ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಸೌದಿ ಅರೇಬಿಯಾದಲ್ಲಿ ನಡೆದ ಜಿ- 20 ಆರೋಗ್ಯ ಸಚಿವರ ಸಭೆಯಲ್ಲಿ ಕೋವಿಡ್-19 ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚೆ
Posted On:
19 APR 2020 9:46PM by PIB Bengaluru
ಸೌದಿ ಅರೇಬಿಯಾದಲ್ಲಿ ನಡೆದ ಜಿ- 20 ಆರೋಗ್ಯ ಸಚಿವರ ಸಭೆಯಲ್ಲಿ ಕೋವಿಡ್-19 ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚೆ
ಕೊರೊನಾವೈರಸ್ ಕಾಯಿಲೆ (ಕೋವಿಡ್-19) ಯನ್ನು ಎದುರಿಸಲು ಸಹಕಾರ ಹಾಗೂ ಪರಸ್ಪರ ಗೌರವಯುತ ಮತ್ತು ಉಪಯುಕ್ತ ಸಹಯೋಗವನ್ನು ರೂಪಿಸಿ: ಡಾ. ಹರ್ಷವರ್ಧನ್
1 ಬಿಲಿಯನ್ ಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತವು ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸುತ್ತಿದೆ ಎಂಬ ಬಗ್ಗೆ ಹೆಚ್ಚಿನ ಗಮನವಿದೆ: ಡಾ. ಹರ್ಷವರ್ಧನ್
ಈ ಪರೀಕ್ಷಾ ಸಮಯದಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಡಾ. ಹರ್ಷವರ್ಧನ್ ವ್ಯಕ್ತಪಡಿಸಿದರು
ಭಾರತದಲ್ಲಿ ಸ್ಥಿರತೆಯ ಚಿಹ್ನೆಗಳು ಕಾಣಿಸುತ್ತಿವೆ; ದ್ವಿಗುಣ ದರವು 3.4 ದಿನಗಳಿಂದ 7.2 ಕ್ಕೆ ಸುಧಾರಿಸಿದೆ: ಡಾ.ಹರ್ಷವರ್ಧನ್
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಕಾರ ಹಾಗೂ ಪರಸ್ಪರ ಗೌರವಾನ್ವಿತ ಮತ್ತು ಉಪಯುಕ್ತ ಸಹಯೋಗವನ್ನು ರೂಪಿಸುವಂತೆ ಡಾ. ಹರ್ಷವರ್ಧನ್ ಅವರು 19 ದೇಶಗಳ ಸರ್ಕಾರಗಳು ಮತ್ತು ಯುರೋಪಿಯನ್ ಯೂನಿಯನ್ (ಇಯು) ಸರ್ಕಾರಗಳಿಗೆ ಅಂತರರಾಷ್ಟ್ರೀಯ ವೇದಿಕೆಯಾಗಿರುವ ಜಿ- 20 ದೇಶಗಳ ಆರೋಗ್ಯ ಸಚಿವರ ವಿಡಿಯೋ ಸಮ್ಮೇಳನವನ್ನು ಇಂದು ಒತ್ತಾಯಿಸಿದರು. ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಜರ್ಮನಿ, ಫ್ರಾನ್ಸ್, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೊ, ರಷ್ಯಾ ಒಕ್ಕೂಟ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್ ಅಮೆರಿಕ ಮತ್ತು ಭಾರತ ಜಿ 20 ರ 19 ಸದಸ್ಯ ರಾಷ್ಟ್ರಗಳಾಗಿವೆ.
