PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 23 JUN 2020 6:26PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ 19 ಕುರಿತ ಇತ್ತೀಚಿನ ವರದಿ: ಭಾರತ ವಿಶ್ವದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಅತಿ ಕಡಿಮೆ ಸಾವಿನ ರಾಷ್ಟ್ರಗಳಲ್ಲಿ ಒಂದಾಗಿದೆ

2020ರ ಜೂನ್ 22ರ ದಿನಾಂಕದ ವಿಶ್ವ ಆರೋಗ್ಯ ಸಂಸ್ಥೆಯ ವರದಿ 154, ಪ್ರತಿ ಲಕ್ಷ ಜನಸಂಖ್ಯೆಗೆ ಕಡಿಮೆ ಸಾವಿನ ಪ್ರಮಾಣ ಇರುವ ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ ಎಂದು ತಿಳಿಸಿದೆ. ಪ್ರತಿ ಲಕ್ಷ ಜನಸಂಖ್ಯೆಗೆ ಭಾರತದಲ್ಲಿನ ಪ್ರಕರಣಗಳ ಸಾವಿನ ಪ್ರಮಾಣ 1.00 ಆಗಿದ್ದರೆ, ಜಾಗತಿಕ ಸರಾಸರಿ ಆರು ಪಟ್ಟು ಹೆಚ್ಚಾಗಿದ್ದು 6.04 ಆಗಿದೆ. ಯು.ಕೆ.ಪ್ರತಿ ಲಕ್ಷ ಜನಸಂಖ್ಯೆಗೆ ಕೋವಿಡ್ -19 ಸಂಬಂಧಿತ 63.13 ಆಗಿದ್ದರೆ, ಸ್ಪೇನ್, ಇಟಲಿ ಮತ್ತು ಯು.ಎಸ್.ನಲ್ಲಿ  ಲೆಕ್ಕ ಅನುಕ್ರಮವಾಗಿ 60.60, 57.19 ಮತ್ತು 36.30 ಆಗಿದೆ.

https://static.pib.gov.in/WriteReadData/userfiles/image/image001YXC5.jpg  

ಕೋವಿಡ್-19 ರೋಗಿಗಳ ಚೇತರಿಕೆ ದರ ನಿರಂತರವಾಗಿ ಸುಧಾರಿಸುತ್ತಿದೆ. ಈ ದಿನಾಂಕದವರೆಗೆ ಇದು ಶೇ.56.38 ಆಗಿದೆ. ಈವರೆಗೆ 2,48,189 ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ, ಒಟ್ಟು 10,994 ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದಾರೆ.  ಪ್ರಸ್ತುತ 1,78,014 ಸಕ್ರಿಯ ಪ್ರಕರಣಗಳಿದ್ದು, ಎಲ್ಲವೂ ಸಕ್ರಿಯ ವೈದ್ಯಕೀಯ ನಿಗಾದಲ್ಲಿವೆ. ಸರ್ಕಾರದ ಪ್ರಯೋಗಾಲಯಗಳ ಸಂಖ್ಯೆ 726ಕ್ಕೆ ಹೆಚ್ಚಳವಾಗಿದ್ದರೆ, ಖಾಸಗಿ ಪ್ರಯೋಗಾಲಯಗಳ ಸಂಖ್ಯೆ 266ಕ್ಕೆ ಏರಿದೆ. ಒಟ್ಟಾಗಿ 992 ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ.

ವಿವರಗಳಿಗೆ: https://www.pib.gov.in/PressReleseDetail.aspx?PRID=1633516

ಕೋವಿಡ್ -19 ವಿರುದ್ಧ ಹೋರಾಟಕ್ಕಾಗಿ ಪಿಎಂ.ಕೇರ್ಸ್ ನಿಧಿಯಿಂದ 50,000 ಮೇಡ್ ಇನ್ ಇಂಡಿಯಾ ವೆಂಟಿಲೇಟರ್

ಪಿ.ಎಂ. ಕೇರ್ಸ್ ನಿಧಿ ಟ್ರಸ್ಟ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ನಡೆಸುತ್ತಿರುವ ಕೋವಿಡ್-19 ಆಸ್ಪತ್ರೆಗಳಿಗೆ 50 ಸಾವಿರ ಮೇಡ್ ಇನ್ ಇಂಡಿಯಾ ವೆಂಟಿಲೇಟರ್ ಪೂರೈಕೆ ಮಾಡಲು 2000 ಕೋಟಿ ರೂ. ಹಂಚಿಕೆ ಮಾಡಿದೆ. ಅಲ್ಲದೆ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ 1000 ಕೋಟಿ ರೂ.ಗಳನ್ನೂ ಅದು ಹಂಚಿಕೆ ಮಾಡಿದೆ. 50 ಸಾವಿರ ವೆಂಟಿಲೇಟರ್ ಗಳ ಪೈಕ್ 30,000 ವೆಂಟಿಲೇಟರ್ ಗಳನ್ನು ಮೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತಯಾರಿಸಿದೆ. ಈವರೆಗೆ 2923 ವೆಂಟಿಲೇಟರ್ ಗಳನ್ನು ತಯಾರಿಸಲಾಗಿದ್ದು, ಈ ಪೈಕಿ 1340 ವೆಂಟಿಲೇಟರ್ ಗಳನ್ನು ಈಗಾಗಲೇ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಣೆ ಮಾಡಲಾಗಿದೆ. ಈ ಪೈಕಿ ಮಹಾರಾಷ್ಟ್ರ (275), ದೆಹಲಿ (275), ಗುಜರಾತ್ (175), ಬಿಹಾರ (100), ಕರ್ನಾಟಕ (90), ರಾಜಾಸ್ಥಾನ (75) ಪ್ರಮುಖ ಸ್ವೀಕೃತ ರಾಷ್ಟ್ರಗಳಾಗಿವೆ. ಜೂನ್ 2020ರ ಕೊನೆಯ ವೇಳೆಗೆ ಹೆಚ್ಚುವರಿ 14,000 ವೆಂಟಿಲೇಟರ್ ಗಳನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗುತ್ತದೆ.

ವಿವರಗಳಿಗೆ: https://www.pib.gov.in/PressReleseDetail.aspx?PRID=1633516

ಒಡಿಶಾದಲ್ಲಿ ಸಮುದಾಯ ಪಾಲ್ಗೊಳ್ಳುವಿಕೆ ಮತ್ತು ಡಿಜಿಟಲ್ ಉಪಕ್ರಮಗಳೊಂದಿಗೆ ಕೋವಿಡ್ 19 ನಿಯಂತ್ರಣ

ಒಡಿಶಾ ತನ್ನ ಕೋವಿಡ್ ವಿರೋಧಿ ಕ್ರಮಗಳನ್ನು ಐಟಿಯ ಸಕ್ರಿಯ ಬಳಕೆ, ಸ್ಥಳೀಯ ಸರಪಂಚರ ಸಬಲೀಕರಣ, ತನ್ನ ಆರೋಗ್ಯ ಪಡೆಯ ಕೌಶಲ್ಯವರ್ಧನೆ, ಸಮುದಾಯ ಪಾಲ್ಗೊಳ್ಳುವಿಕೆ ಮತ್ತು ದುರ್ಬಲ ಗುಂಪುಗಳ ಸಂರಕ್ಷಣೆಯೊಂದಿಗೆ ಗಮನ ಹರಿಸುತ್ತಿದೆ.  ಇದು ಕಡಿಮೆ ಸಾವಿನ ದರದೊಂದಿಗೆ ರೋಗದ ಹೊರೆ ತಗ್ಗಿಸಿದೆ. ಕೆಲವು ಪ್ರಮುಖ ಉಪಕ್ರಮಗಳಲ್ಲಿ ಕೆಳಗಿನವು ಸೇರಿವೆ: ಸಹ ಅಸ್ವಸ್ಥತೆ ಇರುವ ಮತ್ತು ಹಿರಿಯ ನಾಗರಿಕರಿಗೆ ಸಚೇತಕ್ ಆಪ್ ಮೂಲಕ ಬೆಂಬಲ, ಸಮರ್ಥ ನಿಗಾಕ್ಕಾಗಿ ಸರಪಂಚರ ಸಬಲೀಕರಣ, ಟೆಲಿ ಮೆಡಿಸಿನ್ ಸೇವೆಯ ಆಯೋಜನೆ, ಮತ್ತು ವೈದ್ಯಕೀಯ ಸಿಬ್ಬಂದಿಯ ಸಾಮರ್ಥ್ಯ ಹೆಚ್ಚಳ.

ವಿವರಗಳಿಗೆ: https://pib.gov.in/PressReleasePage.aspx?PRID=1633657

ಪಂಜಾಬ್ ನಲ್ಲಿ ಕೋವಿಡ್ -19 ರೋಗಿಗಳ ಚೇತರಿಕೆಗೆ ಕಟ್ಟು ನಿಟ್ಟಿನ ಕಂಟೈನ್ಮೆಂಟ್ ಮತ್ತು ಸಹ ಅಸ್ವಸ್ಥತೆ ಇರುವ ರೋಗಿಗಳ ನಿರ್ವಹಣೆಯ ನಿಗಾ ಸಹಕಾರಿಯಾಗಿದೆ

ಪಂಜಾಬ್ ವೈರಾಣು ಸೋಂಕು ನಿಯಂತ್ರಣದಲ್ಲಿ ಉತ್ತಮ ಪ್ರಗತಿ ತೋರಿದೆ. ರಾಜ್ಯ ಹೆಚ್ಚು ಚೇತರಿಕೆ ದರ ಮುಂದುವರಿಸಿದೆ. ಪಂಜಾಬ್ ಬಹು ಹಂತದ ಕಾರ್ಯತಂತ್ರದ ಒಂದು ಪ್ರಮುಖ ಅಂಶವೆಂದರೆ ಕಂಟೈನ್ಮೆಂಟ್ ವಲಯಗಳಿಂದ ಹೆಚ್ಚಿನ ಅಪಾಯ / ದುರ್ಬಲ ಜನಸಂಖ್ಯೆಗಾಗಿ ಸರ್ಕಾರದ ಕ್ವಾರಂಟೈನ್ ಬಗ್ಗೆ ಗಮನಹರಿಸುವುದಾಗಿದೆ. ಪಂಜಾಬ್ ಕಠಿಣ ನಿಯಂತ್ರಣ ತಂತ್ರವನ್ನು ಜಾರಿಗೆ ತಂದಿದೆ. ಕಂಟೈನ್ಮೆಂಟ್ ವಲಯಗಳನ್ನು ರಸ್ತೆ ಅಥವಾ ಎರಡು ಪಕ್ಕದ ಬೀದಿಗಳು, ಮೊಹಲ್ಲಾ ಅಥವಾ ವಸತಿ ಸಮುಚ್ಚಯ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. 8 ಜಿಲ್ಲೆಗಳಲ್ಲಿ ಈವರೆಗೆ 19 ಕಂಟೈನ್ಮೆಂಟ್ ವಲಯ ಗುರುತಿಸಲಾಗಿದ್ದು, ಇಲ್ಲಿ 25 ಸಾವಿರ ಜನಸಂಖ್ಯೆ ಇದೆ. ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ಮನೆ ಮನೆ ನಿಗಾ ಎಂಬ ಮೊಬೈಲ್ ಆಧಾರಿತ ಆಪ್ ಅನ್ನು ಪಂಜಾಬ್ ಸರ್ಕಾರ ಆರಂಭಿಸಿದೆ. ಆರಂಭದಲ್ಲೋ ಸೋಂಕು ಪತ್ತೆ ಮತ್ತು ಸೂಕ್ತ ಕಾಲದ ಪರೀಕ್ಷೆಗಾಗಿ ಆಶಾ ಕಾರ್ಯಕರ್ತರು ಮತ್ತು ಸಮುದಾಯ ಕಾರ್ಯಕರ್ತರ ನೆರವಿನಿಂದ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಪಂಜಾಬ್ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಪ್ರಸ್ತುತ ಪಂಜಾಬ್ ನಿತ್ಯ 8000 ಮಾದರಿ ಪರೀಕ್ಷೆ ನಡೆಸುತ್ತಿದೆ.

ವಿವರಗಳಿಗೆ: https://www.pib.gov.in/PressReleseDetail.aspx?PRID=1633415

ಪತಂಜಲಿ ಆಯುರ್ವೇದದ ಕೋವಿಡ್ -19 ಚಿಕಿತ್ಸೆ ಕುರಿತಂತೆ ಆಯುಷ್ ಸಚಿವಾಲಯದ ಹೇಳಿಕೆ

ಪತಂಜಲಿ ಆಯುರ್ವೇದ ನಿಯಮಿತ, ಹರಿದ್ವಾರ ತಾನು ಕೋವಿಡ್ -19 ಚಿಕಿತ್ಸೆಗೆ ಆಯುರ್ವೇದ ಔಷಧ ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿ ಪ್ರಸಾರವಾಗಿರುವುದನ್ನು ಆಯುಷ್ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಪತಂಜಲಿಯ ಕ್ಲೇಮ್ ಮತ್ತು ವೈಜ್ಞಾನಿಕ ಅಧ್ಯಯನದ ವಿವರಗಳು ಸಚಿವಾಲಯಕ್ಕೆ ತಿಳಿದಿಲ್ಲ ಎಂದು ಹೇಳಿದೆ. ಔಷಧಗಳ ಅಂತಹ ಜಾಹೀರಾತುಗಳನ್ನು ಔಷಧ ಮತ್ತು ಜಾದೂ ಪರಿಹಾರ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ 1954 ಮತ್ತು ಅಲ್ಲಿನ ನಿಯಮಗಳ ಅಡಿಯಲ್ಲಿ ನಿಯಂತ್ರಿಸಲಾಗಿದೆ ಎಂಬುದನ್ನು ಕಂಪನಿಗೆ ತಿಳಿಸಲಾಗಿದೆ.  ಆಯುಷ್ ಮಧ್ಯಸ್ಥಿಕೆಗಳು / ಔಷಧಿಗಳೊಂದಿಗೆ ಕೋವಿಡ್-19 ಕುರಿತು ಸಂಶೋಧನಾ ಅಧ್ಯಯನಗಳು ಕೈಗೊಳ್ಳಬೇಕಾದ ವಿಧಾನಗಳು ಮತ್ತು ಅಗತ್ಯತೆಗಳನ್ನು ತಿಳಿಸುವ ಗೆಜೆಟ್ ಅಧಿಸೂಚನೆಯನ್ನು ಸಚಿವಾಲಯ ಹೊರಡಿಸಿದೆ. ಕೋವಿಡ್ ಚಿಕಿತ್ಸೆಗೆ ಔಷಧ ಕಂಡುಹಿಡಿದಿರುವುದಾಗಿ ಹೇಳಿರುವ ಕುರಿತಂತೆ ಆದಷ್ಟು ಬೇಗ ಅದರ ಹೆಸರು, ಅದರಲ್ಲಿರುವ ಔಷಧೀಯ ಅಂಶಗಳು; ಕೋವಿಡ್ -19ಕ್ಕೆ ಸಂಶೋಧನಾ ಅಧ್ಯಯನವನ್ನು ಎಲ್ಲಿ ನಡೆಸಲಾಯಿತು ಸ್ಥಳ(ಗಳು)/ಆಸ್ಪತ್ರೆ(ಗಳು); ಮಾದರಿಯ ಗಾತ್ರ, ಸಾಂಸ್ಥಿಕ ಶಿಷ್ಟಾಚಾರ ಸಮಿತಿ ಅನುಮೋದನೆ, ಸಿಟಿಆರ್.ಐ. ನೋಂದಣಿ ಮತ್ತು ಅಧ್ಯಯನದ ಫಲಶ್ರುತಿಯ ದತ್ತಾಂಶ   ಇತ್ಯಾದಿಯ ವಿವರ ಒದಗಿಸುವಂತೆ ಮತ್ತು ಶೋಧನೆಯ ಬಗ್ಗೆ ಸೂಕ್ತ ಪರಿಶೀಲನೆ ಆಗುವವರೆಗೆ ಅಂಥ ಕ್ಲೇಮ್ ಗಳ ಜಾಹೀರಾತು/ಪ್ರಚಾರ ನಿಲ್ಲಿಸುವಂತೆ ಪತಂಜಲಿ ಆಯುರ್ವೇದ ನಿಯಮಿತಕ್ಕೆ ಸೂಚಿಸಲಾಗಿದೆ.

