ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಉನಾದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗುವಿಗೆ ತ್ವರಿತವಾಗಿ ಔಷಧಿಗಳನ್ನು ತಲುಪಿಸಿದ ಭಾರತೀಯ ಅಂಚೆ

Posted On: 19 APR 2020 6:16PM by PIB Bengaluru

ಉನಾದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗುವಿಗೆ ತ್ವರಿತವಾಗಿ ಔಷಧಿಗಳನ್ನು ತಲುಪಿಸಿದ ಭಾರತೀಯ ಅಂಚೆ
 

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿಮಾಚಲ ಪ್ರದೇಶದ ಉನಾ ನಿವಾಸಿಯಾದ 8 ವರ್ಷದ ಬಾಲಕಿಗೆ ಭಾರತೀಯ ಅಂಚೆ ಇಲಾಖೆ ಔಷಧಿಗಳನ್ನು ವಿತರಿಸಿತು. ಅವಳ ದಿನ ನಿತ್ಯದ ಔಷಧಿಗಳು ಉನಾದಲ್ಲಿ ಖರೀದಿಸುವುದು ಕಷ್ಟ ಆದ್ದರಿಂದ ಆ ಔಷಧಿಗಳನ್ನು ದೆಹಲಿಯಿಂದ ಕೊರಿಯರ್ ಮೂಲಕ ತರಸಿಕೊಳ್ಳುತ್ತಿದ್ದಳು. ಶಾಲಿನಿ ಅವರ ಕುಟುಂಬ ದೆಹಲಿಯಲ್ಲಿದ್ದ ತಮ್ಮ ಸ್ನೇಹಿತರೊಬ್ಬರನ್ನು ಸಂಪರ್ಕಿಸಿ ಉನಾಗೆ ಔಷಧಿಗಳನ್ನು ಕಳುಹಿಸುವಂತೆ ಮನವಿ ಮಾಡಿಕೊಂಡರು. ಲಾಕ್ ಡೌನ್ ನಿಂದ ಉದ್ಭವಿಸಿದ ಸಾಗಾಣೆಯ ನಿರ್ಬಂಧಗಳಿಂದಾಗಿ ಅವರ ಕುಟುಂಬ ಸ್ನೇಹಿತ, ಕೇಂದ್ರ ಸಂವಹನ, ಕಾನೂನು ಮತ್ತು ನ್ಯಾಯ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ರವಿ ಶಂಕರ್ ಪ್ರಸಾದ್ ಅವರನ್ನು ಸಹಾಯಕ್ಕೆ ಕೋರಿದರು.

ಕೊವಿಡ್ – 19 ಹರಡುವಿಕೆಯನ್ನು ತಡೆಗಟ್ಟಲು ಮಾಡಲಾದ ಇತ್ತೀಚಿನ ಲಾಕ್ ಡೌನ್ ನಿಂದ, ಶಾಲಿನಿ ಅವರ ಬಳಿ ಇದ್ದ ಔಷಧಿಗಳ ಸಂಗ್ರಹ ಕಡಿಮೆಯಾಗತೊಡಗಿದವು ಮತ್ತು ಕೇವಲ ಏಪ್ರಿಲ್ 19, 2020 ರವರೆಗೆ ಮಾತ್ರ ಸಾಕಾಗುವಷ್ಟು ಔಷಧಿಗಳಿದ್ದವು.

https://ci6.googleusercontent.com/proxy/2jH4PQOk2wyeU_MOYuYJBI17xK7vOCco_drFj64DCaoU4_B404KdqJ6E9oWkvepDPcbP8XGGfr9NCbicqb2uMG6Nh3WblnzHL-nurD-8LTiWCSpqvthV=s0-d-e1-ft#https://static.pib.gov.in/WriteReadData/userfiles/image/image001LRPI.jpg

