PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 17 JUN 2020 6:45PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

Coat of arms of India PNG images free download

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಕೋವಿಡ್ -19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್: ಚೇತರಿಕೆ ದರ  ಶೇ.52.8 ಕ್ಕೆ ಏರಿಕೆ

ಕಳೆದ 24 ಗಂಟೆಗಳಲ್ಲಿ 6922 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದೆ. ಒಟ್ಟು 1,86,934 ರೋಗಿಗಳನ್ನು ಈವರೆಗೆ ಗುಣಪಡಿಸಲಾಗಿದೆ. ಚೇತರಿಕೆ ದರ ಶೇ.52.80 ಕ್ಕೆ ಏರಿದೆ. ಪ್ರಸ್ತುತ, 1,55,227 ಸಕ್ರಿಯ ಪ್ರಕರಣಗಳು ವೈದ್ಯಕೀಯ ಮೇಲ್ವಿಚಾರಣೆಯಲ್ಲಿವೆ.  ಕೋವಿಡ್ -19ರ ಪರೀಕ್ಷೆಗೆ ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆಯನ್ನು 674 ಕ್ಕೆ ಮತ್ತು ಖಾಸಗಿ ಪ್ರಯೋಗಾಲಯಗಳನ್ನು 250 (ಒಟ್ಟು924) ಕ್ಕೆ ಹೆಚ್ಚಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1,63,187 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇಲ್ಲಿಯವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 60,84,256.

ವಿವರಗಳಿಗಾಗಿ: https://pib.gov.in/PressReleasePage.aspx?PRID=1632051

ಅನ್ಲಾಕ್ 1.0 ನಂತರದ ಪರಿಸ್ಥಿತಿ ಕುರಿತು  ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿಯವರ ಸಂವಾದದ ಎರಡನೇ ಭಾಗ

ಅನ್ಲಾಕ್ 1.0 ನಂತರದ ಪರಿಸ್ಥಿತಿ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಯೋಜನೆ ಕುರಿತು ಚರ್ಚಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮುಖ್ಯಮಂತ್ರಿಗಳೊಂದಿಗೆ ಎರಡು ದಿನಗಳ ಸಂವಾದದ ಎರಡನೇ ಭಾಗವನ್ನು ಇಂದು ನಡೆಸಿದರು.

ಕೆಲವು ದೊಡ್ಡ ರಾಜ್ಯಗಳು ಮತ್ತು ನಗರಗಳಲ್ಲಿ ವೈರಸ್ ಹರಡುವಿಕೆ ಹೆಚ್ಚಿರುವುದರ ಬಗ್ಗೆ ಪ್ರಧಾನಿ ಗಮನಿಸಿದರು. ಹೆಚ್ಚಿನ ಜನ ದಟ್ಟಣೆ, ದೈಹಿಕ ದೂರವನ್ನು ಕಾಪಾಡಿಕೊಳ್ಳುವಲ್ಲಿನ ತೊಂದರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರ ದೈನಂದಿನ ಓಡಾಟವು ಪರಿಸ್ಥಿತಿಯನ್ನು ಸವಾಲಿನಂತೆ ಮಾಡಿದೆ, ಆದರೂ ನಾಗರಿಕರ ತಾಳ್ಮೆ, ಆಡಳಿತದ ಸಿದ್ಧತೆ ಮತ್ತು ಕೊರೊನಾ ಯೋಧರ ಸಮರ್ಪಣೆಯ ಮೂಲಕ ವೈರಸ್ ಹರಡುವಿಕೆಯನ್ನು ನಿಯಂತ್ರಣದಲ್ಲಿಡಲಾಗಿದೆ. ಸಮಯೋಚಿತ ಪತ್ತೆ, ಚಿಕಿತ್ಸೆ ಮತ್ತು ವರದಿ ಮಾಡುವಿಕೆಯ ಮೂಲಕ ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದರು. ಲಾಕ್‌ಡೌನ್ ಸಮಯದಲ್ಲಿ ಜನರು ತೋರಿಸಿದ ಶಿಸ್ತು ವೈರಸ್‌ನ ತೀವ್ರ ಬೆಳವಣಿಗೆಯನ್ನು ತಡೆದಿದೆ ಎಂದು ಅವರು ಹೇಳಿದರು. ಲಾಕ್ ಡೌನ್ ವದಂತಿಗಳ ವಿರುದ್ಧ ಹೋರಾಡುವ ಅಗತ್ಯತೆಯ ಬಗ್ಗೆ ಮಾತನಾಡಿದ ಅವರು, ದೇಶವು ಈಗ ಅನ್ ಲಾಕಿಂಗ್ ಹಂತದಲ್ಲಿದೆ ಎಂದರು. ಅನ್ಲಾಕ್ನ 2 ನೇ ಹಂತದ ಬಗ್ಗೆ ಮತ್ತು ಜನರಿಗೆ ಆಗುವ ಹಾನಿಯನ್ನು ಕಡಿಮೆ ಮಾಡುವ ಬಗ್ಗೆ ಈಗ ನಾವು ಯೋಚಿಸಬೇಕಾಗಿದೆ ಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleasePage.aspx?PRID=1632116

