ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೋವಿಡ್-19 ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ತಮ್ಮ ಕೊಡುಗೆ ನೀಡಲು ಕೇಂದ್ರೀಯ ವಿದ್ಯಾಲಯ ಸಂಘಟನೆ ವಿವಿಧ ಕ್ರಮಗಳನ್ನು ಕೈಗೊಂಡಿದೆ

Posted On: 20 APR 2020 1:18PM by PIB Bengaluru

ಕೋವಿಡ್-19 ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ತಮ್ಮ ಕೊಡುಗೆ ನೀಡಲು ಕೇಂದ್ರೀಯ ವಿದ್ಯಾಲಯ ಸಂಘಟನೆ ವಿವಿಧ ಕ್ರಮಗಳನ್ನು ಕೈಗೊಂಡಿದೆ

ಇಂದಿಗೆ, 80 ಕೇಂದ್ರೀಯ ವಿದ್ಯಾಲಯಗಳನ್ನು ಕ್ವಾರೆಂಟೈನ್ ಕೇಂದ್ರಗಳಾಗಿ ಬಳಸಲು ವಿವಿಧ ಸಮರ್ಥ ಅಧಿಕಾರಿಗಳ ನಿಯೋಜಿಸಲಾಗಿದೆ

7,07,312 ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗಳನ್ನು 32,247 ಶಿಕ್ಷಕರು, ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತೆಗೆದುಕೊಳ್ಳುತ್ತಿದ್ದಾರೆ

 

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ಬಿಕ್ಕಟ್ಟಿನ ಸಮಯದಲ್ಲಿ ತ್ವರಿತವಾಗಿ ಸಕ್ರಿಯವಾಗಿದೆ ಮತ್ತು ದೇಶಾದ್ಯಂತದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ತಡೆಗಟ್ಟುವ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕೋವಿಡ್-19 ಅನ್ನು ಜಂಟಿಯಾಗಿ ಎದುರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಕೇಂದ್ರೀಯ ವಿದ್ಯಾಲಯ ಸಂಗಟನ್ (ಕೆ.ವಿ.ಎಸ್.) ಕೋವಿಡ್-19 ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಕೊಡುಗೆ ನೀಡಲು ವಿವಿಧ ಕ್ರಮಗಳನ್ನು ಕೈಗೊಂಡಿದೆ.

ಕೆವಿಗಳಲ್ಲಿ ಕ್ವಾರಂಟೈನ್ ಕೇಂದ್ರಗಳು

  • ಕೋವಿಡ್ -19 ನಿಂದಾದ ಆತಂಕಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ರಕ್ಷಣಾ ಪ್ರಾಧಿಕಾರ ಅಥವಾ ಜಿಲ್ಲಾಡಳಿತದ ಔಪಚಾರಿಕ ಕೋರಿಕೆಯ ಮೇರೆಗೆ, ಶಂಕಿತ ಕೋವಿಡ್‌ 19ನ ಪ್ರಕರಣಗಳ ತಾತ್ಕಾಲಿಕ ವಸತಿಗಾಗಿ ಕೆವಿ ಶಾಲಾ ಕಟ್ಟಡಗಳ ತರಗತಿ ಕೊಠಡಿಗಳನ್ನು ಬಳಸಲು ಶಾಲೆಗಳು ಅನುಮತಿ ನೀಡಬೇಕೆಂದು ನಿರ್ಧರಿಸಲಾಯಿತು. ಪ್ರಸ್ತುತ ದೇಶಾದ್ಯಂತ 80 ಕೆವಿಎಸ್ ಅನ್ನು ಕ್ವಾರಂಟೈನ್ ಕೇಂದ್ರಗಳಾಗಿ ಬಳಸುವುದಕ್ಕಾಗಿ ವಿವಿಧ ಅಧಿಕಾರಿಗಳು ತೆಗೆದುಕೊಂಡಿದ್ದಾರೆ.

