ಪ್ರಧಾನ ಮಂತ್ರಿಯವರ ಕಛೇರಿ
ಶನೆಲ್ ನ ಜಾಗತಿಕ ಸಿಇಒ ಶ್ರೀಮತಿ ಲೀನಾ ನಾಯರ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿಯವರು
Posted On:
14 JUL 2023 10:04PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023ರ ಜುಲೈ 14ರಂದು ಪ್ಯಾರಿಸ್ ನಲ್ಲಿ ಫ್ರೆಂಚ್ ಐಷಾರಾಮಿ ಫ್ಯಾಶನ್ ಹೌಸ್, ಶನೆಲ್ ನ ಜಾಗತಿಕ ಸಿಇಒ ಶ್ರೀಮತಿ ಲೀನಾ ನಾಯರ್ ಅವರನ್ನು ಭೇಟಿ ಮಾಡಿದರು.
ಶ್ರೀಮತಿ ನಾಯರ್ ಅವರ ಯಶಸ್ಸಿಗೆ ಪ್ರಧಾನಮಂತ್ರಿಯವರು ಅಭಿನಂದನೆ ಸಲ್ಲಿಸಿದರು. ಭಾರತದಲ್ಲಿ ಹೂಡಿಕೆಯ ಅವಕಾಶಗಳು ಮತ್ತು ಸಹಯೋಗದ ಸಾಮರ್ಥ್ಯವನ್ನು ಉತ್ತೇಜಿಸಲು ಶ್ರೀಮತಿ ಲೀನಾ ನಾಯರ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿಯವರು ಆಹ್ವಾನಿಸಿದರು.
ಭಾರತದಲ್ಲಿ ಕರಕುಶಲ ವಸ್ತುಗಳು, ಖಾದಿ ಮತ್ತು ಕುಶಲಕರ್ಮಿಗಳ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವತ್ತ ಅವರಿಬ್ಬರ ಚರ್ಚೆಗಳು ಕೇಂದ್ರೀಕೃತವಾಗಿದ್ದವು.
****
(Release ID: 1939969)
Visitor Counter : 132
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam