PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 21 JUN 2020 6:33PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

Coat of arms of India PNG images free download

http://164.100.117.97/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

Image

ಕೋವಿಡ್ -19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ವರದಿ: ಸಕ್ರಿಯ ಪ್ರಕರಣಗಳಿಗಿಂತಲೂ 50 ಸಾವಿರದಷ್ಟು ಹೆಚ್ಚಾದ ಕೋವಿಡ್ ಚೇತರಿಕೆಯ ಸಂಖ್ಯೆ. ಚೇತರಿಕೆ ದರ ಶೇ.55.49ಕ್ಕೆ ಏರಿಕೆ

ಕೋವಿಡ್ -19ನಿಂದ ಗುಣಮುಖರಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈವರೆಗೆ 2,27,755 ರೋಗಿಗಳು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 13,925 ಕೋವಿಡ್ ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದ ಚೇತರಿಕೆ ದರ ಶೇ.55.49ಕ್ಕೆ ಹೆಚ್ಚಳವಾಗಿದೆ. ಪ್ರಸ್ತುತ 1,69,451 ಸಕ್ರಿಯ ಪ್ರಕರಣಗಳಿದ್ದು, ಎಲ್ಲ ಸಕ್ರಿಯ ವೈದ್ಯಕೀಯ ನಿಗಾದಲ್ಲಿವೆ. ಇಂದು ಗುಣಮುಖರಾದ ರೋಗಿಗಳ ಸಂಖ್ಯೆ ಸಕ್ರಿಯ ರೋಗಿಗಳ ಸಂಖ್ಯೆಗಿಂತಲೂ 58,305ರಷ್ಟು ಹೆಚ್ಚಳವಾಗಿದೆ. ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆ 722ಕ್ಕೆ ಹೆಚ್ಚಳವಾಗಿದ್ದರೆ, ಖಾಸಗಿ ಪ್ರಯೋಗಾಲಯಗಳ ಸಂಖ್ಯೆ 259 (ಒಟ್ಟು 981) ಆಗಿದೆ. ಪ್ರತಿ ನಿತ್ಯ ಪರೀಕ್ಷಿಸಲಾಗುತ್ತಿರುವ ಮಾದರಿಗಳ ಸಂಖ್ಯೆಯಲ್ಲೂ ನಿರಂತರ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1,90,730 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈವರೆಗೆ ಒಟ್ಟು 68,07,226 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1633084

ಧಾರಾವಿಯಲ್ಲಿ ವೈರಾಣು ಬೆನ್ನಟ್ಟಿ”, ಮತ್ತು ದೈನಂದಿನ ಪ್ರಕರಣಗಳು ಮೇ ತಿಂಗಳಲ್ಲಿ ಸರಾಸರಿ 43 ರಿಂದ ಜೂನ್ ಮೂರನೇ ವಾರದಲ್ಲಿ 19 ಕ್ಕೆ ಇಳಿಯುವುದನ್ನು ಖಾತ್ರಿಪಡಿಸುತ್ತದೆ

ಪೂರ್ವಭಾವಿ, ಪೂರ್ವ ಯೋಜಿತ ಮತ್ತು ಶ್ರೇಣೀಕೃತ ಪ್ರತಿಕ್ರಿಯೆ ನೀತಿಯ ಮೂಲಕ, ಭಾರತ ಸರ್ಕಾರವು ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹಲವು ರಾಜ್ಯಗಳು ಕಂಟೈನ್ಮೆಂಟ್ ಕಾರ್ಯತಂತ್ರಗಳನ್ನು ಜಾರಿ ಮಾಡಿದ್ದು, ಸಮರ್ಥ ಫಲಶ್ರುತಿ ಬಂದಿದೆ. ಮಹಾರಾಷ್ಟ್ರ ಸರ್ಕಾರದ ಮತ್ತು ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಯತ್ನಗಳು ಉತ್ತೇಜನಕಾರಿ ಫಲಿತಾಂಶ ನೀಡಿವೆ. ಈ ಪ್ರಯತ್ನಗಳ ಭಾಗವಾಗಿ, ಅವರು ಸಕ್ರಿಯವಾಗಿ “ವೈರಾಣುವನ್ನು ಬೆನ್ನಟ್ಟಿದ್ದಾರೆ’’ ಮತ್ತು ಧಾರವಿ ಯಲ್ಲಿ ಕೋವಿಡ್ ಶಂಕಿತರ ಪತ್ತೆಯನ್ನು ಅಕ್ರಮಣಕಾರಿಯಾಗಿ ನಡೆಸಲಾಗಿದೆ. ತೀವ್ರ ಜನದಟ್ಟಣೆ (ಪ್ರತಿ ಕಿಲೋ ಮೀಟರ್ ಗೆ 2,27,136 ಜನರು) ಇರುವ ಧಾರಾವಿಯಲ್ಲಿ ಶೇ.12ರ ವೃದ್ಧಿಯೊಂದಿಗೆ ಏಪ್ರಿಲ್ 2020ರಲ್ಲಿ 491 ಪ್ರಕರಣ ಹೊಂದಿತ್ತು ಮತ್ತು ಪ್ರಕರಣಗಳ ದುಪ್ಪಟ್ಟು ಅವಧಿ 18 ದಿನವಾಗಿತ್ತು. ಪೂರ್ವಭಾವಿ ಕ್ರಮಗಳನ್ನು ಬಿಎಂಸಿ ಅಳವಡಿಸಿಕೊಂಡ ಬಳಿಕ ಕೋವಿಡ್ -19 ವೃದ್ಧಿ ಇಳಿಮುಖವಾಗಿದ್ದು, ವೃದ್ಧಿ ದರ ಮೇ 2020ರಲ್ಲಿ ಶೇ.4.3ಕ್ಕೆ ನಂತರ ಜೂನ್ ನಲ್ಲಿ ಶೇ.1.02 ಇಳಿದಿದೆ.  ಈ ಕ್ರಮಗಳು ಸೋಂಕು ದುಪ್ಪಟ್ಟು ಅವಧಿಯನ್ನು ಮೇ 2020ರಲ್ಲಿದ್ದ 43 ದಿನಗಳಿಂದ ಜೂನ್ 2020ರಲ್ಲಿ 78ದಿನಕ್ಕೆ ಹೆಚ್ಚಿಸಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1633177

