PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 02 JUL 2020 6:21PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

Coat of arms of India PNG images free download

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಕುರಿತ ಇತ್ತೀಚಿನ ವರದಿ: ಚೇತರಿಕೆ ದರ ಶೇ.60 ಸಮೀಪ, ಚೇತರಿಸಿಕೊಂಡ ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ 1,32,912

ದಿನಾಂಕದವರೆಗೆ ಸಕ್ರಿಯ ಪ್ರಕರಣಗಳಿಗಿಂತಲೂ ಹೆಚ್ಚಾಗಿ 1,32,912 ಕೋವಿಡ್ -19 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸಕಾಲದ ಚಿಕಿತ್ಸಾಲಯ ನಿರ್ವಹಣೆಯಿಂದ ಕೋವಿಡ್ -19 ಪ್ರಕರಣಗಳ ಪೈಕಿ ನಿತ್ಯ 10 ಸಾವಿರ ಜನರು ಗುಣಮುಖರಾಗುತ್ತಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 11,881 ಕೋವಿಡ್ 19 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದ ಒಟ್ಟು ಗುಣಮುಖರಾದವರ ಸಂಖ್ಯೆ 3,59,859 ಆಗಿದೆ. ಇದು ಚೇತರಿಕೆ ದರವನ್ನು ಶೇ.59.52ಕ್ಕೆ ಹೆಚ್ಚಿಸಿದೆ. ಪ್ರಸ್ತುತ 2,26,947 ಪ್ರಕರಣಗಳಿದ್ದು, ಎಲ್ಲರೂ ಸೂಕ್ತ ವೈದ್ಯಕೀಯ ನಿಗಾದಲ್ಲಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,29,588 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈವರೆಗೆ ಪರೀಕ್ಷಿಸಲಾಗಿರುವ ಒಟ್ಟು ಮಾದರಿಗಳ ಸಂಖ್ಯೆ 90,56,173ಆಗಿದೆ. ದೇಶದಲ್ಲಿನ ಪರೀಕ್ಷಾ ಪ್ರಯೋಗಾಲಯಗಳ ಜಾಲವೂ ಬಲವರ್ಧನೆಯಾಗಿದ್ದು, 768 ಸರ್ಕಾರಿ ಮತ್ತು 297 ಖಾಸಗಿ ಸೇರಿ ಒಟ್ಟು 1065 ಪ್ರಯೋಗಾಲಯಗಳಿವೆ..

ವಿವರಗಳಿಗಾಗಿ: https://pib.gov.in/PressReleasePage.aspx?PRID=1635886

ನಿರ್ಬಂಧಗಳ ತೆರವು ಕೋವಿಡ್ 19 ಪರೀಕ್ಷೆಯ ಹೆಚ್ಚಳಕ್ಕೆ ಕಾರಣವಾಗಿದೆ, ಈಗ ಖಾಸಗಿ ವೈದ್ಯರೂ ಕೋವಿಡ್ 19 ಪರೀಕ್ಷೆಗೆ ಶಿಫಾರಸು ಮಾಡಬಹುದು

ಕೇಂದ್ರ ಸರ್ಕಾರ ಘೋಷಿಸಿರುವ ಪ್ರಮುಖ ನಿರ್ಧಾರದಲ್ಲಿ, ಈಗ ಸರ್ಕಾರಿ ವೈದ್ಯರಷ್ಟೇ ಅಲ್ಲದೆ ಯಾವುದೇ ವೈದ್ಯರ ಶಿಫಾರಸು ಚೀಟಿಯ ಆಧಾರದ ಮೇಲೆ ಕೋವಿಡ್ 19 ಪರೀಕ್ಷೆ ಮಾಡಬಹುದಾಗಿದೆ.  ಐಸಿಎಂಆರ್ ಮಾರ್ಗಸೂಚಿಗಳ ರೀತ್ಯ ಮಾನದಂಡಗಳನ್ನು ಪೂರೈಸುವ ಯಾವುದೇ ವ್ಯಕ್ತಿಗೆ ಕೋವಿಡ್ ಪರೀಕ್ಷೆ ಮಾಡಿಸಲು ಖಾಸಗಿ ವೈದ್ಯರೂ ಸೇರಿದಂತೆ ಎಲ್ಲ ನೋಂದಾಯಿತ ವೈದ್ಯರೂ ಶಿಫಾರಸು ಮಾಡಲು ತಕ್ಷಣ ಕ್ರಮ ಕೈಗೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ತಾಕೀತು ಮಾಡಿದೆ.

ಟೆಸ್ಟ್, ಟ್ರಾಕ್ ಟ್ರೀಟ್ (ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ) ಆರಂಭಿಕ ಪತ್ತೆ ಮತ್ತು ಸಾಂಕ್ರಾಮಿಕದ ನಿಗ್ರಹಕ್ಕೆ ಪ್ರಮುಖ ರಣತಂತ್ರವಾಗಿದ್ದು, ಕೇಂದ್ರ ಸರ್ಕಾರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ -19 ಪರೀಕ್ಷಾ ಪ್ರಯೋಗಾಲಯಗಳ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳುವಂತೆ ಎಲ್ಲ ಸಾದ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಇದು ಪ್ರಯೋಗಾಲಯಗಳ ಸಂಪೂರ್ಣ ಸಾಮರ್ಥ್ಯ ಬಳಕೆಗೆ ಅದರಲ್ಲೂ ಖಾಸಗಿ ಲ್ಯಾಬ್ ಬಳಕೆಯೊಂದಿಗೆ ಜನರಿಗೆ ದೊಡ್ಡ ರೀತಿಯಿಂದ ಪ್ರಯೋಜನವಾಗಲಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1635869

ಕೋವಿಡ್ -19 ಪರೀಕ್ಷೆಗಿದ್ದ ತೊಡಕುಗಳನ್ನು ಭಾರತ ಸರ್ಕಾರ ತೆಗೆದುಹಾಕಿದ್ದು, ರಾಜ್ಯಗಳಿಗೆ ಪರೀಕ್ಷೆ ಹೆಚ್ಚಿಸುವಂತೆ ತಾಕೀತು ಮಾಡಿದೆ

