ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಅಪ್ ಡೇಟ್ಸ್

Posted On: 20 APR 2020 5:29PM by PIB Bengaluru

ಕೋವಿಡ್-19 ಅಪ್ ಡೇಟ್ಸ್

 

ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗೆ ಹಲವಾರು ಕ್ರಮಗಳನ್ನು ಭಾರತ ಸರ್ಕಾರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳುತ್ತಿವೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಸರ್ಕಾರಿ ಕಚೇರಿಗಳ ಕಾರ್ಯಚಟುವಟಿಕೆಗಾಗಿ ಗೃಹ ವ್ಯವಹಾರ ಸಚಿವಾಲಯವು 20 ಏಪ್ರಿಲ್ 2920 ರಂದು ಹೊರಡಿಸಿದ ಮಾರ್ಗಸೂಚಿಗಳನ್ನು ಒಟ್ಟುಗೂಡಿಸುವ ಮೂಲಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತನ್ನ ಅಧಿಕಾರಿಗಳು ಮತ್ತು ಸಿಬ್ಬಂಧಿಗಳಿಗೆ ವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.

· ಮರುಬಳಕೆ ಮಾಡಬಹುದಾದ/ ಬಟ್ಟೆಯ ಮುಖದ ಹೊದಿಕೆಯನ್ನು ಬಳಸತಕ್ಕದ್ದು

· ಸೋಂಕುನಿವಾರಕ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು

· ಆಗಾಗ್ಗೆ ಸೋಪು ಮತ್ತು ನೀರಿನಿಂದ ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್/ ಸ್ಯಾನಿಟೈಜರ್‌ಗಳನ್ನು ಬಳಸಿ ಕೈಗಳನ್ನು ತೊಳೆಯಬೇಕು

· ಪರಸ್ಪರರ ನಡುವೆ ಸಾಕಷ್ಟು ಅಂತರವನ್ನು ಕಾಪಾಡಿಕೊಳ್ಳಬೇಕು

· 5 ಅಥವಾ ಹೆಚ್ಚಿನ ಜನರನ್ನು ಒಟ್ಟುಗೂಡಿಸುವುದನ್ನು ತಪ್ಪಿಸಬೇಕು

ಕಳೆದ ಏಳು ದಿನಗಳಲ್ಲಿನ ಬೆಳವಣಿಗೆಯನ್ನು ಬಳಸಿಕೊಂಡು ಲೆಕ್ಕಹಾಕಲಾದ ಕೋವಿಡ್-19 ಪ್ರಕರಣಗಳ ದ್ವಿಗುಣಗೊಳಿಸುವಿಕೆಯ ಪ್ರಮಾಣವು ಲಾಕ್‌ಡೌನ್‌ಗೆ ಮುಂಚಿನ ವಾರದಲ್ಲಿ ಭಾರತದ ದ್ವಿಗುಣಗೊಳಿಸುವಿಕೆಯ ಪ್ರಮಾಣವು 3.4 ರಷ್ಟಿದೆ ಮತ್ತು 19 ಏಪ್ರಿಲ್ 2020ರಂದು (ಕಳೆದ ಏಳು ದಿನಗಳಿಂದ) 7.5 ಕ್ಕೆ ಏರಿದೆ ಎಂದು ಸೂಚಿಸುತ್ತದೆ. ಏಪ್ರಿಲ್ 19 ರಂತೆ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ದ್ವಿಗುಣಗೊಳಿಸುವ ದರದಲ್ಲಿ ಸುಧಾರಣೆಯನ್ನು ತೋರಿಸಿದ 18 ರಾಜ್ಯಗಳು :