ಪಿ.ಎಂ ಕೇರ್ಸ್ ನಿಧಿಗೆ ಕೊಡುಗೆ

ಕೆವಿಎಸ್ ಸಿಬ್ಬಂದಿ-ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ರೂ.10,40,60,536 ಗಳನ್ನು #COVID19 ಸಾಂಕ್ರಾಮಿಕದಿಂದ ಉಂಟಾಗಿರುವ ಈ ಭಿಕ್ಟಟ್ಟಿನ ಕ್ಷಣಗಳಲ್ಲಿ ರಾಷ್ಟ್ರವನ್ನು ಬೆಂಬಲಿಸಲು ನಮ್ಮ ಉದ್ಯೋಗಿಗಳು ದೇಣಿಗೆಯಾಗಿ #PMCARES ನಿಧಿಗೆ ನೀಡಿದ್ದಾರೆ. ವೈಯಕ್ತಿಕ ಕೊಡುಗೆಯ ಮೊತ್ತವು ಒಂದು ದಿನದ ಸಂಬಳದಿಂದ ಹಿಡಿದು ರೂ. 1 ಲಕ್ಷ ದವರೆಗೆ ಇದೆ.

ಕೆವಿಎಸ್ ಶಿಕ್ಷಕರ ಉಪಕ್ರಮಗಳು

ಕೋವಿಡ್-19ರ ಜಾಗತಿಕ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕೆವಿಎಸ್ ಶಿಕ್ಷಕರು ಜವಾಬ್ದಾರಿಯುತ ಗುರುಗಳು ಮತ್ತು ಮಾರ್ಗದರ್ಶಕರಾಗಿ ಈ ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸಿದ್ದಾರೆ ಮತ್ತು ಗುಣಮಟ್ಟದ ಬೋಧನಾ ಸಮಯದ ನಷ್ಟವನ್ನು ಸರಿದೂಗಿಸಲು ತಮ್ಮ ವಿದ್ಯಾರ್ಥಿಗಳೊಂದಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಂಪರ್ಕ ಹೊಂದುತ್ತಿದ್ದಾರೆ.

ಸಾಧ್ಯವಾದಷ್ಟು ಮಟ್ಟಿಗೆ ಅನುಷ್ಠಾನಗೊಳಿಸಲು, ವ್ಯವಸ್ಥೆಯಲ್ಲಿನ ಎಲ್ಲಾ ಶಿಕ್ಷಕರನ್ನು ತಮ್ಮ ವಿದ್ಯಾರ್ಥಿಗಳನ್ನು ಡಿಜಿಟಲ್ ವಿಧಾನಗಳ ಮೂಲಕ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲು ಕೆವಿಎಸ್ ಎಲ್ಲಾ ಪ್ರಾಂಶುಪಾಲರೊಂದಿಗೆ ಕೆಲವು ಕ್ರಿಯಾಶೀಲ ಅಂಶಗಳನ್ನು ಹಂಚಿಕೊಂಡಿದೆ, ನಮ್ಮ ಶಿಕ್ಷಕರು ನಡೆಸುವ ಆನ್‌ಲೈನ್ ತರಗತಿಗಳಿಗೆ ಅಗತ್ಯವಾದ ನಿಯಮಾವಳಿಗಳನ್ನು (ಪ್ರೋಟೋಕಾಲ್) ಅನ್ನು ಸಹ ರೂಪಿಸಲಾಗಿದೆ.

NIOS ಪ್ಲಾಟ್‌ಫಾರ್ಮ್ ನ ಬಳಕೆ

ಕೆವಿಎಸ್ ತಮ್ಮ ಸ್ವೈಮ್ ಪ್ರಭಾ ಪೋರ್ಟಲ್ ನಿಂದ, ಏಪ್ರಿಲ್ 7 ರಿಂದ 2020 ರಿಂದ ಪ್ರಾರಂಭವಾಗುವ ದ್ವಿತೀಯ ಮತ್ತು ಹಿರಿಯ ಮಾಧ್ಯಮಿಕ ತರಗತಿಗಳಿಗೆ ಎನ್ಐಒಎಸ್ ನ ರೆಕಾರ್ಡ್ ಮತ್ತು ಲೈವ್ ಕಾರ್ಯಕ್ರಮಗಳ ಪಾಠಗಳ ವೇಳಾಪಟ್ಟಿಯನ್ನು ಹಂಚಿಕೊಂಡಿದೆ.

ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ವ್ಯಾಪಕ ಪ್ರಚಾರವನ್ನು ಖಚಿತಪಡಿಸಿಕೊಳ್ಳಲು ಮಾಹಿತಿಯನ್ನು ಎಲ್ಲಾ ವಿದ್ಯಾಲಯಗಳಿಗೆ ಪ್ರಸಾರ ಮಾಡಲಾಗಿದೆ. ಕಾರ್ಯಕ್ರಮದ ಮೂಲಕ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದನ್ನು ಖಚಿತಪಡಿಸಿಕೊಳ್ಳಲು ಶಿಕ್ಷಕರು ಇ-ಮೇಲ್, ವಾಟ್ಸಾಪ್, ಎಸ್‌ಎಂಎಸ್ ಮುಂತಾದ ವಿವಿಧ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.

ನೇರ ಸಂವಹನಕ್ಕಾಗಿ ಶಿಕ್ಷಕರ ನಾಮನಿರ್ದೇಶನ

ಪ್ರಶ್ನೆಗಳನ್ನು ಪರಿಹರಿಸಲು ಮತ್ತು ಸ್ಕೈಪ್ ಮತ್ತು ಲೈವ್ ವೆಬ್ ಚಾಟ್ ಮೂಲಕ ಕಲಿಯುವವರ ಅನುಮಾನಗಳನ್ನು ನಿವಾರಿಸಲು ಸ್ವಯಂ ಪ್ರಭಾ ಪೋರ್ಟಲ್ನಲ್ಲಿ ಎನ್ಐಒಎಸ್ ನಡೆಸಿದ ಲೈವ್ ಸೆಷನ್ಗಾಗಿ ಕೆವಿಎಸ್ ಕೆಲವು ಆಯ್ದ ಶಿಕ್ಷಕರನ್ನು ಗೊತ್ತು ಮಾಡಿದೆ. ನಾಮನಿರ್ದೇಶಿತ ಶಿಕ್ಷಕರ ವಿವರಗಳನ್ನು ಎಲ್ಲಾ ಆರ್‌ಒಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಈ ನಾಮನಿರ್ದೇಶಿತ ಶಿಕ್ಷಕರು ಅದೇ ದಿನದ ಬೆಳಿಗ್ಗೆ ಅಧಿವೇಶನದಲ್ಲಿ ಪ್ರಸಾರವಾದ ವಿಷಯದ ಕುರಿತು ಹೆಚ್ಚುವರಿ ವಸ್ತು/ ಟಿಪ್ಪಣಿಗಳನ್ನು ಸಿದ್ಧಪಡಿಸುತ್ತಾರೆ, ಇದರಿಂದಾಗಿ ಕಲಿಯುವವರ ಅನುಮಾನಗಳನ್ನು ಲೈವ್ ಅಧಿವೇಶನದಲ್ಲಿ ಸ್ಪಷ್ಟಪಡಿಸಬಹುದು ಮತ್ತು ಲೈವ್ ಅಧಿವೇಶನದಲ್ಲಿ ಅನುಮಾನಗಳು ಬರದಿದ್ದರೆ ಅಧ್ಯಾಪಕರು ವಿಷಯವನ್ನು ಮರುಸಂಗ್ರಹಿಸುತ್ತಾರೆ ಅಥವಾ ಪಿಪಿಟಿ / ಸೂಕ್ತ ಬೋಧನಾ ಸಾಧನಗಳ ಮೂಲಕ ವಿಷಯವನ್ನು ಮತ್ತೊಮ್ಮೆ ಪ್ರಸ್ತುತಪಡಿಸುತ್ತಾರೆ.