ವಿವರಗಳಿಗೆ: https://www.pib.gov.in/PressReleseDetail.aspx?PRID=1633690

ಆರ್ಥಿಕ ಚಟುವಟಿಕೆಯಲ್ಲನ ಹೆಚ್ಚಳ - ಆರ್ಥಿಕ ಸೂಚ್ಯಂಕಗಳ ಸುಧಾರಣೆ

ಜೀವ ಇದ್ದರೇನೇ ಜೀವನ ಎಂಬ ತುರ್ತು ಅಗತ್ಯದಿಂದ ಪ್ರೇರಿತವಾಗಿ ಭಾರತ ಕೋವಿಡ್ -19ರ ಪ್ರಸರಣವನ್ನು ಆರಂಭಿಕ ಹಂತದಲ್ಲೇ ತಡೆಯಲು 21 ದಿನಗಳ ಕಟ್ಟುನಿಟ್ಟಿನ ರಾಷ್ಟ್ರವ್ಯಾಪಿ ಲಾಕ್ ಡೌನ್ ಅನ್ನು 2020ರ ಮಾರ್ಚ್ 24ರಿಂದ ಘೋಷಿಸಿತ್ತು. ಕಠಿಣ ಲಾಕ್ ಡೌನ್ ಮತ್ತು ವ್ಯಕ್ತಿಗತ ಅಂತರ ಕ್ರಮಗಳು ಆರ್ಥಿಕತೆಯ ಮೇಲೆ ಪ್ರತೀಕೂಲ ಪರಿಣಾಮ ಬೀರಿದವು. ನಂತರ ಜೀವವೂ ಇರಬೇಕು, ಜೀವನವೂ ಇರಬೇಕು ಎಂಬ ತತ್ವದಡಿ ಜೀವ ಉಳಿಸುತ್ತಲೇ ಜೀವನೋಪಾಯಕ್ಕೆ ಬದಲಾಗಲು ಹಂತ ಹಂತದ ಕಾರ್ಯತಂತ್ರ ರೂಪಿಸಲಾಯಿತು, ಹಂತ ಹಂತದ ವಾಣಿಜ್ಯ ಮತ್ತು ಸೇವೆಗಳ ಪುನಾರಂಭದೊಂದಿಗೆ ಜೂನ್ 1ರಿಂದ ಭಾರತ ಅನ್ ಲಾಕ್ ಇಂಡಿಯಾ ಹಂತಕ್ಕೆ ಕಾಲಿಟ್ಟಿತು. ಸರ್ಕಾರ ಮತ್ತು ಆರ್.ಬಿ.ಐ. ಮಾಪನಾಂಕದ ರೀತ್ಯಲ್ಲಿ ಅಲ್ಪಕಾಲೀನ ಮತ್ತು ದೀರ್ಘ ಕಾಲೀನ ಎರಡರ ಪ್ರಾಮಾಣಿಕ ನೀತಿ ಕ್ರಮಗಳನ್ನು ತೆಗೆದುಕೊಂಡಿದ್ದು, ಅಲ್ಪ ಹಾನಿಯೊಂದಿಗೆ ಆರ್ಥಿಕತೆ ಶೀಘ್ರ ಪುನಶ್ಚೇತನಗೊಳ್ಳುತ್ತಿದೆ.  ಆರ್ಥಿಕ ಪುನರುಜ್ಜೀವನದ ಆರಂಭಿಕ ಫಲಶ್ರುತಿ ಮೇ ಮತ್ತು ಜೂನ್ ತಿಂಗಳಲ್ಲಿ ವಾಸ್ತವ ಚಟುವಟಿಕೆಯ ಸೂಚ್ಯಂಕಗಳಾದ ವಿದ್ಯುತ್ ಮತ್ತು ಇಂಧನ ಬಳಕೆ, ರಾಜ್ಯದೊಳಗೆ ಮತ್ತು  ಅಂತರ ರಾಜ್ಯಗಳ ಸರಕು ಸಾಗಾಟ, ಚಿಲ್ಲರೆ ಹಣಕಾಸು ವಹಿವಾಟುಗಳ ಚೇತರಿಕೆಗೆ ಸಾಕ್ಷಿಯಾಗಿದೆ. ಸಾಮಾನ್ಯ ಮುಂಗಾರಿನ ಮುನ್ಸೂಚನೆಯೊಂದಿಗೆ ಕೃಷಿ ವಲಯ ಭಾರತೀಯ ಆರ್ಥಿಕತೆಯ ಬುನಾದಿಯಾಗಿದೆ ಮತ್ತು ಇದು ಭಾರತೀಯ ಆರ್ಥಿಕತೆಗೆ ಚೈತನ್ಯ ನೀಡಲಿದೆ.  ಭಾರತೀಯ ಉತ್ಪಾದನೆಯ ಸಂಕಲ್ಪ ಎರಡು ತಿಂಗಳುಗಳ ಒಳಗೇ ಸಾಬೀತಾಗಿದೆ, ಭಾರತ ವೈಯಕ್ತಿಕ ಸುರಕ್ಷತಾ ಸಾಧನಗಳ ತಯಾರಿಕೆಯಲ್ಲಿ ಶೂನ್ಯ ಸ್ಥಿತಿಯಿಂದ ವಿಶ್ವದ ಎರಡನೇ ಅತಿ ದೊಡ್ಡ  ರಾಷ್ಟ್ರವಾಗಿ ಹೊರಹೊಮ್ಮಿದೆ.

ವಿವರಗಳಿಗೆ: https://www.pib.gov.in/PressReleseDetail.aspx?PRID=1633531

ಎಂ.ಎಸ್.ಎಂ. ಮತ್ತು ಎನ್.ಬಿ.ಎಫ್.ಸಿ.ಗಳಿಗಾಗಿ ಸರ್ಕಾರದ ಯೋಜನೆಗಳು ನಿರ್ಣಾಯಕ ಪರಿಣಾಮ ಬೀರಿದೆ

ಎಂ.ಎಸ್.ಎಂ.ಇ.ಗಳಿಗಾಗಿ ಸರ್ಕಾರದ ಮಧ್ಯಪ್ರವೇಶ ತ್ವರಿತ ಚಟುವಟಿಕೆಗೆ ಕಾರಣವಾಗಿದೆ. ಸರ್ಕಾರದ ಖಾತ್ರಿಯೊಂದಿಗೆ ಬ್ಯಾಂಕ್ ಗಳಿಂದ ತುರ್ತು ಸಾಲ ನೀಡಲಾಗುತ್ತಿದ್ದು, 2020 ಜೂನ್ 20ರ ವರೆಗೆ ಸಾರ್ವಜನಿಕ ಮತ್ತು ಖಾಸಗಿ ವಲಯಕ್ಕೆ 79,000 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ ಹಾಗೂ 35,000 ಕೋಟಿ ರೂ. ವಿತರಿಸಲಾಗಿದೆ. ಮಾರ್ಚ್-ಏಪ್ರಿಲ್, 2020 ರಲ್ಲಿ ಆರ್‌.ಬಿಐ ಘೋಷಿಸಿದ ವಿಶೇಷ ಹಣಕಾಸು ಸೌಲಭ್ಯದ ಅಡಿಯಲ್ಲಿ, ಸಿಡ್ಬಿ, ಎಂಎಸ್‌.ಎಂಇ ಮತ್ತು ಸಣ್ಣ ಸಾಲಪಡೆಯುವವರಿಗೆ 10,220 ಕೋಟಿ ರೂ. ಸಾಲ ನೀಡಲು ಎನ್‌.ಬಿಎಫ್‌.ಸಿ, ಸೂಕ್ಷ್ಮ ಹಣಕಾಸು ಸಂಸ್ಥೆ ಮತ್ತು ಬ್ಯಾಂಕುಗಳಿಗೆ ಮಂಜೂರು ಮಾಡಿದೆ. ರಾಷ್ಟ್ರೀಯ ವಸತಿ ಬ್ಯಾಂಕ್ (ಎನ್.ಎಚ್.ಬಿ.) ತನ್ನ ಸಂಪೂರ್ಣ ಸೌಲಭ್ಯವಾದ 10,000 ಕೋಟಿ ರೂ.ಗಳನ್ನು ವಸತಿ ಹಣಕಾಸು ಕಂಪನಿಗಳಿಗೆ ಮಂಜೂರು ಮಾಡಿದೆ.  ಈ ಮರು ಹಣಕಾಸು ನೆರವನ್ನು ಸಿಡ್ಬಿ ಮತ್ತು ಎನ್.ಎಚ್.ಬಿ. ಹಾಲಿ ಯೋಜನೆಗಳಿಗೆ ಹೆಚ್ಚುವರಿಯಾಗಿ ನೀಡುತ್ತಿದ್ದು, 30,000 ಕೋಟಿ ರೂ. ಮಂಜೂರು ಮಾಡಲಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1633595