ದೇಶದಾದ್ಯಂತ ಡಿಜಿಟಲ್ ಮಾಧ್ಯಮದ ಮೂಲಕ 6ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

ಆರನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ದೇಶದಾದ್ಯಂತ ತುಂಬು ಉತ್ಸಾಹದಿಂದ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಆಚರಿಸಲಾಯಿತು. ಪ್ರಧಾನಿ ಶ್ರೀ ನರೇಂದ್ರ ಮೋದಿ, ಈ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ, ಕುಟುಂಬದ ಬಾಂಧವ್ಯವನ್ನು ಬಲಪಡಿಸುವಲ್ಲಿ ಯೋಗದ ಮಹತ್ವವನ್ನು ಒತ್ತಿ ಹೇಳಿದರು. ಯೋಗ ಎಲ್ಲರನ್ನೂ ಹತ್ತಿರ ತಂದು ಮಕ್ಕಳು ಮತ್ತು ಹಿರಿಯರು ಸೇರಿ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದರು. ಈ ಕಾರಣಕ್ಕಾಗಿ, ಕುಟುಂಬಸ್ಥರೊಂದಿಗೆ ಯೋಗವನ್ನು ವರ್ಷದ ಐಡಿವೈ ಧ್ಯೇಯವಾಕ್ಯ ಮಾಡಲಾಯಿತು ಎಂದರು. ಕೋವಿಡ್ -19 ಮುಖ್ಯವಾಗಿ ಮಾನವ ಶರೀರದ ಉಸಿರಾಟದ ಅಂಗಗಳ ಮೇಲೆ ದಾಳಿ ಮಾಡುತ್ತಿದೆ ಮತ್ತು ಪ್ರಾಣಾಯಾಮ ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿ ಎಂದರು. ಅವರು ಹೇಳಿದರು, “ನಾವು ನಮ್ಮ ಆರೋಗ್ಯ ಮತ್ತು ವಿಶ್ವಾಸದ ಸ್ವರಮೇಳಗಳನ್ನು ರೂಪಿಸಲು ಸಾಧ್ಯವಾದರೆ, ಆರೋಗ್ಯಕರ ಮತ್ತು ಸಂತೋಷದ ಮಾನವತೆಯ ಯಶಸ್ಸಿಗೆ ಜಗತ್ತು ಸಾಕ್ಷಿಯಾಗುವ ದಿನ ದೂರವಿಲ್ಲ ಎಂದರು. ಇದನ್ನು ಮಾಡಲು ಯೋಗ ಖಂಡಿತವಾಗಿಯೂ ನಮಗೆ ಸಹಾಯ ಮಾಡುತ್ತದೆ. ” ಕೋವಿಡ್-19 ರ ಪ್ರಸ್ತುತ ಸಾಂಕ್ರಾಮಿಕ ರೋಗದಿಂದಾಗಿ, ಐಡಿವೈಯಲ್ಲಿ ಸಾಮೂಹಿಕ ಸಮಾವೇಶ ಸೂಕ್ತವಲ್ಲ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಜನರಿಗೆ ತಮ್ಮ ಮನೆಗಳಲ್ಲೇ ಕುಟುಂಬಸ್ಥರೊಂದಿಗೆ ಯೋಗಾಭ್ಯಾಸ ಮಾಡಲು ಉತ್ತೇಜಿಸಿತು ಎಂದರು.  ಈ ನಿಟ್ಟಿನಲ್ಲಿ ಆಯುಷ್ ಸಚಿವಾಲಯವು ಆನ್ ಲೈನ್ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಲು ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳ ವೇದಿಕೆಯನ್ನು ಗರಿಷ್ಠ ಬಳಕೆ ಮಾಡಿಕೊಂಡಿತು ಎಂದರು.

