ಪ್ರಕಟಣಾ ದಿನಾಂಕ:
08 SEP 2025 7:20AM by PIB Bengaluru
ಬಿಹಾರದ ರಾಜಗೀರ್ನಲ್ಲಿ ನಡೆದ 2025ರ ಏಷ್ಯಾ ಕಪ್ನಲ್ಲಿ ಅದ್ಭುತ ಗೆಲುವು ಸಾಧಿಸಿದ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. "ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಸೋಲಿಸಿದ ಈ ಗೆಲುವು ಇನ್ನಷ್ಟು ವಿಶೇಷವಾಗಿದೆ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಬಿಹಾರದ ರಾಜಗೀರ್ನಲ್ಲಿ ನಡೆದ 2025ರ ಏಷ್ಯಾ ಕಪ್ನಲ್ಲಿ ನಮ್ಮ ಪುರುಷರ ಹಾಕಿ ತಂಡದ ಅದ್ಭುತ ಗೆಲುವಿಗೆ ಅಭಿನಂದನೆಗಳು. ಈ ಗೆಲುವು ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಅವರು ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಸೋಲಿಸಿದ್ದಾರೆ!
ಭಾರತೀಯ ಹಾಕಿ ಮತ್ತು ಭಾರತೀಯ ಕ್ರೀಡೆಗಳಿಗೆ ಇದು ಹೆಮ್ಮೆಯ ಕ್ಷಣವಾಗಿದೆ. ನಮ್ಮ ಆಟಗಾರರು ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಿ ರಾಷ್ಟ್ರಕ್ಕೆ ಹೆಚ್ಚಿನ ಕೀರ್ತಿ ತರಲಿ!"
****