PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 20 JUN 2020 7:00PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್-19 ತಾಜಾ ಮಾಹಿತಿ

ಕೋವಿಡ್-19ನಿಂದ 2,13,830 ರೋಗಿಗಳು ಗುಣಮುಖ; ಚೇತರಿಕೆ ಪ್ರಮಾಣ ಶೇ. 54.13ಕ್ಕೆ ಏರಿಕೆ

ಕಳೆದ 24 ಗಂಟೆಗಳಿಂದೀಚೆಗೆ ಒಟ್ಟು 9,120 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು 2,13,830 ರೋಗಿಗಳು ಕೋವಿಡ್-19ನಿಂದ ಗುಣಮುಖರಾಗಿದ್ದಾರೆ. ಇದರಿಂದಾಗಿ ಕೋವಿಡ್-19 ರೋಗಿಗಳಲ್ಲಿ ಗುಣಮುಖರಾದವರ ಪ್ರಮಾಣ ಶೇ.54.13ಕ್ಕೆ ಏರಿಕೆಯಾಗಿದೆ. ಪ್ರಸ್ತುತ 1,68,269 ಸಕ್ರಿಯ ಪ್ರಕರಣಗಳಿದ್ದು, ಆ ಎಲ್ಲಾ ಪ್ರಕರಣಗಳು ವೈದ್ಯಕೀಯ ನಿಗಾದಲ್ಲಿವೆ. ಒಟ್ಟು ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆ 750ಕ್ಕೆ ಮತ್ತು ಖಾಸಗಿ ಪ್ರಯೋಗಾಲಯಗಳ ಸಂಖ್ಯೆ 259ಕ್ಕೆ ಏರಿಕೆಯಾಗಿದೆ.(ಒಟ್ಟು 974) ಕಳೆದ 24 ಗಂಟೆಗಳಿಂದೀಚೆಗೆ 1,89,869 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರೊಂದಿಗೆ ಈವರೆಗೆ ಒಟ್ಟು 66,16,496 ಮಾದರಿಗಳನ್ನು ಪರೀಕ್ಷಿಸಿದಂತಾಗಿದೆ.

ವಿವರಗಳಿಗೆ : https://pib.gov.in/PressReleasePage.aspx?PRID=1632879

ಕೋವಿಡ್-19 ಹಿನ್ನೆಲೆಯಲ್ಲಿ ತಮ್ಮ ಗ್ರಾಮಗಳಿಗೆ ಮರಳಿರುವ ವಲಸೆ ಕಾರ್ಮಿಕರ ಜೀವನೋಪಾಯ ಮತ್ತು

ಉದ್ಯೋಗ ಲಭ್ಯತೆಯ ಉತ್ತೇಜನಕ್ಕೆ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನಕ್ಕೆ 2020 ಜೂನ್ 20ರಂದು ಚಾಲನೆ ನೀಡಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಉಂಟಾದ ಭಾರೀ ಪರಿಣಾಮದಿಂದಾಗಿ ತಮ್ಮ ಗ್ರಾಮ/ಪ್ರದೇಶಗಳಿಗೆ ಮರಳಿರುವ ವಲಸೆ ಕಾರ್ಮಿಕರ ಜೀವನೋಪಾಯ ಮತ್ತು ಸಬಲೀಕರಣಕ್ಕಾಗಿ ಬೃಹತ್ ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣಾಭಿವೃದ್ಧಿ ಕೆಲಸಗಳ ಅಭಿಯಾನ ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನಕ್ಕೆ ಚಾಲನೆ ನೀಡಿದರು. ಅಭಿಯಾನವನ್ನು, ನಮ್ಮ ಗ್ರಾಮಗಳಲ್ಲಿ ವಾಸಿಸುತ್ತಿರುವ ಕಾರ್ಮಿಕ ಸಹೋದರ ಸಹೋದರಿಯರು, ಯುವಕರು ಮತ್ತು ಪುತ್ರಿಯರಿಗೆ ಸಮರ್ಪಿಸಲಾಗಿದೆ. ಅಭಿಯಾನದಡಿ ಕಾರ್ಮಿಕರಿಗೆ ತಮ್ಮ ಮನೆಗಳ ಸಮೀಪವೇ ಕೆಲಸ ನೀಡುವ ಉದ್ದೇಶವಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿಗಳು ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನದಡಿ ಶಾಶ್ವತ ಗ್ರಾಮೀಣ ಮೂಲಸೌಕರ್ಯ ವೃದ್ಧಿಗೆ 50,000 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಎಂದು ಪ್ರಕಟಿಸಿದರು. ಅವರು ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು 25 ಬಗೆಯ ಕಾಮಗಾರಿಗಳನ್ನು ಗುರುತಿಸಲಾಗಿದೆ ಎಂದರು. 25 ಬಗೆಯ ಕೆಲಸಗಳು ಅಥವಾ ಯೋಜನೆಗಳಿಂದ ಗ್ರಾಮೀಣ ಪ್ರದೇಶಗಳ ಅಗತ್ಯತೆಗಳಾದ ಬಡವರಿಗೆ ಗ್ರಾಮೀಣ ವಸತಿ, ಪ್ಲಾಂಟೇಷನ್, ಜಲಜೀವನ್ ಮಿಷನ್ ಮೂಲಕ ಕುಡಿಯುವ ನೀರು ಒದಗಿಸುವುದು, ಪಂಚಾಯಿತಿ ಭವನ ನಿರ್ಮಾಣ, ಸಮುದಾಯ ಶೌಚಾಲಯ, ಗ್ರಾಮೀಣ ಮಂಡಿ, ಗ್ರಾಮೀಣ ರಸ್ತೆಗಳು ಮತ್ತು ಗೋಶಾಲೆ, ಅಂಗನವಾಡಿ ಕಟ್ಟಡಗಳು ಮತ್ತಿತರ ಮೂಲಸೌಕರ್ಯಗಳು ಸೇರಿವೆ. ಅಭಿಯಾನದಡಿ ಗ್ರಾಮೀಣ ಪ್ರದೇಶಗಳಲ್ಲಿ ಆಧುನಿಕ ಮೂಲಸೌಕರ್ಯಗಳನ್ನೂ ಸಹ ಒದಗಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು.

ವಿವರಗಳಿಗೆ : https://pib.gov.in/PressReleasePage.aspx?PRID=1632861

ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನ ಉದ್ಘಾಟನೆ ವೇಳೆ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ

ವಿವರಗಳಿಗೆ : https://pib.gov.in/PressReleasePage.aspx?PRID=1632864

ಸ್ವಗ್ರಾಮಗಳಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಸರ್ಕಾರದಿಂದ ಸಮರೋಪಾದಿಯಲ್ಲಿ ಕ್ರಮ: ಶ್ರೀ ನರೇಂದ್ರ ಸಿಂಗ್ ತೋಮರ್

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು, ಕೋವಿಡ್-19 ಸಾಂಕ್ರಾಮಿಕದಿಂದಾಗಿ ಭಾರತ ಮತ್ತು ಇಡೀ ವಿಶ್ವ ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದೆ ಎಂದರು.  ಲಾಕ್ ಡೌನ್ ಘೋಷಣೆ ಮಾಡಿದಂದಿನಿಂದ ಗ್ರಾಮವಾಸಿಗಳು, ಬಡವರು, ರೈತರು ಮತ್ತು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆದ್ಯತೆಯ ಮೇರೆಗೆ ಪರಿಹರಿಸಲಾಗುತ್ತಿದೆ ಎಂದರು. ಆ ಬಗ್ಗೆ ವಿವರ ನೀಡಿದ ಅವರು, ಆರು ರಾಜ್ಯಗಳ 116 ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ರೋಜ್ಗಾರ್ ಅಭಿಯಾನ ಜಾರಿಗೊಳಿಸಲಾಗುತ್ತಿದೆ ಎಂದರು. ಕೇಂದ್ರ ಸರ್ಕಾರದ 11 ಸಚಿವಾಲಯಗಳ ನಡುವಿನ ಸಕ್ರಿಯ ಸಹಭಾಗಿತ್ವದೊಂದಿಗೆ ತಳಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಅಭಿಯಾನ 125 ದಿನಗಳ ಕಾಲ ಮುಂದುವರಿಯಲಿದ್ದು, ಅದರಡಿ ಗುರುತಿಸಲಾಗಿರುವ 25 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಇದರಿಂದಾಗಿ ಕ್ಷಿಪ್ರವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ. ಜನರಿಗೆ ಸಮರೋಪಾದಿಯಲ್ಲಿ ಉದ್ಯೋಗಾವಕಾಶ ಒದಗಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ವಿವರಗಳಿಗೆ : https://pib.gov.in/PressReleasePage.aspx?PRID=1632878

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಈವರೆಗಿನ ಪ್ರಗತಿ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯಲ್ಲಿ ಈವರೆಗೆ 42 ಕೋಟಿಗೂ ಅಧಿಕ ಬಡಜನರು 65,454 ಕೋಟಿ ರೂ. ಆರ್ಥಿಕ ನೆರವು ಸ್ವೀಕರಿಸಿದ್ದಾರೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 8.94 ಕೋಟಿ ಫಲಾನುಭವಿಗಳಿಗೆ ಮೊದಲ ಕಂತಿನ 17,891 ಕೋಟಿ ರೂ. ಹಣ ಪಾವತಿ ಮಾಡಲಾಗಿದೆ. ಜನ್ ಧನ್ ಖಾತೆ ಹೊಂದಿರುವ 20.65 ಕೋಟಿ(ಶೇ.100) ಮಹಿಳೆಯರಿಗೆ ಮೊದಲ ಕಂತಿನ 10,325 ಕೋಟಿ ರೂ. ಹಣ ಜಮೆ ಮಾಡಲಾಗಿದೆ. 20.62 ಕೋಟಿ(ಶೇ.100) ಮಹಿಳಾ ಜನ್ ಧನ್ ಖಾತೆದಾರರಿಗೆ ಎರಡನೇ ಕಂತಿನ 10.315 ಕೋಟಿ ರೂ. ಹಣ ಪಾವತಿಸಲಾಗಿದೆ ಮತ್ತು 20.62 ಕೋಟಿ(ಶೇ.100) ಮಹಿಳಾ ಜನ್ ಧನ್ ಬ್ಯಾಂಕ್ ಖಾತೆದಾರರಿಗೆ ಮೂರನೇ ಕಂತಿನ 10,312 ಕೋಟಿ ರೂ. ಜಮೆ ಮಾಡಲಾಗಿದೆ. ವೃದ್ಧಾಪ್ಯ ಪಿಂಚಣಿ, ವಿಧವೆಯರಿಗೆ ಮತ್ತು ವಿಶೇಷಚೇತನರಿಗೆ ಎರಡು ಕಂತಿನಲ್ಲಿ 2,814.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2.3 ಕೋಟಿ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಾರರಿಗೆ 4312.82 ಕೋಟಿ ಆರ್ಥಿಕ ನೆರವನ್ನು ನೀಡಲಾಗಿದೆ. ಪಿಎಂಯುವೈ ಯೋಜನೆ ಅಡಿಯಲ್ಲಿ ಏಪ್ರಿಲ್ ಮತ್ತು ಮೇ 2020ರಲ್ಲಿ ಈವರೆಗೆ ಒಟ್ಟು 8.52 ಕೋಟಿ ಸಿಲಿಂಡರ್ ಗಳನ್ನು ವಿತರಿಸಲಾಗಿದೆ. ಜೂನ್ 2020ರಲ್ಲಿ 2.1 ಕೋಟಿ ಸಿಲಿಂಡರ್ ಗಳನ್ನು ಪಿಎಂಯುವೈ ಅಡಿಯಲ್ಲಿ ಬುಕ್ ಮಾಡಲಾಗಿದೆ. ಇಪಿಎಫ್ಒನ 20.22 ಲಕ್ಷ ಸದಸ್ಯರು ಆನ್ ಲೈನ್ ಮೂಲಕ ಮರು ಪಾವತಿಸಲಾಗದ ನೆರವು ಮೂಲಕ 5767 ಕೋಟಿ ರೂ. ಮೊತ್ತವನ್ನು ಇಪಿಎಫ್ಒನಿಂದ ಪಡೆದಿದ್ದಾರೆ.  ಈವರೆಗೆ ಏಪ್ರಿಲ್ ತಿಂಗಳಿಗೆ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 113 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿದ್ದು, ಆ ಪೈಕಿ 74.03 ಫಲಾನುಭವಿಗಳಿಗೆ 37.01 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. ಮೇ 2020ರಲ್ಲಿ ಒಟ್ಟು 72.83 ಕೋಟಿ ಫಲಾನುಭವಿಗಳಿಗೆ 36.42 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ ಹಾಗೂ ಜೂನ್ 2020ರಲ್ಲಿ 27.18 ಕೋಟಿ ಫಲಾನುಭವಿಗಳಿಗೆ 13.59 ಲಕ್ಷ ಮೆಟ್ರಿಕ್ ಟನ್ ಆಹಾಧಾನ್ಯಗಳನ್ನು ವಿತರಿಸಲಾಗಿದೆ.

