ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೋವಿಡ್-19 ಲಾಕ್ ಡೌನ್ ನಡುವೆಯೂ ರೈತರ ಬೇಡಿಕೆಯನ್ನು ಪೂರೈಸಲು ರಸಗೊಬ್ಬರಗಳ ಉತ್ಪಾದನೆ ಮತ್ತು ಸಾಗಾಟ  ಮುಂದುವರಿಕೆ

Posted On: 19 APR 2020 5:40PM by PIB Bengaluru

ಕೋವಿಡ್-19 ಲಾಕ್ ಡೌನ್ ನಡುವೆಯೂ ರೈತರ ಬೇಡಿಕೆಯನ್ನು ಪೂರೈಸಲು ರಸಗೊಬ್ಬರಗಳ ಉತ್ಪಾದನೆ ಮತ್ತು ಸಾಗಾಟ  ಮುಂದುವರಿಕೆ

17 ಏಪ್ರಿಲ್ ರಂದು ಘಟಕಗಳು ಮತ್ತು ಬಂದರುಗಳಿಂದ 41 ರಸಗೊಬ್ಬರ ರೇಕ್ ಗಳನ್ನು ಸಾಗಿಸಲಾಗಿದ್ದು ಲಾಕ್ ಡೌನ್ ಅವಧಿಯಲ್ಲಿ ಒಂದೇ ದಿನಕ್ಕೆ ಸಾಗಿಸಿದ ಅತಿ ಹೆಚ್ಚು ಪ್ರಮಾಣ
 

ರಾಷ್ಟ್ರೀಯ ಮಟ್ಟದ ಕೋವಿಡ್ – 19 ಲಾಕ್ ಡೌನ್ ನಿಂದಾಗಿ ಸಂಚಾರದ ಮೇಲೆ ಬಹಳಷ್ಟು ನಿರ್ಬಂಧಗಳಿದ್ದರೂ ರಸಗೊಬ್ಬರ ಖಾತೆ, ರೈಲ್ವೇ ಮತ್ತು ಬಂದರು ಖಾತೆಗಳ ಸಂಯೋಜಿತ ಪ್ರಯತ್ನಗಳಿಂದಾಗಿ ರೈತರ ಬೇಡಿಕೆಯನ್ನು ಪೂರೈಸಲು ದೇಶದಲ್ಲಿ ರಸಗೊಬ್ಬರಗಳ ಉತ್ಪಾದನೆ ಮತ್ತು ಸಾಗಾಟ  ಮುಂದುವರಿಯುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ 17.4.2020 ಕಳೆದ ಶುಕ್ರವಾರದಂದು ಅತಿ ಹೆಚ್ಚು 41 ರೇಕ್ ಗಳಷ್ಟು ರಸಗೊಬ್ಬರವನ್ನು ಸಾಗಿಸಲಾಗಿದೆ.

https://ci4.googleusercontent.com/proxy/iFGrKLX_kiIOMmfp9aYEIZqSpd6pP3q3XjYr0pdm7qNEXS4Gl3vfBcUbAkofi0hcd0O51TRy9nDIy0-TWlblJdLm6-RYBpTWnBYQ5M4NOkfZ4F8C0zXy=s0-d-e1-ft#https://static.pib.gov.in/WriteReadData/userfiles/image/image001BZTQ.jpg

https://ci4.googleusercontent.com/proxy/f6bVK4UlCyxrjAy60otAhI7qZVnwAb-9t9h-eF5O3LjF65Qs3zZbL4bBAnEHzxRUhgTMBVsV-X9Zhx2BIcenFIj42kXmPs4HcR0_x0LlWHU1HL2HY4-W=s0-d-e1-ft#https://static.pib.gov.in/WriteReadData/userfiles/image/image002Z4FT.jpg

 

ನಿನ್ನೆ ಸಂಜೆ ಈ ಕ್ರಮದ ಕುರಿತು ತಮ್ಮ ಟ್ವೀಟ್ ಸಂದೇಶದಲ್ಲಿ ಬರೆದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದಗೌಡ ಬಿತ್ತನೆಗೂ ಮೊದಲು ರಸಗೊಬ್ಬರಗಳ ಲಭ್ಯತೆ ಕುರಿತು ನಮ್ಮ ರೈತಬಾಂಧವರಿಗೆ ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ”. ಎಂದು ಹೇಳಿದ್ದಾರೆ

ಘಟಕಗಳು ಮತ್ತು ಬಂದರುಗಳಿಂದ ಅತಿ ಹೆಚ್ಚು 41 ರಸಗೊಬ್ಬರ ರೇಕ್ ಗಳನ್ನು ಸಾಗಿಸಲಾಗಿದ್ದು #ಲಾಕ್ ಡೌನ್ ಅವಧಿಯಲ್ಲಿ ಒಂದೇ ದಿನಕ್ಕೆ ಸಾಗಿಸಿದ ಅತಿ ಹೆಚ್ಚು ಪ್ರಮಾಣ ಇದಾಗಿದೆ

ರಸಗೊಬ್ಬರ ಸರಬರಾಜು ಸಾಮಾನ್ಯ ಸಮಯದಲ್ಲಿರುವಂತೆಯೇ ಈಗಲೂ ರವಾನೆಯಾಗುತ್ತಿರುವುದರಿಂದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಮುಂಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಸಾಕಷ್ಟು ರಸಗೊಬ್ಬರಗಳ ಲಭ್ಯತೆ ಖಚಿತಪಡಿಸುವ ಕುರಿತಾದ ಬದ್ಧತೆಯನ್ನು ಮೆರೆದಿದೆ.

ದೇಶದಲ್ಲಿ ರಸಗೊಬ್ಬರಗಳ ಕೊರತೆಯಿಲ್ಲ ಮತ್ತು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ಕೂಡಾ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದಗೌಡ ತಿಳಿಸಿದ್ದಾರೆ. ರಾಜ್ಯ ಸರ್ಕಾರಗಳು ಸಾಕಷ್ಟು ರಸಗೊಬ್ಬರ ದಾಸ್ತಾನು ಹೊಂದಿವೆ ಎಂದೂ ಅವರು ಹೇಳಿದರು. “ನಾವು ರಾಜ್ಯಗಳ ಕೃಷಿ ಸಚಿವರೊಂದಿಗೂ ಸಂಪರ್ಕದಲ್ಲಿದ್ದೇವೆ ಎಂದು ಶ್ರೀ ಗೌಡ ಹೇಳಿದರು.    

ಕೃಷಿ ಕ್ಷೇತ್ರ ಲಾಕ್ ಡೌನ್ ಸಂಕಷ್ಟವನ್ನು ಎದುರಿಸಬಾರದೆಂದು ಅವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ದೇಶದಲ್ಲಿರುವ ರಸಗೊಬ್ಬರ ಘಟಕಗಳ ಕಾರ್ಯಾಚರಣೆಗೆ ಭಾರತ ಸರ್ಕಾರ ಅವಕಾಶ ಕಲ್ಪಿಸಿದೆ

***(Release ID: 1616239) Visitor Counter : 231