ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಅಜ್ಮೀರ್ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್  ಹಿನ್ನೆಲೆಯಲ್ಲಿ ಪವಿತ್ರ ಚಾದರ್ ಅರ್ಪಿಸಿದ ಪ್ರಧಾನ ಮಂತ್ತಿಗಳು

प्रविष्टि तिथि: 11 JAN 2024 4:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಸ್ಲಿಂ ಸಮುದಾಯದ ನಿಯೋಗವನ್ನು ಭೇಟಿ ಮಾಡಿದರು. ಹಾಗೆಯೇ  ಅಜ್ಮೀರ್ ಶರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಹಿನ್ನೆಲೆಯಲ್ಲಿ  ಇರಿಸಲಾಗುವ ಪವಿತ್ರ ಚಾದರ್ ಅನ್ನು ಅರ್ಪಿಸಿದರು. 

ಈ ಸಂಬಂಧ ಪ್ರಧಾನ ಮಂತ್ರಿಗಳು 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಸಂದೇಶ  ಪೋಸ್ಟ್ ಮಾಡಿದ್ದಾರೆ:

“ಮುಸ್ಲಿಂ ಸಮುದಾಯದ ನಿಯೋಗವನ್ನು ಇಂದು ಭೇಟಿ ಮಾಡಿದೆ. ನಮ್ಮ ಸಂವಾದದ ಸಮಯದಲ್ಲಿ, ನಾನು ಪವಿತ್ರ ಚಾದರ್ ಅನ್ನು ಅರ್ಪಿಸಿದ್ದೇನೆ. ಇದನ್ನು ಗೌರವಾನ್ವಿತ ಅಜ್ಮೀರ್ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರುಸ್ ಸಮಯದಲ್ಲಿ ಇರಿಸಲಾಗುತ್ತದೆ," ಎಂದು ಹೇಳಿದ್ದಾರೆ.

****


(रिलीज़ आईडी: 1995515) आगंतुक पटल : 119
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam