PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 11 JUN 2020 7:15PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್-19 ಮಾಹಿತಿ:

ಐಸಿಎಂಆರ್ ನಡೆಸಿದ ಸೆರೋ-ಸರ್ವೈಲೆನ್ಸ್ ಅಧ್ಯಯನದಿಂದ ಕೇವಲ ಶೇ.0.73ರಷ್ಟು ಜನಸಂಖ್ಯೆಯ  ಮಾದರಿಯಲ್ಲಿ  ಕೋವಿಡ್ ಸೋಂಕಿರುವುದು ದೃಢಪಟ್ಟಿದೆ.

ಐಸಿಎಂಆರ್ ನಡೆಸಿದ ಸೆರೋ-ಸರ್ವೈಲೆನ್ಸ್ ಅಧ್ಯಯನದಲ್ಲಿ ಸಮೀಕ್ಷೆ ನಡೆಸಲಾದ ಜನಸಂಖ್ಯೆಯ ಶೇ.0.73ರಷ್ಟು ಮಂದಿಯಲ್ಲಿ ಹಿಂದೆ ಸಾರ್ಸ್-ಸಿವಿಒ-2ಗೆ ಒಳಗಾಗಿರುವುದು ದೃಢಪಟ್ಟಿದೆ. ಈ ವಿಷಯವನ್ನು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ್  ಅವರು ಇಂದು ಮಾಧ್ಯಮ ಸಂವಾದದಲ್ಲಿ ಹೇಳಿದರು. ಈ ಅಧ್ಯಯನದಿಂದ ಸ್ಪಷ್ಟವಾಗಿರುವ ಅಂಶವೆಂದರೆ ಲಾಕ್ ಡೌನ್ ವೇಳೆ ತೆಗೆದುಕೊಂಡ ಕ್ರಮಗಳು, ಕೋವಿಡ್-19 ಕ್ಷಿಪ್ರವಾಗಿ ಹರಡುವುದನ್ನು ತಪ್ಪಿಸಿದೆ ಮತ್ತು ಸೋಂಕು ಪ್ರಸರಣ ಪ್ರಮಾಣ ಯಶಸ್ವಿಯಾಗಿ ತಗ್ಗಿದೆ ಎಂಬುದು. ಐಸಿಎಂಆರ್, ಗ್ರಾಮೀಣ ಭಾಗಕ್ಕೆ ಹೋಲಿಸಿ, ಲೆಕ್ಕಾಚಾರ ಹಾಕಿದ್ದು, ಆ ಪ್ರಕಾರ ನಗರ ಪ್ರದೇಶಗಳಲ್ಲಿ ಸೋಂಕು ತಗುಲುವ ಅಪಾಯ 1.09ಪಟ್ಟು ಹೆಚ್ಚಿದೆ ಮತ್ತು ನಗರದ ಕೊಳೆಗೇರಿಗಳಲ್ಲಿ 1.89ಪಟ್ಟು ಹೆಚ್ಚಿದೆ. ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಅತಿ ಕಡಿಮೆ ಶೇ.0.08ರಷ್ಟಿದೆ. ಇದರ ಅರ್ಥ ಜನಸಂಖ್ಯೆಯ ಬಹುದೊಡ್ಡ ಭಾಗ ಕಾಲಕಾಲಕ್ಕೆ ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ ಕೋವಿಡ್ ಅನ್ನು ಸಮರ್ಪಕವಾಗಿ ನಿಯಂತ್ರಿಸುವುದನ್ನು ಮುಂದುವರಿಸಿದ್ದಾರೆ ಎಂಬುದು.

ಕಳೆದ 24 ಗಂಟೆಗಳಲ್ಲಿ ಒಟ್ಟು 5,823 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು 1,41,028 ರೋಗಿಗಳು ಕೋವಿಡ್-19ನಿಂದ ಗುಣಮುಖರಾಗಿದ್ದಾರೆ. ಕೋವಿಡ್-19 ರೋಗಿಗಳಲ್ಲಿ ಗುಣಮುಖರಾದವರ ಪ್ರಮಾಣ ಶೇ.49.21ರಷ್ಟಿದೆ. ಭಾರತದಲ್ಲಿ ಸದ್ಯ 1,37,448 ಪ್ರಕರಣಗಳು ಸಕ್ರಿಯವಾಗಿದ್ದು, ಅವುಗಳು ವೈದ್ಯಕೀಯ ನಿಗಾದಲ್ಲಿವೆ. ಪ್ರಸ್ತುತ  ಸೋಂಕು ಸಕ್ರಿಯವಾಗಿರುವ ರೋಗಿಗಳಿಗಿಂತ ಗುಣಮುಖರಾಗಿರುವ ರೋಗಿಗಳ ಸಂಖ್ಯೆ ಹೆಚ್ಚಿದೆ.

ವಿವರಗಳಿಗೆ : https://pib.gov.in/PressReleasePage.aspx?PRID=1630922

ಮಹಾರಾಷ್ಟ್ರದಲ್ಲಿ  ಕೋವಿಡ್-19 ನಿರ್ವಹಣೆ ಕುರಿತಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿದ್ಧತೆಗಳ ಪರಾಮರ್ಶೆ ನಡೆಸಿದ ಡಾ. ಹರ್ಷವರ್ಧನ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಇಂದು, ಮಹಾರಾಷ್ಟ್ರದ ಆರೋಗ್ಯ ಸಚಿವ ಶ್ರೀ ರಾಜೇಶ್ ತೋಪೆ, ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಚಿವ ಶ್ರೀ ಅಮಿತ್ ದೇಶ್ ಮುಖ್ ಮತ್ತು ಮಹಾರಾಷ್ಟ್ರದ ಕೋವಿಡ್-19 ಬಾಧಿತ ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳೊಂದಿಗೆ ಉನ್ನತಮಟ್ಟದ ಸಭೆ(ವಿಡಿಯೋ ಕಾನ್ಫರೆನ್ಸ್ ಮೂಲಕ) ನಡೆಸಿದರು. ಡಾ. ಹರ್ಷವರ್ಧನ್ ಅವರು, ಸಂಪರ್ಕ ಪತ್ತೆಗೆ ಮಾನವ ಸಂಪನ್ಮೂಲ ಬಲವರ್ಧನೆ ಅಗತ್ಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು, ಆಕ್ಸಿಜನ್ ಸಹಿತ ಹಾಸಿಗೆ ಸೌಕರ್ಯಗಳು,  ಆರೋಗ್ಯ ರಕ್ಷಣಾ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ ಖಾತ್ರಿ, ಹೆಚ್ಚಿನ ಅಪಾಯವಿರುವ ಸಂಪರ್ಕಗಳಿಗೆ ಮಾರ್ಗದರ್ಶನ ಮತ್ತು ಸಮುದಾಯ ನಿಗ್ರಹ ಶಕ್ತಿ ತಗ್ಗಿಸುವ ನಡವಳಿಕೆ ಬದಲಾವಣೆ ಸಂವಹನ(ಬಿಸಿಸಿ) ಚಟುವಟಿಕೆಗಳಿಗೆ ಒತ್ತು ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