ವಿವರಗಳಿಗೆ: https://pib.gov.in/PressReleasePage.aspx?PRID=1633083

ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

ವಿವರಗಳಿಗೆ: https://pib.gov.in/PressReleasePage.aspx?PRID=1633041

ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ; ಕೋವಿಡ್ 19 ವೈರಾಣುವಿನ ವಿರುದ್ಧ ರೋಗನಿರೋಧಕ ವ್ಯವಸ್ಥೆ ಬಲಪಡಿಸುತ್ತದೆ: ಪ್ರಧಾನಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಯೋಗ ದಿನ ಏಕಮತ್ಯದ ದಿನ. ಇದು ಜಾಗತಿಕ ಭ್ರಾತೃತ್ವದ ದಿನ. ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಕೋವಿಡ್ -19 ಹಿನ್ನೆಲೆಯಲ್ಲಿ, ಈ ವರ್ಷ ಅಂತಾರಾಷ್ಟ್ರೀಯ ಯೋಗ ದಿನವನ್ನು ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ವೇದಿಕೆ ಮೂಲಕ ಆಚರಿಸಲಾಯಿತು. ಜನರು ತಮ್ಮ ಮನೆಗಳಲ್ಲಿ ಎಲ್ಲ ಕುಟುಂಬಸ್ಥರೊಂದಿಗೆ ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಯೋಗ ಎಲ್ಲರನ್ನೂ ಒಗ್ಗೂಡಿಸಿದೆ ಎಂದರು.

ವಿವರಗಳಿಗೆ: https://pib.gov.in/PressReleasePage.aspx?PRID=1633066

ಆನ್ ಲೈನ್ ಕಲಿಕೆ ಕಾರ್ಯಕ್ರಮದಲ್ಲಿ ಯೋಗವನ್ನು ಸೇರಿಸುವಂತೆ ಶೈಕ್ಷಣಿಕ ಸಂಸ್ಥೆಗಳಿಗೆ ಉಪ ರಾಷ್ಟ್ರಪತಿ ಆಗ್ರಹ

ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಆನ್ ಲೈನ್ ಕಲಿಕಾ ಕಾರ್ಯಕ್ರಮಗಳಲ್ಲಿ ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಉತ್ತಮ ಆಯ್ಕೆಯಾದ ಯೋಗವನ್ನೂ ಸೇರ್ಪಡೆ ಮಾಡುವಂತೆ ಶೈಕ್ಷಣಿಕ ಸಂಸ್ಥೆಗಳಿಗೆ ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರು ಆಗ್ರಹಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಸ್ಪಿಕ್ ಮೆಕೆ ಆಯೋಜಿಸಿದ್ದ ಡಿಜಿಟಲ್  “ಯೋಗ ಮತ್ತು ಧ್ಯಾನ ಶಿಬಿರ’’ ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿಗಳು, ಲಕ್ಷಾಂತರ ಜನರ ಬದುಕನ್ನು ಯಶಸ್ವಿಯಾಗಿ ಬದಲಾಯಿಸಿರುವ ಯೋಗ ಭಾರತ ವಿಶ್ವಕ್ಕೆ ನೀಡಿರುವ ಅಮೂಲ್ಯ ಕೊಡುಗೆ ಎಂದು ಹೇಳಿದರು. ಕೋವಿಡ್ -19ರಿಂದ ದೈಹಿಕ ಮತ್ತು ಮಾನಸಿಕ ಪರಿಣಾಮದ ಬಗ್ಗೆ ಪ್ರಸ್ತಾಪಿಸಿದ ಉಪ ರಾಷ್ಟ್ರಪತಿಯವರು “ವಿಶ್ವ ಸವಾಲಿನ ಸಂದರ್ಭದಲ್ಲಿ ಸಾಗಿದ್ದು, ನಾವು ಸಾಂಕ್ರಾಮಿಕಕ್ಕೆ ಬಲಗೊಳ್ಳಲು ಬಿಡಬಾರದು’ ನಾವು ಒಂದಾಗಬೇಕು ಮತ್ತು ಬಲವಾದ ಹೋರಾಟವನ್ನು ಮಾಡಬೇಕು ಮತ್ತು ದೈಹಿಕವಾಗಿ ಮತ್ತು ಮಾನಸಿಕವಾಗಿ ನಾವು ಆರೋಗ್ಯವಾಗಿದ್ದೇವೆ ಎಂದು ಖಚಿತಪಡಿಸಿಕೊಳ್ಳಬೇಕು." ಎಂದರು.

ವಿವರಗಳಿಗೆ: https://pib.gov.in/PressReleasePage.aspx?PRID=1633068

ಅಂತಾರಾಷ್ಟ್ರೀಯ ಯೋಗ ದಿನ 2020 ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ

ಯೋಗ ದೇಶವನ್ನು ಸದೃಢವಾಗಿಟ್ಟುಕೊಳ್ಳುವ ಮಾರ್ಗವಷ್ಟೇ ಅಲ್ಲ ಅದು ದೇಹ ಮತ್ತು ಮನಸ್ಸು, ಕಾರ್ಯ ಮತ್ತು ಚಿಂತನೆಗಳು ಹಾಗೂ ಮಾನವ ಮತ್ತು ಪ್ರಕೃತಿಯ ನಡುವೆ ಸಮತೋಲನ ಸಾಧಿಸುವ ಸಾಧನವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಯೋಗ ಭಾರತೀಯ ಸಂಸ್ಕೃತಿ ಇಡೀ ಮಾನವತೆಗೆ ನೀಡಿರುವ ಅನನ್ಯ ಕೊಡುಗೆಯಾಗಿದೆ ಎಂದು ಗೃಹ ಸಚಿವರು ತಿಳಿಸಿದರು.  ಪ್ರಧಾನಿ ನರೇಂದ್ರ ಮೋದಿ ಅವರ ಅವಿರತ ಪರಿಶ್ರಮದ ಫಲವಾಗಿ ಯೋಗಕ್ಕೆ ಇಂದು ವಿಶ್ವ ಮಾನ್ಯತೆ ದೊರೆತಿದ್ದು, ವಿಶ್ವ ಇದನ್ನು ಇಂದು ಅಳವಡಿಸಿಕೊಂಡಿದೆ ಎಂದರು.

ವಿವರಗಳಿಗೆ: https://pib.gov.in/PressReleasePage.aspx?PRID=1633076

ವಿವಿಧ ಸಮುದಾಯಗಳ ಜನರೊಂದಿಗೆ ತಮ್ಮ ನಿವಾಸದಲ್ಲಿ ಯೋಗ ಪ್ರದರ್ಶನದಲ್ಲಿ ಭಾಗಿಯಾದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ

ಕೇಂದ್ರ ಅಲ್ಪ ಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ ಅವರಿಂದು ತಮ್ಮ ನಿವಾಸದಲ್ಲಿ ವಿವಿಧ ಸಮುದಾಯಗಳ ಜನರೊಂದಿಗೆ ಆರನೇ ಅಂತಾರಾಷ್ಟ್ರೀಯ ಯೋಗ ದಿನದ ಯೋಗ ಪ್ರದರ್ಶನದಲ್ಲಿ ಭಾಗಿಯಾದರು. ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವರ್ಷದ ಐಡಿವೈನ ಘೋಷವಾಕ್ಯ ಕುಟುಂಬಸ್ಥರೊಂದಿಗೆ ಯೋಗ ಎಂಬುದಾಗಿದ್ದು, ಸಾಮೂಹಿಕ ಪ್ರದರ್ಶನಕ್ಕೆ ಅವಕಾಶವಿಲ್ಲ ಎಂದರು.

