PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 14 JUN 2020 7:08PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

Image

ಕೋವಿಡ್ -19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ವರದಿ ; ಚೇತರಿಕೆ ದರ ಶೇ.50ಕ್ಕಿಂತ ಅಧಿಕ; ಒಟ್ಟು 1,62,378 ರೋಗಿಗಳು ಕೋವಿಡ್ -19ರಿಂದ ಗುಣಮುಖ

ಕಳೆದ 24 ಗಂಟೆಗಳಲ್ಲಿ 8049 ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದು, ಚೇತರಿಕೆ ದರ ಶೇ.50 ಮೀರಿದೆ. ಕೋವಿಡ್ -19ರಿಂದ ಒಟ್ಟು 1,62,378 ರೋಗಿಗಳು ಈವರೆಗೆ ಗುಣಮುಖರಾಗಿದ್ದಾರೆ. ಪ್ರಸ್ತುತ ಚೇತರಿಕೆ ದರ ಶೇ.50.60 ಆಗಿದೆ. ಇದು ಒಟ್ಟು ಕೋವಿಡ್ -19 ಪ್ರಕರಣಗಳ ಪೈಕಿ ಅರ್ಧದಷ್ಟು ರೋಗಿಗಳು ಗುಣವಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಸಕಾಲದಲ್ಲಿ ರೋಗದ ಪತ್ತೆ ಮತ್ತು ಸೂಕ್ತ ಚಿಕಿತ್ಸಾಲಯ ನಿರ್ವಹಣೆ ಚೇತರಿಕೆ ಮಾರ್ಗವಾಗಿದೆ. ಪ್ರಸ್ತುತ 1,49,348 ಸಕ್ರಿಯ ಪ್ರಕರಣಗಳಿದ್ದು, ಸೂಕ್ತ ವೈದ್ಯಕೀಯ ನಿಗಾದಲ್ಲಿವೆ.

ಐಸಿಎಂಆರ್ ಮಾರಕ ಕೊರೊನಾ ವೈರಾಣುವಿನಿಂದ ಸೋಂಕಿತರಾದವರ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಇದೆ. ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆ 646ಕ್ಕೆ ಹೆಚ್ಚಳವಾಗಿದ್ದು, ಖಾಸಗಿ ಪ್ರಯೋಗಾಲಯಗಳ ಸಂಖ್ಯೆಯೂ 247 ಕ್ಕೆ ಏರಿಕೆಯಾಗಿದೆ. (ಒಟ್ಟು 893). ಕಳೆದ 24 ಗಂಟೆಗಳ ಅವಧಿಯಲ್ಲಿ 1,51,432 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರೊಂದಿಗೆ ಈವರೆಗೆ ಪರೀಕ್ಷಿಸಲಾದ ಒಟ್ಟು ಮಾದರಿಗಳ ಸಂಖ್ಯೆ 56,58,614 ಆಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1631508

