PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 12 JUN 2020 6:39PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

Image

ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ವರದಿ; ಚೇತರಿಕೆ ದರ ಶೇ.49.47ಕ್ಕೆ ಏರಿಕೆ; ಒಟ್ಟು 1,47,194 ಜನರು ಗುಣಮುಖ

ಕೋವಿಡ್ ಸೋಂಕಿನ ಪ್ರಕರಣಗಳಲ್ಲಿನ ಚೇತರಿಕೆ ನಿರಂತರವಾಗಿ ಏರಿಕೆ ಆಗುತ್ತಿದ್ದು, ಪ್ರಸ್ತುತ ಶೇ.49.47 ಆಗಿದೆ.  ಒಟ್ಟು 1,47,194 ವ್ಯಕ್ತಿಗಳು ಗುಣಮುಖರಾಗಿದ್ದರೆ, 1,41,842 ವ್ಯಕ್ತಿಗಳು ಸೂಕ್ತ ವೈದ್ಯಕೀಯ ನಿಗಾದಲ್ಲಿದ್ದಾರೆ. 6166 ಜನರು ಕಳೆದ 24 ಗಂಟೆಗಳ ಅವಧಿಯಲ್ಲಿ ಗುಣಮುಖರಾಗಿದ್ದಾರೆ. ದ್ವಿಗುಣ ದರ/ಸಮಯ ನಿರಂತರವಾಗಿ ಸುಧಾರಣೆ ಆಗುತ್ತಿದ್ದು, ಲಾಕ್ ಡೌನ್ ಆರಂಭದಲ್ಲಿದ್ದ 3.4 ದಿನಗಳಿಂದ ಪ್ರಸ್ತುತ 17.4 ದಿನವಾಗಿದೆ.

ಸಂಪುಟ ಕಾರ್ಯದರ್ಶಿಯವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿಗಳು ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ರಾಜ್ಯಗಳಿಗೆ ಕೋವಿಡ್ 19 ಸಮರ್ಥ ನಿರ್ವಹಣೆಗಾಗಿ ಕಂಟೈನ್ಮೆಂಟ್, ಪರೀಕ್ಷೆ ಮತ್ತು ರೋಗ ಪತ್ತೆ, ಆರೋಗ್ಯ ಮೂಲ ಸೌಕರ್ಯವರ್ಧನೆ, ಪ್ರಕರಣಗಳ ಚಿಕಿತ್ಸಾಲಯ ನಿರ್ವಹಣೆ ಮತ್ತು ಸಮುದಾಯ ಚಟುವಟಿಕೆ ನಿರ್ವಹಣೆಗೆ ಗಮನ ಹರಿಸಲು ಸಲಹೆ ಮಾಡಿದರು.

ಐಸಿಎಂಆರ್ ಸೋಂಕಿತ ವ್ಯಕ್ತಿಗಳಲ್ಲಿ ಮಾರಕ ಕೊರೊನಾ ಪತ್ತೆಗೆ ತನ್ನ ಪರೀಕ್ಷಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ದೇಶದಲ್ಲಿ ಪ್ರಸ್ತುತ ಒಟ್ಟು 877 ಪ್ರಯೋಗಾಲಯಗಳು ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿವೆ (637 ಸರ್ಕಾರಿ ಪ್ರಯೋಗಾಲಯಗಳು ಮತ್ತು 240 ಖಾಸಗಿ ಪ್ರಯೋಗಾಲಯಗಳು).  1,50,305 ಮಾದರಿಗಳನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ಪರೀಕ್ಷೆ ಮಾಡಲಾಗಿದೆ. ಒಟ್ಟು 53,63,445 ಮಾದರಿಗಳನ್ನು ಈವರೆಗೆ ಪರೀಕ್ಷಿಸಿದಂತಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1631123

ಕೋವಿಡ್ -19 ಹಿನ್ನೆಲೆಯಲ್ಲಿ ನಗರ ಸಾರಿಗೆ ಸೇವೆ ಒದಗಿಸುವ ಕುರಿತಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶ/ನಗರ/ಮೆಟ್ರೋ ರೈಲು ಕಂಪನಿಗಳು ಕೈಗೊಳ್ಳಬೇಕಾದ ಕ್ರಮಗಳು

ನಗರ ವ್ಯವಹಾರ ಮತ್ತು ವಸತಿ ಸಚಿವಾಲಯ, ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ನಗರಗಳು ಮತ್ತು ಮೆಟ್ರೋ ರೈಲು ಕಂಪನಿಗಳಿಗೆ ನೀಡಿರುವ ತನ್ನ ಸೂಚನೆಯಲ್ಲಿ ಮೂರು ಹಂತದ ಕಾರ್ಯತಂತ್ರವನ್ನು ಹಂತ ಹಂತವಾಗಿ ಅಳವಡಿಸಿಕೊಳ್ಳಬಹುದು [ಕಡಿಮೆ (6 ತಿಂಗಳೊಳಗೆ), ಮಧ್ಯಮ (1 ವರ್ಷದೊಳಗೆ) ಮತ್ತು ದೀರ್ಘಾವಧಿಯ (1-3 ವರ್ಷಗಳು)] ಎಂದು ಸಲಹೆ ಮಾಡಿದೆ. ನಮ್ಮ ಜೀವನದ ಮೇಲೆ ಮತ್ತು ಸ್ಥಳೀಯ, ಪ್ರಾದೇಶಿಕ ಮತ್ತು ಜಾಗತಿಕ ಸಾರಿಗೆ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರಿರುವ  ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಲಹೆಯನ್ನು ನೀಡಲಾಗಿದೆ. ಕೋವಿಡ್ -19 ನಮಗೆ ವಿವಿಧ ಸಾರ್ವಜನಿಕ ಸಾರಿಗೆ ಆಯ್ಕೆಗಳಿಗೆ ಭೇಟಿ ನೀಡಲು ಮತ್ತು ಪರಿಹಾರದೊಂದಿಗೆ ಹೊರಬರಲು ಅವಕಾಶವನ್ನು ನೀಡಿದೆ, ಅದು ಹಸಿರು, ಮಾಲಿನ್ಯ ಮುಕ್ತ, ಅನುಕೂಲಕರ ಮತ್ತು ಸುಸ್ಥಿರವಾದುದಾಗಿದೆ. ಅಂತಹ ಕಾರ್ಯತಂತ್ರವು ಸಾಗಾಟಕ್ಕೆ ಮೊದಲು ಅಥವಾ ಸಾಗಾಟದ ಸಮಯದಲ್ಲಿ ಎಲ್ಲಾ ರೀತಿಯ ಪಾವತಿಗಳನ್ನು ಮಾಡಲು ಮತ್ತು ಪ್ರಯಾಣಿಕರಿಗೆ ಮಾಹಿತಿ ವ್ಯವಸ್ಥೆಯನ್ನು ಒದಗಿಸಲು ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಮೋಟಾರೀಕೃತವಲ್ಲದ ಸಾರಿಗೆ ಮತ್ತು ಸಾರ್ವಜನಿಕ ಸಾರಿಗೆಯ ಮೇಲೆ ಹೆಚ್ಚಿನ ಗಮನವನ್ನು ನೀಡಬೇಕಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1631071

ಕಾನೂನು ಮತ್ತು ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಜಿಎಸ್ಟಿ ಮಂಡಳಿಯ ಶಿಫಾರಸುಗಳು

ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ  ಅಧ್ಯಕ್ಷತೆಯಲ್ಲಿ ನಡೆದ 40ನೇ ಜಿಎಸ್ಟಿ ಮಂಡಳಿ ಸಭೆ, ಕಾನೂನು ಮತ್ತು ಪ್ರಕ್ರಿಯೆಗಳ ಬದಲಾವಣೆ ಕುರಿತಂತೆ ಹಲವು ಶಿಫಾರಸು ಮಾಡಿದೆ. ವ್ಯಾಪಾರ ಸೌಲಭ್ಯಕ್ಕಾಗಿ ಕ್ರಮಗಳಲ್ಲಿ ಹಿಂದಿನ ರಿಟರ್ನ್ಸ್ ತಡವಾಗಿದ್ದಕ್ಕಾಗಿ ವಿಧಿಸುವ ಶುಲ್ಕವನ್ನು ಕಡಿತಗೊಳಿಸುವುದು; ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ 2020 ರ ತೆರಿಗೆ ಅವಧಿಗಳಿಗೆ ತಡವಾಗಿ ರಿಟರ್ನ್ಸ್ ಸಲ್ಲಿಸಲು ಸಣ್ಣ ತೆರಿಗೆದಾರರಿಗೆ ಹೆಚ್ಚಿನ ಪರಿಹಾರ; ನಂತರದ ತೆರಿಗೆ ಅವಧಿಗಳಿಗೂ (ಮೇ, ಜೂನ್ ಮತ್ತು ಜುಲೈ 2020)ಸಣ್ಣ ತೆರಿಗೆದಾರರಿಗೆ ಪರಿಹಾರ; ನೋಂದಣಿ ರದ್ದತಿಯನ್ನು ಹಿಂತೆಗೆದುಕೊಳ್ಳಲು ಕೋರುವ ಅವಧಿಯಲ್ಲಿ ಒಂದು ಬಾರಿ ವಿಸ್ತರಣೆಯನ್ನು ಒಳಗೊಂಡಿದೆ. ಸಿಜಿಎಸ್ಟಿ ಕಾಯ್ದೆ 2017 ಮತ್ತು ಐಜಿಎಸ್ಟಿ ಕಾಯ್ದೆ 2017 ತಿದ್ದುಪಡಿಗಾಗಿ ಹಣಕಾಸು ಕಾಯ್ದೆ2020ರ ಕೆಲವು ಷರತ್ತುಗಳ ಮಾರ್ಪಾಡಿಗೂ 30.06.2020 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1631127

ಭಾರತೀಯ ಗುಣಮಟ್ಟ ಮಂಡಳಿಯ ಪರಾಮರ್ಶೆ ನಡೆಸಿದ ಶ್ರೀ ಪೀಯೂಷ್ ಗೋಯೆಲ್; ಗುಣಮಟ್ಟದ ಉತ್ಪನ್ನ ಮತ್ತು ಸೇವೆಗಳ ಮೇಲೆ ಆತ್ಮ ನಿರ್ಭರ ಭಾರತ ಬೆಳೆಯುತ್ತದೆ ಎಂದು ಹೇಳಿಕೆ

ಗುಣಮಟ್ಟ ಭಾರತದ ಭವಿಷ್ಯವನ್ನು ವ್ಯಾಖ್ಯಾನಿಸುತ್ತದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಶ್ರೀ ಪೀಯೂಷ್ ಗೋಯೆಲ್ ಹೇಳಿದ್ದಾರೆ. ಇಂದು ಭಾರತೀಯ ಗುಣಮಟ್ಟ ಮಂಡಳಿಯ ಪ್ರದರ್ಶನದ ಪರಾಮರ್ಶೆ ನಡೆಸಿದ ಅವರು, ದೇಶೀಯ ಉತ್ಪನ್ನ ಮತ್ತು ಸೇವೆಗಳ ಗುಣಮಟ್ಟದ ಆಧಾರದ ಮೇಲೆ ಆತ್ಮ ನಿರ್ಭರ ಭಾರತ ಬೆಳೆಯುತ್ತದೆ ಎಂದು ಹೇಳಿದರು. ಗುಣಮಟ್ಟದ ಪ್ರಜ್ಞೆ ಸಾಮಾನ್ಯ ಮನುಷ್ಯನ ಮಟ್ಟಕ್ಕೆ ಸೇರಬೇಕಾಗುತ್ತದೆ ಮತ್ತು ಗುಣಮಟ್ಟದ ಸಂಸ್ಕೃತಿಯನ್ನು ನಮ್ಮ ಜೀವನದ ಎಲ್ಲಾ ಆಯಾಮಗಳಲ್ಲಿ ಅಳವಡಿಸಿಕೊಂಡು ಬೆಳೆಸಬೇಕಾಗುತ್ತದೆ ಎಂದು ಅವರು ಹೇಳಿದರು. ಕೋವಿಡೋತ್ತರ ಯುಗದಲ್ಲಿ ಇತರ ರಾಷ್ಟ್ರಗಳಲ್ಲಿ ಹೊರಹೊಮ್ಮಿರುವ ಉತ್ತಮ ರೂಢಿಗಳ ಬಗ್ಗೆ ಅಧ್ಯಯನ ನಡೆಸಲು ಮತ್ತು ಸ್ಥಳೀಯವಾದ ಪರಿಸ್ಥಿತಿಗಳ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅವುಗಳನ್ನು ಭಾರತದಲ್ಲಿ ಅಳವಡಿಸಲು ಅವರು ಕ್ಯುಸಿಐಗೆ ಕರೆ ನೀಡಿದರು. ದೇಶದ ಕೌಶಲ್ಯಗಳಲ್ಲಿ ಅಂತರ ವಿಶ್ಲೇಷಣೆ ಮಾಡಲು ಕ್ಯೂಸಿಐಗೆ ಅವರು ತಿಳಿಸಿದರು ಮತ್ತು ಅಂತರವನ್ನು ತುಂಬಲು ಸಾಧನಗಳನ್ನು ಸೂಚಿಸಿದರು.