ಲಾಕ್ ಡೌನ್ ಸಮಯದಲ್ಲಿ ಕೆವಿಎಸ್ ನಲ್ಲಿ ಆನ್‌ಲೈನ್ ಬೋಧನೆಯ ಡೇಟಾ

ಲಾಕ್‌ಡೌನ್ ಸಮಯದಲ್ಲಿ ಕೆವಿಎಸ್‌ನಲ್ಲಿ ಬೋಧನೆಗಾಗಿ ಮುಕ್ತ / ಆನ್‌ಲೈನ್ ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿದ ಡೇಟಾ

ಪ್ರದೇಶದ ಹೆಸರು

ಆನ್ಲೈನ್ ಸಂಪನ್ಮೂಲಗಳನ್ನು ಬಳಸಿಕೊಂಡು ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ ಶಿಕ್ಷಕರ ಸಂಖ್ಯೆ

ಯಾವ ಪ್ಲಾಟ್ ಫಾರ್ಮ್ ಗಳನ್ನು ಬಳಸಲಾಗುತ್ತಿದೆ

ಆನ್ಲೈನ್ ಸೂಚನೆಗಳನ್ನು ಕೈಗೊಳ್ಳುವ ತರಗತಿಗಳು ಮತ್ತು ವಿಷಯ

ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆ (ಅಂದಾಜು)

ಎಲ್ಲಾ ಪ್ರದೇಶಗಳು

32247

ವಾಟ್ಸಾಪ್, ಗೂಗಲ್ ಕ್ಲಾಸ್ ರೂಮ್, ಖಾನ್ ಅಕಾಡೆಮಿ, ಪ್ರದೇಶದ ಇ-ಬ್ಲಾಗ್ ಮತ್ತು ಇತರವು, ಸ್ಕೈಪ್, ಇಪಾಠ್ ಶಾಲಾ, ಜೂಮ್, ದೀಕ್ಷಾ, ವರ್ಕ್ಶೀಟ್, ಸ್ವಯಂ ನಿರ್ಮಿತ ವೀಡಿಯೊಗಳು, ಬ್ಲಾಗ್ಗಳು (ಆರ್ಒ / ಕೆವಿ) ಟ್ಯುಟೋರಿಯಲ್ ಲಿಂಕ್ಗಳು, ಸ್ವಯಂ ಪ್ರಭಾ ಚಾನ್ನೆಲ್, ಮೈಕ್ರೋಸಾಫ್ಟ್ ತಂಡ, ಯೂಟ್ಯೂಬ್, ಎನ್ಐಒಎಸ್ ಆನ್ಲೈನ್ ತರಗತಿಗಳು, ಎನ್ಸಿಇಆರ್ಟಿಎಪಿಪಿ, ಎನ್ಸಿಇಆರ್ಟಿ-ಲರ್ನಿಂಗ್

2 ರಿಂದ 12ನೇ ತರಗತಿಯವರೆಗೆ (ಎಲ್ಲಾ ವಿಷಯಗಳು)

 

 

707312

 

ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮ

ಕೋವಿಡ್-19 ರ ಜಾಗತಿಕ ಸಾಂಕ್ರಾಮಿಕತೆಯ ದೃಷ್ಟಿಯಿಂದ ವಿದ್ಯಾಲಯಗಳನ್ನು ಹಠಾತ್ತನೆ ಮುಚ್ಚಿದ ಕಾರಣ, ಪ್ರಾಂಶುಪಾಲರು ಮತ್ತು ಶಿಕ್ಷಕರು ಸೂಕ್ತವಾದ ಕ್ರಮಗಳ ಮೂಲಕ ಶಿಕ್ಷಣವನ್ನು ಮುಂದುವರೆಸುವತ್ತ ಗಮನ ಹರಿಸುತ್ತಿದ್ದಾರೆ – ಅಂದರೆ ಆನ್ ಲೈನ್ ಸಂಪನ್ಮೂಲಗಳು ಮತ್ತು ವಿಷಯದ ವಹಿವಾಟಿಗೆ ಸಹಕಾರಿ ಪೋರ್ಟಲ್‌ಗಳು ಅಲ್ಲದೆ ಅವರ ವಿದ್ಯಾರ್ಥಿಗಳಿಗೆ ಅವರ ಮಾನಸಿಕ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಗಮನ ಹರಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ವಿದ್ಯಾಲಯ ಸಂಘಟನ್ ದೇಶಾದ್ಯಂತದ ಎಲ್ಲಾ ವಿದ್ಯಾಲಯಗಳಿಗೆ ನಿರ್ದೇಶನ ನೀಡಿದೆ.

ಚಟುವಟಿಕೆಗಳ ಸರಿಯಾದ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಮೇಲಿನ ನಿರ್ದೇಶನಗಳ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಎಲ್ಲಾ ಕೇಂದ್ರೀಯ ವಿದ್ಯಾಲಯಗಳಿಂದ ವಾರಕ್ಕೊಮ್ಮೆ ತೆಗೆದುಕೊಳ್ಳಲಾಗುತ್ತಿದೆ. ಸ್ವೀಕರಿಸಿದ ಇತ್ತೀಚಿನ ವರದಿಯ ಪ್ರಕಾರ:

1. ಮಾರ್ಗದರ್ಶನ ಮತ್ತು ಸಮಾಲೋಚನೆಗಾಗಿ ಮೀಸಲಾದ ಇ-ಮೇಲ್ ಅನ್ನು ದೇಶದ ಎಲ್ಲ ವಿದ್ಯಾಲಯಗಳಲ್ಲಿ ಸ್ಥಾಪಿಸಲಾಗಿದೆ.

2. ಹಾಜರಾಗಲು ಮತ್ತು ಸಮಸ್ಯೆಯನ್ನು ಪರಿಹರಿಸಲು ಶಿಕ್ಷಕರನ್ನು ಗುರುತಿಸಲಾಗಿದೆ

3. ಅರೆಕಾಲಿಕ ಒಪ್ಪಂದದ ಆಧಾರದ ಮೇಲೆ ತರಬೇತಿ ಪಡೆದ 331 ಸಲಹೆಗಾರರನ್ನು ತೊಡಗಿಸಲಾಗಿದೆ. ತರಬೇತಿ ಪಡೆದ ಸಲಹೆಗಾರರ ಸೇವೆಗಳು ಲಭ್ಯವಿಲ್ಲದ ವಿದ್ಯಾಲಯದಲ್ಲಿ ನೆರೆಯ ವಿದ್ಯಾಲಯದ ಸಲಹೆಗಾರರ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ.

4. ಎನ್‌ಸಿಇಆರ್‌ಟಿಯಿಂದ ಮಾರ್ಗದರ್ಶನ ಮತ್ತು ಸಮಾಲೋಚನೆಯಲ್ಲಿ ತರಬೇತಿ ಪಡೆದ 268 ಕೇಂದ್ರೀಯ ವಿದ್ಯಾ ಶಿಕ್ಷಕರು ಸಹ ಭಾಗಿಯಾಗಿದ್ದಾರೆ.

5. ಕಳೆದ ಶುಕ್ರವಾರದವರೆಗೆ 2393 ವಿದ್ಯಾರ್ಥಿಗಳು ಮತ್ತು 1648 ಪೋಷಕರಿಂದ ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ ಮತ್ತು ಅವುಗಳನ್ನು ಸಕಾಲದಲ್ಲಿ ಉತ್ತರಿಸಲಾಗಿದೆ ಮತ್ತು ಪರಿಹರಿಸಲಾಗಿದೆ.

***



(Release ID: 1616509) Visitor Counter : 353