ಗ್ರಾಮೀಣಾಭಿವೃದ್ಧಿ ಸಚಿವಾಲಯ
ಗ್ರಾಮೀಣ ಭಾರತದಾದ್ಯಂತ 2026ರ ಜುಲೈ 1 ರಿಂದ ವಿಕಸಿತ ಭಾರತ - ಜಿ ರಾಮ್ ಜಿ ಕಾಯಿದೆಯ ಐತಿಹಾಸಿಕ ಜಾರಿ
ಗ್ರಾಮೀಣ ಜೀವನೋಪಾಯವನ್ನು ಬಲವರ್ಧನೆಗೆ 125 ದಿನಗಳ ಶಾಸನಬದ್ಧ ಉದ್ಯೋಗ ಖಾತ್ರಿ
ಮನ್ರೇಗಾದಿಂದ ವಿಕಸಿತ ಭಾರತ ಜಿ ರಾಮ್ ಜಿ ಗೆ ಸುಗಮ ಪರಿವರ್ತನೆ ಖಚಿತ
ಉದ್ಯೋಗ, ಜೀವನೋಪಾಯ ಮತ್ತು ಗ್ರಾಮೀಣ ಪರಿವರ್ತನೆಗೆ ವೇಗ ನೀಡಲು ಐತಿಹಾಸಿಕ 95,692 ಕೋಟಿ ರೂ. ಹಂಚಿಕೆ
ಹಾಲಿ ಇರುವ ಉದ್ಯೋಗ ಕಾರ್ಡ್‌ಗಳು ಮಾನ್ಯ, ಪ್ರಗತಿಯಲ್ಲಿರುವ ಕಾಮಗಾರಿಗಳು ಅಡೆತಡೆಯಿಲ್ಲದೆ ಮುಂದುವರಿಕೆ
ಪ್ರಕಟಣಾ ದಿನಾಂಕ:
11 MAY 2026 12:09PM by PIB Bengaluru
ಭಾರತದ ಗ್ರಾಮೀಣಾಭಿವೃದ್ಧಿ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸಲಾಗಿರುವ ವಿಕಸಿತ ಭಾರತ - ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) [ವಿಬಿ–ಜಿ ರಾಮ್ ಜಿ] ಕಾಯ್ದೆ 2025 ರ ಅನುಷ್ಠಾನವನ್ನು2026ರ ಜುಲೈ 1 ರಿಂದ ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರವು 2026ರ ಮೇ 11 ರಂದು ಅಧಿಸೂಚನೆ ಹೊರಡಿಸಿದೆ.
ವಿಬಿ–ಜಿ ರಾಮ್ ಜಿ ಕಾಯಿದೆ ಜಾರಿಗೆ ಬರುವುದರೊಂದಿಗೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ಮನ್ರೇಗಾ) 2005 ಅದೇ ದಿನಾಂಕದಿಂದ ರದ್ದಾಗಲಿದೆ. ಇದು ಭಾರತದ ಗ್ರಾಮೀಣಾಭಿವೃದ್ಧಿ ಚೌಕಟ್ಟಿನಲ್ಲಿ ಒಂದು ಐತಿಹಾಸಿಕ ಪರಿವರ್ತನೆಯನ್ನು ಸೂಚಿಸುತ್ತದೆ ಮತ್ತು ವಿಕಸಿತ ಭಾರತ @2047ರ ರಾಷ್ಟ್ರೀಯ ದೂರದೃಷ್ಟಿಗೆ ಅನುಗುಣವಾಗಿ ಸಮಗ್ರ, ಭವಿಷ್ಯ-ಸಿದ್ಧ ಮತ್ತು ಉತ್ಪಾದಕತೆ-ಆಧಾರಿತ ಗ್ರಾಮೀಣ ಪರಿವರ್ತನೆಯ ಹೊಸ ಯುಗಕ್ಕೆ ನಾಂದಿ ಹಾಡಲಿದೆ.
ಹೊಸ ಚೌಕಟ್ಟಿನಡಿಯಲ್ಲಿ ಪ್ರತಿ ಹಣಕಾಸು ವರ್ಷದಲ್ಲಿ ಪ್ರತಿಯೊಂದು ಗ್ರಾಮೀಣ ಕುಟುಂಬದ ವಯಸ್ಕ ಸದಸ್ಯರು ಕೌಶಲ್ಯರಹಿತ ದೈಹಿಕ ಕಾಮಗಾರಿಯನ್ನು ಕೈಗೊಳ್ಳಲು ಸ್ವಯಂಸೇವಕರು 125 ದಿನಗಳ ವೇತನ ಉದ್ಯೋಗದ ಶಾಸನಬದ್ಧ ಖಾತರಿಗೆ ಅರ್ಹರಾಗಿರುತ್ತಾರೆ. ಈ ವರ್ಧಿತ ಖಾತರಿಯು ಜೀವನೋಪಾಯ ಭದ್ರತೆಯನ್ನು ಬಲಪಡಿಸಲು, ಗ್ರಾಮೀಣ ಆದಾಯವನ್ನು ಸುಧಾರಿಸಲು ಮತ್ತು ಸುಸ್ಥಿರ ಗ್ರಾಮ ಮಟ್ಟದ ಅಭಿವೃದ್ಧಿಯನ್ನು ಬೆಂಬಲಿಸಲು ಉದ್ದೇಶಿಸಲಾಗಿದೆ.
ವಿಬಿ–ಜಿ ರಾಮ್ ಜಿ ಕಾಯ್ದೆಯ ಜಾರಿಗಾಗಿ ಹೊರಡಿಸಿರುವ ಗೆಜೆಟ್ ಅಧಿಸೂಚನೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ Click here to view the Gazette Notification for the Commencement of the VB–G RAM G Act.
ಕಾರ್ಮಿಕರ ಕೆಲಸದ ಬೇಡಿಕೆಯ ಮೇರೆಗೆ ನಿಗದಿತ ಸಮಯದೊಳಗೆ ಅವರಿಗೆ ಉದ್ಯೋಗ ಒದಗಿಸಲಾಗುವುದು, ಅದಕ್ಕೆ ವಿಫಲವಾದರೆ ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಮಿಕರು ನಿರುದ್ಯೋಗ ಭತ್ಯೆಗೆ ಅರ್ಹರಾಗಿರುತ್ತಾರೆ.
ಕಾಯ್ದೆಯು ಸಕಾಲಿಕ ಮತ್ತು ಪಾರದರ್ಶಕ ವೇತನ ಪಾವತಿಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ. ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ವೇತನವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗಳಿಗೆ ವರ್ಗಾಯಿಸುವುದನ್ನು ಮುಂದುವರಿಸಲಾಗುತ್ತದೆ. ವೇತನವನ್ನು ವಾರಕ್ಕೊಮ್ಮೆ ಅಥವಾ ಮಸ್ಟರ್ ರೋಲ್ ಮುಕ್ತಾಯದ ಹದಿನೈದು ದಿನಗಳೊಳಗೆ ಪಾವತಿಸಬೇಕು, ಇಲ್ಲದಿದ್ದರೆ ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ವಿಳಂಬಕ್ಕೆ ಪರಿಹಾರ ಪಡೆಯಲು ಕಾರ್ಮಿಕರು ಅರ್ಹರಾಗಿರುತ್ತಾರೆ.
ಭಾರತ ಸರ್ಕಾರವು ವೀಕಸಿತ ಭಾರತ - ಜಿ ರಾಮ್ ಜಿ ಕಾಯ್ದೆ2025ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಮಗ್ರ ಹಣಕಾಸು ನಿಬಂಧನೆಗಳನ್ನು ಖಚಿತಪಡಿಸಿದೆ. 2026–27ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರವು 95,692.31 ಕೋಟಿ ರೂ.ಗಳ ಬಜೆಟ್ ಹಂಚಿಕೆಯನ್ನು ಮಾಡಿದ್ದು, ಇದು ಗ್ರಾಮೀಣ ಉದ್ಯೋಗ ಕಾರ್ಯಕ್ರಮಕ್ಕಾಗಿ ಬಜೆಟ್ ಅಂದಾಜಿನು ವೆಚ್ಚದಲ್ಲಿ ಈವರೆಗಿನ ಅತ್ಯಧಿಕ ಹಂಚಿಕೆಯಾಗಿದೆ.
