ 37,160 ಕಿ. ಮೀ. ದೂರವನ್ನು ಮತ್ತು 66 ಟನ್ ಗಳಷ್ಟು ಸರಕುಗಳನ್ನು 33 ಕಾರ್ಗೊ ವಿಮಾನಗಳ ಮೂಲಕ 3-19  ಏಪ್ರಿಲ್ 2020 ನಡುವೆ ಸಾಗಾಟ ನಡೆಸಿತು. ಇದರಲ್ಲಿ ಸರ್ಕಾರಕ್ಕಾಗಿ ಉಚಿತವಾಗಿ ಸಾಗಿಸಲಾದ ವೈದ್ಯಕೀಯ ಸಾಮಗ್ರಿಗಳೂ ಒಳಗೊಂಡಿವೆ.

ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಕೊವಿಡ್ – 19 ಪರಿಹಾರ ಸಾಮಗ್ರಿಗಳನ್ನು ಸಾಗಿಸಲು, ಈಸ್ಟ್ ಏಷ್ಯಾ ಜೊತೆಗೂಡಿ ಏರ್-ಬ್ರಿಡ್ಜ್ ಅನ್ನು ಪ್ರಾರಂಭಿಸಲಾಗಿದೆ. ತರಲಾದ ವೈದ್ಯಕೀಯ ಸರಕುಗಳ ದಿನಾಂಕವಾರು ಪ್ರಮಾಣ ಕೆಳಗಿನಂತಿದೆ:

 

ಕ್ರಮ ಸಂಖ್ಯೆ

ದಿನಾಂಕ

ಇಂದ

ಪ್ರಮಾಣ (ಟನ್ಗಳಲ್ಲಿ)

1

04.4.2020

ಶಾಂಘೈ

21

2

07.4.2020

ಹಾಂಗ್ ಕಾಂಗ್

06

3

09.4.2020

ಶಾಂಘೈ

22

4

10.4.2020

ಶಾಂಘೈ

18

5

11.4.2020

ಶಾಂಘೈ

18

6

12.4.2020

ಶಾಂಘೈ

24

7

14.4.2020

ಹಾಂಗ್ ಕಾಂಗ್

11

8

14.4.2020

ಶಾಂಘೈ

22

9

16.4.2020

ಶಾಂಘೈ

22

10

16.4.2020

ಹಾಂಗ್ ಕಾಂಗ್

17

11

16.4.2020

ಸಿಯೋಲ್

05

12

17.4.2020

ಶಾಂಘೈ

21

13

18.4.2020

ಶಾಂಘೈ

17

14

18.4.2020

ಸಿಯೋಲ್

14

15

18.4.2020

ಗ್ವಾಂಗ್ ಝೌ

04

16

19.4.2020

ಶಾಂಘೈ

19

 

 

ಒಟ್ಟು

261

ಅವಶ್ಯಕತೆಗೆ ಅನುಸಾರ ಬೇರೆ ದೇಶಗಳಿಗೆ ತುರ್ತು ವೈದ್ಯಕೀಯ ವಸ್ತುಗಳನ್ನು ಸರಬರಾಜು ಮಾಡಲು ಏರ್ ಇಂಡಿಯಾ ಸಮರ್ಪಿತ ಸರಕು ಸಾಗಣೆ ವಿಮಾನಗಳ ಹಾರಾಟ ನಡೆಸಲಿದೆ.

***(Release ID: 1616490) Visitor Counter : 63