ಮುಖ್ಯಮಂತ್ರಿಗಳೊಂದಿಗಿನ ವರ್ಚುವಲ್ ಸಭೆಯಲ್ಲಿ ಪ್ರಧಾನ ಮಂತ್ರಿಯವರ ಆರಂಭಿಕ ಮಾತುಗಳು

ವಿವರಗಳಿಗಾಗಿ: https://pib.gov.in/PressReleasePage.aspx?PRID=1632069

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಅವರ ನಿರ್ದೇಶನದಂತೆ, ದೆಹಲಿಯ ಎಲ್ಲಾ ಆಸ್ಪತ್ರೆಗಳು ಕೋವಿಡ್-19 ರಿಂದ ಮೃತಪಟ್ಟವರ ಕೊನೆಯ ವಿಧಿ ವಿಧಾನಗಳನ್ನು ತ್ವರಿತಗೊಳಿಸಿವೆ

ಜೂನ್ 14 ರಂದು ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀ ಅಮಿತ್ ಷಾ ಅವರು ನೀಡಿದ ನಿರ್ದೇಶನಗಳಂತೆ, ದೆಹಲಿಯ ಎಲ್ಲಾ ಆಸ್ಪತ್ರೆಗಳು (ಕೇಂದ್ರ ಮತ್ತು ರಾಜ್ಯ ಸರ್ಕಾರಿ ಮತ್ತು ಖಾಸಗಿ) ಕೋವಿಡ್-19 ರಿಂದ ಮೃತಪಟ್ಟ  ರೋಗಿಗಳ ಅಂತ್ಯಕ್ರಿಯೆ / ಕೊನೆಯ ವಿಧಿ ವಿಧಾನಗಳನ್ನು ವೇಗಗೊಳಿಸಿವೆ. ಆಸ್ಪತ್ರೆಯ ಸಿಬ್ಬಂದಿಯು ಮೃತರ ಕುಟುಂಬಗಳು ಮತ್ತು ಸಂಬಂಧಿಕರ ಒಪ್ಪಿಗೆ / ಉಪಸ್ಥಿತಿಯೊಂದಿಗೆ ಬಹುತೇಕ ಮೃತ ರೋಗಿಗಳ ಕೊನೆಯ ವಿಧಿವಿಧಾನಗಳನ್ನು ಮಾಡಿದರು.

ವಿವರಗಳಿಗಾಗಿ: https://pib.gov.in/PressReleasePage.aspx?PRID=1631964

ಭಾರತೀಯ ರೈಲ್ವೆಯಿಂದ 5 ರಾಜ್ಯಗಳಲ್ಲಿ ಕೋವಿಡ್ ಆರೈಕೆಗಾಗಿ 960 ಬೋಗಿಗಳ ನಿಯೋಜನೆ

ಕೋವಿಡ್ -19ರ ವಿರುದ್ಧದ ಹೋರಾಟವನ್ನು ಮುಂದುವರೆಸಲು, ಭಾರತೀಯ ರೈಲ್ವೆಯು ರಾಜ್ಯ ಸರ್ಕಾರಗಳ ಆರೋಗ್ಯ ರಕ್ಷಣಾ ಪ್ರಯತ್ನಗಳಿಗೆ ಪೂರಕವಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತೀಯ ರೈಲ್ವೆಯು ತನ್ನ 5231 ಕೋವಿಡ್ ಆರೈಕೆಯ ಬೋಗಿಗಳನ್ನು ರಾಜ್ಯಗಳಿಗೆ ಒದಗಿಸಲು ಸಜ್ಜಾಗಿದೆ. ವಲಯ ರೈಲ್ವೆಗಳು ಈ ಬೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಿವೆ. ಇವುಗಳನ್ನು ಅತಿ ಸೌಮ್ಯ  ಹಾಗೂ ಸೌಮ್ಯ ಪ್ರಕರಣಗಳಿಗೆ ಬಳಸಲಾಗುತ್ತದೆ. ಇದುವರೆಗೆ, ಭಾರತೀಯ ರೈಲ್ವೆಯು 5 ರಾಜ್ಯಗಳಲ್ಲಿ- ದೆಹಲಿ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶ- ಒಟ್ಟು 960 ಕೋವಿಡ್ ಆರೈಕೆ ಬೋಗಿಗಳನ್ನು ನಿಯೋಜಿಸಿದೆ. ಒಟ್ಟು 960 ಕೋವಿಡ್ ಆರೈಕೆ ಬೋಗಿಗಳ ಪೈಕಿ ದೆಹಲಿಯಲ್ಲಿ 503, ಆಂಧ್ರಪ್ರದೇಶದಲ್ಲಿ 20, ತೆಲಂಗಾಣದಲ್ಲಿ 60, ಉತ್ತರಪ್ರದೇಶದಲ್ಲಿ 372 ಮತ್ತು ಮಧ್ಯಪ್ರದೇಶದಲ್ಲಿ 5 ಬೋಗಿಗಳನ್ನು ನಿಯೋಜಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=163211

ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಸರ್ಕಾರಿ ಸಂಸ್ಥೆಗಳ ಗೋಧಿ ಖರೀದಿ

ರೈತರಿಂದ ಸರ್ಕಾರಿ ಸಂಸ್ಥೆಗಳ ಗೋಧಿ ಖರೀದಿಯು 16.06.2020 ರಂದು ಸಾರ್ವಕಾಲಿಕ ದಾಖಲೆಯನ್ನು ಮುಟ್ಟಿದೆ.  ಅಂದು ಕೇಂದ್ರದ ಒಟ್ಟು ಸಂಗ್ರಹವು 382 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಯನ್ನು ತಲುಪಿದ್ದು, 2012-13ರ ಅವಧಿಯಲ್ಲಿ ಸಾಧಿಸಿದ 381.48 ಲಕ್ಷ ಮೆಟ್ರಿಕ್ ಟನ್ ದಾಖಲೆಯನ್ನು ಮೀರಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಇಡೀ ದೇಶವು ಲಾಕ್‌ಡೌನ್‌ನಲ್ಲಿದ್ದಾಗ ಇದನ್ನು ಸಾಧಿಸಲಾಗಿದೆ. ಈ ವರ್ಷ 127 ಲಕ್ಷ ಮೆಟ್ರಿಕ್ ಟನ್ ಗಳನ್ನು ಖರೀದಿಸಿರುವ ಪಂಜಾಬ್ ಅನ್ನು ಮೀರಿಸಿರುವ ಮಧ್ಯಪ್ರದೇಶವು 129 ಲಕ್ಷ ಮೆಟ್ರಿಕ್ ಟನ್ ಗೋಧಿಯೊಂದಿಗೆ ಕೇಂದ್ರಕ್ಕೆ ಅತಿದೊಡ್ಡ ಕೊಡುಗೆ ನೀಡಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1632102

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಶ್ರೀ ಜಸ್ಟಿನ್ ಟ್ರುಡೊ ನಡುವೆ ದೂರವಾಣಿ ಮಾತುಕತೆ

ಕೆನಡಾ ಪ್ರಧಾನ ಮಂತ್ರಿ ಶ್ರೀ ಜಸ್ಟಿನ್ ಟ್ರುಡೊ ಅವರೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದೂರವಾಣಿ ಮಾತುಕತೆ ನಡೆಸಿದರು. ಉಭಯ ನಾಯಕರು ತಮ್ಮ ದೇಶಗಳಲ್ಲಿ ಕೋವೊಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಪರಿಸ್ಥಿತಿಯ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡರು ಮತ್ತು ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಅಂತರರಾಷ್ಟ್ರೀಯ ಸಹಯೋಗದ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಭಾರತ-ಕೆನಡಾ ಸಹಭಾಗಿತ್ವವು ಕೋವಿಡ್ ನಂತರದ ಜಗತ್ತಿನಲ್ಲಿ ಜಾಗತಿಕವಾಗಿ ಮಾನವೀಯ ಮೌಲ್ಯಗಳನ್ನು ಮುನ್ನಡೆಸುವುದೂ ಸೇರಿದಂತೆ ಒಳ್ಳೆಯತನಕ್ಕೆ ಒಂದು ಶಕ್ತಿಯಾಗಬಹುದು ಎಂದು ಅವರು ಒಪ್ಪಿಕೊಂಡರು. ಡಬ್ಲ್ಯುಎಚ್‌ಒ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳನ್ನು ಬಲಪಡಿಸುವ ಅಗತ್ಯವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಆರೋಗ್ಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕುರಿತು ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಿಕಟವಾಗಿ ಕೆಲಸ ಮಾಡಲು ಒಪ್ಪಿದರು.

ವಿವರಗಳಿಗಾಗಿ: https://pib.gov.in/PressReleasePage.aspx?PRID=1632004

ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ ಯುಜಿ, ಜುಲೈ - 2020ನ್ನು ಮುಂದೂಡುವ ನಕಲಿ ಸಾರ್ವಜನಿಕ ಸೂಚನೆಯ ವದಂತಿ ಬಗ್ಗೆ ಎನ್ಟಿಎ ಸ್ಪಷ್ಟನೆ

2020 ರ ಜುಲೈನಲ್ಲಿ ನಡೆಯಬೇಕಿರುವ ರಾಷ್ಟ್ರೀಯ ಅರ್ಹತೆ ಕಮ್ ಪ್ರವೇಶ ಪರೀಕ್ಷೆ (ನೀಟ್) ಯುಜಿ ಪರೀಕ್ಷೆಯನ್ನು ಮುಂದೂಡಿರುವುದಾಗಿ 15.06.2020ರ ದಿನಾಂಕದ ನಕಲಿ ಸಾರ್ವಜನಿಕ ಪ್ರಕಟಣೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಗಮನಕ್ಕೆ ಬಂದಿದೆ. ಎನ್‌ಟಿಎ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅಭ್ಯರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವ ಉದ್ದೇಶದ ಇಂತಹ ನಕಲಿ ನೋಟಿಸ್‌ನ ಮೂಲವನ್ನು ಪರಿಶೀಲಿಸುತ್ತಿದೆ. ಇಂತಹ ಸಾರ್ವಜನಿಕ ವಿರೋಧಿ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎನ್‌ಟಿಎ ಅಥವಾ ಸಂಬಂಧಪಟ್ಟ ಆಡಳಿತವು ಇದುವರೆಗೆ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಎಲ್ಲಾ ಅಭ್ಯರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1632059