ಶ್ರೀಮತಿ ಪ್ರೀತಿ ಸೂದನ್, ಆರೋಗ್ಯ ಕಾರ್ಯದರ್ಶಿ ಮತ್ತು ಡಾ. ಬಲರಾಮ್ ಭಾರ್ಗವ ಡಿಜಿ, (ಐಸಿಎಂಆರ್) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪರೀಕ್ಷೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ನಿನ್ನೆ ಮನವಿ ಮಾಡಿದ್ದಾರೆ. ಟೆಸ್ಟ್, ಟ್ರಾಕ್ ಟ್ರೀಟ್ (ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ) ಆರಂಭಿಕ ಪತ್ತೆ ಮತ್ತು ಸಾಂಕ್ರಾಮಿಕದ ನಿಗ್ರಹಕ್ಕೆ ಪ್ರಮುಖ ರಣತಂತ್ರವಾಗಿದೆ ಎಂದು ಪುನರುಚ್ಚರಿಸಿದ್ದಾರೆ.  ಕೆಲವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರಯೋಗಾಲಯಗಳ ಅದರಲ್ಲೂ ಖಾಸಗಿ ಪ್ರಯೋಗಾಲಯಗಳ ಸಾಮರ್ಥ್ಯವನ್ನು ಬಳಕೆ ಹೆಚ್ಚು ಉಪ-ಸೂಕ್ತವಾಗಿದೆ ಎಂದು ಗಮನಸೆಳೆದಿದ್ದು, ಖಾಸಗಿ ವೈದ್ಯರು ಸೇರಿದಂತೆ ಎಲ್ಲಾ ಅರ್ಹ ವೈದ್ಯರು ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ ಪರೀಕ್ಷೆಯ ಮಾನದಂಡಗಳನ್ನು ಪೂರೈಸುವ ಯಾವುದೇ ವ್ಯಕ್ತಿಗೆ ಕೋವಿಡ್ ಪರೀಕ್ಷೆ ನಡೆಸಲು ಸೂಚಿಸಬಹುದು ಮೂಲಕ ಪರೀಕ್ಷೆಯನ್ನು ತ್ವರಿತವಾಗಿ ಸುಗಮಗೊಳಿಸಿ ಎಂದು ಅವರಿಗೆ ಸೂಚಿಸಿದ್ದಾರೆ. ಆರ್.ಟಿ – ಪಿಸಿಆರ್ ಕೋವಿಡ್ -19 ರೋಗನಿರ್ಣಯಕ್ಕೆ ಬಂಗಾರದಂಥ ಮಾನದಂಡವಾಗಿದ್ದರೆ, ಐಸಿಎಂಆರ್ ಇತ್ತೀಚೆಗೆ ಕೋವಿಡ್ -19 ಅನ್ನು ಮೊದಲೇ ಪತ್ತೆಹಚ್ಚಲು ಪಾಯಿಂಟ್-ಆಫ್-ಕೇರ್ ರಾಪಿಡ್ ಆಂಟಿಜೆನ್ ಪರೀಕ್ಷೆಯನ್ನು ಬಳಸಲು ಅನುಮೋದಿಸಿದೆ. ಈ ಪರೀಕ್ಷೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಚಾರಾಂದೋಲದ ಮಾದರಿಯಲ್ಲಿ ಪ್ರಯತ್ನ ಮಾಡಿ ಶಿಬಿರಗಳನ್ನು ಏರ್ಪಡಿಸಿ/ಸಂಚಾರಿ ವ್ಯಾನ್ ಗಳ ಮೂಲಕ ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ಎಲ್ಲ ರೋಗ ಲಕ್ಷಣ ಇರುವವರಿಂದ ಮತ್ತು ಅವರ ಸಂಪರ್ಕಿತರಿಂದ ಮಾದರಿ ಸಂಗ್ರಹಿಸಿ, ಆ ಮಾದರಿಗಳನ್ನು ರಾಪಿಡ್ ಆಂಟಿಜೆನ್ ಟೆಸ್ಟ್ ಮಾಡಿಸಲು ತಿಳಿಸಿದೆ. ವೈರಾಣು ನಿಗ್ರಹಣಕ್ಕೆ ಪ್ರಮುಖವಾದ ಪರೀಕ್ಷೆಗಳನ್ನು ಹೆಚ್ಚಿಸುವ ಸಲುವಾಗಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪರ್ಕ ಪತ್ತೆಗೆ ಗಮನ ಹರಿಸುವಂತೆ ಆಗ್ರಹಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1635746

ಒಡಿಶಾದ ಆಶಾಗಳಿಂದ ಕೋವಿಡ್ ಸಂಬಂಧಿತ ಕಳಂಕ ಮತ್ತು ತಾರತಮ್ಯ ನಿವಾರಣೆ; ಕೋವಿಡ್ -19 ವಿರುದ್ಧ ಹೋರಾಟದಲ್ಲಿ 46000ಕ್ಕೂ ಹೆಚ್ಚು ಆಶಾಗಳಿಂದ ಸ್ಥಳೀಯ ಸಮುದಾಯದೊಂದಿಗೆ ಕಾರ್ಯಾಚರಣೆ

ಒಡಿಶಾದಲ್ಲಿ 46,427ಕ್ಕೂ ಹೆಚ್ಚು ಆಶಾಗಳು ಸ್ಥಳೀಯ ಆರೋಗ್ಯ ಅಗತ್ಯ ಪೂರೈಸುವ ಮೂಲಕ, ಕೋವಿಡ್ 19 ವಿರುದ್ಧ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚಾಂಪಿಯನ್ನರಾಗಿ ಹೊರಹೊಮ್ಮಿದ್ದಾರೆ. ಅವರು ಹಳ್ಳಿಗಳ ಮಟ್ಟದಲ್ಲಿ ಗ್ರಾಮ ಕಲ್ಯಾಣ ಸಮಿತಿಗಳೊಂದಿಗೆ ನಗರ ಪ್ರದೇಶಗಳಲ್ಲಿ ಮಹಿಳಾ ಈರೋಗ್ಯ ಸಮಿತಿಗಳೊಂದಿಗೆ ಆಪ್ತವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣಬಹುದಾಗಿದೆ. ಸಾರ್ವಜನಿಕ ಸ್ಥಳಗಳಿಗೆ ಕಾಲಿಡುವ ಮುನ್ನ ಮಾಸ್ಕ್/ಮುಖ ಕವಚ ಬಳಕೆಯನ್ನು ಉತ್ತೇಜಿಸುವ ಮೂಲಕ, ಜನರು ಪದೇ ಪದೇ ಕೈ ತೊಳೆದುಕೊಳ್ಳುವಂತೆ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತೆ ಉತ್ತೇಜಿಸುವ ಮೂಲಕ, ಕೋವಿಡ್ ಲಕ್ಷಣಗಳ ಬಗ್ಗೆ ಜಾಗೃತಿ ಹೆಚ್ಚಿಸುವ ಮೂಲಕ ಕೋವಿಡ್ ತಡೆ ಕಾರ್ಯ ಮಾಡುತ್ತಿದ್ದಾರೆ. ಸ್ವಾಸ್ಥ್ಯ ಕಾಂತದಲ್ಲಿ (ಗ್ರಾಮ ಮಟ್ಟದಲ್ಲಿ ಗೋಡೆ) ಕರಪತ್ರಗಳು ಮತ್ತು ಬಿತ್ತಿ ಪತ್ರಗಳ ವಿತರಣೆಯಂತಹ ಐಇಸಿ ಚಟುವಟಿಕೆಗಳ ಮೂಲಕ ಆಶಾಗಳು ಇವುಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿದ್ದಾರೆ.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1635840

ಕೋವಿಡ್-19 ಪಲ್ಸ್ ಆಕ್ಸಿಮೀಟರ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ನಂಥ ಪ್ರಮುಖ ವೈದ್ಯಕೀಯ ಸಾಧನಗಳ ದರ ಹೆಚ್ಚಳದ ಬಗ್ಗೆ ನಿಗಾ ವಹಿಸಿರುವ ಮತ್ತು ದೇಶದಲ್ಲಿ ಅವುಗಳ ಲಭ್ಯತೆ ಖಾತ್ರಿ ಪಡಿಸುತ್ತಿರುವ  ಎನ್.ಪಿಪಿ. .

