ಪ್ರಧಾನ ಮಂತ್ರಿಯವರ ಕಛೇರಿ

ಡಾ. ಬಾಳಾ ಸಾಹೇಬ್ ವಿಖೆ ಪಾಟೀಲ್ ಅವರ ಜೀವನ ಚರಿತ್ರೆ ಬಿಡುಗಡೆ ಮತ್ತು ಪ್ರವರ ಗ್ರಾಮೀಣ ಶಿಕ್ಷಣ ಸಂಸ್ಥೆಗೆ ಅವರ ಗೌರವಾರ್ಥ ಪುನರ್ ನಾಮಕರಣ ಮಾಡಲಿರುವ ಪ್ರಧಾನಮಂತ್ರಿ

Posted On: 12 OCT 2020 7:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020 ಅಕ್ಟೋಬರ್ 13ರಂದು ಬೆಳಗ್ಗೆ 11 ಗಂಟೆಗೆ ಡಾ. ಬಾಳಾ ಸಾಹೇಬ್ ವಿಖೆ ಪಾಟೀಲ್ ಅವರ ಜೀವನ ಚರಿತ್ರೆಯನ್ನು ಬಿಡುಗಡೆ ಮಾಡಲಿದ್ದು, ಪ್ರವರ ಗ್ರಾಮೀಣ ಶಿಕ್ಷಣ ಸಂಸ್ಥೆಗೆ ಲೋಕನೇತ ಡಾ. ಬಾಳಾಸಾಹೇಬ್ ವಿಖೆ ಪಾಟೀಲ್ ಪ್ರವರ ಗ್ರಾಮೀಣ ಶಿಕ್ಷಣ ಸಂಸ್ಥೆ ಎಂದು ಪುನರ್ ನಾಮಕರಣ ಮಾಡಲಿದ್ದಾರೆ.

ಡಾ. ಬಾಳಾ ಸಾಹೇಬ್ ವಿಖೆ ಪಾಟೀಲ್ ಅವರು ಲೋಕಸಭಾ ಸದಸ್ಯರಾಗಿಹಲವು ಅವಧಿಗೆ ಸೇವೆ ಸಲ್ಲಿಸಿದ್ದರು.ದೇಹ್ ವೆಚ್ವಾ ಕರ್ನಿಅಂದರೆಉದಾತ್ತ ಸೇವೆಗೆ ಒಬ್ಬರ ಜೀವನದ ಸಮರ್ಪಣೆಎಂಬ ಶೀರ್ಷಿಕೆಯ ಅವರ ಜೀವನಚರಿತ್ರೆ, ತಮ್ಮ ಇಡೀ ಜೀವನವನ್ನು ಸಮಾಜದ ಒಳಿತಿಗಾಗಿ ಕೃಷಿ ಮತ್ತು ಸಹಕಾರ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಕಾರ್ಯಕ್ಕೆ ಮುಡಿಪಾಗಿಟ್ಟ ಅವರಿಗೆ ಅನ್ವರ್ಥವಾಗಿದೆ.

ಗ್ರಾಮೀಣ ಸಮುದಾಯಕ್ಕೆ ವಿಶ್ವದರ್ಜೆಯ ಶಿಕ್ಷಣ ಒದಗಿಸುವ ಮತ್ತು ಹೆಣ್ಣು ಮಕ್ಕಳ ಸಬಲೀಕರಣದ ಗುರಿಯೊಂದಿಗೆ 1964ರಲ್ಲಿ ಅಹಮದ್ ನಗರ ಜಿಲ್ಲೆಯ ಲೋನಿಯಲ್ಲಿ ಪ್ರವರ ಗ್ರಾಮೀಣ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿತ್ತು. ಸಂಸ್ಥೆ ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಭೌತಿಕ ಮತ್ತು ಮಾನಸಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

***



(Release ID: 1664025) Visitor Counter : 148