ವಿವರಗಳಿಗೆ : https://pib.gov.in/PressReleasePage.aspx?PRID=1632863

ಗೃಹ ದಿಗ್ಭಂಧನ (ಹೋಂ ಕ್ವಾರಂಟೈನ್) ಪರಿಣಾಮಕಾರಿ ಜಾರಿಗೆ ಮಾರ್ಗಸೂಚಿ ಪಾಲನೆಗೆ ಎಲ್ಲ ರಾಜ್ಯಗಳಿಗೂ ಪತ್ರ ಬರೆದ ಕೇಂದ್ರ ಸರ್ಕಾರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಗೃಹ ದಿಗ್ಭಂಧನಕ್ಕೆ ಸಂಬಂಧಿಸಿದಂತೆ 2020ರ ಮೇ 10ರಂದು ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಆ ಮಾರ್ಗಸೂಚಿಯಂತೆ ಸ್ವಲ್ಪ ಪ್ರಮಾಣದ ಕೋವಿಡ್-19 ಆರಂಭಿಕ ಲಕ್ಷಣಗಳುಳ್ಳ ರೋಗಿಗಳು ಹೋಮ್ ಕ್ವಾರಂಟೈನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಅಂತಹ ರೋಗಿಗಳಿಗೆ ಆತ ಅಥವಾ ಆಕೆಗೆ ಪ್ರತ್ಯೇಕ ಕೊಠಡಿ ಹಾಗೂ ಶೌಚಾಲಯ ವ್ಯವಸ್ಥೆ ಇರಬೇಕು ಹಾಗೂ ವಯಸ್ಕ ಅಟೆಂಡೆಂಟ್ ಅಥವಾ ಆರೈಕೆಗೆ ಒಬ್ಬರು ಇರಬೇಕು. ಅಲ್ಲದೆ ರೋಗಿ ಆತ ಅಥವಾ ಆಕೆಯ ಆರೋಗ್ಯವನ್ನು ನಿರಂತರವಾಗಿ ನಿಗಾದಲ್ಲಿಟ್ಟಿರಬೇಕು ಮತ್ತು ನಿರಂತರವಾಗಿ ಆರೋಗ್ಯ ಸ್ಥಿತಿಗತಿಗಳನ್ನು ಜಿಲ್ಲಾ ನಿಗಾ ಅಧಿಕಾರಿಗೆ ತಿಳಿಸಬೇಕು. ಆ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿಗಾ ತಂಡಕ್ಕೆ ಮಾಹಿತಿಯನ್ನು ಒದಗಿಸಬೇಕು. ಇದೀಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ತಳಮಟ್ಟದಲ್ಲಿ ಹೋಮ್ ಐಸೋಲೇಷನ್ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ರಾಜ್ಯಗಳಿಗ ಸೂಚಿಸಿದೆ.

ವಿವರಗಳಿಗೆ : https://pib.gov.in/PressReleasePage.aspx?PRID=1632764

ಬ್ಯಾಂಕಿಂಗ್ ವಲಯಗಳಲ್ಲಿ ರೆಪೊ ದರ ಕಡಿತದ ಪರಿವರ್ತನೆಯ ಮೇಲೆ ನಿಕಟ ನಿಗಾ ಇರಿಸಿದೆ ಮತ್ತು ಭಾರತದ ಪ್ರಗತಿಗಾಥೆಯನ್ನು ಬರೆಯುವ ಸಂಪತ್ತು ಸೃಷ್ಟಿಸುವವರ ಪ್ರಯತ್ನಗಳನ್ನು ಗುರುತಿಸಲಾಗುತ್ತಿದೆ: ಹಣಕಾಸು ಸಚಿವರು

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಸರ್ಕಾರ ಸದಾ ಸಂಪತ್ತು ಸೃಷ್ಟಿಸುವವರಿಗೆ ಪ್ರಾಮುಖ್ಯತೆ ನೀಡುತ್ತಿದೆ. ಏಕೆಂದರೆ ಅವರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಾರೆ ಮತ್ತು ದೇಶದ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಗರಿಷ್ಠ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವ್ಯಾಪಾರ ಮತ್ತು ಉದ್ಯಮದ ಮೇಲೆ ಕೋವಿಡ್-19 ಸಾಂಕ್ರಾಮಿಕ ಪರಿಣಾಮಗಳನ್ನು ತಗ್ಗಿಸಲು ವಾಣಿಜ್ಯ ಸಮುದಾಯಕ್ಕೆ 3 ಕೋಟಿ ರೂ.ಗಳ ವರೆಗೆ ಖಾತ್ರಿರಹಿತ ಸಹಜ ರೀತಿಯಲ್ಲಿ ಸಾಲಗಳನ್ನು ನೀಡುವ ವಿತರಣಾ ಪ್ರಕ್ರಿಯೆ ಮೇಲೆ ನಿರಂತರ ನಿಗಾ ಇರಿಸಲಾಗುತ್ತಿದೆ ಎಂದು ಹಣಕಾಸು ಸಚಿವರು ಹೇಳಿದರು.

ವಿವರಗಳಿಗೆ : https://pib.gov.in/PressReleasePage.aspx?PRID=1632656

ಕೋವಿಡ್-19ನಿಂದಾಗಿರುವ ಪರಿಣಾಮಗಳನ್ನು ಎದುರಿಸಲು ಭಾರತಕ್ಕೆ 750 ಮಿಲಿಯನ್ ಡಾಲರ್ ನೆರವು ನೀಡುವ ಒಪ್ಪಂದಕ್ಕೆ ಸಹಿ ಹಾಕಿದ ಭಾರತ ಸರ್ಕಾರ ಮತ್ತು ಎಐಐಬಿ

ಕೋವಿಡ್-19 ಸಾಂಕ್ರಾಮಿಕ ಬಡವರು ಮತ್ತು ದುರ್ಬಲ ವರ್ಗದವರ ಮೇಲೆ ಮಾಡಿರುವ ಪ್ರತಿಕೂಲ ಪರಿಣಾಮಗಳಿಗೆ ಪ್ರತಿಯಾಗಿ ಭಾರತದ ಸಾಮರ್ಥ್ಯವೃದ್ಧಿಗೆ ಸಹಾಯ ಮಾಡಲು ‘ಕೋವಿಡ್-19 ಸಕ್ರಿಯ ಪ್ರತಿಸ್ಪಂದನೆ ಮತ್ತು ವೆಚ್ಚ ಬಂಬಲ ಕಾರ್ಯಕ್ರಮ’ದಡಿ 750 ಮಿಲಿಯನ್ ಡಾಲರ್ ನೆರವು ನೀಡುವುದಕ್ಕೆ ಭಾರತ ಸರ್ಕಾರ ಮತ್ತು ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್(ಎಐಐಬಿ) ಸಹಿ ಹಾಕಿವೆ. ಈ ಕಾರ್ಯಕ್ರಮದಡಿ ಭಾರತ ಸರ್ಕಾರ ಕೋವಿಡ್-19ನಿಂದ ಆಗಿರುವ ಸಾಮಾಜಿಕ ಮತ್ತು ಆರ್ಥಿಕ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಬಜೆಟ್ ಬೆಂಬಲ ನೀಡಲಾಗುತ್ತಿದೆ.   ಕಾರ್ಯಕ್ರಮದಿಂದಾಗಿ ಬಡತನರೇಖೆಗಿಂತ ಕೆಳಗಿರುವ ಕುಟುಂಬಗಳು, ರೈತರು, ಆರೋಗ್ಯ ರಕ್ಷಣಾ ಕಾರ್ಯಕರ್ತರು, ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳು, ವಿಧವೆಯರು, ವಿಶೇಷಚೇತನರು, ಹಿರಿಯ ನಾಗರಿಕರು ಕಡಿಮೆ, ಆದಾಯದವರು, ಕಟ್ಟಡ ಕಾರ್ಮಿಕರು ಮತ್ತು ಇತರೆ ದುರ್ಬಲ ವರ್ಗದವರಿಗೆ ಮುಖ್ಯವಾಗಿ ಪ್ರಯೋಜನವಾಗಲಿದೆ.

ವಿವರಗಳಿಗೆ : https://pib.gov.in/PressReleasePage.aspx?PRID=1632652

ಐಡಿವೈ- 2020ಗೆ ಬೆಂಬಲ ಘೋಷಿಸಿದ ಹಲವು ಬಾಲಿವುಡ್ ತಾರೆಯರು

2020ರ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಒಂದು ದಿನ ಮಾತ್ರ ಬಾಕಿ ಇದೆ. ಪ್ರಸಕ್ತ ಸನ್ನಿವೇಶದಲ್ಲಿ ಸಾಮೂಹಿಕವಾಗಿ ಒಂದೆಡೆ ಜನ ಸೇರುವುದು ಸರಿಯಲ್ಲ, ಹಾಗಾಗಿ ಆಯುಷ್ ಸಚಿವಾಲಯ 6ನೇ ಐಡಿವೈ 2020ಯನ್ನು ಮನೆಗಳಲ್ಲಿ ಕುಟುಂಬಗಳ ನಡುವೆಯೇ ಆಚರಣೆಗೆ ‘ಮನೆಯಲ್ಲೇ ಯೋಗ – ಕುಟುಂಬದೊಂದಿಗೆ ಯೋಗ’ವನ್ನು ಉತ್ತೇಜಿಸುತ್ತಿದೆ. ಲಕ್ಷಾಂತರ ಜನರು ಈಗಾಗಲೇ ಐಡಿವೈ-2020 ಭಾಗವಾಗಲು ಬದ್ಧತೆ ತೋರಿದ್ದಾರೆ. ಆಯುಷ್ ಸಚಿವಾಲಯದ ಮುಖ್ಯ ಗುರಿ ಎಂದರೆ ಯೋಗ ಆಚರಣೆಯಲ್ಲಿ ಸೌಹಾರ್ದತೆ ಸಾಧಿಸುವುದು. ಹಲವು ಗಣ್ಯರು ಮತ್ತು ಪ್ರಭಾವಿ ವ್ಯಕ್ತಿಗಳು 6ನೇ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಜನರನ್ನು ಉತ್ತೇಜಿಸುವ ಸ್ಫೂರ್ತಿದಾಯಕ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಹೆಸರಾಂತ ಚಿತ್ರತಾರೆಯರಾದ ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ, ಮಿಲಿಂದ್ ಸೊಮನ್ ಮತ್ತು ಶಿಲ್ಪಾ ಶೆಟ್ಟಿ ಕುಂದ್ರ  ಅವರು ಪಟ್ಟಿಯಲ್ಲಿ ಸೇರಿದ್ದಾರೆ.

ವಿವರಗಳಿಗೆ : https://pib.gov.in/PressReleasePage.aspx?PRID=1632913

ದೇಶಾದ್ಯಂತ ಖಾಸಗಿ ವೈದ್ಯಕೀಯ ವೃತ್ತಿಪರರಿಂದ ಕೋವಿಡ್ ಕುರಿತಂತೆ ಮಾಹಿತಿ ಸ್ವೀಕರಿಸಿದ ಡಾ. ಜಿತೇಂದ್ರ ಸಿಂಗ್

ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ವೆಬಿನಾರ್ ನಲ್ಲಿ ಭಾರತದ ನಾನಾ ನಗರಗಳಾದ ಚೆನ್ನೈ, ನವದೆಹಲಿ, ಮುಂಬೈ, ನಾಗ್ಪುರ್, ಪಾಟ್ನಾ, ಕೋಟಾ, ಇರೋಡ್ ಮತ್ತಿತರ ಸ್ಥಳಗಳಿಂದ ಖ್ಯಾತ ವೈದ್ಯರು ಮತ್ತು ವೈದ್ಯಕೀಯ ವಿಜ್ಞಾನದ ನಾನಾ ವಿಭಾಗಗಳ ಪರಿಣಿತರಿಂದ ಮಾಹಿತಿಯನ್ನು ಸಂಗ್ರಹಿಸಲಾಯಿತು. ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ಕೊರೊನಾ ವಿರುದ್ಧದ ಹೋರಾಟವನ್ನು ಯಶಸ್ವಿಯಾಗಿ ಮಾಡುತ್ತಿರುವ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ಭಾರತೀಯ ವೈದ್ಯಕೀಯ ಸಮುದಾಯವನ್ನು ಅಭಿನಂದಿಸಿದರು. ಅವರು ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ವೈದ್ಯಕೀಯ ಸಮುದಾಯ ಹಾಗೂ ಆರೋಗ್ಯ ಮೂಲಸೌಕರ್ಯ ಇಡೀ ವಿಶ್ವಕ್ಕೆ ತನ್ನಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯ ಹಾಗೂ ಬಲವನ್ನು ತೋರಿಸಿಕೊಟ್ಟಿದೆ. ಅತ್ಯಲ್ಪ ಅವಧಿಯಲ್ಲಿಯೇ ಸಾಮರ್ಥ್ಯ ಪ್ರದರ್ಶಿಸಿ ಸಮುದಾಯಕ್ಕೆ ತಮ್ಮ ಯಶಸ್ವಿ ಹೊಣೆಗಾರಿಕೆಯನ್ನು ನಿಭಾಯಿಸಿದೆ ಎಂದು ಹೇಳಿದರು.