ಕೋವಿಡ್ -19 ಅಪ್ ಡೇಟ್: ರೆಮ್ಡಿಸಿವಿರ್ ಸ್ಥಿತಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2020ರ ಜೂನ್ 13ರಂದು ಕೋವಿಡ್ -19ಕ್ಕೆಸಂಬಂಧಿಸಿದಂತೆ ಚಿಕಿತ್ಸಾ ನಿರ್ವಹಣೆಯ ಶಿಷ್ಟಾಚಾರಗಳನ್ನು ನವೀಕರಿಸಿದ್ದು, ಅದರಲ್ಲಿ ಟೊಸಿಲಿಜುಮಾಬ್ ಮತ್ತು ಕಾನ್ವೆಲೆಸೆಂಟ್ ಪ್ಲಾಸ್ಮಾದ ಆಫ್ ಲೇಬಲ್ ಬಳಕೆಯೊಂದಿಗೆ ರಮ್ಡಿ ಸಿವಿರ್ ಅನ್ನು ತುರ್ತು ನಿರ್ಬಂಧಿತ ಉದ್ದೇಶದ ಬಳಕೆಗಾಗಿ “ತನಿಖಾ ಚಿಕಿತ್ಸೆ’ಯ ಪಟ್ಟಿಯಲ್ಲಿ ಸೇರಿಸಿದೆ.  ಈ ಶಿಷ್ಟಾಚಾರ ಚಿಕಿತ್ಸೆಗಳ ಬಳಕೆಯನ್ನು ಲಭ್ಯ ಸೀಮಿತ ಪುರಾವೆಗಳು ಮತ್ತು ರೋಗಿಗಳ ಸೀಮಿತ ಲಭ್ಯತೆಯ ಆಧಾರದಲ್ಲಿ ಸ್ಪಷ್ಟವಾಗಿ ಪ್ರಸ್ತಾಪಿಸಿದೆ. ರಮ್ಡಿ ಸಿವಿರ್ ಅನ್ನು ಯಾವುದೇ ನಿರ್ದಿಷ್ಟ ವಿರೋಧಾಭಾಸಗಳಿಲ್ಲದಂತೆ ಮಧ್ಯಮ ಕಾಯಿಲೆಯ (ಆಮ್ಲಜನಕದ ಮೇಲೆ) ರೋಗಿಗಳಲ್ಲಿ ತುರ್ತು ಬಳಕೆಗೆ ಪರಿಗಣಿಸಬಹುದು. ನಿರ್ಬಂಧಿತ ತುರ್ತು ಬಳಕೆಯ ಔಷಧವನ್ನು ದೇಶದಲ್ಲಿ ಶಂಕಿತರ ಅಥವಾ ಪ್ರಯೋಗಾಲಯಗಳಲ್ಲಿ ಕೋವಿಡ್ -19 ದೃಢಪಟ್ಟ ಆಸ್ಪತ್ರೆಗೆ ದಾಖಲಾಗಿರುವ ಹಾಗೂ ಕಾಯಿಲೆ ಗಂಭೀರವಾಗಿರುವ ವಯಸ್ಕರು ಮತ್ತು ಮಕ್ಕಳಿಗೆ ನಿರ್ದಿಷ್ಟ ಷರತ್ತುಗಳೊಂದಿಗೆ ಬಳಸಬಹುದು.

ವಿವರಗಳಿಗೆ: https://pib.gov.in/PressReleasePage.aspx?PRID=1631509

ಕೋವಿಡ್ -19 ವಿರುದ್ಧ ಭಾರತ ಹೋರಾಟದ ಪರಾಮರ್ಶೆ ನಡೆಸಿದ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಕೋವಿಡ್ -19 ಸಾಂಕ್ರಾಮಿಕದ ಕುರಿತಂತೆ ಭಾರತದ ಸ್ಪಂದನೆಯ ಬಗ್ಗೆ ವಿವರವಾದ ಸಭೆ ನಡೆಸಿದರು. ಸಭೆ ರಾಷ್ಟ್ರೀಯ ಮಟ್ಟದ ಸ್ಥಿತಿ ಮತ್ತು ಸಾಂಕ್ರಾಮಿಕದ ಹಿನ್ನೆಲೆಯಲ್ಲಿನ ಸಿದ್ಧತೆಗಳ ಬಗ್ಗೆ ಪರಾಮರ್ಶೆ ನಡೆಸಿತು. ದೆಹಲಿ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ್ರದೇಶಗಳ ಪರಿಸ್ಥಿತಿಯ ಬಗ್ಗೆಯೂ ಸಭೆಯಲ್ಲಿ ಪರಾಮರ್ಶಿಸಲಾಯಿತು. ಸಭೆಯಲ್ಲಿ ರಾಜಧಾನಿಯಲ್ಲಿನ ಕೋವಿಡ್ - 19 ರೋಗದ ಪ್ರಸ್ತುತ ಮತ್ತು ಹೊರಹೊಮ್ಮುತ್ತಿರುವ ಸನ್ನಿವೇಶದ ಬಗ್ಗೆಯೂ ಚರ್ಚಿಸಲಾಯಿತು ಮತ್ತು ಮುಂದಿನ 2 ತಿಂಗಳಗಳಲ್ಲಿನ ಸಂಭಾವ್ಯ ಪರಿಸ್ಥಿತಿ ಕುರಿತೂ ಪರಾಮರ್ಶಿಸಲಾಯಿತು. ಕೋವಿಡ್ -19 ನಿಂದ ಎದುರಾಗಿರುವ ಸವಾಲುಗಳನ್ನು ನಿರ್ವಹಿಸಲು ಸಮಗ್ರ ಸ್ಪಂದನೆ ಮತ್ತು ಸಂಘಟಿತ ಯೋಜನೆ ರೂಪಿಸಲು ಲೆಫ್ಟಿನೆಂಟ್ ಗೌರ್ನರ್, ಎನ್.ಸಿ.ಟಿ. ದೆಹಲಿ ಸರ್ಕಾರದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಭಾರತ ಸರ್ಕಾರದ ಮತ್ತು ದೆಹಲಿ ಸರ್ಕಾರದ ಎಲ್ಲ ಹಿರಿಯ ಅಧಿಕಾರಿಗಳು ಮತ್ತು ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ತುರ್ತು ಸಭೆ ಕರೆಯುವಂತೆ ೃಹ ಸಚಿವರು ಮತ್ತು ಆರೋಗ್ಯ ಸಚಿವರಿಗೆ ಪ್ರಧಾನಿ ಸಲಹೆ ಮಾಡಿದರು

http://static.pib.gov.in/WriteReadData/Gallery/PhotoGallery/2020/Jun/I2020061488833.JPG