ಜನೌಷಧಿ ಕೇಂದ್ರಗಳಲ್ಲಿ ಪ್ರತಿ ಪ್ಯಾಡ್ಗೆ 1 / - ರೂ. ನಂತೆ ಸ್ಯಾನಿಟರಿ ನ್ಯಾಪ್ ಕಿನ್ ಲಭ್ಯ

ಪ್ರಸ್ತುತ ಸನ್ನಿವೇಶವನ್ನು ಸಾಮಾಜಿಕ ಅಭಿಯಾನವೆಂದು ಪರಿಗಣಿಸಿ ಜನೌಷಧಿ ಸುವಿಧ ಸ್ಯಾನಿಟರಿ ನ್ಯಾಪ್ ಕಿನ್ಗಳು ದೇಶದಾದ್ಯಂತ 6300 ಕ್ಕೂ ಹೆಚ್ಚು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ -ಪಿಎಂಬಿಜೆಪಿ ಕೇಂದ್ರಗಳಲ್ಲಿ ಪ್ರತೀ ಪ್ಯಾಡ್‌ನಲ್ಲಿ 1 ರೂ.ಗೆಲಭ್ಯವಾಗುತ್ತಿವೆ. ಇದೇ ರೀತಿಯ ಸ್ಯಾನಿಟರಿ ನ್ಯಾಪ್ ಕಿನ್ ಮಾರುಕಟ್ಟೆ ಬೆಲೆ ಸುಮಾರು 3 ರೂ. ಗಳಿಂದ 8 ರೂ. ಗಳಿದೆ. ಕೋವಿಡ್-19 ಸಾಂಕ್ರಾಮಿಕದ ಈ ಸವಾಲಿನ ಸಮಯದಲ್ಲಿ ಪಿಎಂಬಿಜೆಪಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಮತ್ತು ಅಗತ್ಯ ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಾತ್ರಿಪಡಿಸುತ್ತಿವೆ. ಜನೌಷಧಿ ಸುವಿಧ ಸ್ಯಾನಿಟರಿ ನ್ಯಾಪ್ ಕಿನ್ಗಳು ಎಲ್ಲಾ ಕೇಂದ್ರಗಳಲ್ಲೂ ಲಭ್ಯವಿವೆ. ಪಿಎಂಬಿಜೆಪಿ ಅಡಿಯಲ್ಲಿ, 2020 ರ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 1.42 ಕೋಟಿಗೂ ಹೆಚ್ಚು ಪ್ಯಾಡ್‌ಗಳನ್ನು ಮಾರಾಟ ಮಾಡಲಾಗಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1632082