ಆತ್ಮ ನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಉತ್ತೇಜನಕ್ಕಾಗಿ ಜಿಇಎಂನಲ್ಲಿ ಮಾರಾಟಗಾರರಿಂದ ದೇಶದ ಮೂಲದ ಮಾಹಿತಿ ನೀಡಿಕೆ ಕಡ್ಡಾಯ ಮಾಡಲಾಗಿದೆ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿಯ ವಿಶೇಷ ಉದ್ದೇಶದ ವಾಹಕ ಸರ್ಕಾರದ ಮಾರುಕಟ್ಟೆ ತಾಣ (ಜಿಇಎಂ)ದಲ್ಲಿ, ಮಾರಾಟಗಾರರಿಗೆ ತಮ್ಮ ಎಲ್ಲ ಹೊಸ ಉತ್ಪನ್ನಗಳನ್ನು ಜಿಇಎಂನಲ್ಲಿ ನೋಂದಾಯಿಸುವ ಸಂದರ್ಭದಲ್ಲಿ ತಯಾರಿಕೆಯಾದ ದೇಶದ ಹೆಸರು ದಾಖಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಜೊತೆಗೆ, ಜಿಇಎಂನಲ್ಲಿ ಹೊಸ ನೀತಿ ಪರಿಚಯ ಮಾಡುವ ಮುನ್ನ ಈಗಾಗಲೇ ತಮ್ಮ ಉತ್ಪನ್ನಗಳನ್ನು ಅಪ್ ಲೋಡ್ ಮಾಡಿರುವ ಮಾರಾಟಗಾರರಿಗೂ ದೇಶದ ಮೂಲವನ್ನು ದಾಖಲಿಸಲು ಸೂಚಿಸಲಾಗಿದೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ ಭಾರತದ ಉತ್ತೇಜನಕ್ಕಾಗಿ ಜಿಇಎಂ ಮಹತ್ವದ  ನಿರ್ಧಾರ ಕೈಗೊಂಡಿದೆ. ಉತ್ಪನ್ನಗಳಲ್ಲಿನ ಸ್ಥಳೀಯ ವಿಷಯದ ಶೇಕಡಾವಾರು ಪ್ರಮಾಣವನ್ನು ಸೂಚಿಸುವ ಅವಕಾಶವನ್ನು ಜಿಇಎಂ ಸಕ್ರಿಯಗೊಳಿಸಿದೆ. ಈ ಹೊಸ ವೈಶಿಷ್ಟ್ಯದೊಂದಿಗೆ, ಮಾರುಕಟ್ಟೆ ತಾಣದಲ್ಲಿ ಈಗ,  ದೇಶದ ಮೂಲ ಮತ್ತು ಸ್ಥಳೀಯ ವಿಷಯದ ಶೇಕಡಾವಾರು ಎಲ್ಲಾ ವಸ್ತುಗಳಲ್ಲಿ ಗೋಚರಿಸುತ್ತದೆ. ಅದಕ್ಕಿಂತ ಮುಖ್ಯವಾಗಿ, ‘ಮೇಕ್ ಇನ್ ಇಂಡಿಯಾ’ ಫಿಲ್ಟರ್ ಅನ್ನು ಈಗ ಪೋರ್ಟಲ್‌ ನಲ್ಲಿ ಸಕ್ರಿಯಗೊಳಿಸಲಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1633511

ಹಜ್ 2020ಗಾಗಿ ಭಾರತೀಯ ಮುಸ್ಲಿಮರು ಬಾರಿ ಸೌದಿ ಅರೇಬಿಯಾಗೆ ಹೋಗುತ್ತಿಲ್ಲ

ಕೊರೊನಾ ಸಂಕ್ರಾಮಿಕ ಒಡ್ಡಿರುವ ಗಂಭೀರ ಸವಾಲಿನ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರ್ಕಾರದ ನಿರ್ಧಾರಕ್ಕೆ ಗೌರವ ಸೂಚಿಸಿ ಮತ್ತು ಜನರ ಆರೋಗ್ಯ ಮತ್ತು ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಬಾರಿ ಭಾರತೀಯ ಮುಸ್ಲಿಮರು ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. ಮಾಧ್ಯಮಗಳನ್ನಿಂದು ಉದ್ದೇಶಿಸಿ ಮಾತನಾಡಿದ ಅವರು, ಸೌದಿ ಅರೇಬಿಯಾ ಸಂಸ್ಥಾನದ ಹಜ್ ಮತ್ತು ಉಮ್ರಾಹ್ ಸಚಿವ ಡಾ. ಮೊಹಮದ್ ಸಲೇಹ್ ಬಿನ್ ತಾಹೆರ್ ಬೆನೆನ್ ಅವರಿಂದ ತಾವು ನಿನ್ನೆ ದೂರವಾಣಿ ಕರೆ ಸ್ವೀಕರಿಸಿದ್ದು, ಸೌದಿ ಅರೇಬಿಯಾ ಸಚಿವರು, ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವರ್ಷ ಹಜ್ ಗೆ ಭಾರತೀಯ ಯಾತ್ರಿಕರನ್ನು ಕಳುಹಿಸದಂತೆ ಸಲಹೆ ಮಾಡಿದ್ದಾರೆ ಎಂದರು.

ವಿವರಗಳಿಗೆ: https://www.pib.gov.in/PressReleseDetail.aspx?PRID=1633561

ಭಾರತೀಯ ರೈಲ್ವೆಯ ಕೋವಿಡ್ ಚಿಕಿತ್ಸಾ ಬೋಗಿಗಳ ಬಳಕೆ ಆರಂಭವಾಗಿದೆ; ರೈಲ್ವೆ 960 ಕೋವಿಡ್ ಚಿಕಿತ್ಸಾ ಬೋಗಿಗಳನ್ನು 5 ರಾಜ್ಯಗಳಲ್ಲಿ ನಿಯೋಜಿಸಿದೆ

ಕೋವಿಡ್ 19 ವಿರುದ್ಧ ಸುಸ್ಥಿರ ಹೋರಾಟಕ್ಕಾಗಿ ಭಾರತೀಯ ರೈಲ್ವೆ ಕೋವಿಡ್ ಆರೈಕೆ ಭೋಗಿಗಳಲ್ಲಿ ದಾಖಲಿಸಿಕೊಳ್ಳಲು ಸೂಚಿಸಲಾಗುವ  ಕೋವಿಡ್ ರೋಗಿಗಳಿಗಾಗಿ ವಿವಿಧ ರಾಜ್ಯಗಳಲ್ಲಿ ಬೋಗಿಗಳನ್ನು ಒದಗಿಸಲು ಆರಂಭಿಸಿದೆ. ರಾಜ್ಯ ಸರ್ಕಾರಗಳ ಆರೋಗ್ಯ ಆರೈಕೆ ಪ್ರಯತ್ನಗಳಿಗೆ ಪೂರಕವಾಗಿ ರೈಲ್ವೆ ಸರ್ವ ಪ್ರಯತ್ನ ಮಾಡುತ್ತಿದೆ. ರೈಲ್ವೆ ತನ್ನ 5231 ಕೋವಿಡ್ ಆರೈಕೆ ಬೋಗಿಗಳನ್ನು ರಾಜ್ಯಗಳಿಗೆ ಒದಗಿಸಲೂ ಸಜ್ಜಾಗಿದೆ. ವಲಯ ರೈಲ್ವೆಗಳು ಬೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಿವೆ, ಇದನ್ನು ಅತ್ಯಂತ ಅಲ್ಪ ತೀವ್ರತೆಯ / ಮೃಧು ಪ್ರಕರಣಗಳಿಗೆ ಬಳಸಲಾಗುತ್ತದೆ. ಈವರೆಗೆ, ದೆಹಲಿ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶ ಸೇರಿ 5 ರಾಜ್ಯಗಳಲ್ಲಿ ರೈಲ್ವೆ ಒಟ್ಟು 960 ಕೋವಿಡ್ ಆರೈಕೆ ಬೋಗಿಗಳನ್ನು ನಿಯೋಜಿಸಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1633386

ರಾಷ್ಟ್ರೀಯ ವೈದ್ಯಕೀಯ ಬೋಧನಾ ಸಂಸ್ಥೆಯ ಮುಖ್ಯಸ್ಥರು ಮತ್ತು ಪ್ರತಿನಿಧಿಗನ್ನುದ್ದೇಶಿಸಿ ಭಾಷಣ ಮಾಡಿದ ಡಾ. ಜಿತೇಂದ್ರ ಸಿಂಗ್

ಕೋವಿಡ್ ನಂತರದ ಯುಗದಲ್ಲಿ ಸಾಂಕ್ರಾಮಿಕ ರೋಗಗಳ ಅಧ್ಯಯನ ಮತ್ತು ನಿರ್ವಹಣೆಯ ಬಗ್ಗೆ ಹೊಸ ಗಮನ ಹರಿಸಲಾಗುವುದು ಮತ್ತು ವೈದ್ಯಕೀಯ ಪಠ್ಯಕ್ರಮವೂ ಅದಕ್ಕೆ ಅನುಗುಣವಾಗಿ ಹೊಂದಿಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್), ನವದೆಹಲಿ, ಪಿಜಿಐ ಚಂಡೀಗಢ, ಈಶಾನ್ಯದ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆ (ಎನ್.ಇ.ಐ.ಜಿ.ಆರ್.ಐ.ಎಚ್.ಎಂ.ಎಸ್.) ಶಿಲ್ಲಾಂಗ್ ಮತ್ತು ಶೇರ್ ಕಾಶ್ಮೀರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶ್ರೀನಗರ,  ಸೇರಿದಂತೆ ರಾಷ್ಟ್ರೀಯ ವೈದ್ಯಕೀಯ ಬೋಧನಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳನ್ನುದ್ದೇಶಿಸಿ ನಿನ್ನೆ ವರ್ಚುವಲ್ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಭಾರತೀಯ ವೈದ್ಯಕೀಯ ಸಮುದಾಯಕ್ಕೆ ಪಾಶ್ಚಿಮಾತ್ಯ ಸಹವರ್ತಿಗಳಿಗಿಂತ ಹೆಚ್ಚಿನ ಪ್ರಯೋಜನವಿದೆ, ಏಕೆಂದರೆ ಇಲ್ಲಿ ಔಷಧದ ಅಭ್ಯಾಸವು ನೈರ್ಮಲ್ಯ ಮತ್ತು ಅಡ್ಡ ಸೋಂಕುಗಳ ತಡೆಗಟ್ಟುವಿಕೆಯ ಆಧಾರದ ಮೇಲೆ ಔಧಿಗಳಿಗೆ ಅಂತರ್ಗತವಾಗಿ ರೂಪುಗೊಂಡಿದೆ ಎಂದು  ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ವಿವರಗಳಿಗೆ: https://pib.gov.in/PressReleasePage.aspx?PRID=1633423

ಲಾಕ್ ಡೌನ್ ವೇಳೆ 4957 ಕೋಟಿ ರೂ. ನಗದು ನೆರವು ಪಡೆದ 2 ಕೋಟಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ 2020ರ ಮಾರ್ಚ್ 24ರಂದು ನೀಡಿದ ಸೂಚನೆಗೆ ಪ್ರತಿಕ್ರಿಯೆಯಾಗಿ ರಾಜ್ಯ ಸರ್ಕಾರಗಳು, ಲಾಕ್ ಡೌನ್ ಅವಧಿಯಲ್ಲಿ 4957 ಕೋಟಿ ನಗದು ನೆರವನ್ನು ಈವರೆಗೆ ದೇಶಾದ್ಯಂತ ಸುಮಾರು 2 ಕೋಟಿ ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ವಿತರಿಸಿದ್ದಾರೆ. ಸುಮಾರು 1.75 ಕೋಟಿ ವಹಿವಾಟುಗಳನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರ ಸವಲತ್ತು ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾಯಿಸಲಾಗಿದೆ. ಲಾಕ್ ಡೌನ್ ವೇಳೆ ರೂ.1000ದಿಂದ ರೂ.6000ದವರೆಗಿನ ನಗದು ಪ್ರಯೋಜನದ ಜೊತೆಗೆ ಕೆಲವು ರಾಜ್ಯಗಳು ತಮ್ಮ ಕಾರ್ಮಿಕರಿಗೆ ಆಹಾರ ಧಾನ್ಯ ಮತ್ತು ಊಟವನ್ನೂ ಪೂರೈಸಿವೆ. ಕೋವಿಡ್ -19 ಲಾಕ್ ಡೌನ್ ಸವಾಲಿನ ಸಮಯದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಕಾಲದಲ್ಲಿ ನಗದು ವರ್ಗಾವಣೆಗೆ ಇದ್ದ ಯಾವುದೇ ಅವಕಾಶ ಕೈಚೆಲ್ಲಲಿಲ್ಲ.

ವಿವರಗಳಿಗೆ: https://pib.gov.in/PressReleasePage.aspx?PRID=1633546

ಮೊಹಾಲಿಯ ಎನ್..ಪಿ..ಆರ್.ನಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗಿಡಮೂಲಿಕೆ ಚಹಾ

ಔಷಧ ಶಿಕ್ಷಣ ಮತ್ತು ಸಂಶೋಧನೆ ಕುರಿತ ರಾಷ್ಟ್ರೀಯ ಸಂಸ್ಥೆ (ಎನ್.ಐ.ಪಿ.ಇ.ಆರ್.) ಸುರಕ್ಷತಾ ಸಾಧನ, ಸ್ಯಾನಿಟೈಸರ್ ಮತ್ತು ಮಾಸ್ಕ್ ನಂತ ಹಲವು ನಾವಿನ್ಯಪೂರ್ಣ ಉತ್ಪನ್ನಗಳನ್ನು ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕಾಗಿ ಪರಿಚಯಿಸಿದೆ. ಅದೇ ವೇಳೆ ಅದು, ಸೋಂಕಿನ ವಿರುದ್ಧ ದೈಹಿಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗಿಡಮೂಲಿಕೆ ಚಹಾವನ್ನೂ ಅಭಿವೃದ್ಧಿಪಡಿಸಿದೆ.