ವಿವರಗಳಿಗೆ :  https://pib.gov.in/PressReleasePage.aspx?PRID=1630917

ಭಾರತೀಯ ವಾಣಿಜ್ಯ ಮಹಾಮಂಡಳಿಯ(ಐಸಿಸಿ) ವಾರ್ಷಿಕ ಸರ್ವ ಸದಸ್ಯರ ಸಭೆ-2020ಯನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ವಾಣಿಜ್ಯ ಮಹಾಮಂಡಳಿ(ಐಸಿಸಿ)ಯ 95ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಸಮರವನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತ ಇಡೀ ಜಗತ್ತಿನ ಜೊತೆಯಲ್ಲಿ ಶೌರ್ಯದಿಂದ ಮುನ್ನುಗ್ಗುತ್ತಿದೆ ಎಂದು ಹೇಳಿದರು. ದೇಶ  ಮಿಡತೆಗಳ ದಾಳಿ, ಆಲಿಕಲ್ಲು ಮಳೆ, ತೈಲ ಬಾವಿಗೆ ಬೆಂಕಿ, ಸರಣಿ ಲಘು ಭೂಕಂಪಗಳು ಮತ್ತು ಎರಡು ಚಂಡಮಾರುತ ಮತ್ತಿತರ ವಿಪತ್ತುಗಳನ್ನು ಎದುರಿಸುತ್ತಿದೆ. ಆದರೆ ರಾಷ್ಟ್ರ ಈ ಎಲ್ಲ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸುತ್ತಿದೆ ಎಂದರು. ಇಂತಹ ಸಂಕಷ್ಟದ ಸಮಯಗಳು ಭಾರತವನ್ನು ಇನ್ನಷ್ಟು ಸದೃಢಗೊಳಿಸಲಿವೆ ಎಂದು ಪ್ರಧಾನಿ ಹೇಳಿದರು. ಆ ದೃಢತೆ, ಇಚ್ಛಾಶಕ್ತಿ ಮತ್ತು ಐಕ್ಯತೆ ನಮ್ಮ ರಾಷ್ಟ್ರದ ಶಕ್ತಿಯಾಗಿದೆ. ಅವುಗಳಿಂದಾಗಿ ದೇಶ ಎಲ್ಲಾ ಬಿಕ್ಕಟ್ಟುಗಳ ವಿರುದ್ಧ ಹೋರಾಡುವಂತಾಗಿದೆ. ಯಾವುದೇ ಬಿಕ್ಕಟ್ಟು ನಮಗೆ ಅವಕಾಶವನ್ನು ಒದಗಿಸುತ್ತದೆ ಮತ್ತು ಅಂತಹ ಅವಕಾಶಗಳು ಸ್ವಾವಲಂಬಿ ಭಾರತ (ಆತ್ಮ ನಿರ್ಭರ ಭಾರತ) ನಿರ್ಮಾಣಕ್ಕೆ ಮಹತ್ವದ್ದಾಗುತ್ತವೆ ಎಂದರು.

ವಿವರಗಳಿಗೆ :  https://pib.gov.in/PressReleasePage.aspx?PRID=1630859

ಭಾರತೀಯ ವಾಣಿಜ್ಯ ಮಹಾಮಂಡಳಿ (ICC) ವಾರ್ಷಿಕ ಸರ್ವಸದಸ್ಯರ ಸಭೆಯನ್ನುದ್ದೇಶಿಸಿ ಪ್ರಧಾನಿಯವರು ಮಾಡಿದ ಭಾಷಣ ಪಠ್ಯ

ವಿವರಗಳಿಗೆ : https://pib.gov.in/PressReleasePage.aspx?PRID=1630839

ಪ್ರಧಾನಮಂತ್ರಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಗೌರವಾನ್ವಿತ ಬೆಂಜಮಿನ್ ನೇತನ್ಯಾಹು ಜೊತೆ ದೂರವಾಣಿ ಸಮಾಲೋಚನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಇಸ್ರೇಲ್ ಪ್ರಧಾನಮಂತ್ರಿ ಗೌರವಾನ್ವಿತ ಬೆಂಜಮಿನ್ ನೇತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿದರು. ಉಭಯ ನಾಯಕರು ಕೋವಿಡ್-19 ಸಾಂಕ್ರಾಮಿಕ ಸನ್ನಿವೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳಲ್ಲಿ ಲಸಿಕೆ, ಚಿಕಿತ್ಸೆ ಮತ್ತು ಪತ್ತೆ ಸೇರಿದಂತೆ ಇತರೆ ವಿಚಾರಗಳಲ್ಲಿ ಪರಸ್ಪರ ಭಾರತ ಮತ್ತು ಇಸ್ರೇಲ್ ತಮ್ಮ ಸಹಕಾರವನ್ನು ವಿಸ್ತರಿಸಬಹುದಾದ ವಿಷಯಗಳ ಬಗ್ಗೆ ಚರ್ಚಿಸಿದರು. ಉಭಯ ನಾಯಕರು ತಜ್ಞರ ತಂಡಗಳನ್ನು ಎರಡೂ ರಾಷ್ಟ್ರಗಳ ನಡುವೆ ವಿನಿಮಯ ಮಾಡಿಕೊಳ್ಳುವುದನ್ನು ಮುಂದುವರಿಸಲು ಒಪ್ಪಿದರು ಮತ್ತು ಅಂತಹ ಸಹಭಾಗಿತ್ವದಿಂದಾಗಿ ಲಭಿಸುವ ಪ್ರಯೋಜನವನ್ನು ಇಡೀ ಮನುಕುಲಕ್ಕೆ ಲಭ್ಯವಾಗುವಂತೆ ಮಾಡಲು ಸಹಮತ ಸೂಚಿಸಿದರು.

ವಿವರಗಳಿಗೆ : https://pib.gov.in/PressReleseDetail.aspx?PRID=1630762

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕಾಂಬೋಡಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಸಾಮ್ಡೆಚ್ ಅಕ್ಕ ಮೊಹ ಸೇನಾ ಪಡೈ ಟೆಚ್ನೊ ಹುನ್ ಸೆನ್ ಅವರೊಂದಿಗೆ ಸಮಾಲೋಚನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾಂಬೋಡಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಸಾಮ್ಡೆಚ್ ಅಕ್ಕ ಮೊಹ ಸೇನಾ ಪಡೈ ಟೆಚ್ನೊ ಹುನ್ ಸೆನ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿದರು. ಉಭಯ ನಾಯಕರು  ಕೋವಿಡ್-19 ಸಾಂಕ್ರಾಮಿಕದ ಬಗ್ಗೆ ಚರ್ಚಿಸಿದರು. ಇಬ್ಬರು ನಾಯಕರು ಗಡಿಪಾರಾಗುವವರ ವಿಚಾರದಲ್ಲಿ ಪರಸ್ಪರ ಸಹಕಾರವನ್ನು ಮುಂದುವರಿಸುವುದು ಮತ್ತು ಅವರನ್ನು ಸ್ಥಳಾಂತರಿಸಲು ಸಹಕಾರ ಮುಂದುವರಿಸಲು ಒಪ್ಪಿದರು.

ವಿವರಗಳಿಗೆ : https://pib.gov.in/PressReleseDetail.aspx?PRID=1630734

ಕೋವಿಡ್ ಆರೈಕೆ ಕೇಂದ್ರಗಳನ್ನು ರಾಜ್ಯ ಪ್ರಾಧಿಕಾರಗಳಿಗೆ ನೀಡಲು ಮುಂದಾದ ಭಾರತೀಯ ರೈಲ್ವೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಯಂತೆ ಕೆಲವು ರಾಜ್ಯಗಳು ಭಾರತೀಯ ರೈಲ್ವೆಗೆ ಮನವಿಯನ್ನು ಸಲ್ಲಿಸಿವೆ. ರೈಲ್ವೆ, ಈ ಬೋಗಿಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿವೆ. 10 ಬೋಗಿಗಳಿರುವ ರೈಲುಗಳಲ್ಲಿ ಪ್ರತಿ ಬೋಗಿಯಲ್ಲಿ 16 ರೋಗಿಗಳ ಸಾಮರ್ಥ್ಯವಿದ್ದು, ಅವುಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟು 5231 ಬೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಬಳಕೆ ಮಾಡಲು ಪರಿವರ್ತಿಸಲಾಗಿತ್ತು. ಉತ್ತರ ಪ್ರದೇಶ 24 ನಿಲ್ದಾಣಗಳನ್ನು ಅಂತಿಮಗೊಳಿಸಿದೆ. ತೆಲಂಗಾಣ ಮೂರು ಸ್ಥಳಗಳಾದ ಸಿಕಂದ್ರಾಬಾದ್, ಕಾಚಿಗುಡ ಮತ್ತು ಅಡಿಲಾಬಾದ್ ಗಳಲ್ಲಿ ಬೋಗಿಗಳನ್ನು ನಿಲ್ಲಿಸಲು ಕೋರಿದೆ. ದೆಹಲಿಯಲ್ಲಿ 10 ಬೋಗಿಗಳನ್ನು 1 ಶಕುರ್ ಬಸ್ತಿ ಸ್ಥಳದಲ್ಲಿ ನಿಲ್ಲಿಸಲಾಗಿದೆ. ಭಾರತೀಯ ರೈಲ್ವೆ, ಕೋವಿಡ್-19 ವಿರುದ್ಧದ ಭಾರತ ಸರ್ಕಾರದ ಪ್ರಯತ್ನಗಳಿಗೆ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1630912

