PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 06 JUN 2020 6:27PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್ -19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ವರದಿ

ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 4,611 ಕೋವಿಡ್ ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ಈವರೆಗೆ ಗುಣವಾದವರ ಸಂಖ್ಯೆ 1,14,073 ರೋಗಿಗಳು ಕೋವಿಡ್ 19ರಿಂದ ಗುಣವಾದಂತಾಗಿದೆ. ಚೇತರಿಕೆ ದರ ಶೇ. 48.20 ಆಗಿದೆ. ಪ್ರಸ್ತುತ, 1,15,942 ಸಕ್ರಿಯ ಪ್ರಕರಣಗಳಿದ್ದು, ಎಲ್ಲರೂ ಸೂಕ್ತ ವೈದ್ಯಕೀಯ ನಿಗಾದಲ್ಲಿದ್ದಾರೆ. ಐ.ಸಿ.ಎಂ.ಆರ್. ಮಾರಕ ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆ 520 ಮತ್ತು ಖಾಸಗಿ ಪ್ರಯೋಗಾಲಯಗಳ ಸಂಖ್ಯೆ 222 (ಒಟ್ಟು 742) ಆಗಿವೆ. 1,37,938 ಮಾದರಿಗಳನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ಪರೀಕ್ಷಿಸಲಾಗಿದೆ. ಇದರೊಂದಿಗೆ ಈವರೆಗೆ ಪರೀಕ್ಷಿಸಲಾದ ಮಾದರಿಗಳ ಸಂಖ್ಯೆ 45,24,317 ಆಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1629839

ಓಪಿ ಸಮುದ್ರ ಸೇತು .ಎನ್.ಎಸ್. ಜಲಾಶ್ವ ಮಾಲೆಯಿಂದ 700 ಭಾರತೀಯರನ್ನು ಹೊತ್ತು ತೂತುಕುಡಿಯತ್ತ ಪ್ರಯಾಣ ಬೆಳೆಸಿದೆ

ಭಾರತೀಯ ರಾಷ್ಟ್ರೀಯರನ್ನು ವಿದೇಶದಿಂದ ಕರೆತರುವ ರಾಷ್ಟ್ರೀಯ ಪ್ರಯತ್ನಕ್ಕೆ ನೌಕಾಪಡೆಯ ಬೆಂಬಲವಾಗಿ 2020ರ ಜೂನ್ 4ರಂದು ಮಾಲ್ಡೀವ್ಸ್ ಮಾಲೆಯನ್ನು ತಲುಪಿಸಿದ ಜಲಾಶ್ವ ಹಡಗು ಸಮುದ್ರ ಸೇತು ಕಾರ್ಯಾಚರಣೆಯಡಿ 700 ಭಾರತೀಯರನ್ನುಹೊತ್ತು 2020 ಜೂನ್ 05ರಂದು ಸಂಜೆ ಭಾರತಕ್ಕೆ ಪ್ರಯಾಣ ಬೆಳೆಸಿತು. ಈ ಹಡಗಿನಲ್ಲಿ ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು, ಇದು 2020ರ ಜೂನ್ ರಂದು ತೂತುಕುಡಿ ತಲುಪುವ ನಿರೀಕ್ಷೆ ಇದೆ.

ವಿವರಗಳಿಗೆ: https://pib.gov.in/PressReleasePage.aspx?PRID=1629821

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ರವಾಂಡಾ ಅಧ್ಯಕ್ಷ ಘನತೆವೆತ್ತ ಪಾಲ್ ಕಗ್ಮೆ ನಡುವೆ ದೂರವಾಣಿ ಮಾತುಕತೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರವಾಂಡಾ ಅಧ್ಯಕ್ಷ ಘನತೆವೆತ್ತ ಶ್ರೀ ಪಾಲ್ ಕಗ್ಮೆ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ನಾಯಕರಿಬ್ಬರೂ ಕೋವಿಡ್ 19 ಸಾಂಕ್ರಾಮಿಕದಿಂದ ಆರೋಗ್ಯ ಕ್ಷೇತ್ರ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಎದುರಾಗಿರುವ ಸವಾಲುಗಳ ಕುರಿತು ಚರ್ಚಿಸಿದರು. ಬಿಕ್ಕಟ್ಟು ಪರಿಹರಿಸಲು ಪರಸ್ಪರ ದೇಶಗಳಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಪರಸ್ಪರರ ವಲಸೆ ನಾಗರಿಕರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ನಾಯಕರು ಒಪ್ಪಿದರು. ವೈದ್ಯಕೀಯ ಸಹಾಯವೂ ಸೇರಿದಂತೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ರುವಾಂಡಾದ ಪ್ರಯತ್ನಗಳಿಗೆ ಬೆಂಬಲ ನೀಡುವ ಭರವಸೆಯನ್ನು ಪ್ರಧಾನಿ ರುವಾಂಡಾದ ಅಧ್ಯಕ್ಷರಿಗೆ ನೀಡಿದರು.

ವಿವರಗಳಿಗೆ: https://pib.gov.in/PressReleasePage.aspx?PRID=1629677

ಗ್ರಾಮೀಣ ಭಾರತ ಮತ್ತು ಕೃಷಿಗೆ ಚೈತನ್ಯ ತುಂಬುವ ಉದ್ದೇಶದೊಂದಿಗೆ ಎರಡು ಅಧ್ಯಾದೇಶ ಹೊರಡಿಸಿದ ರಾಷ್ಟ್ರಪತಿಗಳು

ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ರೈತರ ಆದಾಯವನ್ನು ಹೆಚ್ಚಿಸಲು ಕೃಷಿ ವಲಯದಲ್ಲಿ ಸುಧಾರಣೆ ತರುವ ಹೆಗ್ಗುರುತಿನ ನಿರ್ಧಾರವನ್ನು ಭಾರತ ಸರ್ಕಾರ ಪ್ರಕಟಿಸಿದ ತರುವಾಯ ಭಾರತದ ರಾಷ್ಟ್ರಪತಿಯವರು ಕೃಷಿ ಮತ್ತು ಪೂರಕ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಮತ್ತು ಗ್ರಾಮೀಣ ಭಾರತಕ್ಕೆ ಚೈತನ್ಯ ತುಂಬುವ ಉದ್ದೇಶದೊಂದಿಗೆ ಕೆಳಕಂಡ ಅಧ್ಯಾದೇಶಗಳನ್ನು ಹೊರಡಿಸಿದ್ದಾರೆ: ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಅಧ್ಯಾದೇಶ 2020; ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ದರ ಖಾತ್ರಿ ಒಪ್ಪಂದ  ಮತ್ತು ಕೃಷಿ ಸೇವೆ ಕುರಿತ ಅಧ್ಯಾದೇಶ 2020.ಕೋವಿಡ್ -19 ಸನ್ನಿವೇಶದಲ್ಲಿ ಇಡೀ ಕೃಷಿಯ ಪರಿಸರವೇ ಪರೀಕ್ಷೆಗೆ ಒಳಪಟ್ಟಿದ್ದು, ಕೇಂದ್ರ ಸರ್ಕಾರ ತ್ವರಿತವಾಗಿ ಸುಧಾರಣಾ ಪ್ರಕ್ರಿಯೆ ಕೈಗೊಳ್ಳುವ ಮತ್ತು ಕೃಷಿ ಉತ್ಪನ್ನಗಳ ಅಂತರ-ರಾಜ್ಯ ಮತ್ತು ಅಂತಾರಾಜ್ಯ ವ್ಯಾಪಾರವನ್ನು ಸುಧಾರಿಸಲು ರಾಷ್ಟ್ರೀಯ ಕಾನೂನು ಮತ್ತು ಸುಗಮ ಪರಿಸರ ವ್ಯವಸ್ಥೆಯನ್ನು ತರುವ ಅಗತ್ಯವನ್ನು ಪುನರ್ ಪ್ರತಿಪಾದನೆ ಮಾಡಿತ್ತು. ಭಾರತ ಸರ್ಕಾರ ರೈತರು ತಮ್ಮ ಆಯ್ಕೆಯ ಸ್ಥಳದಲ್ಲಿ ಉತ್ತಮ ಬೆಲೆಗೆ ಹೆಚ್ಚಿನ ಉದ್ದೇಶಿತ ಖರೀದಿದಾರರಿಗೆ ತಮ್ಮ ಉತ್ಪನ್ನ ಮಾರಾಟ ಮಾಡುವ ಆಯ್ಕೆಯ ಅಗತ್ಯವನ್ನು ಮನಗಂಡಿತ್ತು. ಕೃಷಿ ಒಪ್ಪಂದಗಳಿಗೆ ಅನುಕೂಲಕರ ಚೌಕಟ್ಟನ್ನು ಸಹ ಅಗತ್ಯವೆಂದು ಪರಿಗಣಿಸಲಾಗಿದ್ದು, ಈ ಎರಡು ಸುಗ್ರೀವಾಜ್ಞೆಗಳನ್ನು ಪ್ರಕಟಿಸಲಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1629750

