PIB Headquarters

ಕೋವಿಡ್ -19: ಪಿ ಐ ಬಿ ದೈನಿಕ ವರದಿ

Posted On: 08 APR 2020 6:51PM by PIB Bengaluru

ಕೋವಿಡ್ -19: ಪಿ ಬಿ ದೈನಿಕ ವರದಿ

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ)

 

ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಈವರೆಗೆ 5194 ಕೋವಿಡ್ -19 ಪ್ರಕರಣಗಳು ದೃಢಪಟ್ಟಿದ್ದು,  149 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. 402 ಜನರು ಗುಣಮುಖರಾಗಿ/ ಚೇತರಿಕೆಯ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಪರಿಣಾಮಕಾರಿಯಾಗಿ ಲಾಕ್ ಡೌನ್ ಕ್ರಮಗಳನ್ನು ಏಕರೂಪವಾಗಿ ಅನುಷ್ಠಾನವಾಗುತ್ತಿರುವುದನ್ನು ಮತ್ತು ನಾಗರಿಕರಿಂದ ಸಾಮಾಜಿಕ ಅಂತರದ ಅನುಸರಣೆಯ ಅಭ್ಯಾಸ ಖಾತ್ರಿಪಡಿಸಿಕೊಳ್ಳುವತ್ತ ಸರ್ಕಾರ ಗಮನ ಹರಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ಎದುರಿಸಲು ಸಹಾಯ ಮಾಡುತ್ತದೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612358

ರಾಜಕೀಯ ನಾಯಕರುಗಳೊಂದಿಗೆ ಪ್ರಧಾನಿ ಸಂವಾದ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಸತ್ತಿನ ವಿವಿಧ ಪಕ್ಷಗಳ ಸಭಾ ನಾಯಕರುಗಳೊಂದಿಗೆ ಸಂವಾದ ನಡೆಸಿದರು. ತಮ್ಮ ಸರ್ಕಾರದ ಪ್ರಥಮ ಆದ್ಯತೆ ಪ್ರತಿಯೊಬ್ಬರ ಪ್ರಾಣ ಉಳಿಸುವುದಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರಸಕ್ತ ಸನ್ನಿವೇಶವು ಮಾನವ ಕುಲದ ಇತಿಹಾಸದಲ್ಲೇ ಯುಗ ಬದಲಾವಣೆಯ ಘಟನೆಯಾಗಿದೆ ಹೀಗಾಗಿ ನಾವು ಇದರ ಪರಿಣಾಮಗಳನ್ನು ಎದುರಿಸಲು ವಿಕಸಿಸುವ ಅಗತ್ಯವಿದೆ ಎಂದರು. ಈ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೇಂದ್ರದೊಂದಿಗೆ ಒಗ್ಗೂಡಿ ಶ್ರಮಿಸುತ್ತಿರುವ ರಾಜ್ಯ ಸರ್ಕಾರಗಳನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು. ಈ ಸಮರದಲ್ಲಿ  ಒಗ್ಗೂಡಿ ಮುಂಚೂಣಿಗೆ ಬಂದ ಎಲ್ಲಾ ಸಕಾರಾತ್ಮಕ ರಾಜಕಾರಣಕ್ಕೆ ದೇಶ ಸಾಕ್ಷಿಯಾಗಿದೆ ಎಂದು ಅವರು ಉಲ್ಲೇಖಿಸಿದರು. ನಾಯಕರುಗಳು ತಮ್ಮ ಪ್ರತಿಕ್ರಿಯೆಯನ್ನು ನೀಡಿದರು, ನೀತಿ, ಕ್ರಮಗಳು ಮತ್ತು ಲಾಕ್ ಡೌನ್ ನಂತರದ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಯಿತು.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612257

ಎಂ.ಎಚ್.ಎ. ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದು, ಅವಶ್ಯಕ ವಸ್ತುಗಳ ಕಾಯಿದೆ 1955ನ್ನು ಜಾರಿ ಮಾಡುವ ಮೂಲಕ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಾತ್ರಿ ಪಡಿಸುವಂತೆ ಸೂಚಿಸಿದೆ

