ಪ್ರಧಾನ ಮಂತ್ರಿಯವರ ಕಛೇರಿ
ಮುಂಬೈನ ಪಶ್ಚಿಮ ಮಲಾಡ್ ನಲ್ಲಿ ಕಟ್ಟಡ ಕುಸಿದು ಸಂಭವಿಸಿದ ಪ್ರಾಣ ಹಾನಿಗೆ ಪ್ರಧಾನಮಂತ್ರಿ ಸಂತಾಪ
ಸಂತ್ರಸ್ತರಿಗೆ ಪರಿಹಾರ ಘೋಷಣೆ
ಪ್ರಕಟಣಾ ದಿನಾಂಕ:
10 JUN 2021 2:36PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬೈನ ಪಶ್ಚಿಮ ಮಲಾಡ್ ನಲ್ಲಿ ಕಟ್ಟಡ ಕುಸಿದು ಸಂಭವಿಸಿದ ಪ್ರಾಣಹಾನಿಗೆ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು:“ ಮುಂಬೈನ ಪಶ್ಚಿಮ ಮಲಾಡ್ ನಲ್ಲಿ ಕಟ್ಟಡ ಕುಸಿದು ಸಂಭವಿಸಿದ ಸಾವುಗಳಿಂದ ದುಃಖಿತನಾಗಿದ್ದೇನೆ. ಈ ದುಃಖದ ಸಮಯದಲ್ಲಿ, ಸಂತ್ರಸ್ಥ ಕುಟುಂಬಗಳೊಂದಿಗೆ ನನ್ನ ಸಂವೇದನೆ ಇದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.: PM @narendramodi”
ಪ್ರಧಾನಮಂತ್ರಿಯವರು ಪಿ.ಎಂ.ಎನ್.ಆರ್.ಎಫ್.ನಿಂದ ಮೃತರ ಹತ್ತಿರದ ಸಂಬಂಧಿಕರಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರವನ್ನು ಪ್ರಕಟಿಸಿದ್ದಾರೆ.
***
(ಪ್ರಕಟಣೆ ಐ.ಡಿ.: 1725921)
ವಿಸಿಟರ್ ಕೌಂಟರ್ : 177
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam