ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲಸಿಕೆ ಪಡೆಯುತ್ತಿರುವುದಕ್ಕಾಗಿ 15-18 ವರ್ಷದೊಳಗಿನ ಯುವಜನರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

Posted On: 03 JAN 2022 10:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಸಿಕೆ ಹಾಕಿಸಿಕೊಂಡ 15-18 ವರ್ಷದೊಳಗಿನ ಯುವ ಭಾರತೀಯರನ್ನು ಅಭಿನಂದಿಸಿದ್ದಾರೆ. ವಯಸ್ಸಿನ ವರ್ಗದವರು ಇಂದು ಲಸಿಕೆಗಳನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಅವರ ಪೋಷಕರನ್ನೂ ಪ್ರಧಾನಮಂತ್ರಿ ಅಭಿನಂದಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು: "ಕೋವಿಡ್-19ರಿಂದ ನಮ್ಮ ಯುವ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ನಾವು ಇಂದು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದೇವೆ. 15-18 ವಯೋಮಾನದ ಲಸಿಕೆ ಪಡೆದ ಎಲ್ಲ ಯುವ ಮಿತ್ರರಿಗೂ ನನ್ನ ಅಭಿನಂದನೆಗಳು. ಅವರ ಪಾಲಕರಿಗೆ ಕೂಡ ಅಭಿನಂದನೆಗಳು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಯುವಜನರು ಲಸಿಕೆ ಪಡೆದುಕೊಳ್ಳುವಂತೆ ನಾನು ಆಗ್ರಹಿಸುತ್ತೇನೆ!" ಎಂದು ತಿಳಿಸಿದ್ದಾರೆ.

ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರ ಟ್ವೀಟ್‌ ಗಳಿಗೆ ಪ್ರಧಾನಮಂತ್ರಿಯವರು ರಿಟ್ವೀಟ್ ಮಾಡಿದ್ದಾರೆ.

***


(Release ID: 1787310) Visitor Counter : 173