ವಿವರಗಳಿಗೆ: https://pib.gov.in/PressReleasePage.aspx?PRID=1633129

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

 • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಶನಿವಾರ 3,874 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಇದು ಒಂದು ದಿನದಲ್ಲಿ ಅತಿ ಹೆಚ್ಚು ಏರಿಕೆ ಆಗಿದೆ, ಇದರ ಪರಿಣಾಮವಾಗಿ ಒಟ್ಟು ಪ್ರಕರಣಗಳ ಸಂಖ್ಯೆ 1,28,205 ಕ್ಕೆ ತಲುಪಿದೆ. ರಾಜ್ಯವು 160 ಸಾವುಗಳನ್ನು ದಾಖಲಿಸಿದ್ದು, ಇದು ಎರಡನೇ ಅತಿ ಹೆಚ್ಚು ಏಕದಿನ ಏರಿಕೆಯಾಗಿದೆ, ಒಟ್ಟು ಸಾವಿನ ಸಂಖ್ಯೆ 5,984 ಕ್ಕೆ ತಲುಪಿದೆ. ಮಹಾರಾಷ್ಟ್ರದ ಪ್ರಕರಣಗಳ ಸುಮಾರು ಶೇ.51 ಮತ್ತು ಮುಂಬೈಯಿಂದ ಶೇ.59 ಸಾವುಗಳು ಬಂದಿವೆ. ರಾಜ್ಯವು ವೆಂಟಿಲೇಟರ್‌ಗಳ ಕೊರತೆಯನ್ನು ಎದುರಿಸುತ್ತಿರುವ ಕಾರಣ ಕೋವಿಡ್ -19 ರೋಗಿಗಳಿಗೆ ತಕ್ಷಣದ ಪರಿಹಾರ ನೀಡಲು ಆಮ್ಲಜನಕ ಸಿಲಿಂಡರ್‌ಗಳನ್ನು ಬಳಸುವಂತೆ ಮಹಾರಾಷ್ಟ್ರ ಸರ್ಕಾರ ಆಸ್ಪತ್ರೆಗಳಿಗೆ ಸೂಚಿಸಿದೆ. ಮಹಾರಾಷ್ಟ್ರದಲ್ಲಿ ಕೇವಲ 3,028 ವೆಂಟಿಲೇಟರ್‌ಗಳಿವೆ, ಇದು ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ಪರಿಗಣಿಸಿದರೆ ಸರಿದೂಗುವಂತಿಲ್ಲ.
 • ಗುಜರಾತ್: ಗುಜರಾತ್‌ನಲ್ಲಿ 539 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಏಕದಿನದಲ್ಲಿ ಎರಡನೇ ಅತಿ ಹೆಚ್ಚು ಹೆಚ್ಚಳ ಆಗಿದ್ದು, ರಾಜ್ಯದ ಪ್ರಕರಣಗಳ ಸಂಖ್ಯೆ 26,737 ಕ್ಕೆ ತಲುಪಿಸಿದೆ. ಶನಿವಾರ 20 ಸಾವುಗಳೊಂದಿಗೆ, ರಾಜ್ಯದ ಒಟ್ಟು ಸಾವಿನ ಸಂಖ್ಯೆ 1,639 ಕ್ಕೆ ಏರಿದೆ, ಅದರಲ್ಲಿ ಅಹಮದಾಬಾದ್ ಒಂದರಲ್ಲೇ 1,315 ಸಾವುಗಳನ್ನು ವರದಿ ಆಗಿವೆ.
 • ರಾಜಸ್ಥಾನ: ರಾಜಸ್ಥಾನದಲ್ಲಿ ಭಾನುವಾರ ಬೆಳಗ್ಗೆ 154 ಹೊಸ ಕರೋನ ವೈರಾಣು ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 14,691 ಕ್ಕೆ ತಲುಪಿದೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಭಾನುವಾರ ಅತಿ ಹೆಚ್ಚು ಪ್ರಕರಣಗಳು ಧೋಲ್ಪುರ್ (59), ಜೈಪುರ (31) ಮತ್ತು ಜುಂಜುನ್ (22) ಪ್ರಕರಣಗಳು ದಾಖಲಾಗಿವೆ. ಈ ಕಾಯಿಲೆಯಿಂದ ರಾಜ್ಯದಲ್ಲಿ ಈವರೆಗೆ 341 ಜನರು ಸಾವನ್ನಪ್ಪಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಬಾಧಿತವಾದ ರಾಜ್ಯದ ಗ್ರಾಮೀಣ ಪ್ರದೇಶದ 70 ಲಕ್ಷ ಕುಟುಂಬಗಳಿಗೆ ಅನುಕೂಲವಾಗುವಂತೆ ಮನ್ರೇಗಾ ಅಡಿಯಲ್ಲಿ ಉದ್ಯೋಗ ಮಿತಿಯನ್ನು 100 ರಿಂದ 200 ದಿನಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಅಶೋಕ್  ಗೆಹ್ಲೋಟ್ ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿದ್ದಾರೆ. ಲಾಕ್‌ ಡೌನ್ ಸಮಯದಲ್ಲಿ ರಾಜಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ಮನೆಗೆ ಮರಳಿದ್ದಾರೆ, ಆದರೆ ಪಿಎಂಜಿಕೆಆರ್‌.ವೈ ವ್ಯಾಪ್ತಿಗೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
 • ಮಧ್ಯಪ್ರದೇಶ: 142 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಮಧ್ಯಪ್ರದೇಶದಲ್ಲಿ ಸೋಂಕಿತ ರೋಗಿಗಳ ಸಂಖ್ಯೆ 11,724 ಕ್ಕೆ ತಲುಪಿದೆ. ಹೊಸ ಪ್ರಕರಣಗಳಲ್ಲದೆ, ಶನಿವಾರ ರಾಜ್ಯದಲ್ಲಿ ಆರು ಸಾವು ಸಂಭವಿಸಿವೆ. ಒಟ್ಟು ಸಾವಿನ ಸಂಖ್ಯೆ 501 ಕ್ಕೆ ತಲುಪಿದೆ.
 • ಮಣಿಪುರ: ಸಮುದಾಯ ಕ್ವಾರಂಟೈನ್ ನಲ್ಲಿ ಪ್ರಸ್ತುತ 14,983 ಜನರಿದ್ದರೆ, ಅಧಿಕೃತ ಕ್ವಾರಂಟೈನ್ ಕೇಂದ್ರಗಳಲ್ಲಿ 5,438 ಮತ್ತು ಪಾವತಿ ಕ್ವಾರಂಟೈನ್ ನಲ್ಲಿ 530 ಜನರು ಇದ್ದಾರೆ. ಮಣಿಪುರದಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುವವರಿಂದ ನಿನ್ನೆ ಪೊಲೀಸರು 349 ವಾಹನಗಳೊಂದಿಗೆ 599 ಜನರನ್ನು ವಶಕ್ಕೆ ಪಡೆದಿದ್ದರು; ಎಚ್ಚರಿಕೆ ನೀಡಿ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಅವರಿಂದ ಒಟ್ಟು 62,100 ರೂ. ದಂಡ ವಸೂಲಿ ಮಾಡಲಾಗಿದೆ.
 • ಮೇಘಾಲಯ: ಮೇಘಾಲಯದಲ್ಲಿ ಇನ್ನೂ 5 ಜನರು ಕೋವಿಡ್-19 ರಿಂದ ಚೇತರಿಸಿಕೊಂಡಿದ್ದಾರೆ ಮತ್ತು ಪರೀಕ್ಷೆಯಲ್ಲಿ ಸೋಂಕಿಲ್ಲ ಎಂದು ಬಂದಿದೆ. ಒಟ್ಟು ಪ್ರಕರಣಗಳು 44, ಒಟ್ಟು ಸಕ್ರಿಯ ಪ್ರಕರಣಗಳು 6, ಚೇತರಿಸಿಕೊಂಡವರು 37..
 • ಮಿಜೋರಾಂ: ಮಿಜೋರಾಂನ ನಾಗರಿಕ ಆಸ್ಪತ್ರೆ ಲುಂಗ್ಲೆ ಟ್ರುಯೆನಾಟ್ ಪ್ರಯೋಗಾಲಯದಲ್ಲಿ ನಿನ್ನೆ ಪರೀಕ್ಷಿಸಿದ 15 ಗಂಟಲು ದ್ರವ ಮಾದರಿಗಳಲ್ಲಿ 14ರಲ್ಲಿ ಕೋವಿಡ್-19 ಸೋಂಕಿಲ್ಲ ಎಂದು ದೃಢಪಟ್ಟಿದೆ. ಏಕೈಕ ಸೋಂಕಿನ ಪ್ರಕರಣವ ಜಡ್‌ಎಂಸಿ ಪ್ರಯೋಗಾಲಯ ದೃಢಪಡಿಸಬೇಕು. ಪ್ರಸ್ತುತ ಕ್ವಾರಂಟೈನ್ ನಲ್ಲಿ ಇರುವ ರೋಗಿಗಳನ್ನು ಡಿಸಿಎಚ್‌.ಸಿ ಲುಂಗ್ಲೇಗೆ ಸ್ಥಳಾಂತರಿಸಲಾಗಿದೆ.
 • ನಾಗಾಲ್ಯಾಂಡ್: ದಿಮಾಪುರದ ಡಿಸಿ ಅನೂಪ್ ಕಿಂಚಿ ದಿಮಾಪುರದ ಬರ್ಮಾ ಕ್ಯಾಂಪ್‌ನಲ್ಲಿ ವಲಸೆ ಕಾರ್ಮಿಕರಿಗಾಗಿ ಆತ್ಮ ನಿರ್ಭಾರ ಭಾರತ್ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಸುಮಾರು 100 ವಲಸೆ ಕಾರ್ಮಿಕರಿಗೆ ಪಡಿತರ ಅಕ್ಕಿ ವಿತರಿಸಲಾಗಿದೆ. ಸಾರ್ವಜನಿಕ ತ್ಯಾಜ್ಯ ತೊಟ್ಟಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೈ ಕೈಗವಸುಗಳು ಮತ್ತು ಮುಖಗವಸುಗಳಂತಹ ಪಿಪಿಇಗಳನ್ನು ವಿಲೇವಾರಿ ಮಾಡದಂತೆ ಕೊಹಿಮಾ ಮುನ್ಸಿಪಲ್ ಕಾರ್ಪೊರೇಷನ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ; ಸುರಕ್ಷಿತ ವಿಲೇವಾರಿಗಾಗಿ ಬಳಸಿದ ಪಿಪಿಇಗಳನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ಆಗ್ರಹಿಸಿದೆ.