ವಿವರಗಳಿಗೆ : https://pib.gov.in/PressReleasePage.aspx?PRID=1632686

ಡಿಎಆರ್ ಪಿಜಿ ಕಾರ್ಯದರ್ಶಿ ಡಾ. ಕೆ. ಶಿವಾಜಿ ಅವರಿಂದ ಕೋವಿಡ್-19 – ಅಂತಾರಾಷ್ಟ್ರೀಯ ನಾಗರಿಕ ಸೇವಾ ಅಧಿಕಾರಿಗಳಿಗೆ ಸಾಂಕ್ರಾಮಿಕ ಕುರಿತ ಉತ್ತಮ ಆಡಳಿತ ಪದ್ಧತಿಗಳು ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ(ಐಟಿಇಸಿ) - ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರ(ಎನ್ ಸಿ ಜಿಜಿ)ಯಲ್ಲಿ ನಡೆದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು.

ವಿವರಗಳಿಗೆ : https://pib.gov.in/PressReleasePage.aspx?PRID=1632778

ಪಿ ಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಅರುಣಾಚಪ್ರದೇಶ: ಅರುಣಾಚಲಪ್ರದೇಶದಲ್ಲಿ 32 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಪೈಕಿ 13 ರಾಜಧಾನಿ ಪ್ರದೇಶದಲ್ಲಿ, ಚಾಂಗ್ ಲಾಂಗ್ ನಲ್ಲಿ 10, ಪಶ್ಚಿಮ ಕೆಮಾಂಗ್ ನಲ್ಲಿ 8 ಮತ್ತು ಲೋಹಿತ್ ಜಿಲ್ಲೆಯಲ್ಲಿ ಒಂದು ಪ್ರಕರಣಗಳು ಸೇರಿವೆ.
  • ಮಣಿಪುರ: ಮಣಿಪುರದಲ್ಲಿ ಹೆಚ್ಚಿನ ಹೊಸ ಕೋವಿಡ್-19 ಪ್ರಕರಣಗಳು ಉಖ್ರುಲ್ ನಲ್ಲಿ 30 ಮತ್ತು ತಮ್ಲೆಂಗ್ಲಾಂಗ್ ನಲ್ಲಿ 29 ಪ್ರಕರಣ ಪತ್ತೆಯಾಗಿವೆ. ಹೆಚ್ಚಿನ ಸಂಖ್ಯೆಯ 94 ಪ್ರಕರಣಗಳು ಚೌರಾಚಾಂದ್ ಪುರ್ ಜಿಲ್ಲೆಯವು. ಬಹುತೇಕರು ವಲಸೆ ಮರಳಿ ಬಂದಿರುವವರಾಗಿದ್ದಾರೆ.
  • ಮಿಝೋರಾಂ: 184 ಮಾದರಿಗಳ ಪರೀಕ್ಷೆಯ ಫಲಿತಾಂಶವನ್ನು ಮಿಝೋರಾಂನಲ್ಲಿ ಕಾಯಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ 140 ಪಾಸಿಟಿವ್ ಪ್ರಕರಣಗಳು ಇವೆ. 131 ಪ್ರಕರಣಗಳು ಸಕ್ರಿಯವಾಗಿವೆ.
  • ನಾಗಾಲ್ಯಾಂಡ್: ರಾಜ್ಯಕ್ಕೆ ಪ್ರವೇಶಿಸುವವರಿಗೆ ನಾಗಾಲ್ಯಾಂಡ್ವಿಶೇಷ ವರ್ಗಎಸ್ಒಪಿ ಬಿಡುಗಡೆ ಮಾಡಿದೆ. ಹೊಸ ಎಸ್ಒಪಿಯಲ್ಲಿ ಕರ್ತವ್ಯಕ್ಕಾಗಿ ಬರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗಿಗಳು, ಕೌಶಲ್ಯಹೊಂದಿದ ಕಾರ್ಮಿಕರು, ತಂತ್ರಜ್ಞರು, ತಾಂತ್ರಿಕ ಪರಿಣಿತರು ಮತ್ತು ಇಂಜಿನಿಯರ್ ಗಳು ಸೇರಿದ್ದಾರೆ. ಈವರೆಗೆ ನಾಗಾಲ್ಯಾಂಡ್ ನಲ್ಲಿ 8174 ಮಾದರಿಗಳ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. 6989 ಪರೀಕ್ಷೆಗಳ ಫಲಿತಾಂಶಗಳನ್ನು ಸ್ವೀಕರಿಸಲಾಗಿದ್ದು, 1185 ಮಾದರಿಗಳ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.
  • ಸಿಕ್ಕಿಂ: ಸಿಕ್ಕಿಂ ಮುಖ್ಯಮಂತ್ರಿ ತಮ್ಮ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಸಂದೇಶದಲ್ಲಿ ಜನತೆಗೆ ಯೋಗಾಭ್ಯಾಸ ಅಳವಡಿಸಿಕೊಳ್ಳುವಂತೆ ಮೂಲಕ ಜೀನವಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಮಾಡಿಕೊಂಡು, ಆರೋಗ್ಯಕರ ಸಂಪದ್ಭರಿತ ಹಾಗೂ ಸೌಹಾರ್ದಯುತ ಸಮಾಜವನ್ನು ನಿರ್ಮಿಸೋಣ ಎಂದು ಕರೆ ನೀಡಿದರು.
  • ಚಂಡಿಗಢ: ಆರೋಗ್ಯ ಇಲಾಖೆಯ ಆಯುಷ್ ನಿರ್ದೇಶನಾಲಯ, ಸರ್ಕಾರಿ ಯೋಗ ಶಿಕ್ಷಣ ಮತ್ತು ಆರೋಗ್ಯ ಕಾಲೇಜಿನ ಸಹಭಾಗಿತ್ವದಲ್ಲಿ 2020 ಜೂನ್ 21ರಂದು ಆನ್ ಲೈನ್ ಮೂಲಕ 6ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಮನೆಗಳಲ್ಲೇ ಆಚರಿಸಲಾಗುವುದು. ವರ್ಷ ಜನ ಸಾಮೂಹಿಕವಾಗಿ ಒಂದೆಡೆ ಸೇರುವುದು ಇರುವುದಿಲ್ಲ. ಆದ್ದರಿಂದ ವರ್ಷ ಮನೆಗಳಲ್ಲೇ ತಮ್ಮ ಕುಟುಂಬದೊಂದಿಗೆ ಯೋಗ ಆಚರಣೆಗೆ ಜನರನ್ನು ಉತ್ತೇಜಿಸಲಾಗುತ್ತಿದೆ.
