ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಅಪ್ ಡೇಟ್ಸ್

Posted On: 18 APR 2020 6:19PM by PIB Bengaluru

ಕೋವಿಡ್-19 ಅಪ್ ಡೇಟ್ಸ್

 

ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗೆ ಹಲವಾರು ಕ್ರಮಗಳನ್ನು ಭಾರತ ಸರ್ಕಾರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳುತ್ತಿವೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಕ್ರಿಯಾ ಯೋಜನೆಯ ಅನುಷ್ಠಾನವು 47 ಜಿಲ್ಲೆಗಳಲ್ಲಿ 23 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತಿದೆ. ಕೊಡಗ್ಗು (ಕರ್ನಾಟಕ) ಹೊಸ ಜಿಲ್ಲೆಯಾಗಿದ್ದು, ಮಹೇ (ಪುದುಚೇರಿ) ಜೊತೆಗೆ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. 12 ರಾಜ್ಯಗಳಲ್ಲಿ 22 ಹೊಸ ಜಿಲ್ಲೆಗಳು ಕಳೆದ 14 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳನ್ನು ವರದಿ ಮಾಡಿಲ್ಲ, ಅವುಗಳೆಂದರೆ:

  • ಲಖಿಸರೈ, ಗೋಪಾಲ್ಗಂಜ್ ಮತ್ತು ಭಾಗಲ್ಪುರ್ - ಬಿಹಾರ
  • ಧೋಲ್ಪುರ್ ಮತ್ತು ಉದಯಪುರ - ರಾಜಸ್ಥಾನ
  • ಪುಲ್ವಾಮಾ - ಜಮ್ಮು ಮತ್ತು ಕಾಶ್ಮೀರದ
  • ಥೌಬಲ್ ಮಣಿಪುರ
  • ಚಿತ್ರದುರ್ಗ ಕರ್ನಾಟಕ
  • ಹೋಶಿಯಾರ್ಪುರ - ಪಂಜಾಬ್
  • ರೋಹ್ಟಕ್ ಮತ್ತು ಚಾರ್ಖಿ ದಾದ್ರಿ ಹರಿಯಾಣ
  • ಲೋಹಿತ್ - ಅರುಣಾಚಲ ಪ್ರದೇಶ
  • ಭಾರ್ಡಕ್ ಮತ್ತು ಪುರಿ - ಒಡಿಶಾ
  • ಕರೀಮ್ಗಂಜ್, ಗೋಲಘ್ತಾ, ಕಮ್ರೂಪ್ ಗ್ರಾಮೀಣ, ನಲ್ಬಾರಿ ಮತ್ತು ದಕ್ಷಿಣ ಸಲ್ಮರಾ ಅಸ್ಸಾಂ
  • ಜಲ್ ಪೈಗುರಿ ಮತ್ತು ಕಾಲಿಂಪೋಂಗ್ - ಪಶ್ಚಿಮ ಬಂಗಾಳ
  • ವಿಶಾಖಪಟ್ಟಣಂ - ಆಂಧ್ರಪ್ರದೇಶ

ಪ್ರಸ್ತುತ ಕೋವಿಡ್-19 ಮರಣ ಪ್ರಮಾಣವು 3.3% ಆಗಿದೆ. ಸತ್ತವರ ದತ್ತಾಂಶದ ಹೆಚ್ಚಿನ ವಿಶ್ಲೇಷಣೆಯು ಇದನ್ನು ಸೂಚಿಸುತ್ತದೆ:

  • 14.4% ಜನರು 0-45 ವರ್ಷ ವಯಸ್ಸಿನವರು
  • 10.3% 45 -60 ವರ್ಷ ವಯಸ್ಸಿನವರು
  • 33.1% 60-75 ವರ್ಷ ವಯಸ್ಸಿನವರು
  • 42.2% ರಷ್ಟು 75 ವರ್ಷ ಮತ್ತು ಮೇಲ್ಪಟ್ಟವರು

75.3% ಪ್ರಕರಣಗಳು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸೇರಿವೆ ಎಂದು ಮಾಹಿತಿಯು ತೋರಿಸುತ್ತದೆ. 83% ಪ್ರಕರಣಗಳಲ್ಲಿ ಒಂದಕ್ಕಿಂದ ಹೆಚ್ಚು ಖಾಯಿಲೆಗಳನ್ನು ಹೊಂದಿದ್ದವರು. ವಯಸ್ಸಾದ ಜನರು ಮತ್ತು ಒಂದಕ್ಕಿಂದ ಹೆಚ್ಚು ಖಾಯಿಲೆಗಳನ್ನು ಹೊಂದಿರುವ ಜನರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ಹಿಂದೆ ಮುಖ್ಯವಾಗಿ ಹೇಳಲಾದ ಸಂಗತಿಗಳನ್ನು ಇದು ತೆರೆದಿಡುತ್ತದೆ.

ವಿಶ್ವಾದ್ಯಂತ ಪರೀಕ್ಷಾ ವಿಧಾನವನ್ನು ಪರಿಶೀಲಿಸಿದ ನಂತರ, ಐಸಿಎಂಆರ್ ರಾಷ್ಟ್ರೀಯ ಕಾರ್ಯಪಡೆಯು ಎಲ್ಲಾ ರಾಜ್ಯಗಳಿಗೆ ಮಾರ್ಗಸೂಚಿಯನ್ನು ನೀಡಿದೆ. ವಿವರವಾದ ಮಾರ್ಗಸೂಚಿಯನ್ನು ಇಲ್ಲಿ ನೋಡಬಹುದು:

https://www.mohfw.gov.in/pdf/ProtocolRapidAntibodytest.pdf

ಹೆಚ್ಚುವರಿಯಾಗಿ, ಯಾವುದೇ ಕ್ಷಿಪ್ರ ಪರೀಕ್ಷೆಯನ್ನು ಪ್ರಾರಂಭಿಸುವ ಮೊದಲು, ರಾಜ್ಯಗಳು ಕೋವಿಡ್-19 ಕ್ಕಾಗಿ ಪರೀಕ್ಷೆಗಳಿಗೆ ಸಂಬಂಧಿಸಿದ ಯಾವುದೇ ಡೇಟಾವನ್ನು ICMR ವೆಬ್ಸೈಟ್ನಲ್ಲಿ (https://covid19cc.nic.in/ICMR/ ) ನೋಂದಾಯಿಸಿಕೊಳ್ಳಬೇಕು.

ದೇಶದಲ್ಲಿ ಕೋವಿಡ್-19 ಕ್ಕಾಗಿ ಒಟ್ಟು 14,378 ದೃಢಪಡಿಸಿದ ಪ್ರಕರಣಗಳು ವರದಿಯಾಗಿವೆ. 1992 ವ್ಯಕ್ತಿಗಳು ಅಂದರೆ ಒಟ್ಟು ಪ್ರಕರಣಗಳಲ್ಲಿ 13.82% ರಷ್ಟು ಜನರು ಗುಣಮುಖರಾಗಿದ್ದಾರೆ / ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1615924) Visitor Counter : 246