ಸಂಪುಟ

ಕೋಲ್ಕೊತ್ತ ಬಂದರು ಮಂಡಳಿಯನ್ನು ಶ್ಯಾಂ ಪ್ರಸಾದ್ ಮುಖರ್ಜಿ ಮಂಡಳಿಯಾಗಿ ಮರುನಾಮಕರಣ ಮಾಡಲು ಸಂಪುಟದ ಅಂಗೀಕಾರ

Posted On: 03 JUN 2020 5:13PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಕೋಲ್ಕೊತ್ತಾ ಬಂದರನ್ನು ಶ್ಯಾಂ ಪ್ರಸಾದ್ ಮುಖರ್ಜಿ ಬಂದರಾಗಿ ಮರುನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ.

2020  ಫೆಬ್ರವರಿ 25 ರಂದು ನಡೆದ ಕೋಲ್ಕೊತ್ತಾ ಬಂದರು ಮಂಡಳಿಯ ಸಭೆಯಲ್ಲಿ ಬೋರ್ಡ್ ಆಫ್ ಟ್ರಸ್ಟೀಸ್ ಕೋಲ್ಕೊತ್ತಾ ಬಂದರನ್ನು ಶ್ಯಾಂ ಪ್ರಸಾದ್ ಮುಖರ್ಜಿ ಬಂದರುಕೋಲ್ಕೊತ್ತಾ ಎಂದು ಮರುನಾಮಕರಣ ಮಾಡುವುದಕ್ಕೆ ನಿರ್ಣಯವನ್ನು ಅಂಗೀಕರಿಸಿತ್ತುಜನಸಮೂಹದ ನಾಯಕಶಿಕ್ಷಣ ತಜ್ಞಚಿಂತಕ ಮತ್ತು ಪ್ರಖ್ಯಾತ ನ್ಯಾಯಶಾಸ್ತ್ರಜ್ಞರಾಗಿದ್ದ ಶ್ಯಾಂ ಪ್ರಸಾದ್  ಅವರ  ಬಹು ಆಯಾಮದ ವ್ಯಕ್ತಿತ್ವವನ್ನು ಪರಿಗಣಿಸಿ  ತೀರ್ಮಾನಕ್ಕೆ ಬರಲಾಗಿತ್ತು.

ಕೋಲ್ಕೊತ್ತಾ ಬಂದರಿನ ನೂರೈವತ್ತನೇ ವರ್ಷಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ  2020  ಜನವರಿ 12 ರಂದು ಪಶ್ಚಿಮ ಬಂಗಾಳದ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಕೋಲ್ಕೊತ್ತಾ ಬಂದರನ್ನು ಡಾಶ್ಯಾಂ ಪ್ರಸಾದ್ ಮುಖರ್ಜಿ ಅವರ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಘೋಷಿಸಲಾಗಿತ್ತುಪಶ್ಚಿಮ ಬಂಗಾಳದವರಾದ ಶ್ಯಾಂ ಪ್ರಸಾದ ಮುಖರ್ಜಿ ಅವರು ರಾಷ್ಟ್ರೀಯ ಸಮಗ್ರತೆಗಾಗಿ ಮುಂಚೂಣಿ ಹೋರಾಟ ಮಾಡಿದ್ದರುಬೆಂಗಾಲದ ಅಭಿವೃದ್ದಿಯ ಕನಸುಗಾರರಾಗಿದ್ದರುಕೈಗಾರಿಕೀಕರಣಕ್ಕೆ ಪ್ರೇರಣೆಯಾಗಿದ್ದರು ಮತ್ತು ಒಂದು ರಾಷ್ಟ್ರಕ್ಕೆ ಒಂದೇ ಕಾನೂನು ಎಂಬುದರ  ಪ್ರಬಲ ಪ್ರತಿಪಾದಕರಾಗಿದ್ದರು.

ಹಿನ್ನೆಲೆ :