ದೇಶದಲ್ಲಿ ಕೋವಿಡ್ -19 ಚಿಕಿತ್ಸಾಲಯ ನಿರ್ವಹಣೆಗೆ ಅಗತ್ಯವಾದ ವೈದ್ಯಕೀಯ ಸಾಧನಗಳ ಸೂಕ್ತ ಲಭ್ಯತೆಯ ಖಾತ್ರಿಗೆ ಸರ್ಕಾರ ಶ್ರಮಿಸುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇದಕ್ಕಾಗಿ ನಿರ್ಣಾಯಕವಾದ ವೈದ್ಯಕೀಯ ಉಪಕರಣಗಳನ್ನು ಗುರುತಿಸಿಪಟ್ಟಿ ಮಾಡಿದ್ದು, ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (ಎನ್.ಪಿ.ಪಿ.ಎ.)ಗೆ ದೇಶದಲ್ಲಿ ಅವುಗಳ ಲಭ್ಯತೆಯ ಖಾತ್ರಿ ಪಡಿಸುವಂತೆ ಮನವಿ ಮಾಡಿದೆ. ಸರ್ಕಾರ  ಗ್ರಾಹಕರಿಗೆ ಜೀವ ರಕ್ಷಕ ಔಷಧ/ಸಾಧನಗಳು ಕೈಗೆಟಕುವ ದರದಲ್ಲಿ ದೊರಕುವಂತೆ ಮಾಡಲು ಬದ್ಧವಾಗಿದೆ. ಎಲ್ಲ ವೈದ್ಯಕೀಯ ಸಾಧನಗಳನ್ನು ಔಷಧ ಎಂದು ಅಧಿಸೂಚಿಸಲಾಗಿದ್ದು, ಅವು ಈಗ ನಿಯಂತ್ರಣದ ವ್ಯಾಪ್ತಿಗೆ ಒಳಪಡುತ್ತವೆ. ನಿರ್ಣಾಯಕ ವೈದ್ಯಕೀಯ ಸಲಕರಣೆಗಳ ಬೆಲೆ ಏರಿಕೆಯನ್ನು ಪರಿಶೀಲಿಸುವ ಸಲುವಾಗಿ, ಎನ್‌.ಪಿಪಿಎ (i) ಪಲ್ಸ್ ಆಕ್ಸಿಮೀಟರ್ ಮತ್ತು (ii) ಆಕ್ಸಿಜನ್ ಕಾನ್ಸಂಟ್ರೇಟರ್ ತಯಾರಕರು / ಆಮದುದಾರರಿಂದ 2020 ರ ಏಪ್ರಿಲ್ 1 ರವರೆಗೆ ಅಸ್ತಿತ್ವದಲ್ಲಿದ್ದ ಬೆಲೆಗಳ ದತ್ತಾಂಶ ಕೇಳಿದ್ದು, ಈ ದರ ಒಂದು ವರ್ಷದಲ್ಲಿ ಶೇ.10 ಕ್ಕಿಂತ ಹೆಚ್ಚಾಗಿರಬಾರದು ಎಂದಿದೆ. ವೈದ್ಯಕೀಯ ಸಾಧನಗಳ ಉದ್ಯಮ ಸಂಘಗಳು ಮತ್ತು ನಾಗರಿಕ ಸಮಾಜ ಗುಂಪಿನೊಂದಿಗೆ ಬಾಧ್ಯಸ್ಥರೊಂದಿಗೆ ಸಮಾಲೋಚನೆಯನ್ನು 2020 ರ ಜುಲೈ 1 ರಂದು ಎನ್‌.ಪಿಪಿಎದಲ್ಲಿ ನಡೆಸಲಾಯಿತು, ಇದರಲ್ಲಿ ನಿರ್ಣಾಯಕ ವೈದ್ಯಕೀಯ ಉಪಕರಣಗಳ ಎಲ್ಲಾ ತಯಾರಕರು / ಆಮದುದಾರರು ದೇಶದಲ್ಲಿ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಿಹೇಳಲಾಯಿತು. ನಿರ್ಣಾಯಕ ವೈದ್ಯಕೀಯ ಸಲಕರಣೆಗಳ ಚಿಲ್ಲರೆ ಬೆಲೆಯನ್ನು ತಗ್ಗಿಸುವಂತೆ ವೈದ್ಯಕೀಯ ಸಾಧನಗಳ ಉದ್ಯಮ ಸಂಘಗಳಿಗೆ ಒತ್ತಾಯಿಸಲಾಯಿತು.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1635899

ಪ್ರಧಾನಮಂತ್ರಿ ಮತ್ತು ರಷ್ಯಾ ಒಕ್ಕೂಟದ ಅಧ್ಯಕ್ಷರೊಂದಿಗೆ ದೂರವಾಣಿ ಸಂಭಾಷಣೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಜುಲೈ 2, 2020 ರಂದು ರಷ್ಯಾ ಒಕ್ಕೂಟದ ಅಧ್ಯಕ್ಷರಾದ ಘನತೆವೆತ್ತ ಶ್ರೀ ವ್ಲಾದಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಕೋವಿಡ್-19 ಜಾಗತಿಕ ಮಹಾಮಾರಿಯಿಂದ ಉದ್ಭವಿಸುತ್ತಿರುವ ನಕಾರಾತ್ಮಕ ಪರಿಸ್ಥಿತಿಗಳನ್ನು ಎದುರಿಸಲು ಉಭಯ ರಾಷ್ಟ್ರಗಳು ಕೈಗೊಂಡಂತಹ ಪರಿಣಾಮಕಾರಿ ಕ್ರಮಗಳ ಕುರಿತು ಉಭಯ ನಾಯಕರು ಚರ್ಚಿಸಿದರು ಮತ್ತು ಕೋವಿಡ್ ನಂತರದ ವಿಶ್ವದಲ್ಲಿ ಜಂಟಿಯಾಗಿ ಸವಾಲುಗಳನ್ನು ಎದುರಿಸಲು ಭಾರತ ಮತ್ತು ರಷ್ಯಾದ ನಿಕಟ ಸಂಬಂಧದ ಪ್ರಾಮುಖ್ಯತೆಯನ್ನು ಒಪ್ಪಿಕೊಂಡರು. ಈ ವರ್ಷಾಂತ್ಯದಲ್ಲಿ ನಡೆಯಲಿರುವ ದ್ವಿಪಕ್ಷೀಯ ಶೃಂಗಸಭೆಯ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸಂಬಂಧಗಳು ಮತ್ತು ಸಮಾಲೋಚನೆಗಳನ್ನು ಮುಂದುವರಿಸಲು ಅವರು ಸಮ್ಮತಿಸಿದರು. ದ್ವಿಪಕ್ಷೀಯ ಶೃಂಗಕ್ಕೆ ಅಧ್ಯಕ್ಷ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ತಾವು ಉತ್ಸುಕರಾಗಿರುವುದಾಗಿ ಪ್ರಧಾನಮಂತ್ರಿ ತಿಳಿಸಿದರು.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1635882

ಕೇಂದ್ರ ಎಚ್.ಆರ್.ಡಿ. ಸಚಿವರು ಮತ್ತು ಕೇಂದ್ರ ಆರೋಗ್ಯ ಸಚಿವರು ಜಂಟಿಯಾಗಿ ಔಷಧ ಸಂಶೋಧನೆ ಹ್ಯಾಕಥಾನ್ 2020ಕ್ಕೆ ಚಾಲನೆ ನೀಡಿದರು

ಆನ್ ಲೈನ್ ವೇದಿಕೆಯ ಮೂಲಕ ಔಷಧ ಸಂಶೋಧನೆ ಹ್ಯಾಕಥಾನ್ ಅನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ್ ಜಂಟಿಯಾಗಿ ಉದ್ಘಾಟಿಸಿದರು. ಈ ಔಷಧ ಸಂಶೋಧನೆ ಹ್ಯಾಕಥಾನ್ ಎಂಎಚ್.ಆರ್.ಡಿ., ಎ.ಐ.ಸಿ.ಟಿ.ಇ ಮತ್ತು ಸಿಎಸ್.ಐ.ಆರ್.ನ ಜಂಟಿ ಉಪಕ್ರಮವಾಗಿದ್ದು, ಇದಕ್ಕೆ ಸಿಡಿಎಸಿ, ಮೈಗೌ, ಸ್ಕ್ರೋಡಿಂಗರ್ ಮತ್ತು ಚೆಮ್ ಆಕ್ಸಾನ್ ನಂತ ಪಾಲುದಾರರ ಬೆಂಬಲವೂ ಇದೆ. ಹ್ಯಾಕಥಾನ್ ಪ್ರಾಥಮಿಕವಾಗಿ ಔಷಧ ಸಂಶೋಧನೆಯ ಗಣಕ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಮೂರು ಟ್ರ್ಯಾಕ್‌ ಗಳನ್ನು ಹೊಂದಿರುತ್ತದೆ. ಟ್ರಾಕ್ -1 ಅದು ಸಾರ್ಸ್ -ಕೋವ್-2 ಅನ್ನು ಪ್ರತಿಬಂಧಿಸುವ ಸಾಮರ್ಥ್ಯವನ್ನು ಹೊಂದಿರುವ ಔಷಧ ವಿನ್ಯಾಸಕ್ಕಾಗಿ ಕಂಪ್ಯೂಟೇಶನಲ್ ಮಾಡೆಲಿಂಗ್‌ನೊಂದಿಗೆ ವ್ಯವಹರಿಸುತ್ತದೆ ಅಥವಾ ಅಸ್ತಿತ್ವದಲ್ಲಿರುವ ದತ್ತಾಂಶಸಂಚಯದ 'ಸೀಸ' ಸಂಯುಕ್ತಗಳನ್ನು ಗುರುತಿಸಿದರೆ,  ಟ್ರ್ಯಾಕ್ -2 ಭಾಗವಹಿಸುವವರು ಕನಿಷ್ಠ ವಿಷತ್ವ ಮತ್ತು ಗರಿಷ್ಠ ನಿರ್ದಿಷ್ಟತೆ ಮತ್ತು ಆಯ್ಕೆಗಳೊಂದಿಗೆ ಔಷಧದಂತಹ ಸಂಯುಕ್ತಗಳನ್ನು ಸಂಗ್ರಹಿಸಲು ದತ್ತಾಂಶ ವಿಶ್ಲೇಷಣೆ ಮತ್ತು ಎಐ/ಎಂಎಲ್ ವಿಧಾನ ಬಳಸಿ ಹೊಸ ಪರಿಕರಗಳು ಮತ್ತು ಕ್ರಮಾವಳಿಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುತ್ತದೆ. ಮೂರನೇ ಟ್ರಾಕ್, ಮೂನ್ ಶಾಟ್ ಮಾದರಿಯದಾಗಿದ್ದು, ಇದು ಮಾರಕ ಮತ್ತು ಕ್ಷೇತ್ರದ ಪರಿಮಿತಿಯಾಚೆಗಿನದನ್ನು ಮಾತ್ರ ವ್ಯವಹರಿಸುತ್ತದೆ.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1635913

ಸುಗಮ ವಾಣಿಜ್ಯಕ್ಕಾಗಿ ಜಿಎಸ್ಟಿ ತೆರಿಗೆ ಆಡಳಿತವನ್ನು ಸರಳಗೊಳಿಸಲು ಶ್ರಮಿಸುತ್ತಿರುವ :ಹಣಕಾಸು ಸಚಿವರು

ಜಿಎಸ್ಟಿ ದಿನ 2020 ಅಥವಾ ಜಿಎಸ್ಟಿ ಜಾರಿ ಮಾಡಿದ ದಿನದ ಮೂರನೇ ವಾರ್ಷಿಕೋತ್ಸವವನ್ನು 2020ರ ಜುಲೈ 1ರಂದು ಭಾರತದಾದ್ಯಂತ ಸಿಬಿಐಸಿ ಮತ್ತು ಎಲ್ಲ ಕ್ಷೇತ್ರ ಕಚೇರಿಗಳಲ್ಲಿ ಆಚರಿಸಲಾಯಿತು. ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಜಿಎಸ್ಟಿ ದಿನದ ತಮ್ಮ ಸಂದೇಶದಲ್ಲಿ ಬಾಧ್ಯಸ್ಥರ ಪ್ರತಿಕ್ರಿಯೆಯ ಆಧಾರದಲ್ಲಿ ಜಿಎಸ್ಟಿ ತೆರಿಗೆ ಆಡಳಿತವನ್ನು ಸರಳೀಕರಿಸುವಲ್ಲಿ ಜಿಎಸ್ಟಿ ಸಾಕಷ್ಟು ದೂರ ಬಂದಿದೆ ಎಂದು ತಿಳಿಸಿದ್ದಾರೆ. ಹಣಕಾಸು ಸಚಿವರ ಪ್ರಮುಖ ಸಂದೇಶ: ಆತ್ಮ ನಿರ್ಭರ ಭಾರತದ ಮಾನ್ಯ ಪ್ರಧಾನಮಂತ್ರಿಯವರ ಕರೆಗೆ ಗಮನ ನೀಡಿ, ಸುಗಮ ವ್ಯಾಪಾರ ಖಾತರಿಪಡಿಸಿ, ವಾಣಿಜ್ಯ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು, ಪೂರ್ವಭಾವಿ ಕ್ರಮಗಳಿಂದ ಪರಿಹರಿಸಿ. ತೆರಿಗೆ ಆಡಳಿತವನ್ನು ತೆರಿಗೆದಾರರಿಗೆ ಸರಳಗೊಳಿಸಲು ಶ್ರಮಿಸಲಾಗುವುದು. ಹಣಕಾಸು ಸಚಿವರು, ಈ ಕೋವಿಡ್ -19 ಸಂಕಷ್ಟದ ಸಮಯದಲ್ಲಿ ತೆರಿಗೆದಾರರಿಗೆ ನೆರವಾಗಲುಶ್ರಮಿಸಿದ ಸಿಬಿಐಸಿ ಅಧಿಕಾರಿಗಳು ಮಾಡಿರುವ ಶ್ಲಾಘನಾರ್ಹ ಕಾರ್ಯಕ್ಕಾಗಿ ಅವರನ್ನು ಅಭಿನಂದಿಸಿದ್ದಾರೆ. ಈ ಅವಧಿಯಲ್ಲಿ ಹಣ ಹರಿವು ಸುಗಮಗೊಳಿಸಲು ದಾಖಲೆಯ ಮೊತ್ತ ಮರು ಪಾವತಿ ಮಾಡಿರುವುದಕ್ಕೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿವರಗಳಿಗಾಗಿ: https://pib.gov.in/PressReleasePage.aspx?PRID=1635730

ಹಿಂದಿನ ತಿಂಗಳುಗಳಲ್ಲಿ ಬಾಕಿ ಇರುವ ಆಹಾರ ಧಾನ್ಯವನ್ನು ಎತ್ತುವಳಿ  ಮಾಡಲು ಮತ್ತು ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಣೆಯನ್ನು ತ್ವರಿತಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಮನವಿ

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್, ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಚ್ಚುವರಿ ಆಹಾರ ಧಾನ್ಯಗಳನ್ನು  (ಎಎವೈ ಮತ್ತು ಪಿ.ಎಚ್‌.ಎಚ್) ಎನ್‌.ಎಫ್‌.ಎಸ್‌.ಎ (ಡಿಬಿಟಿ ವ್ಯಾಪ್ತಿಗೆ ಒಳಪಟ್ಟವರು ಸೇರಿದಂತೆ) ಎಲ್ಲ ಫಲಾನುಭವಿಗಳಿಗೆ @ ಮಾಸಿಕ ಪ್ರತಿ ವ್ಯಕ್ತಿಗೆ 5 ಕೆಜಿಯಂತೆ ಎಲ್ಲರಿಗೂ ಉಚಿತವಾಗಿ ಪೂರೈಸಲು ಸಚಿವಾಲಯ ಮಾಡಿಕೊಂಡಿರುವ ಅವಕಾಶ ಮತ್ತು ಅಗತ್ಯ ಕ್ರಮಗಳ ವಿವರಗಳನ್ನು ಒದಗಿಸಿದರು. ನವೆಂಬರ್ ಅಂತ್ಯದವರೆಗೆ ಯೋಜನೆ ವಿಸ್ತರಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಶ್ರೀ ಪಾಸ್ವಾನ್ ಧನ್ಯವಾದ ಅರ್ಪಿಸಿದರು, ಇದರಿಂದ ಕೋವಿಡ್ -19 ಮಹಾಮಾರಿಯ ಸಂಕಷ್ಟದ ಸಂದರ್ಭದಲ್ಲಿ, ಮಳೆಗಾಲ ಮತ್ತು ಮುಂಬರುವ ಹಬ್ಬದ ಸಾಲಿನಲ್ಲಿ ಬಡವರು ಮತ್ತು ಅಗತ್ಯ ಇರುವ ಜನರು ಹಸಿವಿನಿಂದ ಬಳಲುವುದಿಲ್ಲ ಎಂದರು. 200 ಎಲ್.ಎಂ.ಟಿ. ಧಾನ್ಯ ಮತ್ತು 20 ಕೋಟಿ ಕುಟುಂಬಗಳಿಗೆ 9.78 ಲಕ್ಷ ಮೆಟ್ರಿಕ್ ಟನ್ ಬೇಳೆಯನ್ನು 80 ಕೋಟಿ ಎನ್.ಎಫ್.ಎಸ್.ಎ. ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗಿದೆ ಎಂದರು.

ವಿವರಗಳಿಗಾಗಿ: https://pib.gov.in/PressReleasePage.aspx?PRID=1635691

ಸಮುದ್ರ ಸೇತು ಕಾರ್ಯಾಚರಣೆ – 687 ಭಾರತೀಯ ಪ್ರಜೆಗಳನ್ನು ಇರಾನ್ ನಿಂದ ಕರೆತಂದ .ಎನ್.ಎಸ್. ಜಲಾಶ್ವ

ಭಾರತೀಯ ನೌಕಾಪಡೆ ಸಮುದ್ರ ಸೇತು ಕಾರ್ಯಾಚರಣೆಗಾಗಿ ನಿಯೋಜಿಸಿದ್ದ .ಎನ್.ಎಸ್. ಜಲಾಶ್ವ ನಿನ್ನೆ ಇರಾನ್ ಅಬ್ಬಾನ್ ಬಂದರಿನಿಂದ 687 ಭಾರತೀಯ ಪ್ರಜೆಗಳನ್ನು ಹೊತ್ತು ತೂತುಕುಡಿ ಬಂದರಿಗೆ ಆಗಮಿಸಿತು. ಈವರೆಗೆ ಭಾರತೀಯ ನೌಕಾಪಡೆಯ ಹಡಗುಗಳು 920 ಭಾರತೀಯರನ್ನು ಇರಾನ್ ನಿಂದ ಕರೆತಂದಿದೆ. ತೆರವು ಕಾರ್ಯಾಚರಣೆಯೊಂದಿಗೆ ಭಾರತೀಯ ನೌಕಾಪಡೆ ಮಹಾಮಾರಿ ಸಾಂಕ್ರಾಮಿಕದ ವೇಳೆ ಒಟ್ಟು 3992 ಭಾರತೀಯರನ್ನು ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಇರಾನ್ ನಿಂದ ಕರೆತಂದಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1635766

ಡಿಜಿಟಲ್ ಪಯಣ ಸಬಲೀಕರಣ, ಸಮಗ್ರತೆಗೆ ಗಮನ ಹರಿಸಿದ್ದು, ಡಿಜಿಟಲ್ ಪರಿವರ್ತನೆ ಮತ್ತು ಅದರ ಸಕಾರಾತ್ಮಕ ಪರಿಣಾಮಗಳು ಭಾರತೀಯ ನಾಗರಿಕರ ಬದುಕಿನ ಎಲ್ಲ ಮಗ್ಗಲುಗಳಲ್ಲಿ ಕಾಣುತ್ತಿದೆ: ರವಿಶಂಕರ್ ಪ್ರಸಾದ್, ಸಚಿವಾಲಯದಿಂದ ಡಿಜಿಟಲ್ ಇಂಡಿಯಾದ 5ನೇ ವರ್ಷದ ಆಚರಣೆ

ಡಿಜಿಟಲ್ ಪಯಣ ಸಬಲೀಕರಣ, ಸಮಗ್ರತೆಗೆ ಗಮನ ಹರಿಸಿದ್ದು, ಡಿಜಿಟಲ್ ಪರಿವರ್ತನೆ ಮತ್ತು ಅದರ ಸಕಾರಾತ್ಮಕ ಪರಿಣಾಮ ಭಾರತೀಯ ನಾಗರಿಕರ ಬದುಕಿನ ಎಲ್ಲ ರಂಗದಲ್ಲಿ ಆಗುತ್ತಿದೆ  ಕೇಂದ್ರ ವಿಧ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಸಂವಹನ ಮತ್ತು ಕಾನೂನು ಹಾಗೂ ನ್ಯಾಯ ಖಾತೆ ಸಚಿವ ಶ್ರೀ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ. ಭಾರತೀಯ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ 5 ವರ್ಷಗಳ ಪಯಣದ ಕಾರ್ಯಕ್ರಮದಲ್ಲಿ ನಿನ್ನೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಅವರು, ಪ್ರಸಕ್ತ ಸಾಂಕ್ರಾಮಿಕದ ಸಂದರ್ಭದಲ್ಲಿ ಜಾಮ್ ತ್ರಿವಳಿ (ಜನ್ ಧನ್, ಆಧಾರ್ ಮತ್ತು ಮೊಬೈಲ್)ಗೆ ಧನ್ಯವಾದ ಹೇಳಬೇಕು ಎಂದರು. ಜನರು ಮನೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ, ಜನರು ಡಿಜಿಟಲ್ ಪಾವತಿ ಮಾಡುವಂತಾಗಿದೆ, ವಿದ್ಯಾರ್ಥಿಗಳು ಟಿವಿ, ಮೊಬೈಲ್, ಲ್ಯಾಪ್ ಟಾಪ್ ನಿಂದ ಕಲಿಯುತ್ತಿದ್ದಾರೆ, ಪಾಲಕರು ಟೆಲಿ ಸಮಾಲೋಚನೆ ನಡೆಸುತ್ತಿದ್ದಾರೆ, ಭಾರತದ ದೂರದ ಪ್ರದೇಶದಲ್ಲಿನ ರೈತರು ಪಿಎಂ ಕಿಸಾನ್ ಸೌಲಭ್ಯವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ ಎಂದರು. ಡಿಜಿಟಲ್ ಇಂಡಿಯಾ ಉಪಕ್ರಮ, ಆರೋಗ್ಯ ಸೇತು, ಇ ಸಂಜೀವಿನಿ ಕೋವಿಡ್ -19 ಸನ್ನಿವೇಶದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮೈಗೌ ಮತ್ತು ಸಾಮಾಜಿಕ ಮಾಧ್ಯಮಗಳು ಸಂಚಲನ ಮೂಡಿಸಿವೆ ಎಂದರು. 

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1635683

ಕೋವಿಡ್ 19 ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕಾಗಿ ಎಸ್..ಆರ್. ನಿಂದ 2266 ಟ್ರಿಪ್ ಪಾರ್ಸಲ್ ಎಕ್ಸ್ ಪ್ರೆಸ್  ರೈಲು ಸಂಚಾರ

ಆಗ್ನೇಯ ರೈಲ್ವೆ (ಎಸ್.ಇ.ಆರ್.) ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸುವ ವೇಳಾಪಟ್ಟಿಯಂತೆ ಪಾರ್ಸೆಲ್ ಎಕ್ಸ್‌ ಪ್ರೆಸ್ ರೈಲುಗಳ 2266 ಟ್ರಿಪ್‌ ಗಳನ್ನು ಈಗಾಗಲೇ ಓಡಿಸಿದ್ದು, 2020 ರ ಏಪ್ರಿಲ್ 2 ರಿಂದ ಜೂನ್ 30 ರವರೆಗೆ ದೇಶದ ವಿವಿಧ ಭಾಗಗಳಿಗೆ ಆಹಾರ ವಸ್ತುಗಳು, ದಿನಸಿ, ಔಷಧಿಗಳು, ವೈದ್ಯಕೀಯ ಉಪಕರಣಗಳು, ಮೀನು, ಹಣ್ಣುಗಳು, ಹತ್ತಿ ವಸ್ತುಗಳು, ಗೋಣಿ ಚೀಲಗಳು, ತರಕಾರಿಗಳು , ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳನ್ನು ಸಾಗಿಸಿದೆ. ಈ ಮೇಲಿನ ಅವಧಿಯಲ್ಲಿ ಎಸ್.ಇ.ಆರ್. 36,532 ಟನ್ ಗಳಷ್ಟು ಪಾರ್ಸಲ್ ಸಂಚಾರ ನಡೆಸಿದ್ದು, ಇದರಲ್ಲಿ 13,73,645 ಪ್ಯಾಕೇಜ್ ಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1635687

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಕೇರಳ: ಎರ್ನಾಕುಲಂ ಮಾರುಕಟ್ಟೆಯಲ್ಲಿ ಕೋವಿಡ್ -19 ಪ್ರಸರಣದ ಹಿನ್ನೆಲೆಯಲ್ಲಿ, ಕೊಚ್ಚಿಯಲ್ಲಿ ಹೆಚ್ಚಿನ ಎಚ್ಚರಿಕೆಯ ಅಗತ್ಯವಿದೆ ಎಂದು ರಾಜ್ಯ ಕೃಷಿ ಸಚಿವ ವಿ.ಎಸ್. ಸುನಿಲ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ ಎರ್ನಾಕುಲಂ ಜಿಲ್ಲೆಯಲ್ಲಿ ಸಮುದಾಯ ಹರಡುವಿಕೆ ಇಲ್ಲ ಮತ್ತು ರೋಗದ ಲಕ್ಷಣಗಳನ್ನು ಮರೆಮಾಚುವ ಮತ್ತು ಶಿಷ್ಟಾಚಾರವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಕುವೈತ್‌ ನಿಂದ ಹಿಂದಿರುಗಿದ ನಂತರ ಜಿಲ್ಲೆಯಲ್ಲಿ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಒಬ್ಬ ರೋಗಿಯ ಸ್ಥಿತಿ ತುಂಬಾ ಗಂಭೀರವಾಗಿದೆ. ನಿನ್ನೆ ವೈರಸ್ ದೃಢಪಟ್ಟ 12 ಜನರಲ್ಲಿ, ಎಂಟು ಮಂದಿಗೆ ಸಂಪರ್ಕದಿಂದ ಬಂದಿದೆ. ಏತನ್ಮಧ್ಯೆ, ಮಾರುಕಟ್ಟೆಯ ಉದ್ಯೋಗಿಯೊಬ್ಬರಲ್ಲಿ ಸೋಂಕು ದೃಢವಾಗಿದ್ದು, ಆ ಬಳಿಕ ಸಂಪರ್ಕದಲ್ಲಿದ್ದ 26 ಜನರ ಗಂಟಲುದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಕೇರಳದ ಸನ್ಯಾಸಿನಿಯೊಬ್ಬರು ದೆಹಲಿಯ ಕೋವಿಡ್ -19 ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ನಿನ್ನೆ 151 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 132 ಚೇತರಿಕೆ ದಾಖಲಾಗಿವೆ. ರಾಜ್ಯಾದ್ಯಂತ 2,130 ರೋಗಿಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ತಮಿಳುನಾಡು: ಪುದುಚೇರಿಯಲ್ಲಿ 63 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ; ಪ್ರಸ್ತುತ 459 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಪರಿಸ್ಥಿತಿಯಿಂದಾಗಿ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲದ ಕಾರಣ, ರಾಜ್ಯ ಸರ್ಕಾರವು ಅನೇಕ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಶೇಷ ಅಧಿಕಾರಿಗಳ ಅವಧಿಯನ್ನು  ಈ ಹಿಂದಿನ ಜೂನ್ 30ರಿಂದ 2020 ರ ಡಿಸೆಂಬರ್ 31 ರವರೆಗೆ ವಿಸ್ತರಿಸುವ ಮತ್ತೊಂದು ಸುಗ್ರೀವಾಜ್ಞೆಯನ್ನು ಹೊರಡಿಸಿದೆ. 3882 ಹೊಸ ಪ್ರಕರಣಗಳು , ನಿನ್ನೆ 2852 ಗುಣಮುಖ ಮತ್ತು 63 ಸಾವುಗಳು ವರದಿಯಾಗಿವೆ. ಇಲ್ಲಿಯವರೆಗೆ ಒಟ್ಟು ಪ್ರಕರಣಗಳು: 94049, ಸಕ್ರಿಯ ಪ್ರಕರಣಗಳು: 39856, ಸಾವುಗಳು: 1264, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 22777
  • ಕರ್ನಾಟಕ: ಕೋವಿಡ್ ನಿಗ್ರಹಿಸಲು, ಎಸ್‌.ಎಸ್‌.ಎಲ್‌.ಸಿ (10ನೇ ತರಗತಿ) ಪರೀಕ್ಷೆಗಳು ಮುಗಿದ ನಂತರ ಜುಲೈ 7 ರಿಂದ ಕಂಟೈನ್‌ಮೆಂಟ್ ವಲಯಗಳಲ್ಲಿ ಲಾಕ್‌ ಡೌನ್ ನಿಯಮಗಳನ್ನು ವಿಧಿಸಲು ರಾಜ್ಯ ಯೋಜಿಸುತ್ತಿದೆ. ಶಿಷ್ಟಾಚಾರವನ್ನು ಅನುಸರಿಸದೆ ಕೋವಿಡ್ ರೋಗಿಗಳ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ ಎಂಬ ದೂರುಗಳ ನಂತರ, ಮೃತಪಟ್ಟ ಕೋವಿಡ್ ರೋಗಿಗಳ ಸಮಾಧಿ ಮಾಡಲು ನಗರಗಳ ಹೊರಗಿನ ಪ್ರದೇಶಗಳನ್ನು ಗುರುತಿಸಲು ರಾಜ್ಯವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. 1272 ಹೊಸ ಪ್ರಕರಣಗಳು, 145 ಬಿಡುಗಡೆ ಮತ್ತು 7 ಸಾವುಗಳು ನಿನ್ನೆ ವರದಿಯಾಗಿವೆ. ಇಲ್ಲಿಯವರೆಗೆ ಒಟ್ಟು ಸಕಾರಾತ್ಮಕ ಪ್ರಕರಣಗಳು: 16,514, ಸಕ್ರಿಯ ಪ್ರಕರಣಗಳು: 8194, ಸಾವುಗಳು: 253 ಬಿಡುಗಡೆ: 8063.
  • ಆಂಧ್ರಪ್ರದೇಶ: ಹೈದರಾಬಾದ್‌ನ ಜಿಎಚ್‌.ಎಂಸಿ ವ್ಯಾಪ್ತಿ ಮತ್ತು ತೆಲಂಗಾಣದ ಕೆಲವು ಪಕ್ಕದ ಜಿಲ್ಲೆಗಳಲ್ಲಿ 15 ದಿನಗಳ ಸಂಪೂರ್ಣ ಲಾಕ್‌ ಡೌನ್ ಆಗಬಹುದೆಂಬ ಊಹಾಪೋಹಗಳೊಂದಿಗೆ, ಆಂಧ್ರಪ್ರದೇಶ ಮೂಲದ ಜನರು ಮತ್ತೆ ತಮ್ಮ ಸ್ಥಳೀಯ ಸ್ಥಳಗಳಿಗೆ ಧಾವಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಆಂಧ್ರ-ತೆಲಂಗಾಣ ಗಡಿಯಲ್ಲಿ ಹಲವಾರು ಕಡೆಗಳಲ್ಲಿ ಭಾರಿ ಸಂಚಾರದಟ್ಟಣೆ ಕಂಡುಬರುತ್ತಿದ್ದು, ಉದ್ದವಾದ ಸಾಲುಗಳಲ್ಲಿ ವಾಹನಗಳು ಹಲವಾರು ಕಿಲೋಮೀಟರ್‌ ಗಳಷ್ಟು ಕಾಣುತ್ತಿವೆ. ಶೈಕ್ಷಣಿಕ ಪಠ್ಯಕ್ರಮವನ್ನು ಶೇ.30 ಮತ್ತು ಕೆಲಸದ ದಿನಗಳನ್ನು 2020 ರ ಆಗಸ್ಟ್ 3 ರಿಂದ 2021 ಮೇ ಎರಡನೇ ವಾರದವರೆಗೆ 180 ಕ್ಕೆ ಇಳಿಸಲು ರಾಜ್ಯ ಚಿಂತಿಸುತ್ತಿದೆ. 14,285 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ 845 ಹೊಸ ಪ್ರಕರಣಗಳು, 281 ಗುಣಮುಖ ಮತ್ತು ಐದು ಸಾವುಗಳು ವರದಿಯಾಗಿವೆ. 845 ಪ್ರಕರಣಗಳಲ್ಲಿ 29 ಅಂತಾ ರಾಜ್ಯ ಪ್ರಕರಣಗಳು ಮತ್ತು ನಾಲ್ಕು ವಿದೇಶಗಳಿಂದ ಬಂದವು. ಒಟ್ಟು ಪ್ರಕರಣಗಳು: 16,097, ಸಕ್ರಿಯ ಪ್ರಕರಣಗಳು: 8586, ಬಿಡುಗಡೆ: 7313, ಸಾವು: 198.