 • ಕೇರಳ: ಆಟೋ ಚಾಲಕ ಮತ್ತು ಅವರ ಕುಟುಂಬ ಸದಸ್ಯರಲ್ಲಿ ಸೋಂಕು ದೃಢಪಟ್ಟಿದ್ದು, ರಾಜಧಾನಿ ತಿರುವನಂತಪುರಂನಲ್ಲಿ ಕಠಿಣ ಕೋವಿಡ್ -19 ಕಟ್ಟೆಚ್ಚರ ನೀಡಲಾಗಿದೆ. 80 -100ರ ವ್ಯಾಪ್ತಿಯಲ್ಲಿರಬಹುದಾದ ಅವರ ಹೆಚ್ಚಿನ ಸಂಪರ್ಕಗಳು ಇನ್ನೂ ತಿಳಿದಿಲ್ಲ. ನಗರದ ಕೆಲವು ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. ಏತನ್ಮಧ್ಯೆ, ಇತ್ತೀಚೆಗೆ ಸಾವಿಗೀಡಾದ ಕೋವಿಡ್ ರೋಗಿಯ  ಮೂಲ- ಅಬಕಾರಿ ಇಲಾಖೆಯ ಯುವ ಚಾಲಕ ಪತ್ತೆಯಾಗುವವರೆಗೂ ಕಣ್ಣೂರು ನಗರದಲ್ಲಿ ನಿರ್ಬಂಧಗಳನ್ನು ಮುಂದುವರಿಸಲಾಗುವುದು. ವಂದೇ ಭಾರತ್ ಅಭಿಯಾನದ ಅಂಗವಾಗಿ 1490 ಪ್ರವಾಸಿಗರು ಇಂದು ಕೊಚ್ಚಿಗೆ ತಲುಪಲಿದ್ದಾರೆ. ಕೊಲ್ಲಿ ಪ್ರದೇಶದಿಂದ ಏಳು ವಿಮಾನಗಳು ಅವರನ್ನು ಕರೆತರುತ್ತಿವೆ. 1610 ಪ್ರವಾಸಿಗರು ನಿನ್ನೆ ಒಂಬತ್ತು ವಿಮಾನಗಳಲ್ಲಿ ಕೊಚ್ಚಿಗೆ ಆಗಮಿಸಿದರು. ಏತನ್ಮಧ್ಯೆ, ದಮಾಮ್ ನಲ್ಲಿ ಇಂದು ಮತ್ತೊಬ್ಬ ಕೇರಳಿಗರು ಸಾವನ್ನಪ್ಪಿದ್ದಾರೆ, ಕೊಲ್ಲಿಯಲ್ಲಿ ಮಲಯಾಳಿಗಳ ಸಂಖ್ಯೆ 250 ಕ್ಕೆ ತಲುಪಿದೆ. ರಾಜ್ಯವು ಕೋವಿಡ್ -19 ಪ್ರಕರಣಗಳಲ್ಲಿ ಅತಿ ಹೆಚ್ಚು ಏಕದಿನ ಹೆಚ್ಚಳ ವರದಿ ಆಗಿದೆ. ನಿನ್ನೆ 127 ರೋಗಿಗಳಲ್ಲಿ ಸೋಂಕು ದೃಢಪಟ್ಟಿದೆ.
 • ತಮಿಳುನಾಡು: ಪುದುಚೇರಿಯಲ್ಲಿ ಕೋವಿಡ್ -19 ಗೆ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 30 ಸೋಂಕು ದೃಢಪಟ್ಟಿದೆ; ಇದರೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಸಾವುಗಳ ಸಂಖ್ಯೆ 366ಕ್ಕೆ ಏರಿದೆ ಮತ್ತು ಎಂಟು ಸಾವುಗಳು ಸಂಭವಿಸಿವೆ. ತಮಿಳು ನಾಡಿನಲ್ಲಿ 2,396 ಪ್ರಕರಣಗಳು, 38 ಸಾವು ವರದಿಯಾಗಿದ್ದು, ತಮಿಳುನಾಡು ಮುಖ್ಯಮಂತ್ರಿ ಜನರ ಬೆಂಬಲವನ್ನು ಕೋರಿದ್ದಾರೆ; ಸಾರ್ವಜನಿಕ ಸಹಕಾರವಿಲ್ಲದೆ ಏಕಾಏಕಿ ಹಬ್ಬಿರುವ ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ್ದಾರೆ. ನಿನ್ನೆ ತನಕ ಒಟ್ಟು ಪ್ರಕರಣಗಳು: 56845, ಸಕ್ರಿಯ ಪ್ರಕರಣಗಳು: 24822, ಸಾವು: 704, ಬಿಡುಗಡೆ: 30271, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 17285.