ವಿವರಗಳಿಗೆ: https://pib.gov.in/PressReleasePage.aspx?PRID=1631132

ಕೋವಿಡ್ -19 ಪರಿಸ್ಥಿತಿಯಲ್ಲಿ ದೇಶೀಯ ಉತ್ಪಾದಕರಿಂದ ಬಂಡವಾಳ ಸ್ವಾಧೀನ ವಿತರಣೆಗೆ ನಾಲ್ಕು ತಿಂಗಳುಗಳ ವಿಸ್ತರಣೆ ನೀಡಿದ ಎಂ..ಡಿ.

ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಪೂರೈಕೆ ಸರಪಳಿಯಲ್ಲಿ ಆಗಿರುವ ಅಡ್ಡಿಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯ (ಎಂ..ಡಿ.) ಭಾರತೀಯ ಮಾರಾಟಗಾರರುಗಳೊಂದಿಗಿನ ಎಲ್ಲ ಬಂಡವಾಳ ಸ್ವಾಧೀನ ಒಪ್ಪಂದಕ್ಕೆ ಸಂಬಂಧಿಸಿದಂತೆ ಪೂರೈಕೆಯ ಅವಧಿಯನ್ನು ನಾಲ್ಕು ತಿಂಗಳು ವಿಸ್ತರಿಸಿದೆ. ಸಂಬಂಧ ಸಚಿವಾಲಯದ ಸ್ವಾಧೀನ ವಿಭಾಗ ರಕ್ಷಣಾ ಸಚಿವ ಶ್ರೀ ರಾಜನಾಥ ಸಿಂಗ್ ಅವರ ಸೂಕ್ತ ಅನುಮೋದನೆಯೊಂದಿಗೆ ಆದೇಶವೊಂದನ್ನು ಇಂದು ಹೊರಡಿಸಿದೆ. "ಫೋರ್ಸ್ ಮಜೂರ್ (ಒಪ್ಪಂದದ ಪಕ್ಷಕಾರರನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸುವುದು) ನಾಲ್ಕು ತಿಂಗಳ ಅವಧಿಗೆ, ಅಂದರೆ 2020 ಮಾರ್ಚ್ 25 ರಿಂದ 2020  ಜುಲೈ 24ರವರೆಗೆ ಇದಕ್ಕೆ ಅನ್ವಯವಾಗುತ್ತದೆ " ಎಂದು ಅದು ತಿಳಿಸಿದೆ. ಕ್ರಮವು ಕೋವಿಡ್ -19ರ ಪರಿಸ್ಥಿತಿಯಿಂದ ತಮ್ಮ ಉತ್ಪಾದನಾ ವೇಳಾಪಟ್ಟಿಯಲ್ಲಿ ಪ್ರತೀಕೂಲ ಪರಿಣಾಮ ಎದುರಿಸಿದ ದೇಶೀಯ ರಕ್ಷಣಾ ಕೈಗಾರಿಕೆಗಳಿಗೆ ದೊಡ್ಡ ನಿರಾಳ ತರಲಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1631078

ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ವಿಶೇಷ ಶ್ರಮಿಕ ರೈಲು ಒದಗಿಸುವುದನ್ನು ಮುಂದುವರಿಸಲಿರುವ ಭಾರತೀಯ ರೈಲ್ವೆ

ಭಾರತೀಯ ರೈಲ್ವೆ ರಾಜ್ಯಗಳ ಅಗತ್ಯಕ್ಕೆ ಅನುಗುಣವಾಗಿ ವಲಸೆ ಕಾರ್ಮಿಕರನ್ನು ವಿಶೇಷ ಶ್ರಮಿಕ ರೈಲುಗಳ ಮೂಲಕ ಸುರಕ್ಷಿತವಾಗಿ ಸಾಗಿಸಲು ಸೌಲಭ್ಯ ಒದಗಿಸುವುದನ್ನು ಮುಂದುವರಿಸಲು ಬದ್ಧವಾಗಿದೆ. ರೈಲ್ವೆ ಮಂಡಳಿಯ ಅಧ್ಯಕ್ಷರು ಪತ್ರ ಬರೆದ ಬಳಿಕ, ವಿವಿಧ ರಾಜ್ಯಗಳಿಂದ ಈವರೆಗೆ ಒಟ್ಟು 63ಕ್ಕೂ ಹೆಚ್ಚುವರಿ ಶ್ರಮಿಕ ವಿಶೇಷ ರೈಲುಗಳಿಗೆ ಮನವಿ ಬಂದಿದೆ. ಒಟ್ಟು 7 ರಾಜ್ಯಗಳು ಅಂದರೆ ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್, ಜಮ್ಮು ಮತ್ತು ಕಾಶ್ಮೀರ ಶ್ರಮಿಕ ವಿಶೇಷ ರೈಲುಗಳಿಗೆ ಮನವಿ ಸಲ್ಲಿಸಿದೆ. ಒಟ್ಟು 63 ಶ್ರಮಿಕ ವಿಶೇಷ ರೈಲುಗಳ ಪೈಕಿ 3 ರೈಲುಗಳಿಗೆ ಆಂಧ್ರಪ್ರದೇಶ, 1 ರೈಲಿಗೆ ಗುಜರಾತ್, 9 ರೈಲುಗಳಿಗೆ ಜಮ್ಮು ಕಾಶ್ಮೀರ, 6 ರೈಲುಗಳಿಗೆ ಕರ್ನಾಟಕ, 32 ರೈಲುಗಳಿಗೆ ಕೇರಳ, 10 ರೈಲುಗಳಿಗೆ ತಮಿಳುನಾಡು ಮತ್ತು 2 ರೈಲುಗಳಿಗೆ ಪಶ್ಚಿಮ ಬಂಗಾಳ ಮನವಿ ಮಾಡಿದೆ.  ಉತ್ತರ ಪ್ರದೇಶ ಸರ್ಕಾರ ತನ್ನ ಅಗತ್ಯಕ್ಕಾಗಿ ಬೇಡಿಕೆಯನ್ನು ಸಲ್ಲಿಸಬೇಕಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1631092

ಆತ್ಮ ನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ 22812 ಎಂಟಿ ಆಹಾರ ಧಾನ್ಯವನ್ನು 45.62 ಲಕ್ಷ ಫಲಾನುಭವಿಗಳಿಗೆ ಮೇ ಮತ್ತು ಜೂನ್ ನಲ್ಲಿ ವಿತರಿಸಲಾಗಿದೆ; 2092 ಎಂಟಿ ಬೇಳೆಯನ್ನು ಸಹ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ

ಎಫ್.ಸಿ.ಐ. ಪ್ರಸ್ತುತ 270.89 ಎಲ್.ಎಂ.ಟಿ. ಅಕ್ಕಿ ಮತ್ತು 540.80 ಎಲ್.ಎಂ.ಟಿ. ಗೋಧಿ ಹೊಂದಿದೆ. ಒಟ್ಟು 811.69 ಎಲ್.ಎಂ.ಟಿ. ಆಹಾರ ಧಾನ್ಯ ದಾಸ್ತಾನು ಲಭ್ಯವಿದೆ (ಇನ್ನೂ ಗೋದಾಮು ಸೇರದ ಗೋಧಿ ಮತ್ತು ಭತ್ತದ ಪ್ರಸಕ್ತ ಮುಂದುವರಿದಿರುವ ಖರೀದಿ ಹೊರತುಪಡಿಸಿ). ಸುಮಾರು 55 ಎಲ್ಎಂಟಿ ಆಹಾರ ಧಾನ್ಯ ಎನ್.ಎಫ್.ಎಸ್.ಎ. ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಅಗತ್ಯವಾಗಿದೆ. ಆತ್ಮ ನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 5.48 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಎತ್ತುವಳಿ ಮಾಡಿದ್ದು, 22,812 ಎಂ.ಟಿ. ಆಹಾರ ಧಾನ್ಯವನ್ನು ಒಟ್ಟು 45.62 ಲಕ್ಷ (ಮೇನಲ್ಲಿ 35.32 ಲಕ್ಷ ಮತ್ತು ಜೂನ್ ನಲ್ಲಿ 10.30 ಲಕ್ಷ) ಫಲಾನುಭವಿಗಳಿಗೆ ವಿತರಣೆ ಮಾಡಿದೆ. ಪಿಎಂಜಿಕೆಎವೈ ಅಡಿಯಲ್ಲಿ  3 ತಿಂಗಳಿಗೆ ಅಂದರೆ ಏಪ್ರಿಲ್ – ಜೂನ್ ಒಟ್ಟು 104.3 ಎಲ್.ಎಂ.ಟಿ. ಅಕ್ಕಿ ಮತ್ತು 15.2 ಎಲ್.ಎಂ.ಟಿ. ಗೋಧಿ ಅಗತ್ಯವಿದ್ದು, ಈ ಪೈಕಿ 94.71 ಎಲ್.ಎಂ.ಟಿ. ಅಕ್ಕಿ ಮತ್ತು 14.20 ಎಲ್.ಎಂ.ಟಿ ಗೋಧಿಯನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎತ್ತುವಳಿ ಮಾಡಿವೆ.

ವಿವರಗಳಿಗೆ: https://pib.gov.in/PressReleasePage.aspx?PRID=1631110

ಕೋವಿಡ್ -19 ನಡುವೆಯೂ ರಾಮಗುಂಡಮ್ ರಸಗೊಬ್ಬರ ಘಟಕ ಸೆಪ್ಟೆಂಬರ್ 2020ರಿಂದ, ಗೋರಖ್ಪುರ, ಬರೌನಿ ಮತ್ತು ಸಿಂದ್ರಿ 2021ರಿಂದ ಉತ್ಪಾದನೆ ಆರಂಭಿಸುವ ನಿರೀಕ್ಷೆ

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಸಗೊಬ್ಬರ ಮತ್ತು ರಾಸಾಯನಿಕ ಇಲಾಖೆ ಅಧಿಕಾರಿಗಳೊಂದಿಗೆ  5 ರಸಗೊಬ್ಬರ  ಘಟಕಗಳ ಪುನಶ್ಚೇತನ ಸಂಬಂಧ ಪರಾಮರ್ಶೆ ಸಭೆ ನಡೆಸಿದರು. ರಾಮಗೊಂಡಂ ರಸಗೊಬ್ಬರ ಮತ್ತು ರಾಸಾಯನಿಕ ನಿಯಮಿತ ಈಗಾಗಲೇ ಶೇ.99.53ರಷ್ಟು ಭೌತಿಕ ಪ್ರಗತಿ ಸಾಧಿಸಿದ್ದು, ಕೋವಿಡ್ -19 ಹಿನ್ನೆಲೆಯಲ್ಲಿ ಕೆಲವೊಂದು ಸಣ್ಣ ಅಂಶಗಳ ಭೌತಿಕ ಕಾಮಗಾರಿ ಬಾಕಿ ಇದೆ ಎಂದು ಶ್ರೀ ಮಾಂಡವೀಯ ತಿಳಿಸಿದರು. 2020 ಸೆಪ್ಟೆಂಬರ್ ಅಂತ್ಯದ ವೇಳೆಗೆ ಇಲ್ಲಿ ಯೂರಿಯಾ ಉತ್ಪಾದನೆ ಆರಂಭವಾಗುವ ನಿರೀಕ್ಷೆ ಇದೆ. ಗೋರಖ್ಪುರ, ಸಿಂಡ್ರಿ, ಬರೌನಿ ರಸಗೊಬ್ಬರ ಘಟಕಗಳು ಅನುಕ್ರಮವಾಗಿ ಶೇ.77, ಶೇ.70 ಮತ್ತು ಶೇ.69ರಷ್ಟು ಭೌತಿಕ ಪ್ರಗತಿ ಸಾಧಿಸಿವೆ. ಗೋರಖ್ಪುರ ಮತ್ತು ಬರೌನಿ ಹಾಗೂ ಸಿಂಡ್ರಿ ಘಟಕಗಳು 2021 ಮೇ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ವಿವರಗಳಿಗೆ: https://pib.gov.in/PressReleasePage.aspx?PRID=1631097

ಈಶಾನ್ಯ ವಲಯದಲ್ಲಿ ಭೂಕಂಪನ: ಆತಂಕದ ಅಗತ್ಯವಿಲ್ಲ, ಭೂಕಂಪನಶಾಸ್ತ್ರ ಕುರಿತ ರಾಷ್ಟ್ರೀಯ ಕೇಂದ್ರದ ಹೇಳಿಕೆ

ದೆಹಲಿಯ ಎನ್.ಸಿ.ಆರ್. ವಲಯದಲ್ಲಿನ ಇತ್ತೀಚಿನ ಭೂಕಂಪನದಿಂದ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಭೂಕಂಪನಶಾಸ್ತ್ರ ಕುರಿತ ರಾಷ್ಟ್ರೀಯ ಕೇಂದ್ರ (ಎನ್.ಸಿ.ಎಸ್.) ನಿರ್ದೇಶಕ ಡಾ. ಬಿ.ಕೆ. ಬನ್ಸಾಲ್ ತಿಳಿಸಿದ್ದಾರೆ. ಆದರೆ ಭೂಕಂಪನದ ಅಪಾಯವನ್ನು ತಗ್ಗಿಸಲು ಕ್ರಮಗಳನ್ನು ಕೈಗೊಳ್ಳುವ ಮತ್ತು ಸನ್ನದ್ಧತೆ ಮಾಡಿಕೊಳ್ಳುವುದು ಮಹತ್ವದ್ದು ಎಂದು ತಿಳಿಸಿದ್ದಾರೆ.