ಶ್ರೇಷ್ಠತೆ ಸಂಸ್ಥೆ ಯೋಜನೆ ಅಡಿಯಲ್ಲಿ ಮಂಜೂರಾದ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲು ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಂದು ಶ್ರೇಷ್ಠತೆ ಸಂಸ್ಥೆ ಯೋಜನೆ (ಐಓಇ)ಯಡಿ ಮಂಜೂರಾಗಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯ ವೇಳೆ ಸಚಿವರು, ಐಓಇ ಮತ್ತು ಎಚ್.ಇ.ಎಫ್.ಎ. ಕಾಮಗಾರಿಗಳ ನಿಗಾಕ್ಕಾಗಿ ಯೋಜನಾ ನಿರ್ವಹಣಾ ಘಟಕವನ್ನು ಎಂಎಚ್ಆರ್.ಡಿಯಲ್ಲಿ 15 ದಿನಗಳ ಒಳಗೆ ಸ್ಥಾಪಿಸಬೇಕು ಎಂದು ಸೂಚಿಸಿದರು. ಐಒಇಯ ವಿವಿಧ ಸಾರ್ವಜನಿಕ ಸಂಸ್ಥೆಗಳಿಗೆ ಎಂಎಚ್‌.ಆರ್‌.ಡಿಯಿಂದ ಬದ್ಧತೆಯ ಪತ್ರವನ್ನು ನೀಡಲಾಗುವುದು ಎಂದು ಶ್ರೀ ನಿಶಾಂಕ್ ಭರವಸೆ ನೀಡಿದರು. ಐಒಇಯ ಎಂಒಯು ಪ್ರಕಾರ ಮಾಡಿದ ಖರ್ಚಿಗೆ ಹಣವನ್ನು ಬಿಡುಗಡೆ ಮಾಡಲಾಗುವುದು. ನಿರ್ಮಾಣ ಚಟುವಟಿಕೆಗಳು ಈಗ ಮುಕ್ತವಾಗಿವೆ ಮತ್ತು ಕೋವಿಡ್ -19 ಕಾರಣದಿಂದಾಗಿ ಸ್ಥಗಿತಗೊಂಡಿರುವ ಐಒಇಗಳಲ್ಲಿ ಕೆಲಸವನ್ನು ತ್ವರಿತಗೊಳಿಸಬಹುದು ಎಂದು ಅವರು ಬಯಸಿದರು.

ವಿವರಗಳಿಗೆ: https://pib.gov.in/PressReleasePage.aspx?PRID=1629676

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಜ್ಞಾನದಲ್ಲಿ ದ್ವಿಪಕ್ಷೀಯ ಸಹಯೋಗಕ್ಕಾಗಿ ಕೋವಿಡ್-19 ಗಾಗಿ ಸಂಶೋಧನಾ ಪ್ರಸ್ತಾಪಗಳ ಆಹ್ವಾನ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ 2020ರಲ್ಲಿ ವಿಶೇಷ ಕೋವಿಡ್ 19 ಸಹಯೋಗಕ್ಕೆ 2020ರ ಜೂನ್ 4ರಂದು ನಡೆದ ಭಾರತ – ಆಸ್ಟ್ರೇಲಿಯಾ ನಾಯಕರ ವರ್ಚುಯಲ್ ಸಭೆಯ ವೇಳೆ ಜಂಟಿ ಘೋಷಣೆ ಮಾಡಿದ್ದರು. ಆ ಪ್ರಕಾರವಾಗಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಆಸ್ಟ್ರೇಲಿಯಾದ ಕೈಗಾರಿಕಾ ವಿಜ್ಞಾನ, ಇಂಧನ ಮತ್ತು ಸಂಪನ್ಮೂಲ ಇಲಾಖೆ (ಡಿಐಎಸ್ಇಆರ್) ಗಳು ಜಂಟಿಯಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಿರ್ವಹಿಸುವ ಮತ್ತು ಹಣಕಾಸು ಬೆಂಬಲ ನೀಡಿರುವ ವಿಜ್ಞಾನದಲ್ಲಿನ ದ್ವಿಪಕ್ಷೀಯ ಸಹಯೋಗ ವೇದಿಕೆಯಾದ ಆಸ್ಟ್ರೇಲಿಯಾ – ಇಂಡಿಯಾ ವ್ಯೂಹಾತ್ಮಕ ಸಂಶೋಧನಾ ನಿಧಿ (ಎಐಎಸ್ಆರ್.ಎಫ್) ಅಡಿಯಲ್ಲಿ  ಆಸಕ್ತ ವಿಜ್ಞಾನಿಗಳು ಮತ್ತು ಸಂಶೋಧಕರಿಂದ ಕೋವಿಡ್ 19 ಕುರಿತಂತೆ ಸಂಶೋಧನಾ ಯೋಜನೆಗಳನ್ನು ಆಹ್ವಾನಿಸಿವೆ.