ದೇಶದಲ್ಲಿ ಅಗತ್ಯ ವಸ್ತುಗಳ ಸುಗಮ ಪೂರೈಕೆಯ ನಿರ್ವಹಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು,  ಅವಶ್ಯಕ ವಸ್ತುಗಳ ಕಾಯಿದೆ 1955 ಜಾರಿ ಮಾಡುವ ಮೂಲಕ ಅಗತ್ಯ ವಸ್ತುಗಳ ಲಭ್ಯತೆ ಖಚಿತ ಪಡಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಈ ಕ್ರಮಗಳಲ್ಲಿ ದಾಸ್ತಾನು ಮತ್ತು ದರದ ಮೇಲೆ ಮಿತಿ ಹೇರುವುದು, ಉತ್ಪಾದನೆ ಹೆಚ್ಚಳ, ವ್ಯಾಪಾರಸ್ಥರ ಲೆಕ್ಕಪತ್ರಗಳ ಪರಿಶೀಲನೆ ಹಾಗೂ ಇತರ ಕೆಲವು ಕ್ರಮಗಳು ಸೇರಿದೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612210

ಎಂ.ಎಸ್.ಎಂ.ಇ. ಸೇರಿದಂತೆ 1 ಲಕ್ಷ ವಾಣಿಜ್ಯ ಸಂಸ್ಥೆಗಳಿಗೆ ಪ್ರಯೋಜನ ಒದಗಿಸಲು 5 ಲಕ್ಷ ರೂ.ವರೆಗಿನ ಎಲ್ಲ  ಆದಾಯತೆರಿಗೆ  ಮರು ಪಾವತಿ ಬಾಕಿ ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ, ಎಲ್ಲ ಜಿಎಸ್ಟಿ ಮತ್ತು ಸೀಮಾಸುಂಕ ಮರುಪಾವತಿಯ ಹಣವೂ ಬಿಡುಗಡೆ

ಸುಮಾರು 14 ಲಕ್ಷ ತೆರಿಗೆದಾರರು ಆದಾಯ ತೆರಿಗೆ ಇಲಾಖೆ ಮರುಪಾವತಿಯ ಪ್ರಯೋಜನ ಪಡೆಯಲಿದ್ದಾರೆ. ಒಟ್ಟು 18,000 ಕೋಟಿ ರೂ. ಮರುಪಾವತಿದೆ ತಕ್ಷಣ ಅನುಮೋದನೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612331

ಕೋವಿಡ್ 19 ಸವಾಲು ಎದುರಿಸಲು 2500 ವೈದ್ಯರು ಮತ್ತು 35000 ಅರೆ ವೈದ್ಯಕೀಯ ಸಿಬ್ಬಂದಿಯ್ನು ನಿಯೋಜಿಸಿದ ಭಾರತೀಯ ರೈಲ್ವೆ

ಭಾರತೀಯ ರೈಲ್ವೆ ಭಾರತ ಸರ್ಕಾರದ ಆರೋಗ್ಯ ಆರೈಕೆ ಪ್ರಯತ್ನಗಳಿಗೆ ಪೂರಕವಾಗಿ ತನ್ನ ಸಕಲ ಪ್ರಯತ್ನ ಮಾಡುತ್ತಿದೆ. ಇದರಲ್ಲಿ ಹಾಲಿ ರೈಲ್ವೆ ಆಸ್ಪತ್ರೆಗಳನ್ನು ಕೋವಿಡ್ 19ರ ಅಗತ್ಯಕ್ಕೆ ಸಜ್ಜುಗೊಳಿಸುವುದು, ತುರ್ತು ಸ್ಥಿತಿ ಎದುರಿಸಲು ಆಸ್ಪತ್ರೆಯ ಹಾಸಿಗಳನ್ನು ಮೀಸಲಿಡುವುದು, ಹೆಚ್ಚುವರಿ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ನೇಮಕಾತಿ, ಪ್ರಯಾಣಿಕರ ಬೋಗಿಗಳನ್ನು ಪ್ರತ್ಯೇಕೀಕರಣ ವಾರ್ಡ್ ಗಳಾಗಿ ಪರಿವರ್ತಿಸುವುದು, ವೈದ್ಯಕೀಯ ಸಾಧನಗಳ ಲಭ್ಯತೆ , ಪಿಪಿಇಗಳು ಮತ್ತು ವೆಂಟಿಲೇಟರ್ ಗಳ ಆಂತರಿಕ ಉತ್ಪಾದನೆ ಇತ್ಯಾದಿ ಸೇರಿವೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612377

ಕೊರೋನಾ ವೈರಾಣು (ಕೋವಿಡ್ -19) ವಿರುದ್ಧದ ಹೋರಾಟಕ್ಕೆ ತನ್ನ ಬೆಂಬಲ ಮುಂದುವರಿಸಿದ ಐ.ಎ.ಎಫ್.

ಕಳೆದ ಕೆಲವು ದಿನಗಳಿಂದ ಐ.ಎ.ಎಫ್ ನೋಡಲ್ ಕೇಂದ್ರಗಳಿಂದ ವೈದ್ಯಕೀಯ ಪೂರೈಕೆ ಮತ್ತು ಸರಕುಗಳನ್ನು ಮಣಿಪುರ, ನಾಗಾಲ್ಯಾಂಡ್ ಮತ್ತು ಗ್ಯಾಂಗ್ಟೋಕ್, ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಗೆ ವಾಯು ಮಾರ್ಗದಲ್ಲಿ ಸಾಗಿಸಿದೆ. ಇದರ ಜೊತೆಗೆ ಎಎನ್ 32 ವಿಮಾನ, 2020ರ ಏಪ್ರಿಲ್ 6ರಂದು ಒಡಿಶಾದಲ್ಲಿ ಪ್ರಯೋಗಾಲಯ ಮತ್ತು ಚಿಕಿತ್ಸಾ ಸೌಲಭ್ಯ ಸ್ಥಾಪನೆಗಾಗಿ ಚೆನ್ನೈನಿಂದ ಭುವನೇಶ್ವರಕ್ಕೆ ಸಿಬ್ಬಂದಿ ಮತ್ತು 3500 ಕೆ.ಜಿ. ವೈದ್ಯಕೀಯ ಸಲಕರಣೆಗಳನ್ನು ಸಾಗಿಸಿದೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612092

ಲೈಫ್ ಲೈನ್ ಉಡಾನ್ ವಿಮಾನಗಳ ಮೂಲಕ 2020ರ ಏಪ್ರಿಲ್ ರಂದು 39 ಟನ್ ಗೂ ಅಧಿಕ ವೈದ್ಯಕೀಯ ಪೂರೈಕೆಯನ್ನು ದೇಶದಾದ್ಯಂತ ವಿತರಣೆ

ಲೈಫ್ ಲೈನ್ ಉಡಾನ್ ವಿಮಾನಗಳು 39.3ಟನ್ ವೈದ್ಯಕೀಯ ಪೂರೈಕೆಯನ್ನು ದೇಶದಾದ್ಯಂತ 2020ರ ಏಪ್ರಿಲ್ ರಂದು ಮಾಡಿವೆ. ಈ ವಿಮಾನಗಳು ಒಟ್ಟು 240 ಟನ್ ವಸ್ತುಗಳನ್ನು ಕೋವಿಡ್ -19 ಲಾಕ್ ಡೌನ್ ಅವಧಿಯಲ್ಲಿ ಪೂರೈಸಿದೆ. ಈ ದಿನಾಂಕದವರೆಗೆ 161 ವಿಮಾನಗಳು ಉಡಾನ್ ಲೈಫ್ ಲೈನ್ ಅಡಿ ಕಾರ್ಯಾಚರಣೆ ಮಾಡಿದ್ದು 1,41,080 ಕಿಲೋ ಮೀಟರ್ ಕ್ರಮಿಸಿವೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612337

ಲಾಕ್‌ಡೌನ್ ಸಮಯದಲ್ಲಿ ಸೆಣಬಿನ ಗಿರಣಿಗಳನ್ನು ಮುಚ್ಚಿರುವುದರಿಂದ ಎದುರಾಗಿರುವ ಆಹಾರ ಧಾನ್ಯಗಳ ಪ್ಯಾಕೇಜಿಂಗ್ ಬಿಕ್ಕಟ್ಟು ನಿವಾರಿಸಲು ಜವಳಿ ಸಚಿವಾಲಯವು ಎಚ್‌ಡಿಪಿಇ/ ಪಿಪಿ ಚೀಲಗಳಿಗೆ ಮಿತಿಯನ್ನು ವಿಸ್ತರಿಸಿದೆ