"ನಿಮ್ಮ ದೇಶಗಳಲ್ಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಪರಿಸ್ಥಿತಿಯನ್ನು ನಿರ್ವಹಿಸಿದ್ದಕ್ಕೆ ಮತ್ತು ನಿಯಂತ್ರಣದಲ್ಲಿಟ್ಟುಕೊಂಡಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ" ಎಂದು ಡಾ. ಹರ್ಷವರ್ಧನ್ ಸಭೆಯಲ್ಲಿ ಹೇಳಿದರು. "ಇಂದು ಜಗತ್ತು ಸಾಕ್ಷಿಯಾಗಿರುವ ಜಾಗತಿಕ ಆರೋಗ್ಯ ಬಿಕ್ಕಟ್ಟು, ನಮ್ಮೆಲ್ಲರನ್ನೂ ಬೆಸೆದಿರುವ ಸ್ವರೂಪದ ಬಗ್ಗೆ ಆಳವಾಗಿ ಯೋಚಿಸುವ ಅವಕಾಶ ಕಲ್ಪಿಸಿದೆ, ಹಾಗೆಯೇ ನಮಗೆ ಸಾಮೂಹಿಕ ಶಕ್ತಿ ಮತ್ತು ಸಾಧಿಸಲು ಬುದ್ಧಿವಂತಿಕೆಯನ್ನು ಒದಗಿಸಿದೆ" ಎಂದು ಅವರು ಹೇಳಿದರು. ಈ ಹಿಂದಿನ ಯಶಸ್ವಿ ಸಾಮೂಹಿಕ ಜಾಗತಿಕ ಪ್ರಯತ್ನಗಳ ಬಗ್ಗೆ ಪ್ರಸ್ತಾಪಿಸಿದ ಅವರು, “ಈ ಹಿಂದೆ, ಜಾಗತಿಕ ಸಮುದಾಯವಾಗಿ ನಾವು ನಮ್ಮ ಜನರ ಆರೋಗ್ಯಕ್ಕೆ ಬೆದರಿಕೆಗಳನ್ನು ಎದುರಿಸಿದ್ದೇವೆ ಮತ್ತು ಸಾಮೂಹಿಕ ಉದ್ದೇಶ, ಬೆಂಬಲ ಮತ್ತು ಪರಸ್ಪರ ಸಹಯೋಗದಿಂದ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಕೊರೊನಾವೈರಸ್ ಕಾಯಿಲೆ (COVID-19) ಯನ್ನು ಎದುರಿಸಲು ನಾನು ಇದೇ ರೀತಿಯ ಸಹಕಾರ ಮತ್ತು ಪರಸ್ಪರ ಗೌರವಯುತ ಮತ್ತು ಉಪಯುಕ್ತ ಸಹಯೋಗಗಳನ್ನು ಎದುರು ನೋಡುತ್ತಿದ್ದೇನೆ. ಕೆಲವು ದೇಶಗಳಲ್ಲಿ ವಿಶೇಷವಾಗಿ ಜಪಾನ್, ಸಿಂಗಾಪುರ್, ದಕ್ಷಿಣ ಕೊರಿಯಾದಲ್ಲಿ ಪರಿಸ್ಥಿತಿ ಉತ್ತಮವಾಗಿದ್ದರೂ, ಇತರರು ಇನ್ನೂ ಕೋವಿಡ್ ನೊಂದಿಗೆ ಹೋರಾಡುತ್ತಿದ್ದಾರೆ. ಇದರ ಪ್ರಭಾವದ ಪ್ರಮಾಣವು ಅಸಾಧಾರವಾಗಿದೆ, ಆದ್ದರಿಂದ ಸಾಮಾನ್ಯ ಸ್ಥಿತಿತೆಯನ್ನು ಸಾಧಿಸಲು ರಾಷ್ಟ್ರಗಳ ನಡುವಿನ ಸಹಕಾರ ಅಗತ್ಯವಾಗಿದೆ ” ಎಂದರು.
ದೇಶದಲ್ಲಿ ಪ್ರಸ್ತುತ ಕೋವಿಡ್ ಸನ್ನಿವೇಶದ ಬಗ್ಗೆ ಮಾತನಾಡಿದ ಅವರು, “ ಏಪ್ರಿಲ್ 19 ಕ್ಕೆ, ನಾವು 25 ದಿನಗಳ ಲಾಕ್ಡೌನ್ ಅನ್ನು ಪೂರ್ಣಗೊಳಿಸಿದ್ದೇವೆ, ಅದು ಮೇ 3 ರವರೆಗೆ ವಿಸ್ತರಣೆಯಾಗಿದೆ. ನಮ್ಮ ಫಲಿತಾಂಶಗಳ ದ್ವಿಗುಣ ಪ್ರಮಾಣವು ಮಾರ್ಚ್ 17 ರಂದು ಸುಮಾರು 3.4 ದಿನಗಳು ಇತ್ತು, ಮಾರ್ಚ್ 25 ರ ಹೊತ್ತಿಗೆ 4.4 ದಿನಗಳಿಗೆ ಇಳಿದಿತ್ತು ಮತ್ತು ಸದ್ಯಕ್ಕೆ ಸುಮಾರು 7.2 ದಿನಗಳಿಗೆ ಇಳಿದಿದೆ” ಎಂದು ಸಚಿವರು ತಿಳಿಸಿದರು.