ವಿವರಗಳಿಗೆ: https://pib.gov.in/PressReleasePage.aspx?PRID=1630974

ಸಹಕಾರ ಮಿತ್ರಕ್ಕೆ ಚಾಲನೆ ನೀಡಿದ ಶ್ರೀ ನರೇಂದ್ರ ಸಿಂಗ್ ಥೋಮರ್: ಇಂಟರ್ನ್ ಷಿಪ್ ಕಾರ್ಯಕ್ರಮ ಕುರಿತ ಯೋಜನೆ

ಅನನ್ಯವಾದ ಸಹಕಾರ ವಲಯದ ಹಣಕಾಸು ಅಭಿವೃದ್ಧಿ ಸಂಘಟನೆ, ರಾಷ್ಟ್ರೀಯ ಸರಕಾರಿ ಅಭಿವೃದ್ಧಿ ನಿಗಮ, ಎನ್.ಸಿ.ಡಿ.ಸಿ. ಸಹಕಾರ ವಲಯದ ಉದ್ಯಮಶೀಲತೆ ಅಭಿವೃದ್ಧಿ ಪರಿಸರ ಅಭಿವೃದ್ಧಿಯ ಉಪಕ್ರಮಕ್ಕಾಗಿ ಯುವಕರಿಗೆ ಪಾವತಿ ಸಹಿತ ಇಂಟರ್ನ್ ಷಿಪ್ ಮತ್ತು ಯುವ ಸಹಕಾರಿಗಳಿಗೆ ನವೋದ್ಯಮ ಮಾದರಿಯಲ್ಲಿ ಉದಾರೀಕೃತ ನಿಬಂಧನೆಗಳೊಂದಿಗೆ ನಿಶ್ಚಿತ ಯೋಜನಾ ಸಾಲದ ಮೂಲಕ  ಹಲವು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಯೋಜನೆಗೆ ಚಾಲನೆ ನೀಡಿದ ಶ್ರೀ ಥೋಮರ್ ತಿಳಿಸಿದ್ದಾರೆ. ಸಹಕಾರ ಮಿತ್ರ ಯೋಜನೆ ಸಹಕಾರಿ ಸಂಸ್ಥೆಗಳಿಗೆ ಹೊಸ ಉಪಕ್ರಮ, ಕಲ್ಪನೆಗಳನ್ನು ಪ್ರವೇಶಿಸಲು ಯುವ ವೃತ್ತಿಪರರಿಗೆ ನೆರವಾಗುತ್ತದೆ, ಜೊತೆಗೆ ಇಂಟರ್ನಿಗಳು ಸ್ವಾವಲಂಬನೆಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಅನುಭವ ಪಡೆಯಲಿದ್ದಾರೆ ಎಂದರು.

ವಿವರಗಳಿಗೆ: https://pib.gov.in/PressReleasePage.aspx?PRID=1631125

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿಗಳು

  • ಮಹಾರಾಷ್ಟ್ರ: 3607 ಹೊಸ ಕೋವಿಡ್ -19 ಪ್ರಕರಣಗಳು ಗುರುವಾರ ವರದಿಯಾಗಿದ್ದು, ಕರೋನ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 97,648 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 47,968 ಆಗಿದ್ದರೆ, ಗುರುವಾರ 152 ಸಾವಿನ ಪ್ರಕರಣ ವರದಿಯಾಗಿದೆ. ಹಾಟ್ ಸ್ಪಾಟ್ ಮುಂಬೈನಲ್ಲಿ ಗುರುವಾರ 1540 ಸಕಾರಾತ್ಮಕ ಪ್ರಕರಣಗಳು ವರದಿ ಆಗಿವೆ, ಇದರಿಂದಾಗಿ ನಗರದಲ್ಲಿ 53,985 ಪ್ರಕರಣಗಳು ದಾಖಲಾದಂತಾಗಿದೆ. ಮುಂಬೈನ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಂಚಿಕೆಯಲ್ಲಿ ಕೋವಿಡ್ -19 ರೋಗಿಗಳು ಎದುರಿಸುತ್ತಿರುವ ಕಷ್ಟಗಳನ್ನು ಪರಿಗಣಿಸಿ, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ವಿಕೇಂದ್ರೀಕೃತ ಆಸ್ಪತ್ರೆ ಹಾಸಿಗೆ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು ಸ್ಥಾಪಿಸಿದೆ ಮತ್ತು ಎಲ್ಲಾ 24 ವಾರ್ಡ್ಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿದೆ.
  • ಗುಜರಾತ್: ಕಳೆದ 24 ಗಂಟೆಗಳಲ್ಲಿ 513 ಹೊಸ ಪ್ರಕರಣಗಳು ಸೇರ್ಪಡೆಯಾಗುವುದರೊಂದಿಗೆ ಗುಜರಾತ್ನಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 22,032 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 366 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಚೇತರಿಕೆಯ ಸಂಖ್ಯೆ ರಾಜ್ಯದಲ್ಲಿ 15,109ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಇನ್ನೂ 38 ರೋಗಿಗಳ ಸಾವಿನೊಂದಿಗೆ, ರಾಜ್ಯದಲ್ಲಿ ಸಾವಿನ ಸಂಖ್ಯೆ 1,385 ಕ್ಕೆ ಏರಿದೆ. ತನ್ನ ಹಿಂದಿನ ನಿರ್ಧಾರವನ್ನು ಪರಿಷ್ಕರಿಸಿರುವ ರಾಜ್ಯ ಸರ್ಕಾರ ಎಂಡಿ ಆಗಿರುವ ಯಾವುದೇ ಖಾಸಗಿ ವೈದ್ಯರ ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಅನುಮತಿ ನೀಡಿದೆ.
  • ರಾಜಸ್ಥಾನ: ಇಂದು ಬೆಳಗ್ಗೆಯವರೆಗೆ 92 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಹೊಸ ಪ್ರಕರಣಗಳಲ್ಲಿ ಹೆಚ್ಚಿನವು ಸಿರೋಹಿ ಮತ್ತು ಜೈಪುರದಿಂದ ವರದಿಯಾಗಿದೆ. ಸಕಾರಾತ್ಮಕವಾಗಿ ಹೇಳುವುದಾದರೆ, ಕೋವಿಡ್ - 19 ರೋಗಿಗಳ ಚೇತರಿಕೆಯ ಪ್ರಮಾಣವು ರಾಜ್ಯದಲ್ಲಿ ಶೇ.74 ಕ್ಕಿಂತ ಹೆಚ್ಚಾಗಿದೆ. ಒಟ್ಟು 11,930 ರೋಗಿಗಳಲ್ಲಿ 8843 ಜನರು ಇದುವರೆಗೆ ರಾಜ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕೋವಿಡ್ -19 ಸಕ್ರಿಯ ರೋಗಿಗಳ ಸಂಖ್ಯೆ ಈಗ 2,818 ರಷ್ಟಿದ್ದರೆ, ಕರೋನಾ ಸೋಂಕಿನಿಂದ ಇಲ್ಲಿಯವರೆಗೆ 269 ಜನರು ಸಾವನ್ನಪ್ಪಿದ್ದಾರೆ.
  • ಮಧ್ಯಪ್ರದೇಶ: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 10,241 ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 192 ಹೊಸ ಸೋಂಕಿತ ರೋಗಿಗಳು ಪತ್ತೆಯಾಗಿದ್ದಾರೆ. ಅಲ್ಲದೆ, ಗುರುವಾರ 4 ಸಾವುಗಳು ಸಂಭವಿಸಿದ್ದು, ಸಾವಿನ ಸಂಖ್ಯೆ 431 ಕ್ಕೆ ತಲುಪಿದೆ. ಮೇ 31 ರಂದು ಲಾಕ್ಡೌನ್ ಸಡಿಲವಾದಾಗಿನಿಂದ, ರಾಜ್ಯವು 2,152 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ.
  • ತ್ತೀಸ್ಗಢ: 46 ಹೊಸ ಕೋವಿಡ್ -19 ಅನ್ನು ಗುರುವಾರ ಪತ್ತೆ ಮಾಡಲಾಗಿದ್ದು, ಕರೋನವೈರಸ್ ಸೋಂಕಿತ ರೋಗಿಗಳ ಸಂಖ್ಯೆಯನ್ನು 1398 ಕ್ಕೆ ತೆಗೆದುಕೊಂಡಿದ್ದು, ಪೈಕಿ 945 ಸಕ್ರಿಯ ಪ್ರಕರಣಗಳಾಗಿವೆ.
  • ಗೋವಾ: 30 ಹೊಸ ಕೋವಿಡ್ -19 ಪ್ರಕರಣಗಳು ಗುರುವಾರ ಪತ್ತೆಯಾಗಿದ್ದು, ರಾಜ್ಯದ ಸೋಂಕಿನ ಪ್ರಕರಣಗಳ ಸಂಖ್ಯೆ 417 ಕ್ಕೆ ಏರಿದೆ, ಪೈಕಿ 350 ಸಕ್ರಿಯ ಪ್ರಕರಣಗಳಾಗಿವೆ.