ಉನಾದಲ್ಲಿರುವ ಶಾಲಿನಿಗೆ ಏಪ್ರಿಲ್ 19 ರ ಮೊದಲೇ ಔಷಧಿಗಳು ತಲುಪುವಂತೆ ಖಚಿತಪಡಿಸಲು ತಕ್ಷಣ ಸಾಧ್ಯವಾದ ಎಲ್ಲ ಸಾಗಣೆ ಸಹಾಯ ಮಾಡುವಂತೆ ಸಚಿವ ರವಿ ಶಂಕರ್ ಪ್ರಸಾದ್ ಅವರು ಭಾರತೀಯ ಅಂಚೆ ಇಲಾಖೆಗೆ ನಿರ್ದೇಶನ ನೀಡಿದರು. ದೆಹಲಿ, ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ವಲಯದ ಕಚೇರಿಗಳು ಉತ್ತಮ ಸಮನ್ವಯದೊಂದಿಗೆ, ಔಷಧಿಗಳು ಸಮಯಕ್ಕೆ ತಲುಪುವುದನ್ನ ಖಚಿತ ಪಡಿಸಲು ಎಲ್ಲ ಪ್ರಯತ್ನಗಳು ಮಾಡಿದರು. ಲಾಕ್ ಡೌನ್ ನ ನಿರ್ಬಂಧನೆಗಳಿಂದಾಗಿ, ಪಂಜಾಬ್ ವಲಯದ ಭಾರತೀಯ ಅಂಚೆ ವಿಭಾಗ ಒಂದು ವಿಶೇಷ ಅಂಚೆ ವ್ಯಾನಿನ ವ್ಯವಸ್ಥೆ ಮಾಡಿತು, ಅದು ಉನಾಗೆ ತೆರಳಿ, ಏಪ್ರಿಲ್ 19 ರಂದು ಬೆಳಗ್ಗೆ ನೇರವಾಗಿ ಶಾಲಿನಿ ಅವರ ಮನೆ ತಲುಪಿತು.

ಏಪ್ರಿಲ್ 19 ರಂದು ಮಧ್ಯಾಹ್ನ 12 ರ ಒಳಗೆ ಭಾರತೀಯ ಅಂಚೆಯ ಸಿಬ್ಬಂದಿ ಔಷಧಿಗಳನ್ನು ನೀಡಲು ಶಾಲಿನಿ ಅವರ ಮನೆ ತಲುಪಿದರು. ಶಾಲಿನಿ ಅವರ ತಾಯಿ ಈ ಔಷಧಿಗಳನ್ನು ತಮ್ಮ ಮನೆಯಲ್ಲೇ ಸ್ವೀಕರಿಸಿದರು ಮತ್ತು ತನ್ನ ಮಗಳ ರಕ್ಷಣೆಗಾಗಿ ಧಾವಿಸಿದ ಭಾರತೀಯ ಅಂಚೆ  ಇಲಾಖೆಗೆ ಅನಂತ ಧನ್ಯವಾದಗಳು ಸಲ್ಲಿಸಿದರು.

https://ci5.googleusercontent.com/proxy/mZ0NECp_XETbjcf40QZGs6fpYNvUXud8whht5K7q0qrbFuj8fa7reHLibxIObmVLQbY5mBzHaEtP5QQqrzrtOl1P8AeaJg_YEzaMTsHD7nXRtorTiQJ8=s0-d-e1-ft#https://static.pib.gov.in/WriteReadData/userfiles/image/image002CW10.jpg

ಔಷಧಿಗಳು ಸಮಯಕ್ಕೆ ತಲುಪಿದೆವು ಎಂದು ತಿಳಿದ ಸಂವಹನ ಸಚಿವರು, ಭಾರತೀಯ ಅಂಚೆ ಇಲಾಖೆ ಹೆಚ್ಚು ಅಗತ್ಯವಿರುವಾಗ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ ಎಂದು ತಮ್ಮ ಟ್ವೀಟ್ ಮೂಲಕ ಸಂತೋಷ ವ್ಯಕ್ತಪಡಿಸಿದರು. ಪುಟ್ಟ ಹುಡುಗಿ ಶಾಲಿನಿಗೆ ಉತ್ತಮ ಆರೋಗ್ಯ ಮತ್ತು ಸಂತೋಷ ಸಿಗಲೆಂದು ಹಾರೈಸಿದರು.

https://ci3.googleusercontent.com/proxy/SaRXqMWNlQcIaxiRhjxr47Dir8Jh1-1dtr7brFO_w6opev1VuuXkdQTBfOAAzbQ0rSnNO8Jro2KJgXA449rYDiL4ZYVfPolqu_dZLtCkzK-mLgUtwwWE=s0-d-e1-ft#https://static.pib.gov.in/WriteReadData/userfiles/image/image0036K8N.jpg

ಔಷಧಿಗಳು, ಕೊವಿಡ್-19 ಸಂಬಂಧಿತ ಸರಕುಗಳು ಮತ್ತು ಇತರ ಅಗತ್ಯ ಸೇವೆಗಳನ್ನು ಸಕಾಲಕ್ಕೆ ವಿತರಿಸುವಂತೆ ಸಚಿವ ರವಿ ಶಂಕರ್ ಪ್ರಸಾದ್ ಅವರು ಅಂಚೆ ಇಲಾಖೆಗೆ ನಿರ್ದೇಶನ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ.

***



(Release ID: 1616242) Visitor Counter : 253