  • ತೆಲಂಗಾಣ: ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಸರಕಾರದ ಅನುಮತಿಗಾಗಿ ಕಾದು ನಿಂತಿವೆ. ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು 100 ಹಾಸಿಗೆಗಳ ಸಾಮರ್ಥ್ಯವಿರುವ ಆಸ್ಪತ್ರೆಗಳಿಗೆ ಅನುಮತಿ ನೀಡುವಾಗ ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. 1018 ಹೊಸ ಪ್ರಕರಣಗಳು, 788 ಚೇತರಿಕೆ ಮತ್ತು 07 ಸಾವುಗಳು ನಿನ್ನೆ ವರದಿಯಾಗಿವೆ. ನಿನ್ನೆ ತನಕ ವರದಿಯಾದ ಒಟ್ಟು ಪ್ರಕರಣಗಳು: 17357, ಸಕ್ರಿಯ ಪ್ರಕರಣಗಳು: 9008, ಸಾವು: 267, ವಿಸರ್ಜನೆ: 8082.
  • ಮಹಾರಾಷ್ಟ್ರ: ರಾಜ್ಯದಲ್ಲಿ ಪ್ರಸ್ತುತ ಕೋವಿಡ್ -19 ರೋಗಿಗಳ ಸಂಖ್ಯೆ 180298 ಆಗಿದೆ. 5537 ಹೊಸ ರೋಗಿಗಳಲ್ಲಿ ಸೋಂಕು ದೃಢಪಟ್ಟಿದೆ ಮತ್ತು 2243 ರೋಗಿಗಳು ಬುಧವಾರ ಚೇತರಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ, 93154 ರೋಗಿಗಳನ್ನು ಬುಧವಾರದವರೆಗೆ ಚೇತರಿಸಿಕೊಂಡ ನಂತರ ರಾಜ್ಯಾದ್ಯಂತ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಒಟ್ಟು ಸಕ್ರಿಯ ರೋಗಿಗಳು 79075.
  • ಗುಜರಾತ್: ಗುಜರಾತ್‌ ನಲ್ಲಿ ಕಳೆದ 24 ಗಂಟೆಗಳಲ್ಲಿ 675 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಕೋವಿಡ್-19 ಪ್ರಕರಣಗಳು 33,318 ಕ್ಕೆ ತಲುಪಿದೆ. ಅಲ್ಲದೆ, ರಾಜ್ಯದಲ್ಲಿ ಸಾಂಕ್ರಾಮಿಕ ರೋಗದಿಂದಾಗಿ 21 ರೋಗಿಗಳು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 1,869 ತಲುಪಿದೆ.
  • ರಾಜಸ್ಥಾನ: ಇಂದು ಬೆಳಗ್ಗೆ 115 ಹೊಸ ಪ್ರಕರಣಗಳು ಮತ್ತು 5 ಸಾವುಗಳ ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳು 18,427 ರಷ್ಟಿದೆ. ರಾಜ್ಯದಲ್ಲಿ 3358 ಸಕ್ರಿಯ ಪ್ರಕರಣಗಳು ಇದ್ದರೆ, ರಾಜ್ಯದಲ್ಲಿ ಈವರೆಗೆ 14,643 ರೋಗಿಗಳು ಚೇತರಿಸಿಕೊಂಡಿದ್ದಾರೆ. ಉದಯಪುರದಲ್ಲಿ ಇಂದು ಗರಿಷ್ಠ - 21 ಪ್ರಕರಣಗಳು ವರದಿಯಾಗಿದ್ದು, ಬಿಕಾನೆರ್ 12 ಹೊಸ ಪ್ರಕರಣಗಳನ್ನು ದಾಖಲಾಗಿವೆ, ನಂತರ ರಾಜಸಮಂದ್ ಮತ್ತು ಧೋಲ್ಪುರ್ ಇಂದು ತಲಾ 10 ಪ್ರಕರಣಗಳನ್ನು ದಾಖಲಾಗಿವೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಬುಧವಾರ,268 ಹೊಸ ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದಲ್ಲಿ ಕೋವಿಡ್-19 ರ ಪ್ರಕರಣಗಳ ಸಂಖ್ಯೆಯನ್ನು 13,861 ಕ್ಕೆ ಹೆಚ್ಚಿಸಿದೆ. 2625 ಸಕ್ರಿಯ ಪ್ರಕರಣಗಳಿದ್ದರೆ, ಚೇತರಿಸಿಕೊಂಡ ರೋಗಿಗಳ ಸಂಖ್ಯೆ 10655 ಮತ್ತು ಇದುವರೆಗೆ 581 ಸಾವುಗಳು ಸಂಭವಿಸಿವೆ. ಹಾಟ್‌ ಸ್ಪಾಟ್ ಇಂದೋರ್‌ ನಲ್ಲಿ 25 ಹೊಸ ಪ್ರಕರಣಗಳು ಮತ್ತು 3 ಸಾವುಗಳು ಬುಧವಾರ ವರದಿಯಾಗಿವೆ. ಇಂದೋರ್‌ ನಲ್ಲಿ ಒಟ್ಟು ಪ್ರಕರಣಗಳು 4734 ರಷ್ಟಿವೆ. ರಾಜಧಾನಿ ಭೋಪಾಲ್‌ನಲ್ಲಿ ಬುಧವಾರ 41 ಹೊಸ ಪ್ರಕರಣಗಳು ಮತ್ತು 4 ಸಾವುಗಳು ದಾಖಲಾಗಿವೆ. ಆದ್ದರಿಂದ, ಭೋಪಾಲ್‌ ನಲ್ಲಿ ಒಟ್ಟು ಪ್ರಕರಣಗಳು ಈಗ 2830 ರಷ್ಟಿದೆ. ಮೊರೆನಾ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ ಸಂಖ್ಯೆಯ ಸೋಂಕು ವರದಿ ಆಗಿದೆ, ಅಂದರೆ 73 ಹೊಸ ಪ್ರಕರಣಗಳು ಮತ್ತು ಒಂದು ಸಾವು ಸಂಭವಿಸಿದೆ, ಗ್ವಾಲಿಯರ್ 25 ಪ್ರಕರಣಗಳನ್ನು ಮತ್ತು ಭಿಂಡ್ 22 ಪ್ರಕರಣಗಳನ್ನು ದಾಖಲಿಸಿವೆ.
  • ಛತ್ತೀಸಗಢ: ರಾಜ್ಯದಲ್ಲಿ 81 ಹೊಸ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 53 ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಒಂದು ಸಾವು ಬುಧವಾರ ಸಂಭವಿಸಿದೆ. ಇಲ್ಲಿಯವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 2940 ಆಗಿದ್ದರೆ, ಪ್ರಸ್ತುತ ರಾಜ್ಯದಲ್ಲಿ 623 ಸಕ್ರಿಯ ಪ್ರಕರಣಗಳಿವೆ.
  • ಗೋವಾ: ಬುಧವಾರ 72 ಹೊಸ ಸೋಂಕಿನ ಪ್ರಕರಣ ವರದಿಯಾಗಿವೆ, ಇದು ರಾಜ್ಯದ ಕೋವಿಡ್-19 ರೋಗಿಗಳ ಸಂಖ್ಯೆಯನ್ನು 1387 ಕ್ಕೆ ಹೆಚ್ಚಿಸಿದೆ. ರಾಜ್ಯದಲ್ಲಿ 713 ಸಕ್ರಿಯ ರೋಗಿಗಳಿದ್ದಾರೆ. ಬುಧವಾರದವರೆಗೆ 4 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಸಿಕೊಂಡ ರೋಗಿಗಳ ಸಂಖ್ಯೆ 670ಆಗಿದೆ. ಬುಧವಾರ ಅನ್ಯ ಕಾಯಿಲೆ ಇದ್ದವರೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ರಾಜ್ಯದಲ್ಲಿ 4ಕ್ಕೆ ಏರಿದೆ.
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ ಕೋವಿಡ್ -19 ಪರೀಕ್ಷೆಗಳಿಗೆ ಒಟ್ಟು 24,856 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ, 1669ರ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಪ್ರಸ್ತುತ 128 ಸಕ್ರಿಯ ಪ್ರಕರಣಗಳು ಮತ್ತು 66 ಜನರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಕೋವಿಡ್-19 ಹರಡುವುದನ್ನು ಕಡಿಮೆ ಮಾಡುವ ಕ್ರಮವಾಗಿ ಅರುಣಾಚಲ ಪ್ರದೇಶದ ದೋಯಿಮುಖ್‌ ನ ಬಜಾರ್ ಸಮಿತಿಯು ಜುಲೈ 5 ರವರೆಗೆ ಮಾರುಕಟ್ಟೆಯಲ್ಲಿನ ಎಲ್ಲಾ ವ್ಯಾಪಾರ ಸಂಸ್ಥೆಗಳನ್ನು ನಾಲ್ಕು ದಿನಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಿದೆ.
  • ಅಸ್ಸಾಂ: ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು ಇಂದು ಕೋವಿಡ್-19 ರಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