  • ಪಂಜಾಬ್: ಕೋವಿಡ್ಸಮುದಾಯ ಹರಡುವಿಕೆ ಮತ್ತು ರಾಜ್ಯದಲ್ಲಿ ಸಾಂಕ್ರಾಮಿಕ ಉತ್ತುಂಗ ಇನ್ನೂ ಎರಡು ತಿಂಗಳುಗಳಷ್ಟು ದೂರದಲ್ಲಿದೆ ಎಂದು ಸೂಚಿಸುವ ಪ್ರಕ್ಷೇಪಗಳ ಮಧ್ಯೆ, ವಾರಾಂತ್ಯ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ಮಾಡಲು ಪಂಜಾಬ್ ಮುಖ್ಯಮಂತ್ರಿ ಆದೇಶಿಸಿದ್ದಾರೆ,  ಓಡಾಟವನ್ನು -ಪಾಸ್ ಹೊಂದಿರುವವರಿಗೆ ಮಾತ್ರ ಸೀಮಿತಗೊಳಿಸಬೇಕು. ಕೋವಿಡ್ ಪ್ರಕರಣಗಳು ವಿಶ್ವದಾದ್ಯಂತ ಹೆಚ್ಚುತ್ತಿರುವ ಕಾರಣ ಇಂತಹ ಕಠಿಣ ಕ್ರಮಗಳು ಅಗತ್ಯವೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಕಟ್ಟುನಿಟ್ಟಾದ ನಿರ್ಬಂಧಗಳು ಸಾಧ್ಯವಾದಷ್ಟು ಕಾಲ ಉತ್ತುಂಗಕ್ಕೆ ತಲುಪುವುದನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ, ಎಂದು ಅವರು ಹೇಳಿದರು, ಯಾವುದೇ ಆರಂಭಿಕ ಲಸಿಕೆ ಅಥವಾ ಚಿಕಿತ್ಸೆ ಕಾಣದಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಏಕೈಕ ಮಾರ್ಗವೆಂದರೆ ಕಟ್ಟುನಿಟ್ಟಾದ ಶಿಷ್ಟಾಚಾರ ಪಾಲನೆಯಾಗಿದೆ.
  • ಹಿಮಾಚಲ ಪ್ರದೇಶ: ಹಿಮ್ಕೇರ್ ಮತ್ತು ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಕರೋನದ ಪರೀಕ್ಷೆ ಮತ್ತು ಚಿಕಿತ್ಸೆಯ ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ರಾಜ್ಯದ ಸುಮಾರು 5.69 ಲಕ್ಷ ಅರ್ಹ ಜನರಿಗೆ ಮೂರು ತಿಂಗಳ ಅವಧಿಗೆ ಮುಂಚಿತವಾಗಿ ಸಾಮಾಜಿಕ ಭದ್ರತಾ ಪಿಂಚಣಿ ನೀಡಲಾಗಿದ್ದು, ಇದರಿಂದಾಗಿ ಸಮಾಜದ ದುರ್ಬಲ ವರ್ಗವು ಕರೋನಾ ಸಾಂಕ್ರಾಮಿಕ ರೋಗದಿಂದ ಯಾವುದೇ ಅನಾನುಕೂಲತೆಯನ್ನು ಎದುರಿಸುವುದಿಲ್ಲ. ಸಾಮಾಜಿಕ ಭದ್ರತಾ ಪಿಂಚಣಿಗೆ 44000 ಹೊಸ ಪ್ರಕರಣಗಳನ್ನು ಸಹ ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು.
  • ಕೇರಳ: ಜೂನ್ 9 ರಂದು ಮುಂಬೈನಿಂದ ಹಿಂದಿರುಗಿದ ನಂತರ ಕ್ವಾರಂಟೈನಾಗಿದ್ದ ಕಣ್ಣೂರಿನಲ್ಲಿ ಒಬ್ಬ ವ್ಯಕ್ತಿಯ ಸಾವಿನೊಂದಿಗೆ ಕೇರಳದಲ್ಲಿ ಕೋವಿಡ್ ಸಾವಿನ ಸಂಖ್ಯೆ 19 ಕ್ಕೆ ಏರಿದೆ. ಏತನ್ಮಧ್ಯೆ, ತ್ರಿಶೂರ್ ನಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರುತ್ತಿದ್ದಾರೆ, ಅಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಸಂಪರ್ಕ ಹೆಚ್ಚುತ್ತಿದೆ. ಕೋವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಬಸ್ ನಿರ್ವಾಹಕರಿಗೆ ಪ್ರಯಾಣಿಕರಿಂದ ಹೆಚ್ಚಿದ ಶುಲ್ಕವನ್ನು ಸಂಗ್ರಹಿಸಲು ಅವಕಾಶ ನೀಡುವ ಏಕ ನ್ಯಾಯಾಧೀಶರ ಪೀಠದ ಆದೇಶವನ್ನು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ಇಂದು ತಡೆಹಿಡಿದಿದೆ. ಇನ್ನೂ ಆರು ಮಂದಿ ಕೇರಳಿಗರು ಕೊಲ್ಲಿ ರಾಷ್ಟ್ರದಲ್ಲಿ ಕೋವಿಡ್-19 ಕ್ಕೆ ಬಲಿಯಾಗಿದ್ದಾರೆ, ಕೊಲ್ಲಿಯಲ್ಲಿ ವೃತಪಟ್ಟ ಕೇರಳೀಯರ ಸಂಖ್ಯೆ 215 ಕ್ಕೆ ತಲುಪಿದೆ. ಸುಮಾರು 300 ಕೇರಳಿಗರು ರಾಜ್ಯದ ಹೊರಗೆ ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ನಿನ್ನೆ 83 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. 1,258 ರೋಗಿಗಳು ಈಗ ಚಿಕಿತ್ಸೆಯಲ್ಲಿದ್ದಾರೆ.
  • ತಮಿಳುನಾಡು: ಆನ್ಲೈನ್ ಅಥವಾ ಭೌತಿಕ ಮಾರಾಟದ ಮೂಲಕ ಮದ್ಯ ಮಾರಾಟ ಮಾಡುವ ವಿಧಾನವನ್ನು ರೂಪಿಸಲು ಸರ್ವೋನ್ನತ ನ್ಯಾಯಾಲಯ ತಮಿಳುನಾಡು ಸರ್ಕಾರಕ್ಕೆ ಅವಕಾಶ ನೀಡಿದೆ. ವಿದೇಶದಲ್ಲಿ ಸಿಲುಕಿರುವ ತಮಿಳರ ಬಗ್ಗೆ ಮದ್ರಾಸ್ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರಕ್ಕೆ ನೋಟಿಸ್ ನೀಡಿದೆ. ಚೆನ್ನೈ-ಚೆಂಗಲ್ಪಟ್ಟು ಗಡಿಯಲ್ಲಿ ವಾಹನ ತಪಾಸಣೆ ತೀವ್ರಗೊಂಡಿದ್ದು, ಸಿಂಧುತ್ವ ಇರುವ -ಪಾಸ್ ಕಡ್ಡಾಯವಾಗಿದೆ. ವದಂತಿಗಳಿಗೆ ತುತ್ತಾಗಿ, ತಮಿಳುನಾಡು ಸರ್ಕಾರ ಚೆನ್ನೈನಲ್ಲಿ ಸಂಪೂರ್ಣ ಲಾಕ್ ಡೌನ್ ಇರುವುದಿಲ್ಲ ಎಂದು ಹೇಳಿದೆ. 1875 ಹೊಸ ಪ್ರಕರಣಗಳು, 1372 ಗುಣಮುಖ ಮತ್ತು 23 ಸಾವುಗಳು , ಚೆನ್ನೈನಿಂದ 1406 ಪ್ರಕರಣಗಳು ನಿನ್ನೆ ವರದಿಯಾಗಿವೆ. ಒಟ್ಟು ಪ್ರಕರಣಗಳು: 38716, ಸಕ್ರಿಯ ಪ್ರಕರಣಗಳು: 17659, ಸಾವುಗಳು: 349, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 13310.