ವಿವರಗಳಿಗೆ: https://pib.gov.in/PressReleasePage.aspx?PRID=1631389

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ದೆಹಲಿಯಲ್ಲಿನ ಕೋವಿಡ್ 19 ಪರಿಸ್ಥಿತಿ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿದ್ದರು

ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ದೆಹಲಿ ಲೆಫ್ಟಿನೆಂಟ್ ಗೌರ್ನರ್ ಶ್ರೀ ಅನಿಲ್ ಬೈಜಾಲ್, ಮುಖ್ಯಮಂತ್ರಿ ಶ್ರೀ ಅರವಿಂದ್ ಕೇಜ್ರೀವಾಲ್ ಮತ್ತು ಏಮ್ಸ್ ನಿರ್ದೇಶಕರಲ್ಲದೆ, ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರ ದೆಹಲಿಯಲ್ಲಿ ಕೋವಿಡ್ 19 ಪ್ರಸರಣ ತಡೆಯಲು ಮತ್ತು ರಾಷ್ಟ್ರರಾಜಧಾನಿಯನ್ನು ಸುರಕ್ಷಿತವಾಗಿಡಲು ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ಮೋದಿ ಸರ್ಕಾರ ಕೂಡಲೇ 500 ಪರಿವರ್ತಿತ ರೈಲು ಬೋಗಿಗಳನ್ನು ದೆಹಲಿ ಸರ್ಕಾರಕ್ಕೆ ಒದಗಿಸಲಿದ್ದು, 8000 ಹಾಸಿಗೆಗಳು ಕೋವಿಡ್ -19 ರೋಗಿಗಳಿಗೆ ದೊರೆಯಲಿದೆ ಎಂದು ಅವರು ಹೇಳಿದರು. ಕೋವಿಡ್ -19 ಪರೀಕ್ಷೆ 2 ದಿನಗಳಲ್ಲಿ ದ್ವಿಗುಣ ಮತ್ತು 6 ದಿನಗಳಲ್ಲಿ ತ್ರಿಗುಣವಾಗಲಿದೆ ಎಂದರು. ಖಾಸಗಿ ಆಸ್ಪತ್ರೆಗಳ ಕೊರೊನಾ  ಶೇ.60ರಷ್ಟು ಹಾಸಿಗೆಗಳು ಕಡಿಮೆ ದರದಲ್ಲಿ ಲಭ್ಯವಾಗುವುದನ್ನು ಖಾತ್ರಿ ಪಡಿಸಲು ಮತ್ತು ಕೊರೊನಾ ಪರೀಕ್ಷೆ ಮತ್ತು ಚಿಕಿತ್ಸೆಗೆ ದರ ನಿಗದಿ ಮಾಡಲು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.  ಸಮಿತಿ ನಾಳೆಯೊಳಗೆ ತನ್ನ ವರದಿ ಸಲ್ಲಿಸಲಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1631512

ಕೃಷಿ ವಲಯದಲ್ಲಿ ಖಾಸಗಿ ಹೂಡಿಕೆಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದ ನರೇಂದ್ರ ಸಿಂಗ್ ತೋಮರ್