ಕೋಲ್ಕೊತ್ತಾ ಬಂದರು ದೇಶದ ಮೊದಲ ಪ್ರಮುಖ ಬಂದರು ಮತ್ತು ಅದು ದೇಶದ  ಏಕೈಕ ನದಿ ತೀರದ ಬಂದರು ಆಗಿದೆ. 1870  ಅಕ್ಟೋಬರ್ 17 ರಂದು ಕಲ್ಕತ್ತಾ ಬಂದರಿನ ಅಭಿವೃದ್ದಿಗೆ ಕಮಿಶನರುಗಳ ನೇಮಕವನ್ನು 1870  ಕಾಯ್ದೆ ಪ್ರಕಾರ ಮಾಡುವ ಮೂಲಕ ಅದನ್ನು ಮಂಡಳಿಯ (ಟ್ರಸ್ಟ್ ವ್ಯಾಪ್ತಿಗೆ ತರಲಾಯಿತುಭಾರತೀಯ ಬಂದರುಗಳ ಕಾಯ್ದೆ, 1908  ಪ್ರಮುಖ ಬಂದರುಗಳ ಭಾಗ  ಮೊದಲ ಪರಿಚ್ಚೇಧದ ಕ್ರಮ ಸಂಖ್ಯೆ1  ರಲ್ಲಿ  ಬಂದರು ಇದೆಮತ್ತು ಇದರ ಆಡಳಿತವನ್ನು ಪ್ರಮುಖ ಬಂದರು ಮಂಡಳಿಗಳ ಕಾಯ್ದೆ 1963ರಡಿಯಲ್ಲಿ ನಿರ್ವಹಿಸಲಾಗುತ್ತದೆಕೋಲ್ಕೊತ್ತಾ ಬಂದರು 150 ವರ್ಷಗಳನ್ನು ಪೂರೈಸುತ್ತಿದ್ದುಮತ್ತು ಅದರ  ಪ್ರಯಾಣದಲ್ಲಿ ಅದು ವ್ಯಾಪಾರವಾಣಿಜ್ಯಮತ್ತು ಆರ್ಥಿಕ ಅಭಿವೃದ್ದಿಯಲ್ಲಿ ಭಾರತದ ಮಹಾದ್ವಾರವಾಗಿದೆಅದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೂಒಂದನೇ ಮಹಾಯುದ್ದ ಮತ್ತು ಎರಡನೆ ಮಹಾಯುದ್ದಗಳಿಗೂ ಸಾಕ್ಷಿಯಾಗಿದೆ ಮತ್ತು ದೇಶದ ಅದರಲ್ಲೂ ಪೂರ್ವ ಭಾರತದ ಸಮಾಜೋ-ಸಾಂಸ್ಕೃತಿಕ ಬದಲಾವಣೆಗಳಿಗೂ ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ಭಾರತದಲ್ಲಿಯ ಪ್ರಮುಖ ಬಂದರುಗಳನ್ನು ಒಂದೋ ನಗರದ ಹೆಸರಿಟ್ಟು ಅವುಗಳಿಗೆ ನಾಮಕರಣ ಮಾಡಲಾಗಿದೆ ಅಥವಾ ಅವುಗಳಿರುವ ಪಟ್ಟಣದ ಹೆಸರಿಡಲಾಗಿದೆಕೆಲವು ಬಂದರುಗಳಿಗೆ ವಿಶೇಷ ಪ್ರಕರಣವಾಗಿ ಅಥವಾ ವ್ಯಾಪಕ ಪರಿಶೀಲನೆ ಬಳಿಕ ಪ್ರಮುಖ ನಾಯಕರು ನೀಡಿದ ಕೊಡುಗೆಯನ್ನು ಅನುಲಕ್ಷಿಸಿ ಹಿಂದಿನ ಪ್ರಮುಖ ನಾಯಕರ ಹೆಸರಿನೊಂದಿಗೆ ಮರುನಾಮಕರಣ ಮಾಡಲಾಗಿದೆನವ್ ಶೇವಾ ಬಂದರನ್ನು 1989 ರಲ್ಲಿ ಸರಕಾರವು ಜವಾಹರಲಾಲ್ ನೆಹರೂ ಬಂದರು ಮಂಡಳಿ ಎಂದು ನಾಮಕರಣ ಮಾಡಿದೆಟ್ಯುಟಿಕೋರಿನ್ ಬಂದರು ಮಂಡಳಿಯನ್ನು 2011 ರಲ್ಲಿ ವಿ. ಚಿದಂಬರಂ ಬಂದರು ಮಂಡಳಿ ಎಂದು ಮರು ನಾಮಕರಣ ಮಾಡಲಾಗಿದೆಮತ್ತು ಎನ್ನೋರ್ ಬಂದರು ಲಿಮಿಟೆಡ್ ಅನ್ನು  ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಶ್ರೀಕೆಕಾಮರಾಜರ್ ಅವರ ಗೌರವಾರ್ಥ ಕಾಮರಾಜರ್ ಬಂದರು ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿದೆಇತ್ತೀಚೆಗೆ 2017ರಲ್ಲಿ ಕಾಂಡ್ಲಾ ಬಂದರನ್ನು ದೀನದಯಾಳ್ ಬಂದರು ಎಂದು ಮರುನಾಮಕರಣ ಮಾಡಲಾಗಿದೆಇದಲ್ಲದೆ ಹಲವಾರು ವಿಮಾನ ನಿಲ್ದಾಣಗಳಿಗೆ ಭಾರತದ ರಾಷ್ಟ್ರೀಯ ನಾಯಕರ ಹೆಸರುಗಳನ್ನು ಇಡಲಾಗಿದೆ.  

***(Release ID: 1629326) Visitor Counter : 42