ವಿವರಗಳಿಗೆ: https://pib.gov.in/PressReleasePage.aspx?PRID=1629605

ಡಾ. ಜಿತೇಂದ್ರ ಸಿಂಗ್ ಅವರು ಮೋದಿ ಸರ್ಕಾರ 2.0 ಅಡಿಯಲ್ಲಿ ಡಿಓಎನ್..ಆರ್. ಸಚಿವಾಲಯದ ಅಡಿಯಲ್ಲಿನ ಒಂದು ವರ್ಷದ ಸಾಧನೆ ಕುರಿತಂತೆ ಕಿರುಹೊತ್ತಗೆ ಮತ್ತು ಅದರ -ಆವೃತ್ತಿಯನ್ನು ಬಿಡುಗಡೆ ಮಾಡಿದರು

ಒಂದು ರೀತಿಗಿಂತ ಹೆಚ್ಚಾಗಿ ಈಶಾನ್ಯ ವಲಯವು ಮಾದರಿಯಾಗಿ ಹೊರಹೊಮ್ಮಿದೆ ಎಂದು  ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ತಿಳಿಸಿದ್ದಾರೆ.  ಕಳೆದ ಆರು ವರ್ಷಗಳಲ್ಲಿ ಅಭಿವೃದ್ಧಿ ಮಾದರಿಯಾಗಿ ಯಶಸ್ವಿಯಾಗಿ ಹೊರಹೊಮ್ಮಿದ ವಲಯ ಕೊರೊನಾ ನಿರ್ವಹಣೆ ಮಾಡಿ ಸಾಮಾನ್ಯ ಕೆಲಸದ ಪರಿಸ್ಥಿತಿಗೆ ಮರಳಿ ಮಾದರಿಯಾಗಿದೆ, ಅದು ದೇಶಕ್ಕೇ ಮಾದರಿಯಾಗಿದೆ ಎಂದು ಹೇಳಿದರು. ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈಶಾನ್ಯ ವಲಯಕ್ಕೆ ನೀಡಿದ ಆದ್ಯತೆ ಮತ್ತು ಪ್ರೋತ್ಸಾಹದಿಂದಾಗಿ ಇದು ಸಾಧ್ಯವಾಗಿದೆ ಎಂದು ಡಾ.ಸಿಂಗ್ ತಿಳಿಸಿದರು.

ವಿವರಗಳಿಗೆ: https://pib.gov.in/PressReleasePage.aspx?PRID=1629908

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಅರುಣಾಚಲ ಪ್ರದೇಶ: ಕೋವಿಡ್ -19 ಪರೀಕ್ಷೆಗಳಿಗಾಗಿ ಒಟ್ಟು 10,790 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಸಕ್ರಿಯ ಪ್ರಕರಣಗಳು 46, ಒಬ್ಬರು ಚೇತರಿಸಿಕೊಂಡಿದ್ದಾರೆ. 1700 ಕ್ಕೂ ಹೆಚ್ಚು ಪರೀಕ್ಷೆಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.
  • ಅಸ್ಸಾಂ: ಅಸ್ಸಾಂನಲ್ಲಿ ಕೋವಿಡ್ -19 ಸಂಬಂಧ ಎರಡು ಬಾರಿಯ ಪರೀಕ್ಷೆಯಲ್ಲೂ ಸೋಂಕಿಲ್ಲ ಎದು ದೃಢಪಟ್ಟ ಬಳಿಕ 38 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಬಿಡುಗಡೆಯಾದ ರೋಗಿಗಳು 547, ಸಕ್ರಿಯ ರೋಗಿಗಳು 1770.
  • ಮಣಿಪುರ: ಮಣಿಪುರದಲ್ಲಿ 11ಜನರಲ್ಲಿ ಕೊವಿಡ್ ಸೋಂಕು ದೃಢಪಟ್ಟಿದೆ.  ಒಟ್ಟು ಪ್ರಕರಣಗಳು 143 ಕ್ಕೆ ಏರಿವೆ. ಚೇತರಿಸಿಕೊಂಡ ಪ್ರಕರಣಗಳು 52 ಆಗಿದ್ದು, ಚೇತರಿಕೆಯ ಪ್ರಮಾಣವು 36 ಪ್ರತಿಶತದಷ್ಟಿದೆ.
  • ಮಿಜೋರಾಂ: ಮಿಜೋರಾಂ ಕೋವಿಡ್ -19ಕ್ಕಾಗಿ ಆರ್.ಟಿ.-ಪಿ.ಸಿ.ಆರ್. ಪರೀಕ್ಷಾ ಯಂತ್ರವನ್ನು ಪಡೆದುಕೊಂಡಿದೆ. ಇದನ್ನು ಐಸ್ವಾಲ್ ಜೋರಾಮ್  ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಲಾಗುವುದು.
  • ನಾಗಾಲ್ಯಾಂಡ್: ಗುವಾಹಟಿಯಲ್ಲಿ ಸಿಲುಕಿದ್ದ ಇನ್ನೂ 12 ಮಂದಿ ನಾಗರಿಕರು ಏರ್ ಇಂಡಿಯಾ ವಿಮಾನದಲ್ಲಿ ನಾಗಾಲ್ಯಾಂಡ್‌ ಗೆ ಆಗಮಿಸಿದರು. ಕಡ್ಡಾಯ ಸ್ಕ್ರೀನಿಂಗ್ ಮತ್ತು ಪ್ರತ್ಯೇಕತೆಗಾಗಿ ಅವರನ್ನು ಅಗ್ರಿ ಎಕ್ಸ್‌ ಪೋಗೆ ಕಳುಹಿಸಲಾಯಿತು.. ಮೊಕೊಕ್ಚುಂಗ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಾಗಾಲ್ಯಾಂಡ್ ನಲ್ಲಿ ಟ್ರೂ-ನ್ಯಾಟ್ ಯಂತ್ರೋಪಕರಣಗಳ ಖರೀದಿಗೆ ಕೋವಿಡ್ -19 ಜಿಲ್ಲಾ ಕಾರ್ಯಪಡೆಗೆ 3 ಲಕ್ಷ ರೂ. ದೇಣಿಗೆ ನೀಡಿದೆ.
  • ಕೇರಳ: ರಾಜ್ಯವು ಇನ್ನೂ ಒಂದು ಕೋವಿಡ್ -19 ಸಾವನ್ನು ದಾಖಲಿಸಿದ್ದು, ಒಟ್ಟು ಸಾವಿನ ಸಂಖ್ಯೆ 15 ಕ್ಕೆ ಏರಿದೆ. ಮಲ್ಲಪುರಂನ ಮಂಜೇರಿ ಎಂ.ಸಿ.ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಫುಟ್ಬಾಲ್ ಆಟಗಾರ ಹಾಗೂ ಸಂತೋಷ್ ಟ್ರೋಫಿ ಆಟಗಾರ ಹಂಸಕ್ಕೋಯ (63) ಇಂದು ಸಾವಿಗೀಡಾಗಿದ್ದಾರೆ. ಕೋವಿಡ್‌ ಗೆ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾದ ರಾಜ್ಯದ ಮೊದಲ ವ್ಯಕ್ತಿ ಇವರಾಗಿದ್ದರು. ಅವರ 5 ಕುಟುಂಬ ಸದಸ್ಯರಿಗೂ ಕೋವಿಡ್‌ ಗಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಳಿಕೋಡ್ ಎಂಸಿಯಲ್ಲಿ ಕೋವಿಡ್ -19 ರೋಗಿಯೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿದ್ದ ನಂತರ ಕ್ವಾರಂಟೈನ್ ಆಗಿದ್ದ 190 ಆರೋಗ್ಯ ಕಾರ್ಯಕರ್ತರಲ್ಲಿ, 118 ಜನರ ಮಾದರಿಗಳಲ್ಲಿ ಸೋಂಕಿಲ್ಲ ಎಂದು ವರದಿ ಬಂದಿದೆ. ಕೊಲ್ಲಿಯಲ್ಲಿ ಮತ್ತೆ ಆರು ಕೇರಳಿಗರು ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 170ಕ್ಕೆ ಏರಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿನ್ನೆ ಮೂರು ಅಂಕಿ ತಲುಪಿದೆ, 111 ಜನರಲ್ಲಿ ಸೋಂಕು ದೃಢಪಟ್ಟಿದೆ. 973 ರೋಗಿಗಳು ಇನ್ನೂ ಚಿಕಿತ್ಸೆಯಲ್ಲಿದ್ದಾರೆ.
  • ತಮಿಳುನಾಡು: ಪುದುಚೇರಿಯಲ್ಲಿ ಕೋವಿಡೇತರ ರೋಗಿಗಳಿಗೆ ಜೂನ್ 8 ರಿಂದ ಇಂದಿರಾ ಗಾಂಧಿ ಎಂಸಿ ತೆರೆಯಲಿದೆ. ಈ ಮಧ್ಯೆ ಮತ್ತೆ ಐದು ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 104ಕ್ಕೆ ಏರಿದೆ. ತಮಿಳುನಾಡಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಚಿಕಿತ್ಸೆಗೆ ದಿನಕ್ಕೆ ದರ ನಿಗದಿಪಡಿಸಲಾಗಿದೆ: ಐಸಿಯುಗೆ ಗರಿಷ್ಠ 15,000 ರೂ; ಸಾಮಾನ್ಯ ವಾರ್ಡ್‌ ಗೆ, ಗ್ರೇಡ್ 1 ಮತ್ತು 2 ಆಸ್ಪತ್ರೆಗಳಲ್ಲಿ ಗರಿಷ್ಠ 7500 ರೂ. ಮತ್ತು ಗ್ರೇಡ್ 3 ಮತ್ತು 4 ಆಸ್ಪತ್ರೆಗಳಲ್ಲಿ 5000 ರೂ.; ವಲಸಿಗರ ಸ್ಥಾನದಲ್ಲಿ ತಮಿಳುನಾಡು ಕಾರ್ಮಿಕರನ್ನು ಬಳಸಿಕೊಳ್ಳಬೇಕೆಂದು ಕೈಗಾರಿಕೆಗಳಿಗೆ ಮುಖ್ಯಮಂತ್ರಿ ಕೋರಿದ್ದಾರೆ.  ಪ್ರಕರಣಗಳ ಸಂಖ್ಯೆಯಲ್ಲಿನ ತೀವ್ರ ಹೆಚ್ಚಳದಿಂದಾಗಿ ಚೆನ್ನೈ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆ ತೀವ್ರವಾಗಿ ಕಾಡುತ್ತಿದೆ. ನಿನ್ನೆ ಚೆನ್ನೈನಲ್ಲಿ 1116 ಪ್ರಕರಣಗಳೊಂದಿಗೆ 1438 ಹೊಸ ಪ್ರಕರಣ ಮತ್ತು 12 ಸಾವು ವರದಿಯಾಗಿದೆ. ಒಟ್ಟು ಪ್ರಕರಣಗಳು 28694, ಸಕ್ರಿಯ ಪ್ರಕರಣಗಳು 12697, ಸಾವು 232, ಬಿಡುಗಡೆ 15762, ಸಕ್ರಿಯ ಪ್ರಕರಣಗಳು ಚೆನ್ನೈನಲ್ಲಿ 9437.
  • ಕರ್ನಾಟಕ: ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಹೋಟೆಲ್‌ ಗಳು ಮತ್ತು ರೆಸ್ಟೋರೆಂಟ್‌ ಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡುತ್ತಿದೆ. ಮಹಾರಾಷ್ಟ್ರದಿಂದ ಹಿಂದಿರುಗಿದವರಿಗೆ ರಾಜ್ಯವು ಹೊಸ ಎಸ್‌.ಒಪಿ ನೀಡಿದೆ: ಸೋಂಕಿಲ್ಲ ಎಂಬ ವರದಿಯೊಂದಿಗೆ 21 ದಿನಗಳ ಹೋಂ ಕ್ವಾರಂಟೈನ್ ಎಂದು ತಿಳಿಸಿದೆ. ಸೋಂಕಿದ್ದ 16 ಪ್ರಕರಣಗಳು ಗುಣಮುಖವಾದ ನಂತರ ಚಿಕ್ಕಮಗಳೂರು ಜಿಲ್ಲೆ ಕೋವಿಡ್ ಮುಕ್ತವಾಗಿದೆ. ಒಂದೇ ದಿನ ಶುಕ್ರವಾರ 515 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಮತ್ತು ಏರಿಕೆ ಪ್ರವೃತ್ತಿ ಮುಂದುವರಿದಿದ್ದು, ಅವುಗಳಲ್ಲಿ 482 ಇತರ ರಾಜ್ಯಗಳಿಂದ ಬಂದಿವೆ. ಒಟ್ಟು ಸೋಂಕಿನ ಪ್ರಕರಣಗಳು: 4835, ಸಕ್ರಿಯ ಪ್ರಕರಣಗಳು: 3088, ಸಾವುಗಳು: 57, ಚೇತರಿಸಿಕೊಂಡವರು: 1688.