ಲಾಕ್ ಡೌನ್ ವೇಳೆ ಸೆಣಬು ಕಾರ್ಖಾನೆಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಪ್ಯಾಂಕಿಂಗ್ ಮಾಡಲು ಎದುರಾಗಿರುವ ಬಿಕ್ಕಟ್ಟನ್ನು ನಿವಾರಿಸಲು ಮತ್ತು ಗೋಧಿ ಬೆಳೆಗಾರರಿಗೆ ತಮ್ಮ ಉತ್ಪನ್ನವನ್ನು ರಕ್ಷಿಸಲು ಪರ್ಯಾಯ ಪ್ಯಾಕೇಜಿಂಗ್ ಚೀಲಗಳನ್ನು ಪೂರೈಸಲು ಜವಳಿ ಸಚಿವಾಲಯವು ಎಚ್.ಡಿ.ಪಿಇ/ಪಿಪಿ ಬ್ಯಾಗ್ ಗಳ ತಯಾರಿಕೆಗಾಗಿ ಗರಿಷ್ಠ ಅನುಮತಿ ಮಿತಿಯನ್ನು ಮಾರ್ಚ್ 26, 2020 ರಂದು 1.80 ಲಕ್ಷ ಬೇಲ್ ಗಳಿಗೆ ಮತ್ತು 2020 ರ ಏಪ್ರಿಲ್ 6 ರಂದು 0.82 ಲಕ್ಷ ಬೇಲ್ ಗಳಿಗೆ ಸಡಿಲಿಸಿದೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612183

ಪ್ರಾಮಾಣಿಕವಾಗಿ ಕಿರು ಅರಣ್ಯ ಉತ್ಪನ್ನಗಳನ್ನು ಎಂ.ಎಸ್.ಪಿ.ಯಲ್ಲಿ ಖರೀದಿಸಲು ಎಲ್ಲ ರಾಜ್ಯಗಳ ನೋಡಲ್ ಏಜೆನ್ಸಿಗಳಿಗೆ ಸೂಚಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಶ್ರೀ ಅರ್ಜುನ್ ಮುಂಡಾ 

ಬುಡಕಟ್ಟು ವ್ಯವಹಾರಗಳ ಸಚಿವರು 15 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ರಾಜ್ಯಗಳ ನೋಡಲ್ ಏಜೆನ್ಸಿಗಳಿಗೆ ಕಿರು ಅರಣ್ಯ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ಅಡಿ ಖರೀದಿಸುವಂತೆ ಸೂಚಿಸುವಂತೆ ತಿಳಿಸಿದ್ದಾರೆ. ಈ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಆಂಧ್ರಪ್ರದೇಶ, ಕೇರಳ, ಮಣಿಪುರ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ, ರಾಜಾಸ್ಥಾನ, ಒಡಿಶಾ, ಛತ್ತೀಸಗಢ ಮತ್ತು ಜಾರ್ಖಂಡ್ ಸೇರಿದೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612301

ಕೋವಿಡ್ 19 ಲಾಕ್ ಡೌನ್ ಹೊರತಾಗಿಯೂ ಎಫ್.ಸಿ.ಐ. 721 ಬೋಗಿಗಳಲ್ಲಿ 20.19 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ದೇಶದಾದ್ಯಂತ 14 ದಿನಗಳ ಅವಧಿಯಲ್ಲಿ ಅಂದರೆ 24 ಮಾರ್ಚ್ ನಿಂದ ಸಾಗಿಸಿದೆ

ಕಳೆದ 14 ದಿನಗಳಲ್ಲಿ ಅಂದರೆ ಕೋವಿಡ್ 19ರ ವಿರುದ್ಧದ ಹೋರಾಟಕ್ಕಾಗಿ ಲಾಕ್ ಡೌನ್ ಆರಂಭವಾದ 24.03.2020ರಿಂದ  ಎಫ್.ಸಿ.ಐ. ಪ್ರತಿ ನಿತ್ಯ ಸರಾಸರಿ 1.44 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಸಾಗಾಟ ಮಾಡಿದೆ. ಲಾಕ್ ಡೌನ್ ಗೆ ಮೊದಲು ದೈನಂದಿನ ಸರಾಸರಿ ಸುಮಾರು 0.8 ಲಕ್ಷ ಮೆಟ್ರಿಕ್ ಟನ್ ಆಗಿತ್ತು. ಒಟ್ಟು 658 ಬೋಗಿಗಳಲ್ಲಿ ಸುಮಾರು 18.42 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ದೇಶಾದ್ಯಂತ 6.4.2020ರವರೆಗೆ ಸಾಗಾಟ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612208

ಲಾಕ್ ಡೌನ್ ಅವಧಿಯಲ್ಲಿ ಕೃಷಿ ಚಟುವಟಿಕೆಗೆ ಅವಕಾಶ ನೀಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಕೃಷಿ ಸಚಿವರು