  • ಪಂಜಾಬ್: ಕೋವಿಡ್-19 ರೋಗಿಗಳನ್ನು ಗುಣಮುಖಗೊಳಿಸುವ ನಿಟ್ಟಿನಲ್ಲಿ ಚಿಕಿತ್ಸೆ ಮತ್ತು ಆಧುನಿಕ ತಂತ್ರಜ್ಞಾನಗಳ ಮೂಲಕ ವೈದ್ಯಕೀಯ ಸಮುದಾಯ ತನ್ನೆಲ್ಲಾ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಪಂಜಾಬ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ ಪಿಜಿಐ ಮತ್ತು ಬಹುಕೇಂದ್ರಿತ ಅಧ್ಯಯನಗಳ ಮೂಲಕ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಮತ್ತು ಸ್ಟಿರಾಯ್ಡ್ ಪಾತ್ರದ ಬಗ್ಗೆ ಅಧ್ಯಯನ ನಡೆಸುತ್ತಿದೆ. ಪಂಜಾಬ್ ನಲ್ಲಿ ರಚಿಸಲಾಗಿರುವ ತಜ್ಞರ ತಂಡ ಕೋವಿಡ್-19 ರೋಗಿಗಳನ್ನು ನಿರ್ವಹಿಸುತ್ತಿರುವ ಪರಿಣಿತರೊಂದಿಗೆ ನಿರಂತರವಾಗಿ ದೂರವಾಣಿ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸುತ್ತಿದೆ. ತಜ್ಞರ ತಂಡದಲ್ಲಿ ಪಿಜಿಐಎಂಇಆರ್, ಏಮ್ಸ್, ಅಮೆರಿಕ, ಬ್ರಿಟನ್, ಕೆನಡ್, ಡಿಎಂಸಿ ಲೂಧಿಯಾನ ಮತ್ತು ಪಂಜಾಬ್ ಎಲ್ಲ ಮೂರು ರಾಜ್ಯ ವೈದ್ಯಕೀಯ ಕಾಲೇಜುಗಳನ್ನು ವೈದ್ಯರು ಒಳಗೊಂಡಿದ್ದಾರೆ.
  • ಹರಿಯಾಣ: 6ನೇ ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಹರಿಯಾಣದ ಮುಖ್ಯಮಂತ್ರಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮನೆಗಳಲ್ಲೇ ಯೋಗ, ಕುಟುಂಬದೊಂದಿಗೆ ಯೋಗ ದಿನ ಆಚರಿಸುವಂತೆ ಜನತೆಗೆ ಕರೆ ನೀಡಿದ್ದಾರೆ. ಮುಖ್ಯಮಂತ್ರಿಗಳುಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಿಮಗೆಲ್ಲಾ ತಿಳಿದಿರುವಂತೆ ಪ್ರತಿಯೊಬ್ಬರೂ ಯೋಗ ದಿನವನ್ನು ಮನೆಗಳಿಗೆ ಸೀಮಿತಗೊಳಿಸಬೇಕಿದೆಎಂದು ಹೇಳಿದರು. ಅಲ್ಲದೆ ಯೋಗ ಹೊಸ ಅಭ್ಯಾಸವಲ್ಲ, ಇದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರೂ ನಮ್ಮ ಪುರಾತನ ಪದ್ಧತಿಯನ್ನು ಜೀವನ ಪರ್ಯಂತ ಪಾಲಿಸಬೇಕು ಎಂದು ಅವರು ಹೇಳಿದರು.
  • ಕೇರಳ: ತಿಳಿದಿರುವ ಸೋಂಕಿನ ಮೂಲದಿಂದಲೇ ಕೋವಿಡ್-19 ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 60ಕ್ಕೂ ಹೆಚ್ಚು ಹೊಸ ಪ್ರಕರಣಗಳು ಕಂಡುಬಂದಿರುವುದು ರಾಜ್ಯ ಸರ್ಕಾರವನ್ನು ಸಂದಿಗ್ಧದಲ್ಲಿ ಸಿಲುಕಿಸಿದೆ. ಈವರೆಗೆ 8 ಮಂದಿ ಮೃತಪಟ್ಟಿದ್ದು, ಬಹುತೇಕ ಪ್ರಕರಣಗಳಲ್ಲಿ ಮಲಪ್ಪುರಂನ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಯಾವುದೇ ಮೂಲ ತಿಳಿದುಬಂದಿಲ್ಲ. ರಾಜಧಾನಿಯಲ್ಲಿ ನಿನ್ನೆ ಆಟೋರಿಕ್ಷಾ ಚಾಲಕ ಮತ್ತು ಆತನ ಕುಟುಂಬದ ಇಬ್ಬರಿಗೆ ತಿಳಿದಿರುವ ಮೂಲದಿಂದಲೇ ಅಥವಾ ಪ್ರವಾಸದಿಂದಾಗಿ ಕೋವಿಡ್-19 ಪಾಸಿಟಿವ್ ಪತ್ತೆಯಾಗಿರುವುದು ಆರೋಗ್ಯ ಇಲಾಖೆಯನ್ನು ಜಾಗೃತಗೊಳಿಸಿದೆ. ಕೊಚ್ಚಿಯಲ್ಲಿ ಪೊಲೀಸ್ ಅಧಿಕಾರಿಯಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದ್ದು, ಆತನ ಸಂಪರ್ಕ ಪಟ್ಟಿಯಲ್ಲಿದ್ದ ಓರ್ವ ಹೈಕೋರ್ಟ್ ಜಡ್ಜ್ ಸ್ವಯಂ ಐಸೋಲೇಷನ್ ಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ನಿನ್ನೆ ಅತಿ ಹೆಚ್ಚಿನ ಸಂಖ್ಯೆಯ ಅಂದರೆ 118 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ನಿನ್ನೆ ಒಂದೇ ದಿನ 96 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 1,380 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನಾ ಜಿಲ್ಲೆಗಳಲ್ಲಿ 1,32,569 ಮಂದಿಯ ಮೇಲೆ ನಿಗಾ ಇಡಲಾಗಿದೆ.