 • ಕರ್ನಾಟಕ: ಕಂಟೈನ್‌ಮೆಂಟ್ ವಲಯಗಳಲ್ಲದ ಪ್ರದೇಶಗಳಲ್ಲಿನ  ಸಾರ್ವಜನಿಕ ಉದ್ಯಾನವನಗಳನ್ನು ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ ತೆರೆಯಲು ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರಗಳಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಚಿಕಿತ್ಸೆಯ ದರಗಳನ್ನು ನಿಗದಿಪಡಿಸುವ ಮೊದಲೇ, ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕದ ಅಡಿಯಲ್ಲಿ ಪಟ್ಟಿಯಲ್ಲಿರುವ ಆರೋಗ್ಯ ಇಲಾಖೆಯು 518 ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು  ಆಸ್ಪತ್ರೆಗಳಿಗೆ ಕೋವಿಡ್ ರೋಗಿಗಳನ್ನು ಸರ್ಕಾರಿ ಶಿಷ್ಟಾಚಾರ ಮತ್ತು ಮಾನದಂಡಗಳ ಪ್ರಕಾರ ದಾಕಲಿಸಿಕೊಳ್ಳಲು ಮತ್ತು ಚಿಕಿತ್ಸೆ ನೀಡಲು ನಿರ್ದೇಶಿಸಿದೆ. 416 ಹೊಸ ಪ್ರಕರಣಗಳು, 181 ಬಿಡುಗಡೆ ಮತ್ತು ಒಂಬತ್ತು ಸಾವು ನಿನ್ನೆ ವರದಿಯಾಗಿವೆ. ಒಟ್ಟು ಸೋಂಕಿನ ಪ್ರಕರಣಗಳು: 8697, ಸಕ್ರಿಯ ಪ್ರಕರಣಗಳು: 3170, ಸಾವುಗಳು: 132.
 • ಆಂಧ್ರಪ್ರದೇಶ: ಕೊರೊನಾ ವೈರಸ್‌ ನಿಂದ ಅತ್ಯಂತ ಹೆಚ್ಚು ಬಾಧಿತವಾದ ಪ್ರದೇಶಗಳಲ್ಲಿ ಲಾಕ್‌ ಡೌನ್ ವಿಧಿಸುವ ಸಾಧ್ಯತೆ ಇದೆ. 24,451 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ ಐದು ಸಾವುಗಳೊಂದಿಗೆ 439 ಹೊಸ ಪ್ರಕರಣಗಳು ವರದಿಯಾಗಿವೆ, 151 ಜನ ಗುಣಮುಖರಾಗಿದ್ದಾರೆ. ಒಟ್ಟು ಪ್ರಕರಣಗಳು 7059, ಸಕ್ರಿಯ ಪ್ರಕರಣಗಳು 3599, ಚೇತರಿಸಿಕೊಂಡವರು 3354, ಸಾವು 106. ಕಳೆದ 24 ಗಂಟೆಗಳಲ್ಲಿ ಒಟ್ಟು ಅಂತಾ ರಾಜ್ಯ ಪ್ರಕರಣಗಳು 1540, ಸಕ್ರಿಯ 639, ಚೇತರಿಕೆ 901, ಇದೇ ಅವಧಿಯಲ್ಲಿ ಇತರ ರಾಜ್ಯಗಳ ಒಟ್ಟು ಪ್ರಕರಣಗಳು 330. ಸಕ್ರಿಯ 278, ಚೇತರಿಕೆ 52.
 • ತೆಲಂಗಾಣ: ಕೋವಿಡ್ -19 ಚಿಕಿತ್ಸೆಗಾಗಿ ಹೈದರಾಬಾದ್ ಮೂಲದ ಹೆಟೆರೊ ತನಿಖಾ ಆಂಟಿವೈರಲ್ ಔಷಧ ರೆಮ್ಡೆಸಿವಿರ್ಅನ್ನು ಭಾರತೀಯ ಔಷಧ ಮಹಾ ನಿಯಂತ್ರಕರು (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) (ಡಿಸಿಜಿಐ) ಯಿಂದ ಉತ್ಪಾದನೆ ಮತ್ತು ಮಾರುಕಟ್ಟೆ ಅನುಮೋದನೆ ಪಡೆದಿದೆ; 'ಕೋವಿಫೋರ್' 100 ಮಿಗ್ರಾಂ ಬಾಟಲಿಯಲ್ಲಿ (ಚುಚ್ಚುಮದ್ದು) ಲಭ್ಯವಿರುತ್ತದೆ, ಇದನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ಅಭಿದಮನಿ ಮೂಲಕ ನೀಡಬೇಕಾಗುತ್ತದೆ. ಇಲ್ಲಿಯವರೆಗೆ ಒಟ್ಟು ಪ್ರಕರಣಗಳು 7072, ಸಕ್ರಿಯ 3363, ಚೇತರಿಸಿಕೊಂಡವರು 3506, ಸಾವುಗಳು 203.

Image

***(Release ID: 1633520) Visitor Counter : 18