ಕೋವಿಡ್-19ನ್ನು ಎದುರಿಸುವಲ್ಲಿ ಭಾರತದ ವಿಧಾನದ ಬಗ್ಗೆ ಪ್ರಸ್ತಾಪಿಸಿದ ಅವರು, “ಈ ಬಾರಿ ನಮ್ಮ ವಿಧಾನದ ವಿಶಿಷ್ಟ ಲಕ್ಷಣವು ಐದು ಪಟ್ಟು ಹೆಚ್ಚಾಗಿದೆ: (i) ನಿರಂತರವಾಗಿ ಪರಿಸ್ಥಿತಿಯ ಅರಿವನ್ನು ಕಾಪಾಡಿಕೊಳ್ಳುವುದು, (ii) ಪೂರ್ವಭಾವಿ ಮತ್ತು ಸಕ್ರಿಯ ವಿಧಾನ, (iii) ನಿರಂತರವಾಗಿ ಹೆಚ್ಚುತ್ತಿರುವ ಸನ್ನಿವೇಶಕ್ಕೆ ಶ್ರೇಣೀಕೃತ ಪ್ರತಿಕ್ರಿಯೆ, (iv) ಎಲ್ಲಾ ಹಂತಗಳಲ್ಲಿ ಅಂತರ-ವಲಯ ಸಮನ್ವಯ, ಮತ್ತು ಕೊನೆಯದಾಗಿ, ಆದರೆ ಮುಖ್ಯವಾಗಿ (v) ಈ ರೋಗವನ್ನು ಎದುರಿಸಲು ಜನಾಂದೋಲನವನ್ನು ರೂಪಿಸುವುದು ” ಎಂದು ತಿಳಿಸಿದರು.
ಈ ಕಾಯಿಲೆಗೆ ಭಾರತದ ಕಾರ್ಯತಂತ್ರದ ಪ್ರತಿಕ್ರಿಯೆಯ ಕುರಿತು ಮಾತನಾಡಿದ ಅವರು, “ಸಾಂಕ್ರಾಮಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಸಾರ್ವಜನಿಕ ಆರೋಗ್ಯದ ತುರ್ತುಸ್ಥಿತಿ ಎಂದು ಘೋಷಿಸುವ ಮೊದಲು, ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳಂತೆ (ಐಎಚ್ಆರ್) ಕೋರ್ ಸಾಮರ್ಥ್ಯಗಳನ್ನು ಗುರಿಯಾಗಿಟ್ಟುಕೊಂಡು ಕ್ರಮಗಳನ್ನು ಜಾರಿಗೆ ತರುವಲ್ಲಿ ಭಾರತ ಹೆಚ್ಚು ಮುಂದಿದೆ. ನಮ್ಮ ಪ್ರಯತ್ನಗಳು ಪೂರ್ವಭಾವಿಯಾಗಿ ಮತ್ತು ಸಕ್ರಿಯವಾಗಿವೆ. 2020 ರ ಜನವರಿ 30 ರಂದು ಭಾರತದಲ್ಲಿ ಮೊದಲ ಪ್ರಕರಣ ಪತ್ತೆಯಾಗುವ ಹನ್ನೆರಡು ದಿನಗಳ ಮೊದಲು ನಾವು ಕೋವಿಡ್ ಪೀಡಿತ ದೇಶಗಳಿಂದ ವಿಮಾನಗಳ ಕಣ್ಗಾವಲು ಪ್ರಾರಂಭಿಸಿದೆವು. 2020 ರ ಮಾರ್ಚ್ 22 ರ ಹೊತ್ತಿಗೆ 400 ಕ್ಕಿಂತ ಕಡಿಮೆ ಪ್ರಕರಣಗಳಿರುವಾಗ, ನಾವು ಭಾರತದೊಳಗೆ ಮತ್ತು ಹೊರಗಿನ ಎಲ್ಲಾ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ನಿಷೇಧಿಸಿದ್ದೇವೆ ಮತ್ತು ಮಾರ್ಚ್ 25, 2020 ರಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಗೆ ತಂದಿದ್ದೇವೆ.” ಎಂದರು.