ರಾಜ್ಯಗಳ ಸಂಭಾವ್ಯ ಕೊಡುಗೆಯನ್ನು ಸೇರಿದರೆ, ಒಟ್ಟು ಯೋಜನೆಯ ವೆಚ್ಚ 1.51 ಲಕ್ಷ ಕೋಟಿ ರೂಪಾಯಿ ಮೀರುತ್ತದೆ ಎಂದು ಅಂದಾಜಿಸಲಾಗಿದೆ. ಈ ಹಂಚಿಕೆಯು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಆದಾಯದ ಹೆಚ್ಚಳಕ್ಕೆ ಹೊಸ ಆವೇಗವನ್ನು ನೀಡುವ ನಿರೀಕ್ಷೆಯಿದೆ.
ಸರಾಗ, ಸುಗಮ ಮತ್ತು ಕಾರ್ಮಿಕ ಸ್ನೇಹಿ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಮನ್ರೇಗಾ ಅಡಿಯಲ್ಲಿ ಉದ್ಯೋಗವು ಹೊಸ ಕಾಯ್ದೆಯ ಜಾರಿಯ ದಿನಾಂಕದವರೆಗೆ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ಜೂನ್ 30 ರಿಂದ ಮನ್ರೇಗಾ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಉಳಿಸಲಾಗುವುದು ಮತ್ತು ವಿಕಸಿತ ಭಾರತ್ ಜಿ ರಾಮ್ ಜಿ ಯ ನಿಬಂಧನೆಗಳೊಂದಿಗೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಹೊಸ ಚೌಕಟ್ಟಿನಲ್ಲಿ ಸರಾಗವಾಗಿ ನಿರ್ವಹಿಸುತ್ತದೆ. ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ಸಕಾಲಿಕ ಲಭ್ಯತೆ ಮತ್ತು ವೇತನವನ್ನು ತ್ವರಿತವಾಗಿ ಪಾವತಿಸುವುದು ಸರ್ಕಾರದ ಆದ್ಯತೆಯಾಗಿದೆ.
ವಿಬಿ- ಜಿ ರಾಮ್ ಜಿ ಕಾಯ್ದೆಯ ಜಾರಿಯು ಹಿಂದಿನ ಅವಧಿಯಲ್ಲಿ ಯಾವುದೇ ಅರ್ಹ ಗ್ರಾಮೀಣ ಕುಟುಂಬವು ಅನಾನುಕೂಲತೆಯನ್ನು ಎದುರಿಸದಂತೆ ಬೇಡಿಕೆ ಮಾದರಿಗಳು ಮತ್ತು ತಳಮಟ್ಟದಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾಕಷ್ಟು ಕಾರ್ಮಿಕ ಬಜೆಟ್ ನಿಬಂಧನೆಗಳನ್ನು ಸರ್ಕಾರವು ಲಭ್ಯವಾಗುವಂತೆ ಮಾಡಿದೆ.
ಹಾಲಿ ಇರುವ ಇ-ಕೆವೈಸಿ ಪರಿಶೀಲಿಸಿದ ಮನ್ರೇಗಾ ಜಾಬ್ ಕಾರ್ಡ್‌ಗಳು ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್‌ಗಳನ್ನು ನೀಡುವವರೆಗೆ ವಿಬಿ-ಜಿರಾಮ್ ಜಿ ಅಡಿಯಲ್ಲಿ ಮಾನ್ಯವಾಗಿರುತ್ತವೆ. ಉದ್ಯೋಗ ಕಾರ್ಡ್‌ಗಳಿಲ್ಲದ ಕಾರ್ಮಿಕರು ಗ್ರಾಮ ಪಂಚಾಯತ್ ಮಟ್ಟದಲ್ಲಿ ನೋಂದಾಯಿಸಿಕೊಳ್ಳುವುದನ್ನು ಮುಂದುವರಿಸಬಹುದು. ಬಾಕಿ ಇರುವ ಇ-ಕೆವೈಸಿ ಕಾರಣದಿಂದಾಗಿ ಕಾರ್ಮಿಕರಿಗೆ ಉದ್ಯೋಗ ನಿರಾಕರಿಸಬಾರದು ಮತ್ತು ರಾಜ್ಯ ಸರ್ಕಾರಗಳು ಇ-ಕೆವೈಸಿ ಪೂರ್ಣಗೊಳಿಸುವಿಕೆ ಕಾರ್ಯಕ್ಕಾಗಿ ತಳ ಮಟ್ಟದಲ್ಲಿ ಸೌಲಭ್ಯಗಳನ್ನು ಮುಂದುವರಿಸಬೇಕು.