  • ತಮಿಳುನಾಡು: ಪುದುಚೆರಿಯಲ್ಲಿ ಮಾಸ್ಕ್ ಉತ್ಪಾದನಾ ಕಂಪನಿಯ 16 ಉದ್ಯೋಗಿಗಳಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಕೇಂದ್ರಾಡಳಿತ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 338ಕ್ಕೆ ಏರಿಕೆಯಾಗಿದೆ. ಜೆಐಪಿಎಂಇಆರ್ ಪರೀಕ್ಷೆಗೆ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಜೂನ್ 21ರಂದು ಸ್ನಾತಕೋತ್ತರ ಪ್ರವೇಶ ಪರೀಕ್ಷೆಗೆ ನಾನಾ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಚೆನ್ನೈಗೆ ಆಗಮಿಸುತ್ತಿದ್ದಾರೆ. ಅವರು -ಪಾಸ್ ಗಳಿಗಾಗಿ ತೊಂದರೆ ಅನುಭವಿಸುತ್ತಿದ್ದು, ಹಲವರು ಕೋವಿಡ್-19 ಸಂಪರ್ಕ ಭಯದಲ್ಲಿದ್ದಾರೆ. ತಮಿಳುನಾಡು ಸರ್ಕಾರ ರಸ್ಟೋರೆಂಟ್ ಗಳಲ್ಲಿ ವಿನಾಯಿತಿ ನೀಡಿದ್ದು, ಕೋವಿಡ್-19 ನಿಯಂತ್ರಣಕ್ಕಾಗಿ ಜೂನ್ 30 ವರೆಗೆ ಕೇವಲ ಪಾರ್ಸಲ್ ಕೊಂಡೊಯ್ಯಲು ಅವಕಾಶ ಕಲ್ಪಿಸಿದೆ. 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಲಾಗುವುದು ಎಂದು ಡಿಜಿಇ ಸ್ಪಷ್ಟನೆ ನೀಡಿದ್ದಾರೆ. ಅಂಕಗಳನ್ನು ಏರುಪೇರು ಮಾಡುವ ಶಾಲೆಗಳಿಗೆ ಶಾಲಾ ಶಿಕ್ಷಣ ಸಚಿವರು ಎಚ್ಚರಿಕೆ ನೀಡಿದ್ದಾರೆ. ನಿನ್ನೆ 2115 ಹೊಸ ಪ್ರಕರಣಗಳು, 1630 ಗುಣಮುಖ ಮತ್ತು 41 ಸಾವು ಸಂಭವಿಸಿವೆ. ವರೆಗೆ ಒಟ್ಟು ಪ್ರಕರಣಗಳು 54449, ಸಕ್ರಿಯ ಪ್ರಕರಣಗಳು 23509, ಸಾವು: 666, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 16699.
  • ಕರ್ನಾಟಕ: ರಾಜ್ಯ ಸರ್ಕಾರ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಕ್ಲಿನಿಕಲ್ ಅಸೆಸ್ ಮೆಂಟ್ ಮತ್ತು ಸೋಂಕಿನ ಲಕ್ಷಣಗಳುಳ್ಳ ರೋಗಿಗಳ ಪ್ರವೇಶಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 8281 ರೋಗಿಗಳ ಪೈಕಿ ಈವರೆಗೆ 36 ರೋಗಿಗಳಿಗೆ ಮಾತ್ರ ವೆಂಟಿಲೇಟರ್ ಅಗತ್ಯವಿದೆ. ಮಾರ್ಚ್ 24ರಿಂದೀಚೆಗೆ ರಾಜ್ಯದಲ್ಲಿ 1.2 ಲಕ್ಷ ಲಾಕ್ ಡೌನ್ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಸರ್ಕಾರ, ಕರ್ನಾಟಕ ಹೈಕೋರ್ಟ್ ಗೆ ತಿಳಿಸಿದೆ. ಕರ್ನಾಟಕ ಪ್ರವಾಹ ಮುನ್ನೆಚ್ಚರಿಕೆಗೆ ಕ್ರಮಗಳನ್ನು ಕೈಗೊಂಡಿದ್ದು, ಸೂಕ್ಷ್ಮ ಪ್ರದೇಶಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್-19 ಪ್ರಕರಣಗಳು 8,281ಕ್ಕೆ ಏರಿಕೆಯಾಗಿದ್ದು, ಬೆಂಗಳೂರು ಒಂದರಲ್ಲೇ ಹೆಚ್ಚಿನ ಸೋಂಕಿತರಿದ್ದಾರೆ. ನಿನ್ನೆ 337 ಹೊಸ ಪ್ರಕರಣಗಳು, 230 ಮಂದಿ ಬಿಡುಗಡೆ, 10 ಸಾವು ಸಂಭವಿಸಿದೆ. ಒಟ್ಟು ಸಕ್ರಿಯ ಪ್ರಕರಣಗಳು 2943, ಸಾವು 124, ಗುಣಮುಖರಾದವರು 5210.
  • ಆಂಧ್ರಪ್ರದೇಶ: ರಾಜ್ಯದ ರಾಜ್ಯಪಾಲ ಬಿಸ್ವಭೂಷಣ್ ಹರಿಚಂದನ್ ಅವರು ಅಪರಿಮಿತ ಉತ್ಸಾಹ ಮತ್ತು ಉತ್ತಮ ಆರೋಗ್ಯಕ್ಕಾಗಿ ಯೋಗಾಭ್ಯಾಸ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯದ ನೇಕಾರರಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದವೈಎಸ್ಆರ್ ನೇಥನ್ನ ನೇಸ್ಥಾಮ್ಯೋಜನೆಯ ಎರಡನೇ ಹಂತಕ್ಕಾಗಿ ಆರ್ಥಿಕ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಯೋಜನೆ ಅಡಿ ಪ್ರತಿ ವರ್ಷ ಪ್ರತಿಯೊಂದು ನೇಕಾರ ಕುಟುಂಬಕ್ಕೆ 24,000 ರೂ. ಸಹಾಯಧನ ನೀಡಲಾಗುವುದು. ನಿನ್ನೆ ರಾಜ್ಯದಲ್ಲಿ 376 ಹೊಸ ಪ್ರಕರಣಗಳು ದೃಢಪಟ್ಟಿದ್ದು, 82 ಮಂದಿ ಗುಣಮುಖರಾಗಿದ್ದಾರೆ. 4 ಸಾವುಗಳು ಸಂಭವಿಸಿವೆ. ಒಟ್ಟು ಪ್ರಕರಣಗಳು 6230, ಸಕ್ರಿಯ ಪ್ರಕರಣಗಳು 3069, ಗುಣಮುಖರಾದವರು 3065, ಸಾವುಗಳು 96.