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ಥೋಮರ್ ಅವರು ಕೃಷಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯ ಅಗತ್ಯ ಒತ್ತಿ ಹೇಳಿದ್ದಾರೆ. ಇದು ಕೃಷಿ ಕ್ಷೇತ್ರದಲ್ಲಿ ಸಮೃದ್ಧಿ ಹೆಚ್ಚಿಸಲಿದೆ, ಇದರ ಫಲವಾಗಿ ಸ್ವಾವಲಂಬನೆ ಹೆಚ್ಚಿ, ದೇಶದ ಪ್ರಗತಿ ಆಗಲಿದೆ ಎಂದು ಅವರು ತಿಳಿಸಿದರು. ಕೃಷಿ ಉತ್ಪನ್ನ ಹೆಚ್ಚಳಕ್ಕೆ ಮತ್ತು ಕ್ಷೇತ್ರದಲ್ಲಿನ ಕಷ್ಟಗಳನ್ನು ತಗ್ಗಿಸಲು ಕೊಡುಗೆ ನೀಡುವಂತೆ ಅವರು ವಿಜ್ಞಾನಿಗಳಿಗೆ ಕರೆ ನೀಡಿದರು. ವಿಶ್ವ ಆರ್ಥಿಕತೆಯ ಚಕ್ರಗಳು ನಿಧಾನವಾಗಿದ್ದಾಗ ಕೊರೊನಾ ವೈರಾಣು ಬಿಕ್ಕಟ್ಟಿನಲ್ಲಿ, ಭಾರತೀಯ ರೈತರು ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳೊಂದಿಗೆ ಬಂಪರ್ ಬೆಳೆ ತೆಗೆದಿದ್ದಾರೆ, ಲಾಕ್ ಡೌನ್ ಸಮಯದಲ್ಲಿ ಸಹ ಬೆಳೆ ಕೊಯ್ಲು ಸಾಮಾನ್ಯ ವೇಗದಲ್ಲಿ ಮುಂದುವರಿಯಿತು, ಇಳುವರಿ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಮತ್ತು ಮುಂಗಾರು ಬೆಳೆಗಳ ಬಿತ್ತನೆ ಕೂಡ ಕಳೆದ ವರ್ಷಕ್ಕಿಂತ ಶೇ.45ರಷ್ಟು ಹೆಚ್ಚಾಗಿದೆ. ಇದು ನಮ್ಮ ಹಳ್ಳಿಗಳು ಮತ್ತು ರೈತರ ಸಂಕಲ್ಪವನ್ನು ತೋರಿಸುತ್ತದೆ ಎಂದು ಶ್ರೀ ಥೋಮರ್ ಹೇಳಿದ್ದಾರೆ..

ವಿವರಗಳಿಗೆ: https://pib.gov.in/PressReleasePage.aspx?PRID=1631442

ಬಾರ್ಕ್ ನಲ್ಲಿ ಉನ್ನತ ಗುಣಮಟ್ಟ, ಕೈಗೆಟಕುವ ದರದ ಮಾಸ್ಕ್ ಅಭಿವೃದ್ಧಿ: ಡಾ. ಜಿತೇಂದ್ರ ಸಿಂಗ್

ಉನ್ನತ ಗುಣಮಟ್ಟದ ಮುಖ ಗವಸುಗಳನ್ನು ಅಣು ಇಂಧನ ಇಲಾಖೆಯ ಮಾನ್ಯತೆ ಪಡೆದ ಮುಂಬೈನ ಬಾಬಾ ಅಣು ಸಂಶೋಧನಾ ಕೇಂದ್ರ (ಬಾರ್ಕ್) ಅಭಿವೃದ್ಧಿಪಡಿಸಿದೆ. ಹೆಪ ಫಿಲ್ಟರ್ ಬಳಸಿ ಮಾಸ್ಕ್ ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಕೈಗೆಟಕುವ ದರದಲ್ಲಿದೆ. ಈ ವಿಷಯವನ್ನು ಕೇಂದ್ರದ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್, ಒಂದು ವರ್ಷದ ಸಾಧನೆಗಳನ್ನು ವಿವರಿಸುವ ವೇಳೆ ತಿಳಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲ ಸಮಾಜದ ಬೆಂಬಲಕ್ಕೆ ಬಂದ ವಿಜ್ಞಾನಿಗಳ ಸಮುದಾಯವನ್ನು ಅವರು ಶ್ಲಾಘಿಸಿದರು. ಉನ್ನತ ಗುಣಮಟ್ಟದ ಮಾಸ್ಕ್ ಜೊತೆಗೆ ಅಣು/ಪರಮಾಣು ವಿಜ್ಞಾನಿಗಳು ಸೋಂಕು ನಾಶದ ತರುವಾಯ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ಪುನರ್ ಬಳಕೆಯ ಶಿಷ್ಟಾಚಾರವನ್ನೂ ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿಸಿದರು. ಇದಕ್ಕಾಗಿ ರೂಪಿಸಲಾಗಿರುವ ಎಸ್‌.ಒಪಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪರಿಗಣನೆಯಲ್ಲಿದೆ ಎಂದು ಅವರು ತಿಳಿಸಿದರು. ಆರ್‌.ಟಿಪಿಸಿಆರ್ ಪರೀಕ್ಷಾ ಕಿಟ್‌ ಗಳನ್ನು ಅಭಿವೃದ್ಧಿಪಡಿಸಲು ಹೊಸ ಪ್ರದೇಶಗಳ ಗುರುತಿಸುವಿಕೆಯನ್ನು ಸಹ ಸಾಧಿಸಲಾಗಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು.