ಆರೋಗ್ಯ ಸೇತು ಪರಿಣಾಮಕಾರಿಯಾಗಿ ಬಳಸಿ: ಸಹಾಯಕ ಸಚಿವ ಧೋತ್ರೆ ಜಿಲ್ಲಾ ಕಲೆಕ್ಟರ್ ಗಳಿಗೆ ಕರೆ

ಕೇಂದ್ರ ವಿದ್ಯುನ್ಮಾನ, ಐಟಿ, ಎಚ್ಆರ್ ಡಿ ಮತ್ತು ಸಂವಹನ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಅವರ ನಿರ್ದೇಶನದ ಮೇರೆಗೆ ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯ(ಎಂಇಐಟಿವೈ)ದ ಆರೋಗ್ಯ ಸೇತು ಆಪ್ ತಂಡ ಮತ್ತು ಎಲ್ಲ ಜಿಲ್ಲೆಗಳ ಕಲೆಕ್ಟರ್ ಗಳು ಮತ್ತು ಮಹಾರಾಷ್ಟ್ರದ ಎನ್ಐಸಿಯ ಡಿಐಒಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಾಯಿತು. ಈ ಸಂವಾದದ ಉದ್ದೇಶ ಆರೋಗ್ಯ ಸೇತು ಆಪ್ ನಾನಾ ಮುಖಗಳ ಬಗ್ಗೆ  ಕ್ಷೇತ್ರಮಟ್ಟದ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸುವುದು ಮತ್ತು ಬಗ್ಗೆ ತಳಮಟ್ಟದಿಂದ ಮಾಹಿತಿಗಳನ್ನು ಸಂಗ್ರಹಿಸುವುದಾಗಿದೆ.  ಆರೋಗ್ಯ ಸೇತು ವೇದಿಕೆಯ ಮೂಲಕ ಸಂಗ್ರಹಿಸಿ ವಿಶ್ಲೇಷಿಸುತ್ತಿರುವ ದತ್ತಾಂಶ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ರೀತಿಯಲ್ಲಿ ಸಹಾಯಕವಾಗುತ್ತಿದೆ ಮತ್ತು ರಾಜ್ಯಗಳಲ್ಲಿ ಸೋಂಕು ಪ್ರಸರಣದ ಸ್ಥಿತಿಗತಿ ಅರ್ಥೈಸಿಕೊಳ್ಳಲು ಸಹಾಯಕವಾಗುತ್ತಿದೆ. ದತ್ತಾಂಶವನ್ನು ಪರಿಣಾಮಕಾರಿ ಹಾಗೂ ಸಕಾಲದಲ್ಲಿ ಬಳಸಿ, ಹಾಟ್ ಸ್ಪಾಟ್ ಗಳು ಅಭಿವೃದ್ಧಿಯಾಗುವುದನ್ನು ಮುಂಚಿತವಾಗಿಯೇ ತಡೆಯುವಲ್ಲಿ ಮಹತ್ವದ ಸಹಾಯವಾಗುತ್ತಿದೆ ಮತ್ತು ನಿಗದಿತ  ಹಾಗೂ ಯೋಜಿತ ರೀತಿಯಲ್ಲಿ ಸಕಾಲಕ್ಕೆ ಅಗತ್ಯ ಆರೋಗ್ಯ ಮೂಲಸೌಕರ್ಯ ಹಂಚಿಕೆ ಮಾಡಲು ಸಹ ಸಹಾಯಕವಾಗುತ್ತಿದೆ.

ವಿವರಗಳಿಗೆ :  https://pib.gov.in/PressReleseDetail.aspx?PRID=1630734

ಕೋವಿಡ್-19 ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುವ ಮಾರ್ಗಸೂಚಿಗಳನ್ನು ಅಂತಿಮಗೊಳಿಸುವಂತೆ ಡಿಎಆರ್ ಪಿಜಿಗೆ ಡಾ. ಜಿತೇಂದ್ರ ಸಿಂಗ್ ಸಲಹೆ

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, ಡಿಎಆರ್ ಪಿಜಿಯ ಪ್ರಸ್ತುತ ನಡೆಯುತ್ತಿರುವ ಚಟುವಟಿಕೆಗಳ ಕುರಿತು ಪರಾಮರ್ಶಿಸಿದರು ಮತ್ತು ಇಲಾಖೆ ಅತ್ಯಂತ ತ್ವರಿತವಾಗಿ ಮನೆಯಿಂದಲೇ ಕೆಲಸ ಮಾಡುವ ನೀತಿಯ ಮಾರ್ಗಸೂಚಿಗಳನ್ನು ಅಂತಿಮಗೊಳಿಸಬೇಕು ಎಂದು ಸಲಹೆ ಮಾಡಿದರು. ಇತರೆ ಅಗತ್ಯ ಸಚಿವಾಲಯಗಳು/ಇಲಾಖೆಗಳ ಜೊತೆ ಆದ್ಯತೆಯ ಮೇರೆಗೆ ಅಗತ್ಯ ಸಮಾಲೋಚನೆಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು. ಪ್ರಧಾನಮಂತ್ರಿಗಳು ಕರೆ ನೀಡಿರುವಂತೆ ‘ಎರಡು ಗಜ ದೂರ’ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಬದ್ಧವಾಗಿ ಮನೆಯಿಂದಲೇ ಕೆಲಸ ಮಾಡುವ ಕುರಿತಂತೆ ಮಾರ್ಗಸೂಚಿಗಳನ್ನು ಸಕಾಲದಲ್ಲಿ ಅಂತಿಮಗೊಳಿಸಿದರೆ ಅದರಿಂದ ಕೇಂದ್ರ ಸಚಿವಾಲಯಗಳ ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದರು.