ವಿವರಗಳಿಗೆ: https://www.pib.gov.in/PressReleseDetail.aspx?PRID=1633597

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಚಂಡೀಗಢ: ಇತ್ತೀಚಿನ ದಿನಗಳಲ್ಲಿ, ಹೊರಗಿನಿಂದ ಬರುವ ವ್ಯಕ್ತಿಗಳಲ್ಲಿ ಗರಿಷ್ಠ ಸಂಖ್ಯೆಯ ಕೋವಿಡ್ ಸೋಂಕಿನ ಪ್ರಕರಣಗಳು ಕಂಡುಬಂದಿವೆ ಎಂದು ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಆಡಳಿತಾಧಿಕಾರಿ ತಿಳಿಸಿದ್ದಾರೆ. ಹೊರಗಿನಿಂದ ಬರುವ ವ್ಯಕ್ತಿಗಳ ವಾಸ್ತವ್ಯ ಮತ್ತು ಸಂಚಾರದ ಮೇಲ್ವಿಚಾರಣೆ ಮಾಡಲು ಆರೋಗ್ಯ ಮತ್ತು ಪೊಲೀಸ್ ಪ್ರಾಧಿಕಾರಗಳೊಂದಿಗೆ ಸಹಕರಿಸುವಂತೆ ಸ್ಥಳೀಯ ನಿವಾಸಿಗಳ ಕಲ್ಯಾಣ ಸಂಘಗಳು, ಸ್ವಯಂಪ್ರೇರಿತ ಏಜೆನ್ಸಿಗಳು, ಸಾಮಾಜಿಕ ಕಾರ್ಯಕರ್ತರು ಇತ್ಯಾದಿಗಳಿಗೆ ಅವರು ಮನವಿ ಮಾಡಿದ್ದಾರೆ. ಯಾವುದೇ ರೋಗಲಕ್ಷಣಗಳಿದ್ದಲ್ಲಿ ತಕ್ಷಣವೇ ವಿಷಯವನ್ನು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಅಂತಹ ಪ್ರಮುಖ ಮಾಹಿತಿಯನ್ನು ಮುಚ್ಚಿಡುವುದು ಸೋಂಕಿನ ಮತ್ತಷ್ಟು ಹರಡುವಿಕೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
  • ಪಂಜಾಬ್: ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆ ಉದ್ಯಮಿಗಳಿಗೆ ಹೆಚ್ಚಿನ ಪರಿಹಾರ ನೀಡಲು, ಪಂಜಾಬ್ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಪಂಜಾಬ್ ಹಣಕಾಸು ನಿಗಮದಲ್ಲಿನ ತಮ್ಮ ಬಾಕಿ ಮೊತ್ತದ ಪಾವತಿಗೆ ಒಂದು ಬಾರಿಯ ಇತ್ಯರ್ಥವನ್ನು 2020 ಡಿಸೆಂಬರ್ 31 ರವರೆಗೆ ವಿಸ್ತರಿಸಲು ಪಂಜಾಬ್ ಸಂಪುಟ ನಿರ್ಧರಿಸಿದೆ. ಕಷ್ಟದ ಸಮಯದಲ್ಲಿ ಕೈಗಾರಿಕೆಗಳಿಗೆ ಬೆಂಬಲ ಬೇಕಾಗಿರುವುದರಿಂದ ಕ್ರಮ ಅಗತ್ಯ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನಿರ್ಬಂಧಿತ ಕೈಗಾರಿಕಾ ಹೂಡಿಕೆ ಮತ್ತು ಸ್ವತ್ತುಗಳನ್ನು ಬಿಡುಗಡೆ ಮಾಡಲು ಕ್ರಮವು ಸಹಾಯ ಮಾಡುತ್ತದೆ ಮತ್ತು ಮಾರ್ಚ್ ನಲ್ಲಿ ಲಾಕ್ ಡೌನ್ ನಂತರ ಸ್ಥಗಿತಗೊಂಡಿರುವ ಅಸ್ತಿತ್ವದಲ್ಲಿರುವ ಕೈಗಾರಿಕೆಗಳ ಪುನರುಜ್ಜೀವನಕ್ಕಾಗಿ ಉತ್ಪಾದಕ ಬಳಕೆಗೆ ರಾಜ್ಯವನ್ನು ಶಕ್ತಗೊಳಿಸುತ್ತದೆ.
  • ಹರಿಯಾಣ: ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಕರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ವಿವಿಧ ಇಲಾಖೆಗಳು ಸ್ಥಾಪಿಸಿದ ರಾಜ್ಯಮಟ್ಟದ ನಿಯಂತ್ರಣ ಕೊಠಡಿಗೆ 4,78,369 ಕರೆಗಳು ಬಂದವು, ಅದರಲ್ಲಿ 4,54,000 ಕರೆಗಳಿಗೆ ಮಾರ್ಚ್ 24 ರಿಂದ 2020 ಜೂನ್ 21 ರವರೆಗೆ ಉತ್ತರಿಸಲಾಗಿದೆ. 95 ಪ್ರತಿಶತ ಕರೆಗಳಿಗೆ ಸರಾಸರಿ 10 ಸೆಕೆಂಡುಗಳಿಗಿಂತ ಕಡಿಮೆ ಕಾಯುವ ಸಮಯದೊಂದಿಗೆ ಯಶಸ್ವಿಯಾಗಿ ಉತ್ತರಿಸಲಾಗಿದೆ. ಅಂತೆಯೇ, 31,592 ವ್ಯಕ್ತಿಗಳಿಗೆ ಟೆಲಿ-ಕೌನ್ಸೆಲಿಂಗ್ ಸಹ ನೀಡಲಾಗಿದೆ. ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ, ಆರೋಗ್ಯ ಕಾರ್ಯದರ್ಶಿ ಕೋವಿಡ್ 19 ಸಮಯದಲ್ಲಿ ರಾಜ್ಯ ಮಟ್ಟದ ನಿಯಂತ್ರಣ ಕೊಠಡಿ ಸ್ಥಾಪಿಸಿ, ಜನರಿಗೆ ನೆರವು ಮತ್ತು ಬೆಂಬಲ ನೀಡಲು ಉತ್ತಮ ವ್ಯವಸ್ಥೆ ಮಾಡಿದ ಹರಿಯಾಣವನ್ನು ಪ್ರಶಂಸಿಸಿದರು.
  • ಹಿಮಾಚಲ ಪ್ರದೇಶ: ಮುಖ್ಯಮಂತ್ರಿ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಮುಖ್ಯ ವೈದ್ಯಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್  ಅಧ್ಯಕ್ಷತೆ ವಹಿಸಿದ್ದ ವೇಳೆ, ಹೋಂ ಕ್ವಾರಂಟೈನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕು ಮತ್ತು ಜನರ ಮೇಲೆ ನಿರಂತರ ಜಾಗರೂಕತೆಯನ್ನು ಕಾಪಾಡಿಕೊಳ್ಳಬೇಕು, ಜನರ ಬಗ್ಗೆ ಹೆಚ್ಚಿನ ನಿಗಾ ಇಡಬೇಕು ಮತ್ತು ಯಾವುದೇ ವ್ಯಕ್ತಿ ಹೋಂ ಕ್ವಾರಂಟೈನ್ ನಿಂದ ತಪ್ಪಿಸಿಕೊಳ್ಳಬಾರದು ಎಂದು ಹೇಳಿದರು. ಹೋಂ ಯಾವುದೇ ಸಂದರ್ಭದಲ್ಲಿ ಐಎಲ್. ರೋಗಲಕ್ಷಣಗಳನ್ನು ಹೊಂದಿರುವ ಜನರ ಸಂಖ್ಯೆ ಹೆಚ್ಚಾದರೆ ಹಾಸಿಗೆಗಳ ಕೊರತೆಯಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಂಸ್ಥಿಕ ಕ್ವಾರಂಟೈನ್ ಹೆಚ್ಚಿನ ಸೌಲಭ್ಯಗಳನ್ನು ರಚಿಸಬೇಕು ಎಂದು ಅವರು ಹೇಳಿದರು. ಕೆಂಪು ವಲಯದ ನಗರಗಳಿಂದ ಬರುವ ಎಲ್ಲ ಜನರನ್ನು ಸಾಂಸ್ಥಿಕ ಸಂಪರ್ಕತಡೆಗೆ ಒಳಪಡಿಸಬೇಕು ಮತ್ತು 4-5 ದಿನಗಳ ನಂತರ ಅವರನ್ನು ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಗುವುದು ಮತ್ತು ಸೋಂಕಿಲ್ಲದ ವ್ಯಕ್ತಿಗಳಿಗೆ ಮಾತ್ರ ಹೊಂ ಕ್ವಾರಂಟೈನ್ ಗಾಗಿ ಮನೆಗೆ ಹೋಗಲು ಅನುಮತಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು
  • ಮಹಾರಾಷ್ಟ್ರ: ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಸ್ತುತ ಕೋವಿಡ್ -19 ರೋಗಿಗಳ ಸಂಖ್ಯೆ 1,35,796 ಆಗಿದ್ದು, ಕಳೆದ 24 ಗಂಟೆಗಳಲ್ಲಿ 3,721 ಹೊಸ ರೋಗಿಗಳ ಸೇರ್ಪಡೆಯಾಗಿದೆ. ಚೇತರಿಸಿಕೊಂಡ ರೋಗಿಗಳ ಸಂಖ್ಯೆ 67,706 ಮತ್ತು ಒಟ್ಟು ಸಕ್ರಿಯ ಪ್ರಕರಣಗಳು 61,793. ಏತನ್ಮಧ್ಯೆ, ಭಾರತೀಯ ನೌಕಾಪಡೆಯ ಪ್ರಮುಖ ತರಬೇತಿ ಸಂಸ್ಥೆಗಳಲ್ಲಿ ಒಂದಾದ ಐಎನ್.ಎಸ್ ಶಿವಾಜಿ ಲೋನಾವಾಲಾದ ಎಂಟು ಪ್ರಶಿಕ್ಷಣಾರ್ಥಿ ಕೆಡೆಟ್ಗಳಲ್ಲಿ ಮಾರಕ ಕರೋನ ವೈರಾಣು  ಸೋಂಕು ಪತ್ತೆಯಾಗಿದೆ. ಸೋಂಕಿತ ಕೆಡೆಟ್ಗಳು 150 ಪ್ರಶಿಕ್ಷಣಾರ್ಥಿಗಳ ತಂಡದ ಭಾಗವಾಗಿದ್ದಾರೆ. ಎಲ್ಲಾ ಸಕಾರಾತ್ಮಕ ಕೆಡೆಟ್ಗಳನ್ನು ಪುಣೆಯ ವನೊವಾರಿಯಲ್ಲಿರುವ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