ವಿವರಗಳಿಗೆ: https://pib.gov.in/PressReleasePage.aspx?PRID=1631440

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

 • ಕೇರಳ: ಮಂಗಳವಾರ ಪ್ರಧಾನಮಂತ್ರಿಯೊಂದಿಗೆ ಮಾತುಕತೆ ನಡೆಸಿದ ನಂತರ ಚಾರ್ಟರ್ಡ್ ವಿಮಾನಗಳಲ್ಲಿ ಹಿಂದಿರುಗುವ ವಲಸಿಗರಿಗೆ ಕೋವಿಡ್ -19 ಸೋಂಕಿಲ್ಲ ಎಂಬ ಪ್ರಮಾಣಪತ್ರ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಲಿದೆ ಎಂದು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಹೇಳಿದ್ದಾರೆ. ಲಾಕ್ಡೌನ್ನಲ್ಲಿನ ಸಡಿಲಿಕೆ ನಂತರ ಕೇವಲ ಶೇ. 10ರಷ್ಟು ಜನರು ಸಮುದಾಯ ಪ್ರಸರಣದ ಮೂಲಕ ಸೋಂಕಿತರಾಗಿದ್ದಾರೆ, ಕೋವಿಡ್ -19 ಸಮುದಾಯ ಹರಡುವಿಕೆಯನ್ನು ಕೇರಳವು ತಡೆದಿದೆ ಎಂದು ಸಚಿವರು ತಿಳಿಸಿದರು. ಇದನ್ನು ಶೇ. 5ರಷ್ಟು ಕಡಿಮೆ ಮಾಡಲು ಆರೋಗ್ಯ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಆರು ಕೇರಳಿಗರು, ಕೊಲ್ಲಿಯಲ್ಲಿ ಐದು ಮತ್ತು ಮುಂಬೈನಲ್ಲಿ ಒಬ್ಬರು ಕೋವಿಡ್ -19 ಗೆ ಬಲಿಯಾಗಿದ್ದಾರೆ. ಇದರೊಂದಿಗೆ, ಕೊಲ್ಲಿ ರಾಷ್ಟ್ರಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 225 ಕ್ಕೆ ಏರಿದೆ. ನಿನ್ನೆ ರಾಜ್ಯದಲ್ಲಿ 85 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. 1,342 ರೋಗಿಗಳು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
 • ತಮಿಳುನಾಡು: ಪುದುಚೇರಿಯಲ್ಲಿ 18 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 194 ಕ್ಕೆ ಏರಿದೆ; ಸಾವಿನ ಸಂಖ್ಯೆ 4. ತಮಿಳು ನಾಡು ಮುಖ್ಯಮಂತ್ರಿ ಕರೋನ ವೈರಾಣು ಪೀಡಿತ ಎಐಎಡಿಎಂಕೆ ಶಾಸಕರಿಗೆ ಎಲ್ಲಾ ವೈದ್ಯಕೀಯ ನೆರವು ನೀಡುವ ಭರವಸೆ ನೀಡಿದ್ದಾರೆ.. ಕೊಯಮತ್ತೂರಿನಲ್ಲಿ ಕೋವಿಡ್ -19 ಸೋಂಕು 18 ಜನರಲ್ಲಿ ದೃಢಪಟ್ಟಿದೆ. 1989 ಹೊಸ ಪ್ರಕರಣಗಳು, 1362 ಚೇತರಿಕೆ ಮತ್ತು 30 ಸಾವುಗಳು ನಿನ್ನೆ ವರದಿಯಾಗಿವೆ. ಚೆನ್ನೈನಿಂದ 1484 ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು: 42687, ಸಕ್ರಿಯ ಪ್ರಕರಣಗಳು: 18878, ಸಾವು: 397, ಡಿಸ್ಚಾರ್ಜ್: 22047, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 14180.