ವಿವರಗಳಿಗೆ :  https://pib.gov.in/PressReleseDetail.aspx?PRID=1630699

ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ನೀಡಲು ಸಿಎಸ್ ಸಿ ಜಾಲ ಬಳಕೆಗೆ ಇಪಿಎಫ್ಒ ನಿರ್ಧಾರ

ಕೋವಿಡ್-19 ನಂತಹ ಸಾಂಕ್ರಾಮಿಕದ ಸವಾಲಿನ ವಿಶೇಷ ಸಂದರ್ಭದಲ್ಲಿ, ಇಪಿಎಸ್ ಪಿಂಚಣಿದಾರರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸುವ ಅಗತ್ಯವನ್ನು ಪರಿಗಣಿಸಿ, ಇಪಿಎಫ್ ಡಿಜಿಟಲ್ ಜೀವನ್ ಪ್ರಮಾಣಪತ್ರಗಳನ್ನು ಸಲ್ಲಿಸುವ ಸೌಕರ್ಯ ಒದಗಿಸಲು ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ ಸಿ) ಜೊತೆ ಕ್ರಿಯಾಶೀಲ ಸಹಭಾಗಿತ್ವ ಸಾಧಿಸಿದೆ. ಸುಮಾರು 65 ಲಕ್ಷ ಪಿಂಚಣಿದಾರರು ತಮ್ಮ ಮನೆಯ ಸಮೀಪದ ತಳಹಂತದ ಸಂಪರ್ಕ ಜಾಲ, 3.65 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಡಿಜಿಟಲ್ ಜೀವನ್ ಪ್ರಮಾಣಪತ್ರಗಳನ್ನು ಪಡೆದು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ನಿಯಮದಂತೆ ಇಪಿಎಸ್ ಪಿಂಚಣಿದಾರರು ತಾವು ಪಿಂಚಣಿ ಪಡೆಯುವುದನ್ನು ಮುಂದುವರಿಸಿಕೊಂಡು ಹೋಗಲು ಪ್ರತಿವರ್ಷ ಜೀವನ ಪ್ರಮಾಣಪತ್ರ/ಜೀವಂತ ಪ್ರಮಾಣಪತ್ರಗಳನ್ನು ಸಲ್ಲಿಸುವ ಅಗತ್ಯವಿದೆ.

ವಿವರಗಳಿಗೆ :  https://pib.gov.in/PressReleseDetail.aspx?PRID=1630888

ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಮಾಂಡವೀಯ ಎನ್ಐಪಿಇಆರ್ ಗಳ ನಿರ್ದೇಶಕರೊಂದಿಗೆ ಪರಿಶೀಲನಾ ಸಭೆ

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಶ್ರೀ ಮನ್ಸುಕ್ ಮಾಂಡವೀಯ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮೊಹಾಲಿ, ರಾಯ್ ಬರೇಲಿ, ಹಾಜಿಪುರ್ ಮತ್ತು ಗುವಾಹತಿಯ ರಾಷ್ಟ್ರೀಯ ಫಾರ್ಮಸಿಟಿಕಲ್ಸ್ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಎನ್ಐಪಿಇಆರ್)ಗಳ ನಿರ್ದೇಶಕರೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಅವರು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ದೇಶ ಹೋರಾಡುತ್ತಿರುವ ಸಂದರ್ಭದಲ್ಲಿ ಎನ್ಐಪಿಇಆರ್ ಸಂಸ್ಥೆಗಳು ನೀಡುತ್ತಿರುವ ಕೊಡುಗೆ ಹಾಗೂ ಅವುಗಳ ಸಂಶೋಧನೆ ಮತ್ತು ಆವಿಷ್ಕಾರ ಚಟುವಟಿಕೆಗಳ ಕುರಿತಂತೆ ಪರಾಮರ್ಶೆ ನಡೆಸಿದರು. ಸಚಿವರು, ಎಲ್ಲಾ ಎನ್ಐಪಿಇಆರ್ ಗಳು ತಮ್ಮ ಆದಾಯ ವೃದ್ಧಿ ಮೂಲವಾಗಿ ಫಾರ್ಮ ಉತ್ಪನ್ನಗಳಿಗೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು. ಸರ್ಕಾರಿ ಮತ್ತು ಖಾಸಗಿ ವಲಯದ ಫಾರ್ಮಸಿಟಿಕಲ್ಸ್ ಕಂಪನಿಗಳು ಮತ್ತು ಏಜೆನ್ಸಿಗಳು, ವಾಣಿಜ್ಯ ರೂಪದಲ್ಲಿ ಪರೀಕ್ಷಾ ಪ್ರಯೋಗಾಲಯಗಳನ್ನು ಬಳಸಿಕೊಳ್ಳಲು ಎನ್ಐಪಿಇಆರ್ ಗಳಿಗೆ ಬೇಡಿಕೆ ಸಲ್ಲಿಸುವಂತಾಗಬೇಕು ಎಂದರು.

ವಿವರಗಳಿಗೆ :  https://pib.gov.in/PressReleseDetail.aspx?PRID=1630881

ಉನ್ನತ ಶಿಕ್ಷಣ ಸಂಸ್ಥೆಗಳಿಗೆ  ಭಾರತ ಶ್ರೇಯಾಂಕ 2020” ಬಿಡುಗಡೆ ಮಾಡಿದ ಎಚ್ಆರ್ ಡಿ ಸಚಿವರು

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಇಂದು ಐದು ವಿಸ್ತೃತ ವಿಭಾಗಗಳಲ್ಲಿ ಮಾನದಂಡಗಳ ಮತ್ತು ಸಾಧನೆಯನ್ನು ಆಧರಿಸಿ ನಾನಾ ವರ್ಗಗಳ ಉನ್ನತ ಶಿಕ್ಷಣ ಸಂಸ್ಥೆಗಳಿಗೆ “ಭಾರತ ಶ್ರೇಯಾಂಕ 2020” ಬಿಡುಗಡೆ ಮಾಡಿದರು. ಸಚಿವರು ಹತ್ತು ವಿಭಾಗಗಳಲ್ಲಿ ಭಾರತ ಶ್ರೇಯಾಂಕ 2020 ಬಿಡುಗಡೆ ಮಾಡಿದರು. ಶ್ರೀ ಪೋಖ್ರಿಯಾಲ್ ಅವರು, ಎಚ್ಆರ್ ಡಿ ಸಚಿವಾಲಯ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು ರೂಪಿಸಲು ಪ್ರಮುಖ ಉಪಕ್ರಮವನ್ನು ಕೈಗೊಂಡಿದೆ. ಜ್ಞಾನಾರ್ಜನೆ ವಿಷಯದಲ್ಲಿ ಕಳೆದ ಐದು ವರ್ಷಗಳಿಂದೀಚೆಗೆ ಉನ್ನತ ಶಿಕ್ಷಣ ನಾನಾ ವಿಭಾಗಗಳಲ್ಲಿ ಸಂಸ್ಥೆಗಳ ಶ್ರೇಯಾಂಕ ಆಧರಿಸಿ ಇದನ್ನು ರೂಪಿಸಲಾಗಿದೆ ಎಂದರು. ಕೋವಿಡ್-19 ಸಂಕಷ್ಟದ ಸಮಯದಲ್ಲಿ ಆನ್ ಲೈನ್ ಬೋಧನೆ ಸೌಕರ್ಯ ಒದಗಿಸುವ ಉದ್ದೇಶದಿಂದ ಎನ್ ಟಿಎ ಇತ್ತೀಚೆಗೆ ಜೆಇಇ ಮತ್ತು ನೀಟ್ ವಿದ್ಯಾರ್ಥಿಗಳಿಗಾಗಿ ನ್ಯಾಷನಲ್ ಟೆಸ್ಟ್ ಅಭ್ಯಾಸ್ ಆಪ್ ಅನ್ನು ಬಿಡುಗಡೆ ಮಾಡಿದೆ. ಆನ್ ಲೈನ್ ನಲ್ಲಿ ಪರೀಕ್ಷೆ ಅಭ್ಯಾಸ ನಡೆಸುವ ಆಪ್ ಅನ್ನು ಈಗಾಗಲೇ 65 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದರು.

ವಿವರಗಳಿಗೆ :  https://pib.gov.in/PressReleseDetail.aspx?PRID=1630867

ರೋಗಕಾರಕ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುವ ಬಹು ಪದರದ ಸೂಕ್ಷ್ಮಾಣು ನಿಗ್ರಹ ಮುಖಗವಸು

ಸದ್ಯ ಕೊರೊನಾ ಸೋಂಕನ್ನು ಎದುರಿಸಲು ಯಾವುದೇ ಲಸಿಕೆ ಅಥವಾ ಔಷಧಿ ಇಲ್ಲ. ಮಾಸ್ಕ್, ದೈಹಿಕ ಅಂತರ ಕಾಯ್ದುಕೊಳ್ಳುವುದು ಪದೇ ಪದೇ ಕೈಗಳನ್ನು ತೊಳೆದು ಕೊಳ್ಳುವುದು ಅವುಗಳು ಮಾತ್ರ ಜೀವಗಳನ್ನು ಉಳಿಸುವ ಮಾರ್ಗಗಳು. ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ಸೋಂಕಿನ ವಿರುದ್ಧ ರಕ್ಷಣೆಗೆ ಅತ್ಯಂತ ಸೂಕ್ತ ಬಗೆಯ ಮಾಸ್ಕ್ ಅನ್ನು ಶಿಫಾರಸ್ಸು ಮಾಡಿದೆ. ಆದರೆ ತುಂಬಾ ಹೊತ್ತು ಮಾಸ್ಕ್ ಅನ್ನು ಧರಿಸುವುದರಿಂದ ಉಸಿರು ಕಟ್ಟುತ್ತದೆ ಮತ್ತು ಸೂಕ್ತ ರೀತಿಯಲ್ಲಿ ಮಾಸ್ಕ್ ಅನ್ನು ನಿರ್ವಹಿಸುವುದು ಕೂಡ ಕಷ್ಟಕರವಾಗುತ್ತದೆ. ಅಂತಹ ಕೆಲವು ಸಮಸ್ಯೆಗಳನ್ನು ಎದುರಿಸಲು ಭಾರತೀಯ ತಾಂತ್ರಿಕ ಸಂಸ್ಥೆಯ ಬಯೋಮೆಡಿಕಲ್ ಇಂಜಿನಿಯರಿಂಗ್ ಶಾಲೆ(ಐಐಟಿ-ಬಿಎಚ್ ಯು) ಬಹು  ಪದರದ ಸೂಕ್ಷ್ಮಾಣು ನಿಗ್ರಹ ಮಾಡುವ ಮುಖ ಕವಚವನ್ನು ಅಭಿವೃದ್ಧಿಪಡಿಸಿದೆ. ಈ ಮುಖಗವಸು ರೋಗಕಾರಕ ಸೂಕ್ಷ್ಮ ಜೀವಿಗಳನ್ನು ನಾಶ ಮಾಡಲಿದೆ ಮತ್ತು  ದ್ವಿತೀಯ ಹಂತದಲ್ಲಿ ಸೋಂಕು ಹರಡದಂತೆ ತಡೆಯುತ್ತದೆ.

ವಿವರಗಳಿಗೆ :  https://pib.gov.in/PressReleseDetail.aspx?PRID=1630720

ಐಡಿವೈ 2020ಗಾಗಿ ಡಿಡಿ ಭಾರತಿಯಲ್ಲಿ ಸಾಮಾನ್ಯ ಯೋಗ ಮಾನದಂಡದ ಗೋಷ್ಠಿಗಳು

ಆಯುಷ್ ಸಚಿವಾಲಯ, ಪ್ರಸಾರ ಭಾರತಿ ಸಹಯೋಗದಲ್ಲಿ 2020ರ  ಜೂನ್ 11 ರಿಂದ ಪ್ರತಿ ದಿನ ಡಿಡಿ ಭಾರತಿಯಲ್ಲಿ ಸಾಮಾನ್ಯ ಯೋಗ ಮಾರ್ಗಸೂಚಿಗಳನ್ನು ಪ್ರಸಾರ ಮಾಡಲಿದೆ. ಈ ಗೋಷ್ಠಿಗಳು ಪ್ರತಿ ದಿನ ಬೆಳಗ್ಗೆ 8 ಗಂಟೆಯಿಂದ 8.30ರ ವರೆಗೆ ಪ್ರಸಾರವಾಗಲಿವೆ. ಈ ಗೋಷ್ಠಿಗಳ ವಿವರಗಳು ಸಚಿವಾಲಯ ನಿರ್ವಹಿಸುವ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಕ್ರಮೇಣ ಲಭ್ಯವಾಗಲಿವೆ. ಅರ್ಧ ಗಂಟೆಯ ಅಭ್ಯಾಸದಲ್ಲಿ ಸಾಮಾನ್ಯ ಯೋಗ ಶಿಷ್ಟಾಚಾರದ ಪ್ರಮುಖ ಆಯಾಮಗಳು ಒಳಗೊಂಡಿರುತ್ತವೆ. ದೂರಶಿಕ್ಷಣದ ಪದ್ಧತಿಯ ಮೂಲಕ ದೃಶ್ಯ ಮತ್ತು ಶ್ರವಣ ಪ್ರದರ್ಶನದ ಭಾಗವಾಗಿ ಜನರಲ್ಲಿ ಸಾಮಾನ್ಯ ಯೋಗ ಮಾರ್ಗಸೂಚಿಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಅವುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಸಾಮನ್ಯ ಯೋಗ ಶಿಷ್ಟಾಚಾರಗಳನ್ನು ಜನರಿಗೆ ಮುಂಚಿತವಾಗಿಯೇ ತಿಳಿಸುವುದರಿಂದ ಜನರು ಸಂಪೂರ್ಣವಾಗಿ ಸಜ್ಜಾಗಿ 2020ರ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಿದ್ಧವಾಗುತ್ತಾರೆ.

ವಿವರಗಳಿಗೆ :  https://pib.gov.in/PressReleseDetail.aspx?PRID=1630710

ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಎಸ್ಇಆರ್ ನಿಂದ 1,15,081 ಮುಖಗವಸು ಮತ್ತು 9,001 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನೆ

ಕೋವಿಡ್-19 ಸಾಂಕ್ರಾಮಿಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಗ್ನೇಯ ರೈಲ್ವೆ ವಲಯ(ಎಸ್ಇಆರ್), ಮರುಬಳಕೆ ಮಾಡಬಹುದಾದ ಮುಖಗವಸುಗಳನ್ನು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ತನ್ನ ನಾಲ್ಕು ವಿಭಾಗಗಳಲ್ಲಿ ಅಂದರೆ ಖರಗ್ಪುರ್, ಆದ್ರಾ, ರಾಂಚಿ ಮತ್ತು ಚಕ್ರಧರ್ ಪುರ್ ಹಾಗೂ ಖರಗ್ಪುರ್ ಕಾರ್ಯಾಗಾರದಲ್ಲಿ ಉತ್ಪಾದಿಸುತ್ತಿದೆ. ಕೋವಿಡ್-19 ಸೋಂಕಿತ ವ್ಯಕ್ತಿಗಳ ಚಿಕಿತ್ಸೆ ಮತ್ತು ಆರೈಕೆಯಲ್ಲಿ ತೊಡಗಿರುವ ಆರೋಗ್ಯ ರಕ್ಷಣಾ ಸಿಬ್ಬಂದಿ, ವೈದ್ಯರು ಮತ್ತು ನರ್ಸ್ ಗಳಿಗೆ ನೆರವಾಗಲು ಖರಗ್ಪುರ್ ಕಾರ್ಯಾಗಾರ ಮತ್ತು ಖರಗ್ಪುರ್ ವಿಭಾಗೀಯ ಘಟಕ ಸ್ವತಃ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು(ಪಿಪಿಇ) ಕಿಟ್ ಗಳನ್ನು ಉತ್ಪಾದಿಸುತ್ತಿದೆ. ಎಸ್ಇಆರ್ ಆಂತರಿಕ ಉತ್ಪಾದನೆಯಿಂದ ಆರೋಗ್ಯ ರಕ್ಷಣಾ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಸಕಾಲದಲ್ಲಿ  ಮಾಸ್ಕ್, ಸ್ಯಾನಿಟೈಸರ್ ಮತ್ತು ಪಿಪಿಇಗಳನ್ನು ಪೂರೈಕೆ ಮಾಡುತ್ತಿರುವುದೇ ಅಲ್ಲದೆ, ಇದರಿಂದ ಭಾರೀ ಪ್ರಮಾಣದ ಹಣ ಉಳಿತಾಯವಾಗಿದೆ.

ವಿವರಗಳಿಗೆ :  https://pib.gov.in/PressReleasePage.aspx?PRID=1630692

ಅತಿ ಕಡಿಮೆ ವೆಚ್ಚದ ಹೊಸ ಕೊರೊನಾ ಸೋಂಕು ಪರೀಕ್ಷೆ ಪತ್ತೆ ಉಪಕರಣ ಅಭಿವೃದ್ಧಿ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ಕೊರೊನಾ ಸೋಂಕಿನ ಪರೀಕ್ಷೆಗೆ ಕೇವಲ ರಿವರ್ಸ್ ಟ್ಯಾನ್ಸ್ ಕ್ರಿಪ್ಶನ್ ಪಾಲಿಮರ್ಸೆ ಚೈನ್ ರಿಯಾಕ್ಷನ್(ಆರ್ ಟಿ-ಕ್ಯೂಪಿಸಿಆರ್) ಪ್ರಯೋಗವನ್ನು ಶಿಫಾರಸ್ಸು ಮಾಡಿದೆ. ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ ಸೆಂಟರ್(ಸಿಸಿಎಂಬಿ)ನ ಸಂಶೋಧಕರು ಕಡಿಮೆ ವೆಚ್ಚದ, ಕಡಿಮೆ ತಂತ್ರಜ್ಞಾನದ ಅಗತ್ಯವಿರುವ ಸಾರ್ಸ್-ಸಿಒವಿ-2 ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಪರೀಕ್ಷೆಯನ್ನು ರಿವರ್ಸ್ ಟ್ಯಾನ್ಸ್ ಕ್ರಿಪ್ಶನ್ ನೆಸ್ಟೆಟ್ ಪಿಸಿಆರ್ (ಆರ್ ಟಿ-ಎನ್ ಪಿಸಿಆರ್) ಪರೀಕ್ಷೆ ಎಂದು ಕರೆಯಲಾಗುವುದು. ಈ ಪರೀಕ್ಷೆಗೆ ರಿಯಲ್ ಟೈಮ್ ಕ್ವಾಲಿಟೇಟಿವ್ ಆರ್ ಟಿ-ಕ್ಯೂಪಿಸಿಆರ್ ಅಗತ್ಯವಿಲ್ಲ.