  • ಆಂಧ್ರಪ್ರದೇಶ: ತಿರುಮಲ ದೇವಸ್ಥಾನದಲ್ಲಿ ಜೂನ್ 8 ರಿಂದ ದರ್ಶನದ ಪ್ರಯೋಗ ನಡೆಸಲು ಸಜ್ಜಾಗಿದೆ; ಅಲಿಪ್ರಿ ಚೆಕ್ ಪೋಸ್ಟ್ ಫೂಲ್ ಪ್ರೂಫ್ ಕೋವಿಡ್-19 ಚೆಕ್ಪಾಯಿಂಟ್ ಆಗಿ ರೂಪಾಂತರಗೊಳ್ಳುತ್ತಿದೆ. ರಾಜ್ಯವು ಒಟ್ಟು 4,36,335 ಮಾದರಿಗಳನ್ನು ಪರೀಕ್ಷಿಸಿದ್ದು, ಶೇ.1.02ರಷ್ಟು ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 12771 ಮಾದರಿ ಪರೀಕ್ಷಿಸಿದ ನಂತರ 161 ಹೊಸ ಪ್ರಕರಣಗಳು ವರದಿಯಾಗಿದ್ದು, 29 ಮಂದಿ ಬಿಡುಗಡೆ ಆಗಿದ್ದಾರೆ ಮತ್ತು ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಪ್ರಕರಣಗಳು: 3588. ಸಕ್ರಿಯ: 1192, ಚೇತರಿಸಿಕೊಂಡವರು: 2323, ಸಾವುಗಳು: 73.  ಒಟ್ಟು ವಲಸಿಗರ ಪೈಕಿ 741 ಮಂದಿಗೆ ಸೋಂಕು ದೃಢಪಟ್ಟಿದ್ದು, ಅವರಲ್ಲಿ 467 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ವಿದೇಶದಿಂದ ಬಂದ 131 ಪ್ರಕರಣಗಳಲ್ಲಿ 127 ಪ್ರಕರಣಗಳು ಸಕ್ರಿಯವಾಗಿವೆ.
  • ತೆಲಂಗಾಣ: ಡಯಾಲಿಸಿಸ್ ರೋಗಿಗಳು ಮತ್ತು ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಮಾರಕ ಕರೋನಾ ವೈರಸ್‌ ಗೆ ಬಲಿಯಾಗುತ್ತಿದ್ದಾರೆ, ಇಂತಹ ನಾಲ್ಕು ಪ್ರಕರಣಗಳು ಶುಕ್ರವಾರ ವರದಿಯಾಗಿವೆ. ದಕ್ಷಿಣದಲ್ಲಿ ದ್ವಿತೀಯ ಸೋಂಕಿನ ದರದ ಪಟ್ಟಿಯಲ್ಲಿ ತೆಲಂಗಾಣ ಅಗ್ರಸ್ಥಾನದಲ್ಲಿದೆ, ಕೋವಿಡ್ -19 ಪ್ರಕರಣಗಳಲ್ಲಿ ಶೀಘ್ರ ಏರಿಕೆಯಾಗುವ ಭೀತಿಯೊಂದಿಗೆ ರಾಜ್ಯ ಭಾರತದಲ್ಲಿ ಆರನೇ ಸ್ಥಾನದಲ್ಲಿದೆ. ಜೂನ್ 4 ರಲ್ಲಿದ್ದಂತೆ ಒಟ್ಟು ಪ್ರಕರಣಗಳು 3290. ಈ ದಿನಾಂಕದವರೆಗೆ 448 ವಲಸಿಗರು ಮತ್ತು ವಿದೇಶಿ ಮರಳಿದವರಲ್ಲಿ ಸೋಂಕು ದೃಢಪಟ್ಟಿದೆ.
  • ಮಹಾರಾಷ್ಟ್ರ: 2,436 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಕೊರೊನಾ ವೈರಸ್  ಸೋಂಕಿನ ಪ್ರಕರಣಗಳ ಸಂಖ್ಯೆ 80,229 ಕ್ಕೆ ಏರಿದೆ; ಸಕ್ರಿಯ ಪ್ರಕರಣಗಳ ಸಂಖ್ಯೆ 42,215ಕ್ಕೆ ಏರಿದೆ. ಹಾಟ್ ಸ್ಪಾಟ್ ಮುಂಬೈ 1,150 ಹೊಸ ಸೋಂಕು ಪ್ರಕರಣ ವರದಿ ಆಗಿದೆ, ನಗರದಲ್ಲಿ ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 45,854 ಆಗಿದ್ದು, ಈ ಪೈಕಿ 25,539 ರೋಗಿಗಳು ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಚೇತರಿಕೆಯ ಪ್ರಮಾಣ ಶೇ.43.81 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.3.55 ಆಗಿದೆ.