 • ಕರ್ನಾಟಕ: ಹಾಪೋಹಗಳ ನಡುವೆ, ಸರ್ಕಾರದ ಮುಂದೆ ಯಾವುದೇ ಲಾಕ್ ಡೌನ್ ಪ್ರಸ್ತಾವನೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಹೇಳಿದ್ದಾರೆ. ಆನ್ಲೈನ್ ತರಗತಿಗಳನ್ನು ನಿಷೇಧಿಸುವ ಸರ್ಕಾರದ ಉದ್ದೇಶ ಉತ್ತಮವಾಗಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 308 ಹೊಸ ಪ್ರಕರಣಗಳು ವರದಿಯಾಗಿದ್ದು, 209 ಜನರು ಬಿಡುಗಡೆಯಾಗಿದ್ದಾರೆ ಮತ್ತು ಮೂರು ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಸೋಂಕಿನ ಪ್ರಕರಣಗಳು: 6824, ಸಕ್ರಿಯ ಪ್ರಕರಣಗಳು: 3092, ಸಾವುಗಳು: 81, ಬಿಡುಗಡೆ: 3648.
 • ಆಂಧ್ರಪ್ರದೇಶ: ವಿಧಾನಸಭೆ ಅಧಿವೇಶನಗಳ ಮಧ್ಯೆ ಆಂಧ್ರಪ್ರದೇಶ ವಿಧಾನಸಭಾ ಕಾರ್ಯದರ್ಶಿ ಮಾರ್ಗಸೂಚಿಗಳನ್ನು ಹೊರಡಿಸಿ, ಶಾಸಕರ ಸಿಬ್ಬಂದಿಗೆ ಅನುಮತಿ ನಿರಾಕರಿಸಿದ್ದಾರೆ. ತಿರುಮಲ ದೇವಸ್ಥಾನವನ್ನು ರಾಜ್ಯ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯು ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ಅಂತಿಮ ಹಂತದಲ್ಲಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣ್ಯಂ ಸ್ವಾಮಿ ಟಿಟಿಡಿ ಕುರಿತು ಮಾಡಿರುವ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ 15,633 ಮಾದರಿಗಳನ್ನು ಪರೀಕ್ಷಿಸಿದ ನಂತರ 253 ಹೊಸ ಪ್ರಕರಣಗಳು ಮತ್ತು ಎರಡು ಸಾವು ವರದಿಯಾಗಿವೆ, 82 ಮಂದಿ ಬಿಡುಗೆ ಆಗಿದ್ದಾರೆ. ಒಟ್ಟು ಪ್ರಕರಣಗಳು: 4841, ಸಕ್ರಿಯ: 2034, ಚೇತರಿಸಿಕೊಂಡವರು: 2723, ಸಾವುಗಳು: 84.
 • ತೆಲಂಗಾಣ: ಕೋವಿಡ್ -19 ನಡುವೆ ಜಿಲ್ಲಾ ಆಸ್ಪತ್ರೆಗಳು ಶೇ.60 ವೈದ್ಯರ ಕೊರತೆಯನ್ನು ಎದುರಿಸುತ್ತಿವೆ. ವಲಸೆ ಕಾರ್ಮಿಕರು, ಸಿಲುಕಿದ ಪ್ರವಾಸಿಗರು ಮತ್ತು ವಿದ್ಯಾರ್ಥಿಗಳನ್ನು ಸಾಗಿಸಲು, ದಕ್ಷಿಣ ಮಧ್ಯ ರೈಲ್ವೆ ಈವರೆಗೆ 240 ಶ್ರಮಿಕ ವಿಶೇಷ ರೈಲುಗಳನ್ನು ವಲಯದಿಂದ ವಿವಿಧ ಸ್ಥಳಗಳಿಗೆ ಓಡಿಸಿದೆ. ಶ್ರಮಿಕ್ ರೈಲುಗಳ ಜೊತೆಗೆ, ವಲಯವು  ಹಲವು ಮಧ್ಯೆ ಹಾದು ಹೋಗುವ ಶ್ರಮಿಕ್ ವಿಶೇಷ ರೈಲುಗಳನ್ನು ನಿರ್ವಹಿಸುತ್ತಿದೆ. ಒಟ್ಟು ಪ್ರಕರಣಗಳ ಸಂಖ್ಯೆ 4,737 ಆಗಿದ್ದರೆ, ಒಟ್ಟು ಸಾವುಗಳು ಈಗ 182 ಆಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಪ್ರಕರಣಗಳಲ್ಲಿ ಹೆಚ್ಚಿನವು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ನಿಂದ ದಾಖಲಾಗಿವೆ.