  • ದ್ವಿಗುಣಗೊಳ್ಳಲು ತೆಗೆದುಕೊಂಡ ಸಮಯ: 20 ದಿನಗಳಿಗಿಂತ ಕಡಿಮೆ -
  • ದೆಹಲಿ (ಕೇಂದ್ರಾಡಳಿತ ಪ್ರದೇಶ) - 8.5 ದಿನಗಳು
  • ಕರ್ನಾಟಕ - 9.2 ದಿನಗಳು
  • ತೆಲಂಗಾಣ - 9.4 ದಿನಗಳು
  • ಆಂಧ್ರಪ್ರದೇಶ- 10.6 ದಿನಗಳು
  • ಜಮ್ಮು ಮತ್ತು ಕಾಶ್ಮೀರ (ಕೇಂದ್ರಾಡಳಿತ ಪ್ರದೇಶ) - 11.5 ದಿನಗಳು
  • ಪಂಜಾಬ್- 13.1 ದಿನಗಳು
  • ಛತ್ತೀಸ್‌ಗಢ್ - 13.3 ದಿನಗಳು
  • ತಮಿಳುನಾಡು- 14 ದಿನಗಳು
  • ಬಿಹಾರ- 16.4 ದಿನಗಳು
  • ದ್ವಿಗುಣಗೊಳ್ಳಲು ತೆಗೆದುಕೊಂಡ ಸಮಯ: 20 ದಿನಗಳಿಂದ 30 ದಿನಗಳ ನಡುವೆ:
  • ಅಂಡಮಾನ್ & ನಿಕೋಬಾರ್ (ಕೇಂದ್ರಾಡಳಿತ ಪ್ರದೇಶ) - 20.1 ದಿನಗಳು
  • ಹರಿಯಾಣ - 21 ದಿನಗಳು
  • ಹಿಮಾಚಲ ಪ್ರದೇಶ - 24.5 ದಿನಗಳು
  • ಚಂಡೀಗಢ (ಕೇಂದ್ರಾಡಳಿತ ಪ್ರದೇಶ) - 25.4 ದಿನಗಳು
  • ಅಸ್ಸಾಂ - 25.8 ದಿನಗಳು
  • ಉತ್ತರಾಖಂಡ - 26.6 ದಿನಗಳು
  • ಲಡಾಖ್ (ಕೇಂದ್ರಾಡಳಿತ ಪ್ರದೇಶ) - 26.6 ದಿನಗಳು
  • ದ್ವಿಗುಣಗೊಳ್ಳಲು ತೆಗೆದುಕೊಂಡ ಸಮಯ: 30 ದಿನಗಳಿಗಿಂತ ಹೆಚ್ಚು:
  • ಒಡಿಶಾ - 39.8 ದಿನಗಳು
  • ಕೇರಳ - 72.2 ದಿನಗಳು

ಗುಣಮುಖವಾದ ನಂತರ ಗೋವಾದ ಎಲ್ಲಾ ಕೋವಿಡ್-19 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ಈಗ ಗೋವಾದಲ್ಲಿ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ. ಮೂರು ಜಿಲ್ಲೆಗಳು - ಮಾಹೇ (ಪುದುಚೇರಿ), ಕೊಡಗು (ಕರ್ನಾಟಕ) ಮತ್ತು ಪೌರಿ ಗರ್ವಾಲ್ (ಉತ್ತರಾಖಂಡ್) ಸಹ ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳನ್ನು ವರದಿ ಮಾಡಿಲ್ಲ. ಕಳೆದ 14 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳನ್ನು ವರದಿ ಮಾಡದ 23 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶ ಗಳಿಂದ 59 ಹೆಚ್ಚುವರಿ ಜಿಲ್ಲೆಗಳಿವೆ. ಆರು ಹೊಸ ಜಿಲ್ಲೆಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ:

  • ರಾಜಸ್ಥಾನದ ಡುಂಗರಪುರ ಮತ್ತು ಪಾಲಿ
  • ಗುಜರಾತ್‌ನ ಜಾಮ್‌ನಗರ ಮತ್ತು ಮೊರ್ಬಿ
  • ಗೋವಾದ ಉತ್ತರ ಗೋವಾ
  • ತ್ರಿಪುರದ ಗೋಮತಿ

ದೇಶದಲ್ಲಿ ಕೋವಿಡ್-19 ಒಟ್ಟು 17,265 ದೃಢಪಡಿಸಿದ ಪ್ರಕರಣಗಳು ವರದಿಯಾಗಿವೆ. 2547 ವ್ಯಕ್ತಿಗಳು, ಅಂದರೆ ಒಟ್ಟು ಪ್ರಕರಣಗಳಲ್ಲಿ 14.75% ಗುಣಮುಖರಾಗಿದ್ದಾರೆ/ ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ. ಕೋವಿಡ್-19 ಕಾರಣದಿಂದಾಗಿ ಇದುವರೆಗೆ ಒಟ್ಟು 543 ಸಾವುಗಳು ವರದಿಯಾಗಿವೆ.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***



(Release ID: 1616526) Visitor Counter : 231