ವಿವರಗಳಿಗೆ :  https://pib.gov.in/PressReleasePage.aspx?PRID=1630875

ಪಿ ಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಚಂಡಿಗಢ: ಚಂಡಿಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ರಾಜ್ಯಗಳ ಗಡಿಯನ್ನು ತೆರೆಯುವುದು ಮತ್ತು ರಸ್ತೆ, ರೈಲು ಮತ್ತು ವಿಮಾನಗಳ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ನೀಡುವುದರಿಂದ ಸೋಂಕು ಹರಡುವುದು ವ್ಯಾಪಕವಾಗಿ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ. ಅವರು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೆರೆಯ ರಾಜ್ಯಗಳ ಜೊತೆ ಸಮನ್ವಯ ಸಾಧಿಸಿ, ಹೊರ ರಾಜ್ಯಗಳಿಂದ ತ್ರಿವಳಿ ನಗರಕ್ಕೆ ಬರುವ ವ್ಯಕ್ತಿಗಳಿಗೆ ತಪಾಸಣೆ ನಡೆಸಲು ಸಾಮಾನ್ಯ ಕಾರ್ಯತಂತ್ರವನ್ನು ರೂಪಿಸುವಂತೆ ಸೂಚಿಸಿದ್ದಾರೆ.
  • ಪಂಜಾಬ್ : ಕೋವಿಡ್-19 ಕುರಿಂತೆ ವ್ಯವಸ್ಥಿತ ರೀತಿಯಲ್ಲಿ ಮಾಹಿತಿಯನ್ನು ಪಸರಿಸಲು,  ರಾಜ್ಯ ಸರ್ಕಾರದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಲಹೆಗಾರರಾದ ಪ್ರೊ. ಕೆ.ಕೆ. ತಲ್ವಾರ್ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರ ಕಾರ್ಯತಂತ್ರವನ್ನು ರೂಪಿಸಿದೆ. ರಾಜ್ಯ ಸರ್ಕಾರ ಮಾರ್ಚ್ 27 ರಿಂದ ಜೂನ್ 4 ನಡುವಿನ ಅವಧಿಯಲ್ಲಿ 19 ಆನ್ ಲೈನ್ ಗೋಷ್ಠಿಗಳನ್ನು ಆಯೋಜಿಸಿದೆ. ಅಲ್ಪ ಮತ್ತು ಸ್ವಲ್ಪಮಟ್ಟಿನ ಕೋವಿಡ್-19 ಸೋಂಕಿರುವ ರೋಗಿಗಳಿಗೆ ಅರಿವಳಿಕೆ ತಜ್ಞರು, ವೈದ್ಯಕೀಯ ತಜ್ಞರು ಸೇರಿದಂತೆ ಕೋವಿಡ್ ಆರೈಕೆ ಸೇವೆಗಳಲ್ಲಿ ಭಾಗಿಯಾಗಿದ್ದ 1914 ವೈದ್ಯಕೀಯ ವೃತ್ತಿಪರರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ವೈದ್ಯಕೀಯ ಕಾಲೇಜುಗಳ ಬೋಧಕರು ಮತ್ತು ಇತರೆ ವೃತ್ತಿಪರ ತಜ್ಞರು ಗಂಭೀರವಾಗಿರುವ ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾರೆ.
  • ಹರಿಯಾಣ: ಹರಿಯಾಣದ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವರು, ರಾಜ್ಯದ ಜನತೆ ಪ್ರತಿಯೊಂದು ವಿಪತ್ತನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ಇದರಿಂದಾಗಿ ಹರಿಯಾಣದ ಪ್ರಗತಿ ಹಿಂದಿನಂತೆ ಎಂದೂ ಕುಂಠಿತವಾಗಿಲ್ಲ ಮತ್ತು ಭವಿಷ್ಯದಲ್ಲೂ ಅದು ನಿಧಾನವಾಗುವುದಿಲ್ಲ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಹಲವು ನಿರ್ಧಾರಗಳನ್ನು ಕೈಗೊಂಡಿದೆ ಅವುಗಳಲ್ಲಿ 1200 ಕೋಟಿ ರೂ. ಪ್ಯಾಕೇಜ್ ಮತ್ತು ಅಗತ್ಯವಿರುವವರಿಗೆ ನೆರವಾಗಲು ಹರಿಯಾಣ ಕೊರೊನಾ ಪರಿಹಾರ ನಿಧಿ ಸ್ಥಾಪನೆಯೂ ಸೇರಿದೆ.
  • ಕೇರಳ: ಕೇರಳದ ಶಬರಿಮಲೆ ದೇವಾಲಯದಲ್ಲಿ ಭಕ್ತಾದಿಗಳಿಗೆ ತಿಂಗಳ ಪೂಜಾ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ನೀಡುತ್ತಿಲ್ಲ. ಅಲ್ಲದೆ, ಸೋಮವಾರದಿಂದ ಆರಂಭವಾಗಬೇಕಿದ್ದ ವಾರ್ಷಿಕ ಉತ್ಸವ ಕೂಡ ರದ್ದುಗೊಳಿಸಲಾಗಿದೆ. ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ತಿರುವನಂತಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಗಳಲ್ಲಿ ಇಬ್ಬರು ಕೋವಿಡ್-19 ರೋಗಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧಿ ಆಸ್ಪತ್ರೆ ಅಧಿಕಾರಿಗಳಿಗೆ ಛಿಮಾರಿ ಹಾಕಿದ್ದಾರೆ. ಅಲ್ಲದೆ ಸಂಬಂಧ ತಕ್ಷಣವೇ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿನ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು, ಆರೋಗ್ಯ ಸಚಿವರೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕೋವಿಡ್-19 ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿವೆ. ಇಂದು ರಾಜ್ಯದ ಹೊರಗೆ ಐದು ಮಂದಿ ಕೇರಳದವರು ಕೋವಿಡ್-19ಗೆ ಬಲಿಯಾಗಿದ್ದಾರೆ. ಅವರಲ್ಲಿ ಮೂರು ಮಂದಿ ಗಲ್ಫ್ ನಲ್ಲಿ ಮತ್ತು ಇಬ್ಬರು ಮುಂಬೈನಲ್ಲಿ ಸಾವನ್ನಪ್ಪಿದ್ದಾರೆ.
  • ತಮಿಳುನಾಡು: ಪುದುಚೆರಿಯಲ್ಲಿ  ಹೊಸದಾಗಿ ಒಂದು ಕೋವಿಡ್-19 ಸಾವು ಸಂಭವಿಸಿದೆ. 12 ಹೊಸ ಪ್ರಕರಣಗಳಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆ 157ಕ್ಕೆ ಏರಿಕೆಯಾಗಿದೆ. ತಮಿಳುನಾಡಿನ ಸರ್ಕಾರಿ ಒಡೆತನದ ನಿರಾಶ್ರಿತರ ಕೇಂದ್ರದಲ್ಲಿನ 35 ಮಕ್ಕಳಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿರುವುದರ ಕುರಿತು ಸುಪ್ರೀಂಕೋರ್ಟ್, ರಾಜ್ಯ ಸರ್ಕಾರದಿಂದ ವಸ್ತುಸ್ಥಿತಿ ವರದಿಯನ್ನು ಕೇಳಿದೆ. ಮುಖ್ಯಮಂತ್ರಿಗಳು ಕೋವಿಡ್ ಸಾವಿನ ವಿಚಾರದಲ್ಲಿ ಸರ್ಕಾರ ಯಾವುದೇ ಮಾಹಿತಿಯನ್ನು ಮುಚ್ಚಿಡುತ್ತಿಲ್ಲ ಮತ್ತು ಎಲ್ಲ ವಿವರಗಳನ್ನು ಪಾರದರ್ಶಕವಾಗಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಸೋಂಕು ನಿವಾರಣೆ ಮತ್ತು ಧೂಮೀಕರಣ ಮಾಡುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ಕಚೇರಿಗಳನ್ನು ಎರಡನೇ ಶನಿವಾರವೂ ಬಂದ್ ಮಾಡಲಾಗುವುದು. 1927 ಹೊಸ ಪ್ರಕರಣಗಳು 1008 ಚೇತರಿಕೆ ಮತ್ತು 19 ಸಾವುಗಳು ನಿನ್ನೆ ವರದಿಯಾಗಿವೆ. ಚೆನ್ನೈ ಒಂದರಲ್ಲೇ  1390 ಪ್ರಕರಣಗಳು. ಒಟ್ಟು ಪ್ರಕರಣಗಳು 36841, ಸಕ್ರಿಯ ಪ್ರಕರಣಗಳು: 17179, ಸಾವು: 326, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 13085.
  • ಕರ್ನಾಟಕ: ರಾಜ್ಯ ಸರ್ಕಾರ ಪೂರ್ವ ಪ್ರಾಥಮಿಕದಿಂದ 5ನೇ ತರಗತಿವರೆಗಿನ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ನೇರ ಆನ್ ಲೈನ್ ತರಗತಿ ನಡೆಸುವುದನ್ನು ನಿಷೇಧಿಸಿದೆ. ನಿಮ್ಹಾನ್ಸ್ ವೈದ್ಯರ ಸಲಹೆ ಮೇರೆಗೆ ರಾಜ್ಯ ಸರ್ಕಾರ ನಿರ್ಧಾರವನ್ನು ಕೈಗೊಂಡಿದೆ. ರಾಜ್ಯ ಸರ್ಕಾರ ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರಿಗೆ ಕೋವಿಡ್-19 ಪರಿಹಾರ ಪ್ಯಾಕೇಜ್ ಗಾಗಿ ಸಾರಿಗೆ ಇಲಾಖೆಗೆ 40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಸಮಾಜ ಕಲ್ಯಾಣ ಇಲಾಖೆ, ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯಿಂದ ಅನುಮತಿ ಪಡೆದ ನಂತರ ತನ್ನ ವಸತಿ ಶಾಲೆ ಮತ್ತು ಕಾಲೇಜುಗಳನ್ನು ತೆರೆಯಲಿದೆ. ನಿನ್ನೆ 120 ಹೊಸ ಪ್ರಕರಣಗಳು, 257 ಮಂದಿ ಗುಣಮುಖ, ಮತ್ತು ಮೂರು ಸಾವುಗಳು ಸಂಭವಿಸಿವೆ ಒಟ್ಟು ಪಾಸಿಟಿವ್ ಪ್ರಕರಣಗಳು: 6041, ಸಕ್ರಿಯ ಪ್ರಕರಣಗಳು: 3108, ಸಾವು: 69, ಚೇತರಿಕೆ: 2862.