 • ಮಹಾರಾಷ್ಟ್ರ: ರಾಜ್ಯವು 3,427 ಕೋವಿಡ್ 19 ಪ್ರಕರಣಗಳ ಮತ್ತೊಂದು ಹೆಚ್ಚಿನ ಏರಿಕೆ ದಾಖಲಿಸಿದೆ, ಇದು ರಾಜ್ಯದ ಒಟ್ಟು ಪ್ರಕರಣವನ್ನು 1,04,568 ಕ್ಕೆ ತಲುಪಿಸಿದೆ. ಕರೋನ ವೈರಾಣು ಹರಡುವಿಕೆಯನ್ನು ಸ್ವಲ್ಪ ಮಟ್ಟಿಗೆ ನಿರ್ಬಂಧಿಸಲು ಮುಂಬೈಗೆ ಸಾಧ್ಯವಾಗಿದ್ದರೂ, ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಮತ್ತು ಸೋಲಾಪುರ, ರಂಗಾಬಾದ್, ಯವತ್ಮಾಲ್, ಜಲ್ಗಾಂವ್ನಂತಹ ಜಿಲ್ಲೆಗಳಲ್ಲಿ ಪ್ರಕರಣಗಳ ಹೆಚ್ಚಳವು ಆಡಳಿತದ ಬಗ್ಗೆ ಕಳವಳಕ್ಕೆ ಕಾರಣವಾಗಿದೆ.
 • ಗುಜರಾತ್: ಗುಜರಾತ್ನಲ್ಲಿ ಹೊಸ ಕೋವಿಡ್ -19 ಪ್ರಕರಣಗಳ ವಿಷಯದಲ್ಲಿ ಜೂನ್ ತಿಂಗಳಲ್ಲಿ  ಹೊಸ ಉತ್ತುಂಗ ತಲುಪಿದೆ. ತಿಂಗಳಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ 500 ಗಡಿ ದಾಟಿತು, ಇದು ಇನ್ನೂ ಹೆಚ್ಚಿನ ಏರಿಕೆ ಕಾಣುವ ಸಾಧ್ಯತೆ ಇದೆ. ರಾಜ್ಯದಾದ್ಯಂತ 517 ಹೊಸ ಪ್ರಕರಣಗಳು ವರದಿಯಾಗಿವೆ, ಒಟ್ಟು ವರದಿಯಾದ ಪ್ರಕರಣಗಳ ಸಂಖ್ಯೆ 23,079 ಕ್ಕೆ ತಲುಪಿದ್ದರೆ, ಸಾವಿನ ಸಂಖ್ಯೆ 1,449 ಕ್ಕೆ ತಲುಪಿದ್ದು, 33 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಜೂನ್ 13 ದಿನಗಳಲ್ಲಿ ರಾಜ್ಯದಲ್ಲಿ 6,285 ಪ್ರಕರಣಗಳು ವರದಿಯಾಗಿವೆ.
 • ರಾಜಸ್ಥಾನ: ರಾಜ್ಯವು ಭಾನುವಾರ 131 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, 12,532 ಕ್ಕೆ ತಲುಪಿದೆ, ನಾಲ್ಕು ಹೊಸ ಸಾವಿನೊಂದಿಗೆ ಸಾವಿನ ಸಂಖ್ಯೆ 286 ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಪ್ರಕರಣಗಳಲ್ಲಿ ಧೋಲ್ಪುರದಿಂದ 40, ಭರತ್ಪುರದಿಂದ 34, ಅಲ್ವಾರ್ನಿಂದ 15, ಜೈಪುರದಿಂದ 12 ಪ್ರಕರಣಗಳು ವರದಿಯಾಗಿವೆ.
 • ಮಧ್ಯಪ್ರದೇಶ: ಭೋಪಾಲ್ ಆಡಳಿತವು ಸೋಮವಾರದಿಂದ ಸಾರ್ವಜನಿಕರಿಗೆ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ನೀಡಿದೆ. ಇಲ್ಲಿಯವರೆಗೆ ಭೋಪಾಲ್ ನಲ್ಲಿ 2,145 ಕೋವಿಡ್ -19 ಪ್ರಕರಣಗಳು ಮತ್ತು 69 ಸಾವುಗಳನ್ನು ವರದಿ ಆಗಿದೆ. ಕಳೆದ 24 ಗಂಟೆಗಳಲ್ಲಿ 198 ಹೊಸ ಪ್ರಕರಣಗಳು ಪತ್ತೆಯಾದ ನಂತರ ಮಧ್ಯಪ್ರದೇಶದಲ್ಲಿ ಕೋವಿಡ್ -19 ಪ್ರಕರಣಗಳು 10,641 ಕ್ಕೆ ತಲುಪಿದೆ.