  • ಮಣಿಪುರ: ಮಣಿಪುರದ ಎನ್.ಐ.ಇ.ಎಲ್.ಐಟಿ. ಚುರಚಂದಪುರ ವಿಸ್ತರಣಾ ಕೇಂದ್ರದಲ್ಲಿ ಚುರಚಂದಪುರ ಕೋವಿಡ್-19 ಆರೈಕೆ ಕೇಂದ್ರವನ್ನು ಉದ್ಘಾಟಿಸಲಾಯಿತು. 50 ಹಾಸಿಗೆ ಕೇಂದ್ರವನ್ನು ಸಿಎಂಒ ಚುರಚಂದಪುರ ಮೇಲ್ವಿಚಾರಣೆ ಮಾಡಲಿದೆ.
  • ಮಿಜೋರಾಂ: ಮಿಜೋರಾಂನಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ಕಂಡುಬಂದಿಲ್ಲ. 382 ಗಂಟಲು ದ್ರವ ಮಾದರಿಗಳಲ್ಲಿ ಸೋಂಕಿಲ್ಲ ಎಂದು ವರದಿ  ಬಂದಿದ್ದರೆ, 15 ಮಾದರಿಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 37 ಆಗಿದ್ದರೆ, 123 ಚೇತರಿಸಿಕೊಂಡಿದ್ದಾರೆ. ಮತ್ತು ರಾಜ್ಯದಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳು 160 ಆಗಿದೆ.
  • ನಾಗಾಲ್ಯಾಂಡ್: ನಾಗಾಲ್ಯಾಂಡ್‌ನಲ್ಲಿ ಕೋವಿಡ್-1934 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 535 ಆಗಿದೆ, 353 ಸಕ್ರಿಯ ಪ್ರಕರಣಗಳು ದಾಖಲಾಗಿದ್ದರೆ, 182 ಜನರು ಇದುವರೆಗೆ ಚೇತರಿಸಿಕೊಂಡಿದ್ದಾರೆ. ಟ್ಯೂನ್‌ ಸಾಂಗ್‌ನಲ್ಲಿ ಬಿಎಸ್‌ಎಲ್ -2 ಪ್ರಯೋಗಾಲಯ ಅಳವಡಿಸಲು ಮೊದಲ ಕಂತಿನ ಉಪಕರಣಗಳು ಬಂದಿದ್ದು, ಸಮರೋಪಾದಿಯಲ್ಲಿ ತಾಂತ್ರಿಕ ಕಾರ್ಯಗಳನ್ನು ಮಾಡಲಾಗುವುದು ಎಂದು ನಾಗಾಲ್ಯಾಂಡ್‌ ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ತಿಳಿಸಿದ್ದಾರೆ.
  • ಚಂಡೀಗಢ: ಜ್ವರ, ಐಎಲ್ಐ, ಸಾರಿ, ಎಸ್ಎಆರ್.ಎಸ್ ಮತ್ತು ವೆಕ್ಟರ್ ಪ್ರಕರಣಗಳನ್ನು ಕೋವಿಡ್ ಗಾಗಿ ಪರೀಕ್ಷಿಸಬೇಕೆಂದು ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಆಡಳಿತಾಧಿಕಾರಿ ನಿರ್ದೇಶನ ನೀಡಿದ್ದಾರೆ. ನೆರೆಹೊರೆಯಲ್ಲಿರುವ ಯಾವುದೇ ಶಂಕಿತ ಪ್ರಕರಣದ ಬಗ್ಗೆ ಅಧಿಕಾರಿಗಳಿಗೆ ತಿಳಿಸುವಂತೆ ಅವರು ನಿವಾಸಿಗಳಿಗೆ ಮನವಿ ಮಾಡಿದ್ದಾರೆ, ಇದರಿಂದಾಗಿ ವೈದ್ಯಕೀಯ ತಂಡವು ಅವರನ್ನು ಸಂಪರ್ಕಿಸಿ ಪರೀಕ್ಷೆಯನ್ನು ವ್ಯವಸ್ಥೆಗೊಳಿಸಬಹುದಾಗಿದೆ. ಗೃಹ ಸಚಿವಾಲಯವು ಅಂಗೀಕರಿಸಿದ ಅನ್ ಲಾಕ್ 2 ಆದೇಶಗಳನ್ನು ಚಂಡೀಗಢದ ಕೇಂದ್ರಾಡಳಿತ ಪ್ರದೇಶದಲ್ಲಿ ಅಂಗೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡ ಧರಿಸುವುದು, ವ್ಯಕ್ತಿಗತ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಲಾಗುತ್ತಿದೆ ಮತ್ತು ಮಾರ್ಗಸೂಚಿಗಳು / ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ದಂಡ ವಿಧಿಸಲಾಗುತ್ತದೆ.
  • ಪಂಜಾಬ್: ಕೊರೊನಾ ವೈರಾಣು ಹರಡುವಿಕೆಯಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ರೋಗಿಗಳ ಹೊರೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಪ್ರಯತ್ನದಲ್ಲಿ, ಪಂಜಾಬ್ ಸಂಪುಟ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 3954 ನಿಯಮಿತ ಹುದ್ದೆಗಳನ್ನು ಮತ್ತು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ವಿಭಾಗದಲ್ಲಿ 291 ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡಿದೆ.
  • ಹಿಮಾಚಲ ಪ್ರದೇಶ: ಮುಖ್ಯ ಮಂತ್ರಿ ಗ್ರಾಮ ಕೌಶಲ್ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಿದ, ಮುಖ್ಯಮಂತ್ರಿಗಳು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಗ್ರಾಮೀಣ ಆರ್ಥಿಕತೆ ಮಾತ್ರ ಉಳಿದುಕೊಂಡಿದೆ ಎಂದು ಹೇಳಿದ್ದಾರೆ, ಇದು ಈ ಪ್ರದೇಶಗಳು ದೃಢವಾದ ನೆಲೆಯನ್ನು ಹೊಂದಿದೆ ಎಂಬುದರ ಸೂಚನೆಯಾಗಿದೆ ಯಾವುದೇ ರೀತಿಯ ಸಂಭವನೀಯತೆಯೊಂದಿಗೆ ವ್ಯವಹರಿಸಿ. ಯುವಜನರಿಗೆ ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿ ಆಧಾರಿತ ಯೋಜನೆಗಳನ್ನು ಪ್ರಾರಂಭಿಸಲು ಪ್ರಯತ್ನಿಸಬೇಕು, ಇದರಿಂದ ಅವರು ಉದ್ಯೋಗ ಅರಸಿಕೊಂಡು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
  • ಹರಿಯಾಣ: ಕೋವಿಡ್-19 ಸಾಂಕ್ರಾಮಿಕದ ಮಧ್ಯೆ, ಗರ್ಭಿಣಿಯರಿಗೆ ಸುರಕ್ಷಿತ ಮತ್ತು ತಡೆರಹಿತ ಸಾಂಸ್ಥಿಕ ಹೆರಿಗೆ ಸೌಲಭ್ಯಗಳನ್ನು ಒದಗಿಸಲು ರಾಜ್ಯದಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಹೆರಿಗೆ ಸೌಲಭ್ಯಗಳನ್ನು ಬಲಪಡಿಸಲು ಹರಿಯಾಣ ಸರ್ಕಾರ ವಿಶೇಷ ಒತ್ತು ನೀಡಿದೆ. ಕೋವಿಡ್ ಅಲ್ಲದ ಆಸ್ಪತ್ರೆಗಳಲ್ಲಿ, ಪ್ರತ್ಯೇಕ ಎಲ್.ಡಿ.ಆರ್. ಕೋಣೆಗೆ ಅಂದರೆ (ಹೆರಿಗೆ, ಪ್ರಸವ ಮತ್ತು ಚೇತರಿಕೆ) ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ, ಗರ್ಭಿಣಿಯರನ್ನು ವಿಶೇಷ ಕೋವಿಡ್ ಆಸ್ಪತ್ರೆಗಳಿಗೆ ಕಳುಹಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಯರ ಪ್ರಕರಣಗಳ ಹೆರಿಗೆ ಮತ್ತು ದಾಖಲಾತಿಗಾಗಿ ಪ್ರತ್ಯೇಕ ವಾರ್ಡ್‌ ನ ಸೌಲಭ್ಯವನ್ನು ಕಲ್ಪಿಸಬಹುದು.

ವಾಸ್ತವ ಪರಿಶೀಲನೆ

***



(Release ID: 1636091) Visitor Counter : 294