ರೋಗವನ್ನು ನಿಭಾಯಿಸುವಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಭಾರತವು ಈ ಹಿಂದೆಯೂ ಅಂತರರಾಷ್ಟ್ರೀಯ ಕಾಳಜಿ ಮತ್ತು ಸಾಂಕ್ರಾಮಿಕ ರೋಗಗಳ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ” ಎಂದರು. “ನಮ್ಮ ರಾಷ್ಟ್ರವು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳನ್ನು ನಿರ್ವಹಿಸಲು ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳಲ್ಲಿ ನಿಗದಿಪಡಿಸಿದ ಅಗತ್ಯವಾದ ಪ್ರಮುಖ ಸಾಮರ್ಥ್ಯಗಳನ್ನು ಹೊಂದಿದೆ. ಸಾಂಕ್ರಾಮಿಕ ಪೀಡಿತ ಕಾಯಿಲೆಗಳಿಗೆ ರಾಷ್ಟ್ರವ್ಯಾಪಿ ಕಣ್ಗಾವಲು ವ್ಯವಸ್ಥೆಯಾಗಿರುವ ಇಂಟಿಗ್ರೇಟೆಡ್ ಡಿಸೀಸ್ ಕಣ್ಗಾವಲು ಕಾರ್ಯಕ್ರಮ (ಐಡಿಎಸ್ಪಿ) ವನ್ನು ಕೋವಿಡ್ ಪ್ರತಿಕ್ರಿಯೆಯ ಕಡೆಗೆ ಸಕ್ರಿಯಗೊಳಿಸಲಾಗಿದೆ ಮತ್ತು ಡಿಜಿಟಲ್ ಒಳಹರಿವಿನೊಂದಿಗೆ ಇನ್ನಷ್ಟು ಬಲಪಡಿಸಲಾಗುತ್ತಿದೆ. ” ಎಂದರು.
ಕಾರ್ಯತಂತ್ರದ ಬಗ್ಗೆ ಮತ್ತಷ್ಟು ಸ್ಪಷ್ಟತೆ ನೀಡಿದ ಅವರು, “ಕೋವಿಡ್ ರೋಗಿಗಳು ಪರಸ್ಪರ ಸಂಪರ್ಕಕ್ಕೆ ಬರದಂತೆ ಕೋವಿಡ್ ರೋಗಿಗಳ ನಿರ್ವಹಣೆಗಾಗಿ ವಿಶೇಷ ಮೂಲಸೌಕರ್ಯಗಳನ್ನು ನಿರ್ಮಿಸುವತ್ತ ಗಮನಹರಿಸುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ಭಾರತ ಕೈಗೊಂಡಿದೆ, ಇದರಿಂದಾಗಿ. ಪಾಸಿಟಿವ್ ಜನರಿಗೆ ಮೂರು ವಿಧದ ಮೀಸಲಾದ ಕೋವಿಡ್ ನಿರ್ವಹಣಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ: ಕಡಿಮೆ ತೀವ್ರತೆಯ ರೋಗಲಕ್ಷಣದ ಪ್ರಕರಣಗಳಿಗೆ ಕೋವಿಡ್ ಆರೈಕೆ ಕೇಂದ್ರಗಳು (CCCಗಳು), ಮಧ್ಯಮ ಪ್ರಕರಣಗಳಿಗೆ ಕೋವಿಡ್ ಆರೋಗ್ಯ ಕೇಂದ್ರಗಳು (CHCಗಳು) ಮತ್ತು ತೀವ್ರತರವಾದ ಪ್ರಕರಣಗಳಿಗೆ ಕೋವಿಡ್ ಆಸ್ಪತ್ರೆಗಳಲ್ಲಿ (CHಗಳು) ಚಿಕಿತ್ಸೆ ನೀಡಲಾಗುತ್ತಿದೆ. ರೋಗಲಕ್ಷಣಗಳು ಹೆಚ್ಚುತ್ತಿದ್ದಂತೆ ರೋಗಿಗಳ ಕ್ರಿಯಾತ್ಮಕ ಚಲನೆಗಾಗಿ ರೆಫರಲ್ ನೆಟ್ವರ್ಕ್ ಆರ್ಕಿಟೆಕ್ಚರ್ನ ವಿನ್ಯಾಸದಲ್ಲಿ ಈ ಮೀಸಲಾದ ಕೋವಿಡ್ ಸೌಲಭ್ಯಗಳನ್ನು ಪರಸ್ಪರ ಮ್ಯಾಪ್ ಮಾಡಲಾಗಿದೆ, ಇದರಿಂದಾಗಿ ಸೂಕ್ತವಾದ ಕ್ಲಿನಿಕಲ್ ಆರೈಕೆಯನ್ನು ಸಮಯೋಚಿತವಾಗಿ, ರೋಗಲಕ್ಷಣಗಳಿಗೆ ಅನುಗುಣವಾಗಿ ಒದಗಿಸಬಹುದು. ” ಎಂದರು.
ನಿರ್ದಿಷ್ಟ ರೋಗ ತಡೆಗಟ್ಟುವಿಕೆ ಮತ್ತು ನಿಗ್ರಹ ಕ್ರಮಗಳ ಬಗ್ಗೆ ಮಾತನಾಡಿದ ಅವರು, “ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆಗಳ ಅನುಪಸ್ಥಿತಿಯಲ್ಲಿ, ಭಾರತವು ವಿವಿಧ ಔಷಧೀಯವಲ್ಲದ ಮಧ್ಯಸ್ಥಿಕೆಗಳನ್ನು ಅವಲಂಬಿಸಿದೆ. ಕೈಗಳ ಸ್ವಚ್ಛತೆ ಮತ್ತು ಉಸಿರಾಟದ ಶಿಷ್ಟಾಚಾರಗಳಂತಹ ಸರಳ ಸಾರ್ವಜನಿಕ ಆರೋಗ್ಯ ಮಧ್ಯಸ್ಥಿಕೆಗಳ ಬಗ್ಗೆ ಸಾಮಾಜಿಕ ಅಂತರ ಮತ್ತು ಜನಸಾಮಾನ್ಯರಿಗೆ ಅಪಾಯದಂತಹ ಕ್ರಮಗಳ ಮೇಲೆ ನಿರ್ದಿಷ್ಟವಾಗಿ ಗಮನ ಹರಿಸಲಾಗಿದೆ.” ಎಂದರು. ಕೋವಿಡ್-19ಕ್ಕೆ ಲಸಿಕೆ ಅಭಿವೃದ್ಧಿಪಡಿಸುವ ವಿಷಯದ ಬಗ್ಗೆ ಮಾತನಾಡಿದ ಅವರು, “ರೋಗವನ್ನು ನಿಭಾಯಿಸುವ ಸಾಂಪ್ರದಾಯಿಕ ಮಾರ್ಗಗಳು ಮತ್ತು ವಿಧಾನಗಳನ್ನು ಜಾರಿಗೆ ತರುತ್ತಿರುವಾಗ, ನಮ್ಮ ವಿಜ್ಞಾನಿಗಳು ಮತ್ತು ವೈದ್ಯರು ನಮ್ಮ ವ್ಯಾಪ್ತಿಯನ್ನು ಗರಿಷ್ಠಗೊಳಿಸಲು ಹೊಸ ಮತ್ತು ನವೀನ ಕ್ರಮಗಳನ್ನು ಅನ್ವೇಷಿಸುತ್ತಿದ್ದಾರೆ. ತಂತ್ರಜ್ಞಾನವನ್ನು ವಿವರಗಳ ಪಟ್ಟಿ ಮತ್ತು ರೋಗಿಗಳ ಮಟ್ಟದ ಮಾಹಿತಿಯನ್ನು ನಿರ್ವಹಿಸಲು ಮಾತ್ರವಲ್ಲದೇ, ನಾಗರಿಕರ ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ನೇರವಾಗಿ ಅಪಾಯದ ಬಗ್ಗೆ ಮತ್ತು ಅನುಸರಿಸಬೇಕಾದ ಉತ್ತಮ ಅಭ್ಯಾಸಗಳನ್ನು ತಿಳಿಸಲು ಬಳಸಲಾಗುತ್ತಿದೆ ” ಎಂದರು.
“ವಸುದೈವ ಕುಟುಂಬಕಂ” ನ ಸಾಂಪ್ರದಾಯಿಕ ಭಾರತೀಯ ಸಿದ್ಧಾಂತವನ್ನು ಒತ್ತಿಹೇಳಿದ ಸಚಿವರು, “ಈ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಭಾರತವು ನಾಯಕತ್ವವನ್ನು ವಹಿಸಿಕೊಂಡು ನೆರೆಯ ರಾಷ್ಟ್ರಗಳಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡಿದೆ. ಭಾರತವು ಚೀನಾದ ವುಹಾನ್ ಮತ್ತು ಕೋವಿಡ್-19 ಪೀಡಿತ ಡೈಮಂಡ್ ಪ್ರಿನ್ಸೆಸ್ ಹಡಗಿನಿಂದ ಸ್ಥಳಾಂತರಿಸುವ ಸಮಯದಲ್ಲಿ, ಮಾಲ್ಡೀವ್ಸ್, ಬಾಂಗ್ಲಾದೇಶ, ಮ್ಯಾನ್ಮಾರ್, ದಕ್ಷಿಣ ಆಫ್ರಿಕಾ, ಯುಎಸ್ಎ, ಮಡಗಾಸ್ಕರ್, ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರುವಿನಿಂದ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಿದ್ದೇವೆ. ಇದಲ್ಲದೆ, ಭಾರತವು ಔಷಧೀಯ ವಸ್ತುಗಳ ಜಾಗತಿಕ ನಾಯಕನಾಗಿ, ಹೈಡ್ರಾಕ್ಸಿಕ್ಲೋರೋಕ್ವಿನ್ ನಂತಹ ಔಷಧಿಗಳನ್ನು ವಿಶ್ವದ ಇತರ ದೇಶಗಳಿಗೆ ಲಭ್ಯವಾಗುವಂತೆ ನೋಡಿಕೊಂಡಿದೆ. ಪರಿಣಾಮಕಾರಿ ಔಷಧಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಯಲ್ಲಿ ಭಾರತ ಜಾಗತಿಕ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ ಮತ್ತು ಸಾಧ್ಯವಾದಷ್ಟು ಬೇಗ ನಮ್ಮೆಲ್ಲರಿಗೂ ಲಭ್ಯವಾಗುವಂತೆ ಮಾಡಲಿದೆ” ಎಂದು ಅವರು ಹೇಳಿದರು.
ಡಾ. ಹರ್ಷವರ್ಧನ್ ಅವರು ಕೊನೆಯಲ್ಲಿ ಅಧ್ಯಕ್ಷ ರಾಷ್ಟ್ರಕ್ಕೆ ಧನ್ಯವಾದ ಹೇಳುವಾಗ, ಜಾಗತಿಕ ಆರೋಗ್ಯ ಕಾರ್ಯಸೂಚಿಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದರು. ಕೋವಿಡ್-19ನ್ನು ಮಣಿಸುವತ್ತ ಏಕೀಕೃತ ಪ್ರಯತ್ನಗಳನ್ನು ಮುಂದುವರಿಸಲು ಭಾರತವು ಜಿ-20 ಸದಸ್ಯ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದೆ ಎಂದು ಹೇಳಿದರು.
***
(Release ID: 1616305)
Visitor Counter : 308