 • ತ್ತೀಸ್ ಗಢ: ರಾಜ್ಯದಲ್ಲಿ 105 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಒಟ್ಟು ಸಂಖ್ಯೆ 1,550 ಕ್ಕೆ ಏರಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 913.
 • ಅಸ್ಸಾಂ: ಅಸ್ಸಾಂನಲ್ಲಿ 43 ಹೊಸ ಕೋವಿಡ್ -19 ಸಕಾರಾತ್ಮಕ ಪ್ರಕರಣಗಳು. ಒಟ್ಟು ಪ್ರಕರಣಗಳು 3943, ಸಕ್ರಿಯ ಪ್ರಕರಣಗಳು 2127, ಚೇತರಿಸಿಕೊಂಡ 1805 ಮತ್ತು ಸಾವುಗಳು 8.
 • ಮಣಿಪುರ: ರಾಜ್ಯಕ್ಕೆ ಹಿಂದಿರುಗಿದ ಎಲ್ಲರ ತ್ವರಿತ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು, ಮಣಿಪುರ ಸರ್ಕಾರವು ಹೊಸ ಕೋವಿಡ್ -19 ಪರೀಕ್ಷಾ ಸಾಧನಗಳನ್ನು ಸ್ಥಾಪಿಸಲು ಯೋಜಿಸಿದೆ, ಅದು ದಿನದಲ್ಲಿ 3000 ರಿಂದ 4000 ಮಾದರಿಗಳನ್ನು ಪರೀಕ್ಷಿಸಬಲ್ಲದಾಗಿದೆ. ಮಣಿಪುರ ಮುಖ್ಯಮಂತ್ರಿ ಕೋವಿಡ್ -19 ರಾಜ್ಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು; ರಾಜ್ಯಕ್ಕೆ ಹಿಂದಿರುಗಿದ ಎಲ್ಲರ ಪರೀಕ್ಷೆಯನ್ನು ಸಾಧ್ಯವಾದಷ್ಟು ಬೇಗ ಖಚಿತಪಡಿಸಿಕೊಳ್ಳುವ ಮಾರ್ಗಗಳ ಬಗ್ಗೆ ಚರ್ಚಿಸಿದರು.
 • ಮಿಜೋರಾಂ: ಕ್ವಾರಂಟೈನ್ ಕೇಂದ್ರಗಳಲ್ಲಿ ಜನರಿಗೆ ಮಾದಕ ದ್ರವ್ಯ ಮತ್ತು ಮದ್ಯ ಸರಬರಾಜು ಮಾಡಿದ್ದಕ್ಕಾಗಿ ಮಿಜೋರಾಂ ಪೊಲೀಸರು ಆರು ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
 • ನಾಗಾಲ್ಯಾಂಡ್: ನಾಗಾಲ್ಯಾಂಡ್ನಲ್ಲಿ ರಾಜ್ಯಕ್ಕೆ ಮರಳಿದವರಲ್ಲಿ ಆರು ಜನರಲ್ಲಿ ಕೋವಿಡ್ -19 ದೃಢಪಟ್ಟ ನಂತರ ವಾಂಗ್ಖಾವ್ ಸರ್ಕಾರಿ ಕಾಲೇಜು ಮತ್ತು ಐಟಿಐ ಕ್ಯಾಂಪಸ್ 1 ಕಿ.ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರವನ್ನು  ಜಿಲ್ಲಾಡಳಿತ ನಿಷೇಧಿಸಿದೆ. ರಾಜ್ಯ ತಂಬಾಕು ನಿಯಂತ್ರಣ ಕೋಶವು ತಂಬಾಕು ಮುಕ್ತ ಗ್ರಾಮಗಳನ್ನು ಗುರುತಿಸುವುದನ್ನು ಮುಂದುವರೆಸಿದೆ ಮತ್ತು ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದೆ
 • ಸಿಕ್ಕಿಂ: ಸಿಕ್ಕಿಂನಲ್ಲಿ ಕೋವಿಡ್ -19 ಸೋಂಕಿನ ಐದು ಹೊಸ ಪ್ರಕರಣಗಳು ವರದಿಯಾಗಿವೆ. ಎಲ್ಲವೂ ರಾಜ್ಯಕ್ಕೆ ಮರಳಿದವರಲ್ಲಿ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳು 63.

ವಾಸ್ತವ ಪರಿಶೀಲನೆ

Image

***(Release ID: 1631624) Visitor Counter : 18