  • ಗುಜರಾತ್: 510 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯವು ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು 19,000ಕ್ಕೆ ಹೆಚ್ಚಿದೆ. ಕೋವಿಡ್ -19 ಕಾರಣದಿಂದಾಗಿ ಶುಕ್ರವಾರ 35 ರೋಗಿಗಳು ಸಾವನ್ನಪ್ಪಿದ್ದಾರೆ, ಶುಕ್ರವಾರ ಒಂದೇ ದಿನ 344 ಜನರು ಚೇತರಿಸಿಕೊಂಡಿದ್ದಾರೆ. ರಾಜ್ಯದ ಚೇತರಿಕೆ ದರ ಸುಧಾರಿಸುತ್ತಿದೆ ಮತ್ತು ಈಗ ಅದು ಮೇ ಕೊನೆಯ ವಾರದಲ್ಲಿದ್ದ ಶೇ 44.3 ರಿಂದ ಶೇ 68.05 ರಷ್ಟಾಗಿದೆ
  • ಮಧ್ಯಪ್ರದೇಶ: 234 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯವು ಕೊರೊನಾ ವೈರಸ್ ಸೋಂಕಿನ ಪ್ರಕರಣ 8996 ಕ್ಕೆ ಏರಿದೆ, ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 2734 ರಷ್ಟಿದೆ. ಹೆಚ್ಚಿನ ಹೊಸ ಪ್ರಕರಣಗಳು ಇಂದೋರ್ ಮತ್ತು ಭೋಪಾಲ್ ಹಾಟ್‌ ಸ್ಪಾಟ್‌ಗಳಿಂದ ವರದಿಯಾಗಿವೆ. ನೀಮುಚ್ ಜಿಲ್ಲೆ. ಈವರೆಗೆ 384 ಜನರು ಸಾವನ್ನಪ್ಪಿದ್ದಾರೆ
  • ರಾಜಸ್ಥಾನ: 44 ಹೊಸ ಕೋವಿಡ್ -19 ಪ್ರಕರಣಗಳು ಇಂದು ವರದಿಯಾಗಿದ್ದು, ರಾಜ್ಯವು ಕರೋನ ವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆ 10,128 ಕ್ಕೆ ತಲುಪಿದೆ. ಹೊಸ ಪ್ರಕರಣಗಳಲ್ಲಿ ಹೆಚ್ಚಿನವು ಪಾಲಿ ಮತ್ತು ಚುರು ಜಿಲ್ಲೆಗಳಿಂದ ವರದಿಯಾಗಿವೆ. ಪ್ರಕರಣಗಳಲ್ಲಿ ದ್ವಿಗುಣಗೊಳಿಸುವ ಪ್ರಕರಣವು ರಾಜ್ಯದಲ್ಲಿ 20 ದಿನಗಳವರೆಗೆ ಏರಿದೆ. ಚೇತರಿಕೆ ದರವು ಶೇ.70 ಕ್ಕಿಂತ ಹೆಚ್ಚಾಗಿದೆ.
  • ಛತ್ತೀಸ್‌ಗಢ: ಶುಕ್ರವಾರ 127 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಮತ್ತು 18 ಹೊಸ ಪ್ರಕರಣಗಳು ಇಂದು ವರದಿಯಾಗಿವೆ, ಇದು ರಾಜ್ಯದ ಕೊರೊನಾ ವೈರಸ್ ಸೋಂಕು ದೃಢಪಟ್ಟ ಪ್ರಕರಣಗಳನ್ನು 894 ಕ್ಕೆ ಹೆಚ್ಚಿಸಿದೆ. ಇದು ರಾಜ್ಯದಲ್ಲಿ ಮಾರ್ಚ್ 18 ರಂದು  ಮೊದಲ ಪ್ರಕರಣ ಪತ್ತೆಯಾದ ದಿನದಿಂದ ಒಂದೇ ದಿನದಲ್ಲಿನ ಅತಿದೊಡ್ಡ ಏರಿಕೆಯಾಗಿದೆ. ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ 300 ಹೊಸ ಪ್ರಕರಣಗಳು ವರದಿಯಾಗಿವೆ.
  • ಗೋವಾ: 30 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್ ದೃಢವಾದ ಪ್ರಕರಣಗಳು 196 ಕ್ಕೆ ಏರಿಸಿದೆ. ರಾಜ್ಯಕ್ಕೆ ಬಂದ 415 ಪ್ರಯಾಣಿಕರನ್ನು ಕ್ವಾರಂಟೈನ್ ನಲ್ಲ ಇಡಲಾಗಿದೆ.

***



(Release ID: 1630174) Visitor Counter : 265