  • ಗುಜರಾತ್: ಇಲ್ಲಿಯವರೆಗೆ ಪತ್ತೆಯಾದ ಒಟ್ಟು ಕೋವಿಡ್ -19 ಪ್ರಕರಣಗಳು 27,880 ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 563 ಹೊಸ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಅವಧಿಯಲ್ಲಿ 21 ರೋಗಿಗಳು ಪ್ರಾಣ ಕಳೆದುಕೊಂಡಿದ್ದು, ರಾಜ್ಯದಲ್ಲಿ ಒಟ್ಟು ಕೋವಿಡ್ -19 ಸಾವನ್ನಪ್ಪಿದವರ ಸಂಖ್ಯೆ 1,685 ರಷ್ಟಿದೆ.
  • ರಾಜಸ್ಥಾನ: ರಾಜಸ್ಥಾನದಲ್ಲಿ, ಸುಮಾರು 15 ದಿನಗಳ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 3,000 ದಾಟಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಇಂದು 199 ಪ್ರಕರಣಗಳು ವರದಿಯಾಗಿವೆ. ಸೋಂಕಿತರ ಒಟ್ಟು ಸಂಖ್ಯೆ 15,431 ಕ್ಕೆ ಏರಿದೆ.
  • ಮಧ್ಯಪ್ರದೇಶ: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 175 ಹೊಸ ಕರೋನಾ ರೋಗಿಗಳು ವರದಿಯಾಗಿವೆ ಆದರೆ ಅದೇ ಸಮಯದಲ್ಲಿ 200 ರೋಗಿಗಳು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಪ್ರಸ್ತುತ, ರಾಜ್ಯದ ಒಟ್ಟು 12,078 ಪ್ರಕರಣಗಳಲ್ಲಿ, ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 2,342 ಮಾತ್ರ.
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ 126 ಸಕ್ರಿಯ ಸೋಂಕಿನ ಪ್ರಕರಣಗಳಲ್ಲಿ 74 ಪ್ರಕರಣಗಳು ಚಾಂಗ್ಲಾಂಗ್ನಿಂದ ಪತ್ತೆಯಾಗಿದೆ, 20 ರಾಜಧಾನಿ ಸಂಕೀರ್ಣ ಇಟಾನಗರದಿಂದ ಮತ್ತು 12 ಪಶ್ಚಿಮ ಕಾಮೆಂಗ್ ಜಿಲ್ಲೆಯಿಂದ ಪತ್ತೆಯಾಗಿದೆ. ಎಸ್..ಪಿ.ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ ಮತ್ತು ರಾಜ್ಯವು ಇನ್ನೂ ಹಸಿರು ವಲಯ ವಿಭಾಗದಲ್ಲಿದೆ ಎಂದು ಅರುಣಾಚಲ ಪ್ರದೇಶದ ಆರೋಗ್ಯ ಇಲಾಖೆ ಹೇಳಿದೆ.
  • ಮಣಿಪುರ: ದಿನಾಂಕದವರೆಗೆ ಅಧಿಕೃತ ಕ್ವಾರಂಟೈನ್ ನಲ್ಲಿ 5000 ಜನರಿದ್ದರೆ, ಸಮುದಾಯ ಕ್ವಾರಂಟೈನ್ ನಲ್ಲಿ 14,000 ಮತ್ತು ಮಣಿಪುರದಲ್ಲಿ 5500 ಜನರು ಪಾವತಿ ಕ್ವಾರಂಟೈನ್ ಪಡೆದಿದ್ದಾರೆ. ಮಣಿಪುರವು ದಿನಕ್ಕೆ 2200 ಕ್ಕೂ ಅಧಿಕ ಪರೀಕ್ಷೆಗೆ ಹೆಚ್ಚಿಸಿದೆ. ಈವರೆಗೆ ರಾಜ್ಯದಲ್ಲಿ 38,000 ಪರೀಕ್ಷೆಗಳನ್ನು ಮಾಡಲಾಗಿದೆ.
  • ಮಿಜೋರಾಂ: ಜೊರಾಮ್ ಮೆಡಿಕಲ್ ಕಾಲೇಜ್- ಜಡ್ಎಂಸಿಯಿಂದ ಇನ್ನೂ 7 ಕೋವಿಡ್ -19 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ; ಮಿಜೋರಾಂನಲ್ಲಿ ಒಟ್ಟು ಗುಣವಾದ (ಬಿಡುಗಡೆಯಾದ) ರೋಗಿಗಳ ಸಂಖ್ಯೆ ಈಗ 19 ಮತ್ತು ಸಕ್ರಿಯ ಪ್ರಕರಣಗಳು 123 ರಷ್ಟಿದೆ.
  • ನಾಗಾಲ್ಯಾಂಡ್: ಕಳೆದ 24 ಗಂಟೆಗಳಲ್ಲಿ ಪರೀಕ್ಷಿಸಿದ 312 ಮಾದರಿಗಳಲ್ಲಿ, 50 ಹೊಸ ಕೋವಿಡ್ -19 ಸೋಂಕಿನ ಪ್ರಕರಣಗಳು ನಾಗಾಲ್ಯಾಂಡ್ನಲ್ಲಿ ವರದಿಯಾಗಿದೆ. ರಾಜ್ಯದ ಒಟ್ಟು ಸೋಂಕಿನ ಪ್ರಕರಣಗಳು 330, ಅದರಲ್ಲಿ 189 ಸಕ್ರಿಯವಾಗಿವೆ ಮತ್ತು 141 ರೋಗಿಗಳು ಈವರೆಗೆ ಚೇತರಿಸಿಕೊಂಡಿದ್ದಾರೆ.
  • ಸಿಕ್ಕಿಂ: ಜೂನ್ 25 ರಂದು ಗ್ಯಾಂಗ್ಟಕ್ ನಲ್ಲಿ 'ಧೈರ್ಯಶಾಲಿ ಹೃದಯಗಳಿಗೆ ನಮಸ್ಕಾರ' ಎಂಬ ಕಾರ್ಯಕ್ರಮದ ಮೂಲಕ ಲಡಾಖ್ ಗಾಲ್ವಾನ್ ನಲ್ಲಿ ಹುತಾತ್ಮರಾದ 20 ಸೈನಿಕರಿಗೆ ಗೌರವ ಸಲ್ಲಿಸಲಾಗುವುದು ಎಂದು ಸಿಕ್ಕಿಂ ಸರ್ಕಾರ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
  • ಛತ್ತೀಸ್ಗಢ: ಛತ್ತೀಸಗಢದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 2,302 ಕ್ಕೆ ಏರಿಕೆಯಾಗಿದ್ದು, 46 ಜನರಲ್ಲಿ ಸೋಮವಾರ ಕೋವಿಡ್ -19 ಸೋಂಕು ದೃಢಪಟ್ಟಿದೆ. ಕರೋನಾ ವೈರಾಣು ಸೋಂಕಿನಿಂದ ರಾಜ್ಯದಲ್ಲಿ ಈವರೆಗೆ ಒಟ್ಟು 12 ಸಾವುಗಳು ವರದಿಯಾಗಿವೆ.
  • ಗೋವಾ: 46 ಹೊಸ ಕೋವಿಡ್-19 ಸೋಂಕು ಪ್ರಕರಣ ವರದಿಯಾಗಿದ್ದು, ರಾಜ್ಯದ ಕೋವಿಡ್-19 ಪ್ರಕರಣ ಸಂಖ್ಯೆ 864 ಆಗಿದೆ. ಪ್ರಸ್ತುತ 711 ಸಕ್ರಿಯ ಪ್ರಕರಣಗಳಿವೆ.
  • ಕೇರಳ: ಕೇರಳದಲ್ಲಿ ಕೋವಿಡ್-19 ನಿಂದ ಇನ್ನೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ, ರಾಜ್ಯದಲ್ಲಿ ಕೋವಿಡ್ -19 ಸಾವುಗಳ ಸಂಖ್ಯೆ 23 ಕ್ಕೆ ಏರಿದೆ. ಕ್ವಾರಂಟೈನ್ ಗೆ ಒಳಗಾಗಿರುವ 68 ವರ್ಷದ ವ್ಯಕ್ತಿಯೊಬ್ಬರು ಇಂದು ಕೋಳಿಕೋಡ್ನಲ್ಲಿ ಮೃತಪಟ್ಟಿದ್ದಾರೆ. ಅವರ ಸ್ವ್ಯಾಬ್ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮುಂಬೈನಿಂದ ಹಿಂದಿರುಗಿದ ನಂತರ ಕಣ್ಣೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರಲ್ಲಿ 24 ನೇ ದಿನ  ಸೋಂಕು ಧೃಢಪಟ್ಟಿದೆ. ವಿವಿಧ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಮಾಲೋಚಿಸಿದ ನಂತರ ಭಾರತಕ್ಕೆ ಮರಳುವವರಿಗೆ ಕೋವಿಡ್ -19 ಟ್ರೂನಾಟ್ ಪರೀಕ್ಷೆಯನ್ನು ನಡೆಸಬೇಕೆಂಬ ಕೇರಳದ ಮನವಿಯನ್ನು ಕೇಂದ್ರ ತಿರಸ್ಕರಿಸಿದೆ, ಶಿಫಾರಸು ಅಪ್ರಾಯೋಗಿಕವಾಗಿದೆ ಎಂದು ಹೇಳಿದೆ. ಕೋವಿಡ್ ದೃಢಪಟ್ಟ ವಲಸಿಗರಿಗೆ ವಿಶೇಷ ವಿಮಾನಕ್ಕೆ ಅನುಮತಿಸಬೇಕೆಂಬ ರಾಜ್ಯದ ಸಲಹೆಯನ್ನು ಸಹ ತಿರಸ್ಕರಿಸಲಾಗಿದೆ. ಏತನ್ಮಧ್ಯೆ, ವಿವಿಧ ದೇಶಗಳಿಂದ ಇಂದು 2 ಸಾವಿರಕ್ಕೂ ಹೆಚ್ಚು ವಲಸಿಗರು ಕೊಚ್ಚಿಗೆ ಆಗಮಿಸಲಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮೇಲ್ಮುಖವಾಗಿ ಪ್ರವೃತ್ತಿಯನ್ನು ತೋರಿಸುತ್ತಿರುವ ರಾಜ್ಯದಲ್ಲಿ ನಿನ್ನೆ 138 ಹೊಸ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ವಿವಿಧ ಜಿಲ್ಲೆಗಳಲ್ಲಿ 1,540 ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ.
  • ತಮಿಳುನಾಡು: ಪ್ರಕರಣಗಳ ಹೆಚ್ಚಳದಿಂದಾಗಿ, ಮಧುರೈನಲ್ಲಿ ಹೆಚ್ಚುವರಿ ಹಾಸಿಗೆಗಳ ಅವಶ್ಯಕತೆ ಇದೆ; ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ (452) ಇದು ಈಗ ರಾಜ್ಯದ ಆರನೇ ಜಿಲ್ಲೆಯಾಗಿದೆ. ಬುಧವಾರದಿಂದ ಜೂನ್ 30 ರವರೆಗೆ ಮಧುರೈ ಮತ್ತು ನೆರೆಯ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಲಾಗುವುದು. ಕೋವಿಡ್ -19 ಕರ್ತವ್ಯದಲ್ಲಿ ಭಾಗಿಯಾಗಿರುವ ಎಲ್ಲ ಪೊಲೀಸ್ ಸಿಬ್ಬಂದಿಗೆ ಮುಖಕವಚ ಒದಗಿಸುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸುವಂತೆ ಮದ್ರಾಸ್ ಹೈಕೋರ್ಟ್ ಮಧುರೈ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನಿನ್ನೆ 2,710 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಕೋವಿಡ್ ಸೋಂಕಿತರ ಸಂಖ್ಯೆ ಈಗ 60,000 ದಾಟಿದೆ. 1358 ಚೇತರಿಕೆ ಮತ್ತು 37 ಸಾವುಗಳು ನಿನ್ನೆ ವರದಿಯಾಗಿದೆ. ಚೆನ್ನೈನಿಂದ 1487 ಪ್ರಕರಣಗಳು ವರದಿಯಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳು: 27178, ಸಾವುಗಳು: 794, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 18372.
  • ಕರ್ನಾಟಕ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆಯ ದರವನ್ನು ನಿಗದಿಪಡಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶದ ಪ್ರಕಾರ, ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಸೌಲಭ್ಯ ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಸಾರ್ವಜನಿಕ ಅಧಿಕಾರಿಗಳು ಉಲ್ಲೇಖಿಸುವ ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸಲಾಗಿದೆ. 249 ಹೊಸ ಪ್ರಕರಣಗಳು, 111 ಗುಣಮುಖ, ಬಿಡುಗಡೆ ಮತ್ತು ಐದು ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಸೋಂಕಿನ ಪ್ರಕರಣಗಳು: 9399, ಸಕ್ರಿಯ ಪ್ರಕರಣಗಳು: 3523, ಸಾವು: 142, ಬಿಡುಗಡೆ: 5730.
  • ಆಂಧ್ರಪ್ರದೇಶ: ಆಡಳಿತಾರೂಢ ವೈಎಸ್.ಆರ್ ಕಾಂಗ್ರೆಸ್ ಪಕ್ಷದ ಶ್ರುಂಗವರಪು ಕೋಟ (ವಿಜಯನಗರಂ ಜಿಲ್ಲೆ) ಶಾಸಕ ಕೆ.ಶ್ರೀನಿವಾಸ ರಾವ್ ಮತ್ತು ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಲ್ಲಿ ಜೂನ್ 22 ರಂದು ಕೋವಿಡ್ ಸೋಂಕು ದೃಢಪಟ್ಟಿದೆ. ಶಾಸಕರು ಇತ್ತೀಚೆಗೆ ಯುಎಸ್ ನಿಂದ ಹಿಂದಿರುಗಿದ್ದರು ಮತ್ತು ಸ್ವಯಂ ಕ್ವಾರಂಟೈನಲ್ಲಿದ್ದರು. 104 ಆಂಬ್ಯುಲೆನ್ಸ್ ಸೇವೆಯನ್ನು ಬಳಸಿಕೊಳ್ಳುವ ಮೂಲಕ 90 ದಿನಗಳಲ್ಲಿ ಎಲ್ಲಾ ಮನೆಗಳಲ್ಲಿ ಸಮಗ್ರ ತಪಾಸಣೆ ಮತ್ತು ಪರೀಕ್ಷೆಗಳನ್ನು ನಡೆಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೃಷ್ಣ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಕನಿಷ್ಠ 2,000 ಕೋವಿಡ್ -19 ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ ಮತ್ತು 10 ಐಎಂಎಎಸ್.ಕ್ಯೂ ಬಸ್ಸುಗಳನ್ನು (ಇಂಟೆಲಿಜೆಂಟ್ ಮಾನಿಟರಿಂಗ್ ಅನಾಲಿಸಿಸ್ ಸರ್ವಿಸ್ ಕ್ವಾರಂಟೈನ್) ವ್ಯವಸ್ಥೆ ಮಾಡಿದೆ, ಇವುಗಳನ್ನು ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲು, ಪರೀಕ್ಷೆ ನಡೆಸಲು ಬಳಸಲಾಗುತ್ತದೆ. ಆಂಧ್ರಪ್ರದೇಶ ಸಾರ್ವಜನಿಕ ಸೇವಾ ಆಯೋಗವು ಎಪಿಪಿಎಸ್ಸಿ 2020 ಪರೀಕ್ಷೆಗಳನ್ನು ನಡೆಸಲು ದಿನಾಂಕಗಳ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ, ಹಿಂದೆ ಕೋವಿಡ್ -19 ಲಾಕ್ಡೌನ್ ಕಾರಣ ಪರೀಕ್ಷೆ ಮುಂದೂಡಲಾಗಿತ್ತು. ಕಳೆದ 24 ಗಂಟೆಗಳಲ್ಲಿ 462 ಹೊಸ ಪ್ರಕರಣಗಳು, 129 ಬಿಡುಗಡೆ ಮತ್ತು ಐದು ಸಾವುಗಳು ವರದಿಯಾಗಿವೆ; 407 ಹೊಸ ಪ್ರಕರಣಗಳಲ್ಲಿ 40 ಪ್ರಕರಣಗಳು ಅಂತಾರಾಜ್ಯ ಪ್ರಕರಣಗಳು ಮತ್ತು 15 ವಿದೇಶಗಳಿಂದ ಬಂದವು. ಒಟ್ಟು ಪ್ರಕರಣಗಳು: 9834, ಸಕ್ರಿಯ ಪ್ರಕರಣಗಳು: 5123, ಬಿಡುಗಡೆ: 4592, ಸಾವು: 119.
  • ತೆಲಂಗಾಣ: ಕೋವಿಡ್ -19 ಪರೀಕ್ಷೆಗಳನ್ನು ನಡೆಸುವಾಗ ಸಾರ್ವಜನಿಕರನ್ನು ವಾಣಿಜ್ಯಾತ್ಮಕವಾಗಿ ಶೋಷಿಸದಂತೆ ಖಾಸಗಿ ರೋಗ ನಿರ್ಣಯ ಪ್ರಯೋಗಾಲಯಗಳಿಗೆ ಆರೋಗ್ಯ ಸಚಿವ ಎಟೆಲಾ ರಾಜೇಂದರ್ ಎಚ್ಚರಿಕೆ ನೀಡಿದ್ದಾರೆ. ಜೂನ್ 25 ರಂದು ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸುವ ಹೊಸ ಮಿಡತೆಗಳು  ಮಾಡಬಹುದಾದ ಆಕ್ರಮಣ ವಿರುದ್ಧ ತೆಲಂಗಾಣದಲ್ಲಿ ಎಚ್ಚರಿಕೆ ನೀಡಿದೆ, ಒಟ್ಟು ಕೋವಿಡ್ ಪ್ರಕರಣಗಳು 8674, ಸಕ್ರಿಯ ಪ್ರಕರಣಗಳು: 4452, ಸಾವು 217, ಚೇತರಿಸಿಕೊಂಡವರು 4005.

ವಾಸ್ತವ ಪರಿಶೀಲನೆ

 

***



(Release ID: 1636025) Visitor Counter : 278