ಶ್ರೀ ಎನ್.ಎಸ್. ಥೋಮರ್ ಅವರು ನಿರಂತರ ಕಣ್ಗಾವಲಿಗಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಲು ನಿರ್ದೇಶಿಸಿದ್ದಾರೆ, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಕೃಷಿ ಸಂಬಂಧಿತ ಉತ್ಪನ್ನಗಳಿಗೆ ತೊಂದರೆ ಆಗಬಾರದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612202

ದೆಹಲಿಯಲ್ಲಿ ತೀರಾ ಅಗತ್ಯ ಇರುವ ಕುಟುಂಬಗಳಿಗೆ ಕೇಂದ್ರೀಯ ಭಂಡಾರ ತಯಾರಿಸಿರುವ 2200 ಅವಶ್ಯಕ ವಸ್ತುಗಳ ಕಿಟ್ ಹಸ್ತಾಂತರಿಸಿದ ಡಾ. ಜಿತೇಂದ್ರ ಸಿಂಗ್

ಡಾ. ಜಿತೇಂದ್ರ ಸಿಂಗ್ ಅವರಿಂದು ಕೋವಿಡ್ -19 ಹಿನ್ನೆಲೆಯಲ್ಲಿ ದೆಹಲಿಯಲ್ಲಿ ತೀರಾ ಅಗತ್ಯ ಇರುವವರಿಗೆ 2200 ಅತ್ಯಾವಶ್ಯಕಗಳ ಕಿಟ್ ವಿತರಿಸಿದರು. ಈ ಪ್ರತಿ ಕಿಟ್ ನಲ್ಲಿ ಅಗತ್ಯ ಇರುವವರ ಕುಟುಂಬಗಳಿಗೆ ಕೆಲ ಕಾಲ ಜೀವನ ಸಾಗಿಸಲು ಅಗತ್ಯವಾದ 9 ವಸ್ತುಗಳಿವೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612287

ಕೋವಿಡ್-19 ರೋಗಿಗಳನ್ನು ಪರೀಕ್ಷಿಸಲು ಎಸ್.ಸಿ.ಟಿ.ಐ.ಎಂ.ಎಸ್.ಟಿ. ವಿಜ್ಞಾನಿಗಳು ಸೋಂಕುರಹಿತ ನಿಗ್ರಹ-ಪರೀಕ್ಷಾ ಬೂತ್ ಅನ್ನು ಅಭಿವೃದ್ಧಿಪಡಿಸಿದ್ದಾರೆ

ರೋಗಿ ಮತ್ತು ಪರೀಕ್ಷಿಸುವ ವೈದ್ಯರಿಗೆ ಸೋಂಕು ಹರಡದಂತೆ ತಡೆಯಲು ನೇರ ಸಂಪರ್ಕವಿಲ್ಲದೆಯೇ ಕೋವಿಡ್ 19 ರೋಗಿಗಳನ್ನು ಪರೀಕ್ಷಿಸಲು ಮುಚ್ಚಿದ ಟೆಲಿಫೋನ್ ಬೂತ್ ಮಾದರಿಯಲ್ಲಿ ನಾವಿನ್ಯಪೂರ್ಣ ಸೋಂಕುರಹಿತ ಪರೀಕ್ಷಾ ಬೂತ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಬೂತ್ ಲ್ಯಾಂಪ್, ಟೆಬಲ್ ಫ್ಯಾನ್, ರ‍್ಯಾಕ್ ಮತ್ತು ಅಲ್ಟ್ರಾ ವಯೋಲೆಟ್ (ಯುವಿ)ಲೈಟ್ ಒಳಗೊಂಡಿದೆ.

ಹೆಚ್ಚಿನ ಮಾಹಿತಿಗಾಗಿ: https://pib.gov.in/PressReleseDetail.aspx?PRID=1612298

 

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

ಈಶಾನ್ಯ ವಲಯ

  • ಕ್ವಾರಂಟೈನ್ ನಲ್ಲಿರುವ ಜನರಿಗಾಗಿ ಕೋವಿಡ್ ಕೇರ್ ಆಪ್ ಆರಂಭಿಸಿದ ಅರುಣಾಚಲ ಪ್ರದೇಶ ಸರ್ಕಾರ.
  • ಕೋವಿಡ್ -19 ಬಿಕ್ಕಟ್ಟಿನ ನಡುವೆ ಅಸ್ಸಾಂನ ಹಲವು ಇಸ್ಲಾಮಿಕ್ ಸಂಘಟನೆಗಳು ಶಬ್ ಇ ಬಾರತ್ ಅನ್ನು ಮನೆಯಿಂದಲೇ ಆಚರಿಸುವಂತೆ ಎಲ್ಲ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
  • ಕೋವಿಡ್ 19 ನಿಗ್ರಹಕ್ಕಾಗಿ ಲಾಕ್ ಡೌನ್ ವಿಸ್ತರಿಸುವಂತೆ ಮಣಿಪುರ ಮುಖ್ಯಮಂತ್ರಿ ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ.
  • ಮೇಘಾಲಯದಲ್ಲಿ ಕೈದಿಗಳನ್ನು ಸಾಂಕ್ರಾಮಿಕ ರೋಗದಿಂದ ಸುರಕ್ಷಿತವಾಗಿರಿಸಲು ಜೈಲುಗಳಲ್ಲಿ ಪ್ರತ್ಯೇಕ ಕೋಶಗಳನ್ನು ಸ್ಥಾಪಿಸಲಾಗಿದೆ.
  • ಮಿಜೋರಾಂನ ಕೋಲಾಸಿಬ್‌ನಲ್ಲಿರುವ ಅಂಗನವಾಡಿ ಕಾರ್ಯಕರ್ತರು ಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿಗೆ ರಕ್ಷಣಾತ್ಮಕ ಮಾಸ್ಕ್ ಗಳನ್ನು ಹೊಲೆದು ಕೊಡುವ ಮೂಲಕ ಕೊಡುಗೆ ನೀಡುತ್ತಿದ್ದಾರೆ.
  • ಕ್ರೈಸ್ತರು ಬಹುಸಂಖ್ಯೆಯಲ್ಲಿರುವ ನಾಗಾಲ್ಯಾಂಡ್‌ನ ಚರ್ಚ್ ಗಳಲ್ಲಿ ಬರುವ 12ರಂದು ಈಸ್ಟರ್ ಆಚರಣೆಯನ್ನು ತ್ಯಜಿಸಲು ನಿರ್ಧರಿಸಿವೆ.
  •  ಸಿಕ್ಕಿಂನಲ್ಲಿನ ಶಾಲೆಗಳು ವಿದ್ಯಾರ್ಥಿಗಳಿಗೆ ಇ-ಶಿಕ್ಷಣವನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದ ಆನ್‌ಲೈನ್ ಪೋರ್ಟಲ್‌ಗಳಲ್ಲಿ ನೋಂದಾಯಿಸಲು ನಿರ್ದೇಶಿಸಿದೆ.