  • ಕರ್ನಾಟಕ: ಸಂಪೂರ್ಣ ಅನ್ಲಾಕ್ ಮಾಡಿದ ನಂತರ ರಾಜ್ಯದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಮತ್ತು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ಏತನ್ಮಧ್ಯೆ, ಐಎಲ್. (ಇನ್ ಫ್ಲುಯಂಜಾ ರೀತಿಯ ರೋಗಲಕ್ಷಣ) ರೋಗಿಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. 204 ಹೊಸ ಪ್ರಕರಣಗಳು, 114 ಬಿಡುಗಡೆ ಮತ್ತು ಮೂರು ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಸಕಾರಾತ್ಮಕ ಪ್ರಕರಣಗಳು: 6245, ಸಕ್ರಿಯ ಪ್ರಕರಣಗಳು: 3195, ಸಾವುಗಳು: 72, ಚೇತರಿಕೆ: 2976.
  • ಆಂಧ್ರಪ್ರದೇಶ: ಬಹುಕೋಟಿ ಇಎಸ್‌.ಐಸಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಶ್ರೀಕಾಕುಲಂ ಜಿಲ್ಲೆಯಲ್ಲಿ ಮಾಜಿ ಸಚಿವ ಮತ್ತು ಟಿಡಿಪಿ ಮುಖಂಡ ಕೆ ಅಚ್ಚನ್ ನಾಯ್ಡು ಅವರನ್ನು ಎಸಿಬಿ ಬಂಧಿಸಿದೆ. ಪ್ರಕರಣಗಳಲ್ಲಿ ಹೆಚ್ಚಳದ ನಡುವೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಲು ರಾಜ್ಯ ನಿರ್ಧರಿಸುತ್ತದೆ. ನಿಯಮಿತ, ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ 9,712 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಟಿಟಿಡಿ ನೌಕರನಲ್ಲಿ ಕೋವಿಡ್ -19 ಸೋಂಕು ದೃಢಪಟ್ಟ ಬಳಿಕ ತಿರುಪತಿಯ ಶ್ರೀ ಗೋವಿಂದರಾಜ ಸ್ವಾಮಿ ದೇವಸ್ಥಾನವನ್ನು ಮುಚ್ಚಲಾಗಿದೆ. ಕಳೆದ 24 ಗಂಟೆಗಳಲ್ಲಿ 11,775 ಮಾದರಿಗಳನ್ನು ಪರೀಕ್ಷಿಸಿದ ನಂತರ 141 ಹೊಸ ಪ್ರಕರಣಗಳು, 59 ಬಿಡುಗಡೆ  ಆಗಿದ್ದು ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಪ್ರಕರಣಗಳು: 4402. ಸಕ್ರಿಯ: 1723,  ಗುಣವಾದವರು: 2599, ಸಾವುಗಳು: 80.
  • ತೆಲಂಗಾಣ: ಗಾಂಧಿ ಆಸ್ಪತ್ರೆಯ ಕಿರಿಯ ವೈದ್ಯರು ಶುಕ್ರವಾರ ಬೆಳಗ್ಗೆ ತಮ್ಮ ಮುಷ್ಕರವನ್ನು ಷರತ್ತುಬದ್ಧವಾಗಿ ರದ್ದುಪಡಿಸಿದ್ದಾರೆ ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಕರ್ತವ್ಯವನ್ನು ಪುನರಾರಂಭಿಸಿದ್ದಾರೆ. ಎಲ್ಲಾ ತೆಲಂಗಾಣ ಜಿಲ್ಲೆಗಳು ಮತ್ತೆ ಕರೋನಾ ವೈರಸ್ ನಿಯಂತ್ರಣದಲ್ಲಿದೆ. ಒಟ್ಟು ಪ್ರಕರಣಗಳ ಸಂಖ್ಯೆ 4,320 ಕ್ಕೆ ಏರುತ್ತದೆ, ಅದರಲ್ಲಿ 2,162 ಸಕ್ರಿಯ ಪ್ರಕರಣಗಳಾಗಿವೆ.
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ 13,479 ಸಂಖ್ಯೆಯ ಕೋವಿಡ್ -19 ಪರೀಕ್ಷೆಗಳನ್ನು ಈವರೆಗೆ ನಡೆಸಲಾಗಿದೆ. ಒಟ್ಟು ಪ್ರಕರಣಗಳು 67 ಮತ್ತು ಸಕ್ರಿಯ ಪ್ರಕರಣಗಳು 63. ಅರುಣಾಚಲ ಪ್ರದೇಶದಲ್ಲಿ ಲಾಕ್ಡೌನ್ ಉಲ್ಲಂಘನೆಯ ಒಟ್ಟು ಸಂಖ್ಯೆ 12,272. ಬಂಧನಕ್ಕೊಳಗಾದವರ ಸಂಖ್ಯೆ 624 ಮತ್ತು 891 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ದಂಡವಾಗಿ 27 ಲಕ್ಷ ರೂ. ವಸೂಲಿ ಮಾಡಲಾಗಿದೆ.
  • ಮಣಿಪುರ: ಆರೋಗ್ಯ ಸಚಿವರು ಕಾಮ್ಜಾಂಗ್ ಮತ್ತು ನೋನಿ ಜಿಲ್ಲೆಗಳಿಗೆ ಎರಡು ಆಂಬುಲೆನ್ಸ್ಗಳನ್ನು ಹಸ್ತಾಂತರಿಸಿದ್ದಾರೆ. ಕೋವಿಡ್-19 ರೋಗಿಗಳು ಮತ್ತು ಶಂಕಿತರ ಸಾಗಣೆಗಾಗಿ ಪಿಪಿಪಿ ಮಾದರಿಯಲ್ಲಿ ಆಂಬ್ಯುಲೆನ್ಸ್ಗಳನ್ನು ಸಂಗ್ರಹಿಸಲಾಗಿದೆ.
  • ಮಿಜೋರಾಂ: ಚೆನ್ನೈನಿಂದ ಹಿಂದಿರುಗಿದ ಎಲ್ಲರನ್ನೂ ಕೋವಿಡ್ -19 ಪರೀಕ್ಷಿಸಲಾಗುವುದು ಎಂದು ಮಿಜೋರಾಂ ಆರೋಗ್ಯ ಸಚಿವರು ತಿಳಿಸಿದ್ದಾರೆ. ಚೆನ್ನೈನಿಂದ ಮರಳಿದ ಹಲವರಲ್ಲಿ ನೆರೆಯ ರಾಜ್ಯಗಳಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
  • ನಾಗಾಲ್ಯಾಂಡ್: ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೋವಿಡ್ -19 ಉಪಕರ ವಿಧಿಸುವುದರ ವಿರುದ್ಧ ಸಲ್ಲಿಸಿದ ಪಿಐಎಲ್ ಗೆ ಪ್ರತಿಕ್ರಿಯೆಯನ್ನು ಸಲ್ಲಿಸಲು ಗುವಾಹಟಿ ಹೈಕೋರ್ಟ್, ಕೊಹಿಮಾ ನ್ಯಾಯಪೀಠವು ನಾಗಾಲ್ಯಾಂಡ್ ಸರ್ಕಾರಕ್ಕೆ 3 ವಾರಗಳ ಕಾಲಾವಕಾಶ ನೀಡಿದೆ. ಸಾಂಪ್ರದಾಯಿಕ ಗುಡಿಸಿಲುಗಳು ನಾಗಾಲ್ಯಾಂಡ್ ಡಿಫುಪರ್ನಲ್ಲಿ ಲೋಥಾ ಹಿಂದಿರುಗಿದವರಿಗೆ ಸಿದ್ಧವಾಗಿವೆ. ಸಾಂಪ್ರದಾಯಿಕ ನಾಗಾ ಶೈಲಿಯಲ್ಲಿ ನಿರ್ಮಿಸಲಾದ ಗುಡಿಸಿಲುಗಳಲ್ಲಿ ಲೋಥಾ ಸಮುದಾಯದ ಸುಮಾರು 15 ಜನರು ವಾಸಿಸುತ್ತಾರೆ.
  • ತ್ರಿಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಪರಿಶೀಲನೆ ನಡೆಸಿದ್ದು, ಕೋವಿಡ್ -19 ಸಾಂಕ್ರಾಮಿಕ ರೋಗದ ಬಗ್ಗೆ ಚರ್ಚಿಸಿದ್ದಾರೆ.

Image

***



(Release ID: 1631621) Visitor Counter : 230