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: ಪಂಜಾಬ್ ಕೋವಿಡ್ ಮೈಕ್ರೊ ಕಂಟೈನ್ಮೆಂಟ್ ಮತ್ತು ಮನೆ-ಮನೆ ಕಣ್ಗಾವಲು ಕಾರ್ಯತಂತ್ರವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಇತರ ಎಲ್ಲ ರಾಜ್ಯಗಳೂ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಹೇಳಿದ್ದಾರೆ. ಪಂಜಾಬ್ನಲ್ಲಿ ಸಾಂಕ್ರಾಮಿಕ ರೋಗವನ್ನು ಗಮನಾರ್ಹವಾಗಿ ನಿಯಂತ್ರಿಸಲು ಇದು ಸಹಾಯ ಮಾಡುತ್ತಿದೆ. ಸಾಂಕ್ರಾಮಿಕ ರೋಗವನ್ನು ಮತ್ತಷ್ಟು ನಿಭಾಯಿಸಲು ರಾಜ್ಯದ ಸನ್ನದ್ಧತೆಯ ಕುರಿತು, ಸೌಮ್ಯ ಲಕ್ಷಣಗಳಿರುವ ರೋಗಿಗಳಿಗೆ ಒಂದನೇ ಹಂತದ  ಕೋವಿಡ್ ಆರೈಕೆ ಕೇಂದ್ರಗಳಲ್ಲಿ 10-15,000 ಹಾಸಿಗೆಗಳ ಜೊತೆಗೆ ಸರ್ಕಾರದ 2 ಮತ್ತು 3 ನೇ ಹಂತದ ಸೌಲಭ್ಯಗಳಲ್ಲಿ 5000 ಪ್ರತ್ಯೇಕ ಹಾಸಿಗೆಗಳು ಸಿದ್ಧವಾಗಿವೆ ಎಂದು ಮುಖ್ಯಮಂತ್ರಿಯವರು ಪ್ರಧಾನಿಗೆ ಮಾಹಿತಿ ನೀಡಿದರು. ಅಗತ್ಯವಿದ್ದಲ್ಲಿ ಒಂದನೇ ಹಂತದ ಹಾಸಿಗೆಗಳನ್ನು 30,000 ಕ್ಕೆ ಹೆಚ್ಚಿಸಬಹುದು, ತೃತೀಯ ಹಂತದ ಆರೈಕೆಗಾಗಿ, ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಗಳ ಭಾಗವಹಿಸುವಿಕೆಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.
  • ಹರಿಯಾಣ: ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜಯ್) ಯಲ್ಲಿ ಕೋವಿಡ್ -19 ರೋಗಿಗಳನ್ನು ಸೇರಿಸಲಾಗಿದೆ ಎಂದು ಹರಿಯಾಣ ಆರೋಗ್ಯ ಸಚಿವರು ತಿಳಿಸಿದ್ದಾರೆ. ಇದರೊಂದಿಗೆ, ರಾಜ್ಯ ರೋಗ ಪ್ರಾಧಿಕಾರವು ರೋಗಿಗಳ ಚಿಕಿತ್ಸೆಗಾಗಿ ವೈದ್ಯಕೀಯ ನಿರ್ವಹಣಾ ಪ್ಯಾಕೇಜ್ ಅನ್ನು ಶೇಕಡಾ 20 ರಷ್ಟು ಹೆಚ್ಚಿಸಿದೆ, ಇದರಿಂದಾಗಿ ಅಂತಹ ರೋಗಿಗಳು ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಬಹುದು.
  • ಹಿಮಾಚಲ ಪ್ರದೇಶ: ಕೊರೊನಾವೈರಸ್ಇಡೀ ಪ್ರಪಂಚದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ವೈರಸ್ ನಮ್ಮ ಕಾರ್ಯತಂತ್ರಗಳು ಮತ್ತು ಅಭಿವೃದ್ಧಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಪುನರ್ವಿಮರ್ಶಿಸುವಂತೆ ಮತ್ತು ಮರು ರೂಪಿಸುವಂತೆ ಮಾಡಿದೆ ಎಂದು ಅವರು ಹೇಳಿದರು. ಲಾಕ್ಡೌನ್ ಆರಂಭಿಕ ಹಂತದಲ್ಲಿ ರಾಜ್ಯದ ಲಕ್ಷಾಂತರ ಜನರು, ವಿಶೇಷವಾಗಿ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಸಂಕಷ್ಟದಲ್ಲಿದ್ದರು ಎಂದು ಅವರು ಹೇಳಿದರು. ವಿದ್ಯಾರ್ಥಿಗಳನ್ನು ಮತ್ತು ರಾಜ್ಯದ ಜನರನ್ನು ಮರಳಿ ಕರೆತರುವುದು ರಾಜ್ಯ ಸರ್ಕಾರದ ನೈತಿಕ ಕರ್ತವ್ಯವಾಗಿತ್ತು ಎಂದು ಹೇಳಿದರು. ಅಂತಹ ಜನರನ್ನು ಸರ್ಕಾರ ಬಸ್ಸುಗಳು ಮತ್ತು ಹದಿಮೂರು ವಿಶೇಷ ರೈಲುಗಳ ಮೂಲಕ ಮರಳಿ ಕರೆತಂದಿದೆ ಎಂದು ಹೇಳಿದರು. ದೇಶದ ಇತರ ಭಾಗಗಳಿಂದ ಬರುವ ಎಲ್ಲ ಜನರನ್ನು ಸಾಂಸ್ಥಿಕ ಅಥವಾ ಮನೆ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಪ್ರಾರಂಭಿಸಿರುವ ಸಕ್ರಿಯ ಪ್ರಕರಣ ಪತ್ತೆ ಅಭಿಯಾನವು ಐಎಲ್ ರೋಗಲಕ್ಷಣಗಳು ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಜನರನ್ನು ಗುರುತಿಸುವಲ್ಲಿ ರಾಜ್ಯಕ್ಕೆ ನೆರವಾಗಿದೆ ಎಂದು ಅವರು ಹೇಳಿದರು.