ವಿಬಿ–ಜಿ ರಾಮ್ ಜಿ ಕಾಯಿದೆ 2025 ರ ಅಡಿಯಲ್ಲಿ ವಿವಿಧ ಕರಡು ನಿಯಮಗಳನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚಿಸಿ ಸಿದ್ಧಪಡಿಸುತ್ತಿದೆ.
- ಪ್ರಮಾಣ ಹಂಚಿಕೆಗಾಗಿ ವಸ್ತುನಿಷ್ಠ ಮಾನದಂಡಗಳ ನಿಯಮಗಳು
- ಪರಿವರ್ತನಾ ನಿಬಂಧನೆಗಳ ನಿಯಮಗಳು
- ರಾಷ್ಟ್ರೀಯ ಮಟ್ಟದ ಸ್ಥಾಯಿ ಸಮಿತಿ ನಿಯಮಗಳು
- ಕೇಂದ್ರ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ ನಿಯಮಗಳು
- ಆಡಳಿತಾತ್ಮಕ ವೆಚ್ಚ ನಿಯಮಗಳು
- ಕುಂದುಕೊರತೆ ಪರಿಹಾರ ನಿಯಮಗಳು
- ವೇತನ ಮತ್ತು ನಿರುದ್ಯೋಗ ಭತ್ಯೆಯ ಪಾವತಿಯ ವಿಧಾನದ ನಿಯಮಗಳು
- ಹೆಚ್ಚುವರಿ ವೆಚ್ಚವನ್ನು ಭರಿಸುವ ವಿಧಾನ ಮತ್ತು ಕಾರ್ಯವಿಧಾನದ ನಿಯಮಗಳು
- ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನೆಯ ವೆಚ್ಚಗಳನ್ನು ಭರಿಸುವ ವಿಧಾನದ ಕುರಿತು ನಿಯಮಗಳು
ಮಹಾತ್ಮ ಗಾಂಧಿ ನರೇಗಾದಿಂದ ವಿಬಿ-ಜಿ ರಾಮ್ ಜಿ ಗೆ ಸುಗಮ ಪರಿವರ್ತನೆಯನ್ನು ಖಾತ್ರಿಪಡಿಸಿಕೊಳ್ಳಲು ಪರಿವರ್ತನಾ ನಿಬಂಧನೆಗಳ ನಿಯಮಗಳಲ್ಲಿ ಸೂಕ್ತ ನಿಬಂಧನೆಗಳನ್ನು ಸೇರಿಸಲಾಗುತ್ತಿದೆ, ಅವುಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಮೇಲೆ ಪಟ್ಟಿ ಮಾಡಲಾದ ಇತರ ಹಲವಾರು ನಿಯಮಗಳನ್ನು ಸಹ ರೂಪಿಸಲಾಗಿದೆ ಮತ್ತು ಸಾರ್ವಜನಿಕ ಸಮಾಲೋಚನೆಗಾಗಿ ಶೀಘ್ರದಲ್ಲೇ ಪ್ರಕಟಿಸಲಾಗುವುದು.
ವಿಕಸಿತ ಭಾರತ – ಜಿ ರಾಮ್ ಜಿ ಕಾಯ್ದೆ 2025 ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿ, ಗ್ರಾಮೀಣಾಭಿವೃದ್ಧಿ ಮತ್ತು ಸ್ವಾವಲಂಬನೆಗೆ ಹೊಸ ಆವೇಗವನ್ನು ನೀಡುವ ನಿರೀಕ್ಷೆಯಿದೆ. ಗ್ರಾಮ ಪಂಚಾಯತ್‌ಗಳನ್ನು ಗ್ರಾಮೀಣ ಪರಿವರ್ತನೆಯ ಕೇಂದ್ರ ಸ್ತಂಭವಾಗಿ ಇರಿಸುವ ಮೂಲಕ ಈ ಕಾಯ್ದೆಯು ಸಬಲೀಕೃತ, ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಗ್ರಾಮೀಣ ಭಾರತವನ್ನು ನಿರ್ಮಿಸುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.
Click here to see FAQ
Click here to see Detailed Explainer
*****
(ಪ್ರಕಟಣೆ ಐ.ಡಿ.: 2259760)
ವಿಸಿಟರ್ ಕೌಂಟರ್ : 6