  • ತೆಲಂಗಾಣ: ತೆಲಂಗಾಣ ಆರೋಗ್ಯ ಇಲಾಖೆಯ ಕೋವಿಡ್-19 ಪರೀಕ್ಷೆಯನ್ನು ಚುರುಕುಗೊಳಿಸುವ ನಿರ್ಧಾರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರು ನಿರೀಕ್ಷಿತ ಮಟ್ಟದಲ್ಲಿ ಪರೀಕ್ಷೆಗೆ ಮಾದರಿಗಳನ್ನು ನೀಡಲು ಮುಂದೆ ಬರುತ್ತಿಲ್ಲ, ಜಿಎಚ್ಎಂಸಿ ವ್ಯಾಪ್ತಿಗೆ ಒಳಪಡುವ  ಮೂರು ಜಿಲ್ಲೆಗಳೂ ಸೇರಿ ಒಟ್ಟು ಐದು ಜಿಲ್ಲೆಗಳಲ್ಲಿ 50,000 ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಜೂನ್ 19 ವರೆಗೆ ಒಟ್ಟು ಪ್ರಕರಣಗಳು 6526, ಸಕ್ರಿಯ ಪ್ರಕರಣಗಳು 2976, ಸಾವು 198 ಹಾಗೂ ಗುಣಮುಖರಾದವರು 3352.
  • ಮಹಾರಾಷ್ಟ್ರ: ಪ್ರಸಕ್ತ ಕೋವಿಡ್-19 ರೋಗಿಗಳ ಸಂಖ್ಯೆ ರಾಜ್ಯದಲ್ಲಿ 1,24,331ಕ್ಕೆ ಏರಿಕೆಯಾಗಿದೆ. ಶುಕ್ರವಾರ ಸಂಜೆ ಬಿಡುಗಡೆ ಮಾಡಲಾದ ಇತ್ತೀಚಿನ ವರದಿಯಂತೆ 3,827 ಹೊಸ ರೋಗಿಗಳು ಸೇರ್ಪಡೆಯಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳು 55,651. ಮುಂಬೈನಲ್ಲಿ 1,269 ಪ್ರಕರಣಗಳು ಹಾಗೂ 114 ವರದಿಯಾಗಿವೆ. ಬೃಹನ್ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಸಾವಿರ ಹಾಸಿಗೆಗಳ ವಿಶೇಷ ಕೋವಿಡ್-19 ಆಸ್ಪತ್ರೆಯನ್ನು ಬ್ಯಾಕುಲಾದ ರಿಚರ್ಡ್ ಸನ್ ಮತ್ತು ಕೃದ್ದಾಸ್ ಆವರಣದಲ್ಲಿ ಸ್ಥಾಪಿಸಲಾಗಿದೆ. ಹೆಚ್ಚಾಗುತ್ತಿರುವ ಕೋವಿಡ್ ಸಂಖ್ಯೆಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆ ತಿಂಗಳಾಂತ್ಯದಲ್ಲಿ ಕಾರ್ಯಾರಂಭ ಮಾಡಲಿದೆ.
  • ಗುಜರಾತ್: ಈವರೆಗೆ ಒಟ್ಟು ಕೋವಿಡ್-19 ಪ್ರಕರಣಗಳು 26,198ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಿಂದೀಚೆಗೆ 540 ಹೊಸ ಪ್ರಕರಣ ದೃಢಪಟ್ಟಿದೆ. ಅಲ್ಲದೆ 27 ರೋಗಿಗಳು ಜೀವ ಕಳೆದುಕೊಂಡಿದ್ದು, ಇತ್ತೀಚಿನ ವರದಿಯ ಪ್ರಕಾರ ಒಟ್ಟು ಕೋವಿಡ್-19ನಿಂದಾಗಿ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 1619ಕ್ಕೆ ಏರಿಕೆಯಾಗಿದೆ.
  • ರಾಜಸ್ಥಾನ: ಇಂದು ಬೆಳಗ್ಗೆ 158 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 14,314ಕ್ಕೆ ಏರಿಕೆಯಾಗಿದ್ದು, 2860 ಸಕ್ರಿಯ ಪ್ರಕರಣಗಳಾಗಿವೆ. ಆದರೆ ರಾಜ್ಯದಲ್ಲಿ ಈವರೆಗೆ 11,121 ರೋಗಿಗಳು ಗುಣಮುಖರಾಗಿದ್ದು, 333 ಮಂದಿ ಸಾವನ್ನಪ್ಪಿದ್ದಾರೆ. ಬಹುತೇಕ ಹೊಸ ಪ್ರಕರಣಗಳು ಧೋಲಾಪುರ್ ಜಿಲ್ಲೆ ಮತ್ತು ಆನಂತರ ಜೈಪುರ್ ಮತ್ತು ಭರತ್ ಪುರ್ ಜಿಲ್ಲೆಗಳಲ್ಲಿ ಕಂಡುಬಂದಿವೆ.
  • ಮಧ್ಯಪ್ರದೇಶ: ರಾಜ್ಯದಲ್ಲಿ ಹೊಸದಾಗಿ 156 ಕೋವಿಡ್-19 ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 11,582ಕ್ಕೆ ಏರಿಕೆಯಾಗಿದೆ. ಹೊಸದಾಗಿ 9  ಮಂದಿ ಸಾವನ್ನಪ್ಪಿರುವುದರಿಂದ ಒಟ್ಟು ಸಾವಿನ ಸಂಖ್ಯೆ 495ಕ್ಕೆ ಹೆಚ್ಚಳವಾಗಿದೆ. ಇಂದೋರ್ ಮತ್ತು ಭೂಪಾಲ್ ನಲ್ಲಿ ತಲಾ 55 ಹೊಸ ಪ್ರಕರಣಗಳು ಕಂಡುಬಂದಿವೆ. ಭೂಪಾಲ್ ನಲ್ಲಿ ವಾರಾಂತ್ಯದ ಲಾಕ್ ಡೌನ್ ಆಚರಿಸಲಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅತ್ಯವಶ್ಯಕ ವಸ್ತುಗಳ ಅಂಗಡಿ ಮಳಿಗೆಗಳು ಹೊರತುಪಡಿಸಿದರೆ ಇತರೆ ಅಂಗಡಿ ಮಳಿಗೆಗಳು ನಗರದಲ್ಲಿ ಶನಿವಾರ ಮತ್ತು ಭಾನುವಾರ ತೆರೆದಿರುವುದಿಲ್ಲ.
  • ಛತ್ತೀಸ್ ಗಢ: ರಾಜ್ಯದಲ್ಲಿ ಶುಕ್ರವಾರ 70 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 2018ಕ್ಕೆ ಏರಿಕೆಯಾಗಿದೆ. ಪೈಕಿ 703 ಪ್ರಕರಣಗಳು ಸಕ್ರಿಯವಾಗಿವೆ.
  • ಗೋವಾ: ಗೋವಾದಲ್ಲಿ ಹೊಸದಾಗಿ 20 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 725ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 607 ಸಕ್ರಿಯ ಪ್ರಕರಣಗಳಿವೆ.

 

***


(Release ID: 1633517) Visitor Counter : 207