  • ಮಹಾರಾಷ್ಟ್ರ: ಮಂಗಳವಾರ 2,701 ಹೊಸ ಕೋವಿಡ್ -19 ಸೋಂಕಿತರ ವರದಿಯಾಗಿವೆ, ಇದು ರಾಜ್ಯದ ಕೊರೊನಾವೈರಸ್ ಸೋಂಕಿತರ ಸಂಖ್ಯೆಯನ್ನು 1,13,445 ಕ್ಕೆ ಏರಿಸಿದೆ, ಪೈಕಿ ಸಕ್ರಿಯ ಪ್ರಕರಣಗಳು 50,044. ಅಲ್ಲದೆ, 1,802 ಚೇತರಿಕೆಯ ವರದಿಯಾಗಿದ್ದು, ಚೇತರಿಸಿಕೊಂಡ ಒಟ್ಟು ರೋಗಿಗಳ ಸಂಖ್ಯೆ 57,851 ಕ್ಕೆ ಏರಿದೆ; ಮಂಗಳವಾರ 81 ಸಾವುಗಳು ವರದಿಯಾಗಿವೆ. ಗ್ರೇಟರ್ ಮುಂಬೈ ಪ್ರದೇಶದಲ್ಲಿ ಮಂಗಳವಾರ 941 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 60,142 ಕ್ಕೆ ತಲುಪಿದೆ.
  • ಗುಜರಾತ್: ಕಳೆದ 24 ಗಂಟೆಗಳಲ್ಲಿ ರಾಜ್ಯದ 19 ಜಿಲ್ಲೆಗಳಿಂದ 524 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 24,628 ಕ್ಕೆ ತಲುಪಿದೆ. ಅಲ್ಲದೆ, ಆಸ್ಪತ್ರೆಗಳಿಂದ 418 ಜನರನ್ನು ಬಿಡುಗಡೆ ಮಾಡಲಾಗಿದ್ದು, ಗುಣಮುಖರಾದವರ ಒಟ್ಟು ಸಂಖ್ಯೆ 17,090 ಕ್ಕೆ ಹೆಚ್ಚಿದೆ. ಇನ್ನೂ 28 ರೋಗಿಗಳು ಸೋಂಕಿಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 1,534 ಕ್ಕೆ ಏರಿದೆ. ಹೆಚ್ಚು ಹಾನಿಗೊಳಗಾದ ಅಹಮದಾಬಾದ್ ಜಿಲ್ಲೆಯೊಂದರಲ್ಲಿಯೇ 332 ಹೊಸ ಪ್ರಕರಣಗಳು ಮತ್ತು 21 ಸಾವುಗಳು ವರದಿಯಾಗಿವೆ.
  • ರಾಜಸ್ಥಾನ: ಇಂದು ರಾಜ್ಯದಲ್ಲಿ 122 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಕೋವಿಡ್-19 ಸೋಂಕಿತರ ಸಂಖ್ಯೆ 13,338 ಕ್ಕೆ ಏರಿದೆ. ಅಲ್ಲದೆ, ಇಲ್ಲಿಯವರೆಗೆ 10125 ರೋಗಿಗಳನ್ನು ಗುಣಪಡಿಸಲಾಗಿದೆ. ಹೊಸ ಪ್ರಕರಣಗಳಲ್ಲಿ ಹೆಚ್ಚಿನವು ಭರತ್ಪುರ ಜಿಲ್ಲೆಯಿಂದ ವರದಿಯಾಗಿವೆ. ನಂತರದ ಸ್ಥಾನದಲ್ಲಿ ಪಾಲಿ ಮತ್ತು ಚುರು ಜಿಲ್ಲೆಗಳಿವೆ. ರಾಜಸ್ಥಾನ ಸರ್ಕಾರವು ಅಂತರರಾಜ್ಯ ಸಂಚಾರಕ್ಕೆ ವಿಧಿಸಲಾದ ಎಲ್ಲಾ ಷರತ್ತುಗಳನ್ನು ತೆಗೆದುಹಾಕಿರುವುದರಿಂದ, ಈಗ ಯಾವುದೇ ವ್ಯಕ್ತಿಗೆ ರಾಜ್ಯವನ್ನು ಪ್ರವೇಶಿಸಲು ಮತ್ತು ಇನ್ನೊಂದು ರಾಜ್ಯಕ್ಕೆ ಭೇಟಿ ನೀಡಲು ಯಾವುದೇ ಪಾಸ್ ಅಥವಾ ಎನ್ಒಸಿ ಅಗತ್ಯವಿಲ್ಲ. ಆದರೂ, ರಾಜ್ಯವನ್ನು ಪ್ರವೇಶಿಸುವಾಗ ಮತ್ತು ಬೇರೆ ರಾಜ್ಯಕ್ಕೆ ಹೋಗುವಾಗ ಜನರ ತಪಾಸಣೆ ಮುಂದುವರಿಯುತ್ತದೆ.
  • ಮಧ್ಯಪ್ರದೇಶ: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 134 ಹೊಸ ಪ್ರಕರಣಗಳು ಸೇರ್ಪಡೆಯಾಗುವುದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11,069 ಕ್ಕೆ ಏರಿದೆ. ಅಲ್ಲದೆ, 11 ಕೋವಿಡ್-19 ಸಂಬಂಧಿತ ಸಾವುಗಳು ವರದಿಯಾಗಿದ್ದು, ರಾಜ್ಯದ ಸಾವಿನ ಸಂಖ್ಯೆ 476 ಕ್ಕೆ ತಲುಪಿದೆ. ಈವರೆಗೆ 8,152 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಮತ್ತು 31 ಜಿಲ್ಲೆಗಳಲ್ಲಿ ಮಂಗಳವಾರ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಭೋಪಾಲ್ ನಲ್ಲಿ 48, ಇಂದೋರ್ನಲ್ಲಿ 21 ಹೊಸ ಪ್ರಕರಣಗಳನ್ನು ವರದಿಯಾಗಿದ್ದು, ಇವು ದೇಶದ ಕೋವಿಡ್-19 ಹಾಟ್ಸ್ಪಾಟ್ಗಳಲ್ಲಿ ಸೇರಿವೆ.
  • ಛತ್ತೀಸ್ಗಢ: 31 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚೇತರಿಸಿಕೊಂಡ 102 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಬಲೋದಾಬಜಾರ್ ಜಿಲ್ಲೆಯಿಂದ ಮಂಗಳವಾರ ಗರಿಷ್ಠ ಸಂಖ್ಯೆಯ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಮಂಗಳವಾರದವರೆಗೆ ರಾಜ್ಯದಲ್ಲಿ ಒಟ್ಟು 1784 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದರೆ, ಒಟ್ಟು 842 ಸಕ್ರಿಯ ರೋಗಿಗಳಿದ್ದಾರೆ.
  • ಗೋವಾ: ಮಂಗಳವಾರ 37 ಹೊಸ ಪಾಸಿಟಿವ್ ಪ್ರಕರಣಗಳನ್ನು ಗುರುತಿಸಲಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 629 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 544 ಆಗಿದೆ. ಇತ್ತೀಚೆಗೆ ಪ್ರಕರಣಗಳಲ್ಲಿ ಉಲ್ಬಣ ಕಂಡ ರಾಜ್ಯದ ಬೈನಾ ಪ್ರದೇಶವನ್ನು ಕಂಟೈನ್ ಮೆಂಟ್ ವಲಯವನ್ನಾಗಿ ಮಾಡುವ ಸಾಧ್ಯತೆಯಿದೆ.
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ, ಇಟಾನಗರ ಮೂಲದ ಸಾಂಗೋ ರೆಸಾರ್ಟ್ ಕೋವಿಡ್-19 ಕರ್ತವ್ಯದಲ್ಲಿರುವ ಪೊಲೀಸರ ಆಹಾರ ಹಾಗೂ ವಾಸ್ತವ್ಯದ ವೆಚ್ಚವನ್ನು ಪಡೆಯದಿರಲು ನಿರ್ಧರಿಸಿದೆ. ರಾಜ್ಯ ಮಕ್ಕಳ ಸಂರಕ್ಷಣಾ ಸಂಘ ಮತ್ತು ಮಕ್ಕಳ ಕಲ್ಯಾಣ ಸಮಿತಿಗಳು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜಿಲ್ಲೆಗಳು ಪೂರ್ವಭಾವಿ ಪಾತ್ರವನ್ನು ವಹಿಸಬೇಕು ಎಂದು ಮಕ್ಕಳ ಹಕ್ಕುಗಳ ಸಂರಕ್ಷಣೆಯ ರಾಷ್ಟ್ರೀಯ ಆಯೋಗದ ಸದಸ್ಯೆ ರೋಸಿ ತಬಾ ಹೇಳಿದ್ದಾರೆ.
  • ಅಸ್ಸಾಂ: ಗುವಾಹಟಿಯ ಎನ್ಎಚ್ ಪಾರ್ಕಿಂಗ್ ಸ್ಥಳದಲ್ಲಿ ಅಸ್ಸಾಂ ಉದ್ದೇಶಿತ ಕಣ್ಗಾವಲು ಕಾರ್ಯಕ್ರಮಕ್ಕೆ (ಎಟಿಎಸ್ಪಿ) ಇಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದಡಿ ನಗರದಲ್ಲಿ ಒಟ್ಟು 50,000 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದಾರೆ.
  • ಮಣಿಪುರ: ರಾಜ್ಯ ಕೋವಿಡ್-19 ತರಬೇತಿ ತಂಡವು 522 ವೈದ್ಯರು, 907 ದಾದಿಯರು ಮತ್ತು 2500 ಕ್ಕೂ ಹೆಚ್ಚು ಇತರ ಸಿಬ್ಬಂದಿಗೆ ಕೋವಿಡ್ ಆರೈಕೆ ಮತ್ತು ನಿರ್ವಹಣೆಯಲ್ಲಿ ತರಬೇತಿ ನೀಡಿದೆ. ಮಣಿಪುರದಲ್ಲಿ ಈವರೆಗೆ 159 ಜನರು ಕೋವಿಡ್- 19 ರಿಂದ ಚೇತರಿಸಿಕೊಂಡಿದ್ದಾರೆ, ಚೇತರಿಕೆಯ ಪ್ರಮಾಣವು ಶೇ.32 ಕ್ಕೆ ಸುಧಾರಿಸಿದೆ.
  • ಮಿಜೋರಾಂ: ಐಜ್ವಾಲದ ಕೋಲಾಸಿಬ್ ಸ್ವಯಂಸೇವಕ ಗುಂಪು, 64 ಪಿಪಿಇ ಮತ್ತು 250 ಮುಖಗವಸುಗಳನ್ನು ಕೊಲಾಸಿಬ್ ಮುಖ್ಯ ವೈದ್ಯಕೀಯ ಅಧಿಕಾರಿಗೆ ನೀಡಿದೆ. ಕೇಂದ್ರ ಕ್ರೀಡಾ ಸಚಿವಾಲಯವು ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಐಜ್ವಾಲ್ನಲ್ಲಿ ಸ್ಥಾಪಿಸಲಿದೆ.
  • ನಾಗಾಲ್ಯಾಂಡ್: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಬೆಂಬಲದ ಸೂಚಕವಾಗಿ, ನಾಗಾಲ್ಯಾಂಡ್ ಮೊಕೊಕ್ಚುಂಗ್ಬಿನ್ ಅಸ್ಸಾಂ ರೈಫಲ್ಸ್ ಮುಂಚೂಣಿ ಕೆಲಸಗಾರರ ಬಳಕೆಗಾಗಿ 1500 ಸುಧಾರಿತ ಮುಖಗವಸುಗಳನ್ನು ದೇಣಿಗೆಯಾಗಿ ನೀಡಿದೆ.
  • ಕೇರಳ: ವಿದೇಶದಿಂದ ರಾಜ್ಯಕ್ಕೆ ವಿಮಾನಗಳ ಮೂಲಕ ಬರುವ ಎಲ್ಲಾ ಪ್ರಯಾಣಿಕರಿಗೆ ಕೋವಿಡ್ -19 ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲು ಕೇರಳ ಸಂಪುಟ ನಿರ್ಧರಿಸಿದೆ. ವಿಮಾನಗಳನ್ನು ಹತ್ತುವ ಮೊದಲು ಎಲ್ಲರಿಗೂ ಒಂದು ಗಂಟೆಯೊಳಗೆ ಫಲಿತಾಂಶವನ್ನು ನೀಡುವ ಟ್ರುಯೆನಾಟ್ ಕ್ಷಿಪ್ರ ಪರೀಕ್ಷೆಯನ್ನು ನಡೆಸಲು ಕೇಂದ್ರದ ಸಹಾಯ ಪಡೆಯಲು ನಿರ್ಧರಿಸಿದೆ. ವಿದ್ಯುತ್ ಬಿಲ್ಗಳ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಯ ಮಧ್ಯೆ, ಪಾವತಿಗೆ ಕಂತುಗಳಿಗೆ ಅವಕಾಶ ನೀಡುವುದು ಸೇರಿದಂತೆ ಗ್ರಾಹಕರಿಗೆ ರಿಯಾಯಿತಿ ನೀಡಲು ರಾಜ್ಯ ವಿದ್ಯುತ್ ಮಂಡಳಿ ನಿರ್ಧರಿಸಿದೆ. ಏತನ್ಮಧ್ಯೆ, ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮೂಲಗಳನ್ನು ಗುರುತಿಸಲಾಗದ ಕಾರಣ ರಾಜ್ಯ ರಾಜಧಾನಿಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಎಂಟು ಮಂದಿ ಕೇರಳಿಗರು ರಾಜ್ಯದ ಹೊರಗೆ ಕೋವಿಡ್ಗೆ ಬಲಿಯಾಗಿದ್ದಾರೆ. ಕೋವಿಡ್ -19 79 ಹೊಸ ಪ್ರಕರಣಗಳು, 60 ಚೇತರಿಕೆಗಳು ರಾಜ್ಯದಲ್ಲಿ ವರದಿಯಾಗಿವೆ. 1,366 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,22,143 ಮಂದಿ ನಿಗಾವಣೆಯಲ್ಲಿದ್ದಾರೆ.