  • ಆಂಧ್ರಪ್ರದೇಶ: ಕುವೈತ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 114 ತೆಲುಗು ಜನರು ವಿಶಾಖಪಟ್ಟಣಂ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಮುಖ್ಯಮಂತ್ರಿಗಳು, ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ಇನ್ನೂ ಹೆಚ್ಚಿನ ವಿಮಾನಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮೂರು ದಿನಗಳ ಪ್ರಾಯೋಗಿಕ ಅನುಮತಿ ನಂತರ ತಿರುಮಲ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಟಿಟಿಡಿ ಆನ್ ಲೈನ್ ನಲ್ಲಿ 3,000 ಟಿಕೆಟ್ ಗಳನ್ನು ಬಿಡುಗಡೆ ಮಾಡಿದೆ ಮತ್ತು ಹಾಗೆಯೇ 3,000 ಮಂದಿಗೆ ಬೆಳಗ್ಗೆ 8 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 11,602 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 135 ಹೊಸ ಪ್ರಕರಣಗಳು, 65 ಮಂದಿ ಗುಣಮುಖ ಹಾಗೂ ಎರಡು ಸಾವುಗಳು ಸಂಭವಿಸಿವೆ. ಒಟ್ಟು ಪ್ರಕರಣ: 4261. ಸಕ್ರಿಯ: 1641, ಗುಣಮುಖ: 2540, ಸಾವು: 80. ಹೊರ ರಾಜ್ಯಗಳಿಂದ ಪಾಸಿಟಿವ್ ಎಂದು ದೃಢಪಟ್ಟು ರಾಜ್ಯಗಳಿಗೆ ವಾಪಸ್ ಆದವರು 971 ಮಂದಿ. ಅವರಲ್ಲಿ 564 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಕಳೆದ 24 ಗಂಟೆಗಳಲ್ಲಿ 31 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ವಿದೇಶದ 197 ಪ್ರಕರಣಗಳಲ್ಲಿ 176 ಪ್ರಕರಣಗಳು ಸಕ್ರಿಯವಾಗಿ ಮುಂದುವರಿದಿವೆ.
  • ತೆಲಂಗಾಣ: ಗಾಂಧಿ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ಮುಂದುವರಿಸಿದ್ದಾರೆ. ವೈದ್ಯರು ಆಸ್ಪತ್ರೆ ಆವರಣದೊಳಗೆ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಗಾಂಧಿ ಆಸ್ಪತ್ರೆಯಲ್ಲಿ ಎಲ್ಲ ಕೋವಿಡ್ ರೋಗಿಗಳ ವಾರ್ಡ್ ಗಳಲ್ಲಿ ನಿತ್ಯದ ಮತ್ತು ಇತರೆ ಚಿಕಿತ್ಸಾ ಕರ್ತವ್ಯಗಳನ್ನು ಬಹಿಷ್ಕರಿಸಲಾಗಿದೆ. ತೆಲಂಗಾಣ ಸಚಿವ ಸಂಪುಟ, ಕೋವಿಡ್-19ಗೆ ಖಾಸಗಿ ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ಕೈಗಾರಿಕಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಹೇಳಿದ್ದಾರೆ. 11ನೇ ಜೂನ್ ವರೆಗೆ ಒಟ್ಟು ಪ್ರಕರಣಗಳು 4111; ಈವರೆಗೆ 448 ವಲಸಿಗರು ಮತ್ತು ವಿದೇಶದಿಂದ ವಾಪಸ್ ಆದವರಲ್ಲಿ ಪಾಸಿಟಿವ್ ಕಂಡುಬಂದಿದೆ.
  • ಮಹಾರಾಷ್ಟ್ರ: ರಾಜ್ಯದಲ್ಲಿ ಬುಧವಾರ 3254 ಹೊಸ ಪ್ರಕರಣಗಳು ದೃಢಪಡುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 94,041ಕ್ಕೆ ಏರಿಕೆಯಾಗಿದೆ. 46,074  ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದ್ದು, 44,517 ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಲ್ಲದೆ ಬುಧವಾರ 149 ಮಂದಿ ಮೃತಪಟ್ಟಿದ್ದು, ಇದು ರಾಜ್ಯದಲ್ಲಿ ಒಂದೇ ದಿನ ಸಾವನ್ನಪ್ಪಿದವರ ಸಂಖ್ಯೆಯ ದೊಡ್ಡ ಪ್ರಕರಣವಾಗಿದೆ. ಮುಂಬೈನ ಹಾಟ್ ಸ್ಪಾಟ್ ಗಳಲ್ಲಿ ಬುಧವಾರ 1567 ಹೊಸ ಪ್ರಕರಣ ಪತ್ತೆಯಾಗಿದ್ದು, 97 ಸಾವು ಸಂಭವಿಸಿವೆ. ರಾಜ್ಯದಲ್ಲಿ ಕೋವಿಡ್-19 ರೋಗಿಗಳ ಪ್ರಕರಣಗಳು ಹೆಚ್ಚಾಗುತ್ತಿರುವ ಪ್ರವೃತ್ತಿ ಮುಂದುವರಿದಿದ್ದು, ಗುಣಮುಖರಾಗುತ್ತಿರುವವರ ಪ್ರಮಾಣ ಸುಧಾರಿಸುತ್ತಿದೆ ಮತ್ತು ಸಾವಿನ ಪ್ರಮಾಣ ಬಹುತೇಕ ರಾಷ್ಟ್ರೀಯ ಸರಾಸರಿಗೆ ಸಮನಾಗಿದೆ. ರಾಜ್ಯದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಸುಧಾರಿಸಿದ್ದು, ಮುಂಬೈನ ಹಾಟ್ ಸ್ಪಾಟ್ ಗಳಾದ ಧಾರಾವಿ, ಮತ್ತು ದಾದರ್ ಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವುದು ರಾಜ್ಯ ಸರ್ಕಾರಕ್ಕೆ ಸ್ವಲ್ಪಮಟ್ಟಿನ ನೆಮ್ಮದಿ ತಂದಿದೆ.
  • ಗುಜರಾತ್: ರಾಜ್ಯದಲ್ಲಿ ಬುಧನವಾರ 21 ಜಿಲ್ಲೆಗಳಲ್ಲಿ 510 ಹೊಸ ಪ್ರಕರಣಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗುವುದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ರೋಗಿಗಳ ಒಟ್ಟು ಸಂಖ್ಯೆ 21,554ಕ್ಕೆ ಏರಿಕೆಯಾಗಿದೆ. ಬುಧವಾರ ರಾಜ್ಯದಲ್ಲಿ 370ಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ಆಸ್ಪತ್ರೆಯಿಂದ ಈವರೆಗೆ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 4,743ಕ್ಕೆ ಏರಿಕೆಯಾಗಿದೆ. ಪ್ರಸ್ತುತ 5,464 ಸಕ್ರಿಯ ಪ್ರಕರಣಗಳಿವೆ.
  • ರಾಜಸ್ಥಾನ್ : ಇಂದು ಮುಂಜಾನೆ ಅವಧಿಯಲ್ಲಿ 51 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು 11,368ಕ್ಕೆ ಏರಿಕೆಯಾಗಿದೆ ಈವರೆಗೆ ಒಟ್ಟು 8502 ರೋಗಿಗಳು ಗುಣಮುಖರಾಗಿದ್ದಾರೆ. ಆರೋಗ್ಯ ಸಚಿವರಾದ ಡಾ. ರಘು ಶರ್ಮಾ, ಕಳೆದ 8 ದಿನಗಳಿಂದೀಚೆಗೆ ಕೋವಿಡ್-19 ಪ್ರಕರಣಗಳು ಕ್ಷಿಪ್ರವಾಗಿ ಹೆಚ್ಚಳವಾಗುತ್ತಿವೆ. ಪ್ರತಿ ದಿನ ಸರಾಸರಿ 268 ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಿದ್ದಾರೆ.
  • ಮಧ್ಯಪ್ರದೇಶ: ಬುಧವಾರ ರಾಜ್ಯದಲ್ಲಿ 200 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 10,049ಕ್ಕೆ ಏರಿಕೆಯಾಗಿದೆ; ಈವರೆಗೆ 427 ರೋಗಿಗಳು ಮೃತಪಟ್ಟಿದ್ದಾರೆ. ಬಹುತೇಕ ಹೊಸ ಸೋಂಕಿತ ಪ್ರಕರಣಗಳು ಹಾಟ್ ಸ್ಪಾಟ್ ಪ್ರದೇಶಗಳಾದ ಇಂದೋರ್, ಭೂಪಾಲ್ ಮತ್ತು ರತ್ಲಮ್ ಜಿಲ್ಲೆಗಳಾಗಿವೆ. ಈವರೆಗೆ 6892 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ 2,730 ಪ್ರಕರಣಗಳು ಸಕ್ರಿಯವಾಗಿವೆ. ರಾಜ್ಯದಲ್ಲಿ ಈವರೆಗೆ 2 ಲಕ್ಷ 28 ಸಾವಿರಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಮಧ್ಯಪ್ರದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.68.6ರಷ್ಟಿದ್ದು, ಇದು ರಾಜಸ್ಥಾನದ ನಂತರ ದೇಶದಲ್ಲಿ ಎರಡನೇ ಅತಿದೊಡ್ಡ ರಾಜ್ಯವಾಗಿದೆ.
  • ಛತ್ತೀಸ್ ಗಢ: ಬುಧವಾರ ರಾಜ್ಯದಲ್ಲಿ 114 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಕೋವಿಡ್-19 ಪ್ರಕರಣಗಳ ಒಟ್ಟು ಸಂಖ್ಯೆ 1,359ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳು 958. 402 ರೋಗಿಗಳು ಗುಣಮುಖರಾಗಿದ್ದಾರೆ ಮತ್ತು ರಾಜ್ಯದಲ್ಲಿ ಈವರೆಗೆ 6 ಮಂದಿ ಮೃತಪಟ್ಟಿದ್ದಾರೆ.
  • ಗೋವಾ: ಬುಧವಾರ ರಾಜ್ಯದಲ್ಲಿ 28 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 387ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 320.

ವಾಸ್ತವ ಪರಿಶೀಲನೆ

Description: Image

***



(Release ID: 1631050) Visitor Counter : 231