ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಅದರ ಮಾಧ್ಯಮ ಘಟಕಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವ ವಿಶೇಷ ಅಭಿಯಾನ 5.0


ವಿಶೇಷ ಅಭಿಯಾನ 5.0 ಅಡಿಯಲ್ಲಿ  ಪ್ರಮುಖ ಮೈಲಿಗಲ್ಲು ಸಾಧಿಸಿದ ಎಂಐಬಿ; 1.43 ಲಕ್ಷ ಕೆಜಿ ರದ್ದಿ ವಿಲೇವಾರಿ, 973 ಸ್ಥಳಗಳನ್ನು ಸ್ವಚ್ಛಗೊಳಿಸಲಾಗಿದೆ ಮತ್ತು 14,000 ಕಡತಗಳ ಪರಿಶೀಲನೆ

ವಿಶೇಷ ಅಭಿಯಾನ 5.0 ಅಡಿಯಲ್ಲಿ ಸ್ವಚ್ಛತೆ, ದಕ್ಷತೆ ಮತ್ತು ಬಾಕಿ ಕಡತಗಳ ವಿಲೇವಾರಿಗೆ ಬದ್ಧತೆಯನ್ನು ಪುನರುಚ್ಚರಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯ

Posted On: 22 OCT 2025 1:56PM by PIB Bengaluru

ಸ್ವಚ್ಛತೆಯನ್ನು ಸಾಂಸ್ಥೀಕರಣಗೊಳಿಸಲು ಮತ್ತು ಬಾಕಿ ಇರುವ ಪ್ರಕರಣಗಳನ್ನುತಗ್ಗಿಸಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಲ್ಲಿ ಪೂರ್ಣ ಪ್ರಮಾಣದಲ್ಲಿ ವಿಶೇಷ ಅಭಿಯಾನ 5.0 ಅಡಿಯಲ್ಲಿ ನಡೆಯುತ್ತಿದೆ

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ದುಡಿಯುವ ಸ್ಥಳವನ್ನು ಸ್ವಚ್ಛವಾಗಿಡುವುದು, ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವುದು ಮತ್ತು ದಕ್ಷತೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದ್ದು, ಅದಕ್ಕಾಗಿ ದೇಶಾದ್ಯಂತ ಇರುವ ತನ್ನ ಮಾಧ್ಯಮ ಘಟಕಗಳು ಮತ್ತು ಕ್ಷೇತ್ರ ಕಚೇರಿಗಳೊಂದಿಗೆ ವಿಶೇಷ ಅಭಿಯಾನ 5.0 ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಅಭಿಯಾನದ ಅನುಷ್ಠಾನ ಹಂತವು 2025ರ ಅಕ್ಟೋಬರ್ 2 ರಿಂದ ಆರಂಭವಾಗಿದೆ ಮತ್ತು ಅಭಿಯಾನದ ಪೂರ್ವಸಿದ್ಧತಾ ಹಂತದಲ್ಲಿ ಅಂತಿಮಗೊಳಿಸಲಾದ ಗುರಿಗಳನ್ನು ಸಾಧಿಸಲು ನಿರ್ದಿಷ್ಟ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

2025ರ ಅಕ್ಟೋಬರ್ 2 ರಿಂದ 2025ರ ಅಕ್ಟೋಬರ್ 17 ರವರೆಗೆ ಅಭಿಯಾನದ ಮೊದಲ ಹದಿನೈದು ದಿನಗಳಲ್ಲಿ ಸಚಿವಾಲಯದ ಸಾಧನೆಗಳ ಮುಖ್ಯಾಂಶಗಳು ಈ ಕೆಳಗಿನಂತಿವೆ:

  • ಸಚಿವಾಲಯವು 493 ಹೊರಾಂಗಣ ಅಭಿಯಾನಗಳನ್ನು ನಡೆಸಿದೆ, 973 ಸ್ಥಳಗಳನ್ನು ಸ್ವಚ್ಛಗೊಳಿಸಿದೆ ಮತ್ತು 104 ಹಳೆಯ ವಾಹನಗಳನ್ನು ರದ್ದಿಗೆ ಹಾಕಲಾಗಿದೆ.
  • ಸುಮಾರು 1.43 ಲಕ್ಷ ಕೆಜಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗಿದೆ, ಇದರಿಂದಾಗಿ 34.27 ಲಕ್ಷ ರೂ. ಆದಾಯ ಬಂದಿದೆ ಮತ್ತು ಸುಮಾರು 8007 ಚದರ ಅಡಿ ಜಾಗವನ್ನು ಕಸಮುಕ್ತಗೊಳಿಸಲಾಗಿದೆ.
  • ಸುಮಾರು 13900 ಭೌತಿಕ ಕಡತಗಳನ್ನು ಪರಿಶೀಲಿಸಲಾಗಿದೆ, ಅವುಗಳಲ್ಲಿ 3957 ಅನ್ನು ವಿಲೇವಾರಿ ಮಾಡಲಾಗಿದೆ. ಒಟ್ಟು 585 -ಫೈಲ್ಗಳನ್ನು ಪರಿಶೀಲಿಸಿ, ಅವುಗಳಲ್ಲಿ 165 ಅನ್ನು ಸಮಾಪ್ತಿಗೊಳಿಸಲಾಗಿದೆ.
  • ಇತರ ಸಾಧನೆಗಳ ಜೊತೆಗೆ ಒಟ್ಟು 301 ಸಾರ್ವಜನಿಕ ಕುಂದುಕೊರತೆ, 57 ಪಿಜಿ ಮೇಲ್ಮನವಿ 16 ಸಂಸದರ ಉಲ್ಲೇಖಗಳು, 2 ರಾಜ್ಯ ಸರ್ಕಾರಿ ಉಲ್ಲೇಖ ಮತ್ತು 1 ಪಿಎಂಒ ಉಲ್ಲೇಖವನ್ನು ಸಹ ವಿಲೇವಾರಿ ಮಾಡಲಾಗಿದೆ.
  • ವಿಶೇಷ ಅಭಿಯಾನ 5.0 ಅಡಿಯಲ್ಲಿ ವಿವಿಧ ಕ್ರಮಗಳ ಪ್ರಗತಿ ಮೇಲ್ವಿಚಾರಣೆ ಮಾಡಲು ಸಚಿವಾಲಯದ ಅಧಿಕಾರಿಗಳ ತಂಡವನ್ನು ವಿವಿಧ ಕ್ಷೇತ್ರ ಕಚೇರಿಗಳಿಗೆ ನಿಯೋಜಿಸಲಾಗಿದೆ.

ಕೆಲಸದ ಸ್ಥಳದಲ್ಲಿ ಶುಚಿತ್ವ ಹೆಚ್ಚಿಸುವುದು, ಉತ್ಪಾದಕತೆಯನ್ನು ಹೆಚ್ಚಿಸುವುದು, ಸ್ವಚ್ಛತೆಯನ್ನು ಸಾಂಸ್ಥಿಕಗೊಳಿಸುವುದು, ಬಾಕಿ ಇರುವ ಕಡತಗಳನ್ನು ಸಕಾಲಿಕವಾಗಿ ವಿಲೇವಾರಿ ಮಾಡುವುದು ಮತ್ತು ಜವಾಬ್ದಾರಿಯುತ ಇ-ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುವುದು, ರಾಷ್ಟ್ರದ ಸ್ವಚ್ಛತೆ ಮತ್ತು ಸುಸ್ಥಿರತೆಗೆ ಕೊಡುಗೆ ನೀಡುವ ಅಭಿಯಾನದ ಗುರಿಗಳಿಗೆ ಸಚಿವಾಲಯ ಬದ್ಧವಾಗಿದೆ.

ಅಭಿಯಾನದ ಕೆಲವು ಮುಖ್ಯಾಂಶಗಳನ್ನು ಕೆಳಗೆ ನೀಡಲಾಗಿದೆ:

 

 

 

ನೈರ್ಮಲ್ಯ ಮತ್ತು ಸಮುದಾಯ ಮನೋಭಾವವನ್ನು ಉತ್ತೇಜಿಸಲು ಪಿಐಬಿ ಇಂಫಾಲ್‌ದ ವಿಶೇಷ ಅಭಿಯಾನ 5.0 ಅಡಿಯಲ್ಲಿ ಶಾಲೆಯಲ್ಲಿ ನೈರ್ಮಲ್ಯ ಅಭಿಯಾನ.

 

ಕೇಂದ್ರ ವಾರ್ತಾ  ಮತ್ತು ಪ್ರಸಾರ ಸಚಿವಾಲಯದ ನೋಡಲ್ ಅಧಿಕಾರಿ ಮತ್ತು ಹಿರಿಯ ಆರ್ಥಿಕ ಸಲಹೆಗಾರ ಆರ್. ಕೆ. ಜೆನಾ ಅವರು ಶಾಸ್ತ್ರಿ ಭವನದಲ್ಲಿರುವ ದಾಖಲೆ ಕೊಠಡಿ ಮತ್ತು ಸಚಿವಾಲಯದ ವಿವಿಧ ವಿಭಾಗಗಳಲ್ಲಿ ಸ್ವಚ್ಛತೆ ಮತ್ತು ಡಿಜಿಟಲೀಕರಣ ಮತ್ತು ಕಡತಗಳ ವಿಲೇವಾರಿ ಕಾರ್ಯವನ್ನು ಪರಿಶೀಲಿಸಿದರು.

 

*****


(Release ID: 2181510) Visitor Counter : 18