  • ತಮಿಳುನಾಡು: ಪುದುಚೇರಿಯಲ್ಲಿ 30 ಹೊಸ ಪ್ರಕರಣಗಳೊಂದಿಗೆ ಒಂದೇ ದಿನ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. JIPMER ನಲ್ಲಿ ಒಂದು ಸಾವು ದಾಖಲಾಗಿದೆ. ಇದರೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 245 ಕ್ಕೆ ಮತ್ತು ಸಾವುಗಳು ಐದಕ್ಕೆ ಏರಿಕೆಯಾಗಿವೆ. ತಮಿಳುನಾಡು ಸರ್ಕಾರ ಖಾಸಗಿ ವಲಯದ ಉದ್ಯೋಗಗಳಿಗಾಗಿ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ; ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಖಾಸಗಿ ಕಂಪನಿಗಳಿಗೆ ಸೇವೆ ಉಚಿತವಾಗಿರುತ್ತದೆ. ತಮಿಳುನಾಡಿನಲ್ಲಿ 1843 ಹೊಸ ಪ್ರಕರಣಗಳು, 797 ಚೇತರಿಕೆಗಳು ಮತ್ತು 44 ಸಾವುಗಳು ನಿನ್ನೆ ವರದಿಯಾಗಿವೆ. ಚೆನ್ನೈನಲ್ಲಿ 1257 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳು: 46504, ಸಕ್ರಿಯ ಪ್ರಕರಣಗಳು: 20678, ಸಾವುಗಳು: 479, ಗುಣಮುಖ: 24547, ಪರೀಕ್ಷಿಸಿದ ಮಾದರಿಗಳು: 729002, ಚೆನ್ನೈನಲ್ಲಿರುವ ಸಕ್ರಿಯ ಪ್ರಕರಣಗಳು: 15385.
  • ಕರ್ನಾಟಕ: ಹುಬ್ಬಳ್ಳಿಯಿಂದ ಬುಧವಾರದಿಂದ ವಿಮಾನಗಳು ಪುನರಾರಂಭವಾಗಬಹುದು ಎಮದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಥಾಕ್ರೆ ಹೇಳಿಕೆ. ಕರ್ನಾಟಕದಲ್ಲಿ ಕೋವಿಡ್ -19 ಹೋರಾಟವನ್ನು ಹೆಚ್ಚಿಸಲು ಖಾಸಗಿ ಆಸ್ಪತ್ರೆಗಳ ನೆರವು ಪಡೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುದಾಕರ್ ಹೇಳಿದ್ದಾರೆ. ಕಳೆದ ಎರಡು ವಾರಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ರೋಗಲಕ್ಷಣವಿಲ್ಲದ ಸೋಂಕಿತ ವ್ಯಕ್ತಿಗಳ ಮೇಲೆ ನಿಗಾ ಮತ್ತು ಚಿಕಿತ್ಸೆ ನೀಡಲು ಕೋವಿಡ್ ಕೇರ್ ಸೆಂಟರ್ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕಳೆದ 2 ವಾರಗಳಲ್ಲಿ ಪ್ರಕರಣಗಳ ಹೆಚ್ಚಳದಿಂದಾಗಿ, ದಿನಕ್ಕೆ 15,000 ರಿಂದ 25,000 ಮಾದರಿಗಳ ಪರೀಕ್ಷೆಯನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದರು. ನಿನ್ನೆ 213 ಹೊಸ ಪ್ರಕರಣಗಳು ವರದಿಯಾಗಿದ್ದು, 180 ಮಂದಿ ಗುಣಮುಖರಾಗಿದ್ದು ಮತ್ತು ಎರಡು ಸಾವುಗಳು ಸಂಭವಿಸಿವೆ. ರಾಜ್ಯದಲ್ಲಿ ಒಟ್ಟು ಪಾಸಿಟಿವ್  ಪ್ರಕರಣಗಳು: 7213, ಸಕ್ರಿಯ ಪ್ರಕರಣಗಳು: 2987, ಸಾವುಗಳು: 88, ಗುಣಮುಖ: 4135.
  • ಆಂಧ್ರಪ್ರದೇಶ: ಕಳೆದ 24 ಗಂಟೆಗಳಲ್ಲಿ ಎರಡು ಸಾವುಗಳು ಸಂಭವಿಸಿವೆ. 15,188 ಮಾದರಿಗಳನ್ನು ಪರೀಕ್ಷಿಸಿದ ನಂತರ 275 ಹೊಸ ಪ್ರಕರಣಗಳು ವರದಿಯಾಗಿವೆ. 55 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಪ್ರಕರಣಗಳು: 5555, ಸಕ್ರಿಯ: 2559, ಗುಣಮುಖ: 2906, ಸಾವುಗಳು: 90.
  • ತೆಲಂಗಾಣ: ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ಮತ್ತು ಪಿಂಚಣಿಗಳನ್ನು ಮುಂದೂಡಲು ವಿಶೇಷ ಅವಕಾಶಗಳನ್ನು ನೀಡುವ ಸುಗ್ರೀವಾಜ್ಞೆಯನ್ನು ತೆಲಂಗಾಣ ಸರ್ಕಾರ ಹೊರಡಿಸಿದೆ. ಇಲ್ಲಿಯವರೆಗೆ ಒಟ್ಟು ಪ್ರಕರಣಗಳು 5406; ಸಕ್ರಿಯ ಪ್ರಕರಣಗಳು 2188; ಗುಣಮುಖ: 3027.

ವಾಸ್ತವ ಪರಿಶೀಲನೆ

Image

***



(Release ID: 1632261) Visitor Counter : 215