ಪಶ್ಚಿಮ ವಲಯ

  • ಏಪ್ರಿಲ್ 5 ರಂದು ಗುಜರಾತ್‌ನ ಜಾಮ್‌ ನಗರ ಜಿಲ್ಲೆಯಲ್ಲಿ ಕೋವಿಡ್ -19 ದೃಢಪಟ್ಟಿದ 14 ತಿಂಗಳ ಗಂಡು ಮಗು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದು,  ಭಾರತದಲ್ಲಿ ಕೊರೋನಾಗೆ ಬಲಿಯಾದ ಅತ್ಯಂತ ಕಿರಿಯ ವಯಸ್ಸಿನ ಮಗುವಾಗಿದೆ.  ಅದು ವಲಸೆ ಕಾರ್ಮಿಕ ದಂಪತಿಯ ಮಗುವಾಗಿತ್ತು. ಗುಜರಾತ್‌ನಲ್ಲಿ ಈವರೆಗೆ 179 ಜನರಲ್ಲಿ ಸೋಂಕು ದೃಢಪಟ್ಟಿದೆ.
  • ಮಧ್ಯಪ್ರದೇಶ ಸರ್ಕಾರ ಇಂದಿನಿಂದ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯನ್ನು (ಎಸ್ಮಾ) ಜಾರಿಗೊಳಿಸಿದೆ. ಕೋವಿಡ್ -19 ಮಹಾಮಾರಿಯಿಂದ ಉಂಟಾದ ಅಡೆತಡೆಗಳ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಅಗತ್ಯ ಸೇವೆಗಳನ್ನು ಕನಿಷ್ಠ ಸ್ಥಿತಿಯಲ್ಲಿ ಒದಗಿಸುವ ಮೂಲಕ ರಾಜ್ಯ ಸರ್ಕಾರಗಳು ಏಕರೂಪತೆಯನ್ನು ಕಾಪಾಡಿಕೊಳ್ಳಲು ಎಸ್ಮಾ ಸಹಾಯ ಮಾಡುತ್ತದೆ.
  • ರಾಜಾಸ್ಥಾನದಲ್ಲಿ 40 ಹೊಸ ಕೊರೋನಾ ವೈರಾಣು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ದತ್ತಾಂಶ ತಿಳಿಸಿದೆ. ಇದರಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆ 328ಕ್ಕೆ ಏರಿಕೆಯಾಗಿದೆ. ಜೈಪುರದಲ್ಲಿ ಪರಿಸ್ಥಿತಿ ತೀವ್ರವಾಗಿದ್ದು, ಇಲ್ಲಿ 54 ಪ್ರಕರಣಗಳು ದೃಢಪಟ್ಟಿವೆ.
  • ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೋವಿಡ್ 19ರ ವಿರುದ್ಧದ ಹೋರಾಟದಲ್ಲಿ ಕರೋನ ಯೋಧರಾಗಿ ಕೈಜೊಡಿಸುವಂತೆ ಸೇನಾ ಪಡೆಗಳ ವೈದ್ಯಕೀಯ ಪಡೆಯಲ್ಲಿದ್ದ ವೈದ್ಯರು ಮತ್ತು ದಾದಿಯರು ಸೇರಿಂದಂತೆ ನಿವೃತ್ತ ಸಿಬ್ಬಂದಿಗೆ ಮನವಿ ಮಾಡಿದ್ದಾರೆ, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಮುಂಬೈನಾದ್ಯಂತ ಫೀವರ್ ಕ್ಲೀನಿಕ್ ಗಳನ್ನು ತೆರೆಯುವುದಾಗಿಯೂ ಅವರು ಪ್ರಕಟಿಸಿದ್ದಾರೆ.

ದಕ್ಷಿಣ ವಲಯ

  • ಕೇರಳ: ರಾಜ್ಯದಲ್ಲಿ ಲಾಕ್ ಡೌನ್ ಗೆ ಸ್ವಲ್ಪ ರಿಯಾಯಿತಿ ನೀಡಲಾಗಿದೆ. ಗುರುವಾರ ಮತ್ತು ಭಾನುವಾರ ವಾಹನಗಳ ವಕ್ಸ್ ಶಾಪ್ ತೆರೆಯಲು ಸರ್ಕಾರ ಆದೇಶ ಹೊರಡಿಸಿದೆ. ಕಾಸರಗೋಡು ಎಂ.ಸಿಯಲ್ಲಿ 273 ಹೊಸ ಹುದ್ದೆಗಳ ಸೃಷ್ಟಿಗೆ ಸಂಪುಟ ಅನುಮೋದನೆ ನೀಡಿದೆ.
  • ತಮಿಳುನಾಡು: ವೈದ್ಯಕೀಯ ಅಗತ್ಯಗಳನ್ನು ಅಂದರೆ ವೆಂಟಿಲೇಟರ್ ಗಳು, ಎನ್.95 ಮಾಸ್ಕ್ ಗಳು, ಸೋಂಕು ನಿಗ್ರಹ ಮತ್ತು ಮಲೇರಿಯಾ ನಿಗ್ರಹ ಔಷಧಗಳು, ಆರ್.ಟಿ. ಪಿಸಿಆರ್ ಪರೀಕ್ಷಾ ಕಿಟ್ ಗಳು, ಪಿಪಿಇ ಇತ್ಯಾದಿ ತಯಾರಿಸುವ ಎಂ.ಎಸ್.ಎಂ.ಇಗಳಿಗೆ ರಿಯಾಯಿತಿ ಮತ್ತು ಸಬ್ಸಿಡಿಯನ್ನು ಸರ್ಕಾರ ಪ್ರಕಟಿಸಿದೆ.
  • ಆಂಧ್ರಪ್ರದೇಶ: 15ಹೊಸ ಪ್ರಕರಣಗಳು ಇಂದು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ  329ಕ್ಕೆ ಏರಿದೆ; ರಾಜ್ಯ ಸರ್ಕಾರ 63 ಹಾಟ್ ಸ್ಪಾಟ್ ಗುರುತಿಸಿದೆ.
  • ತೆಲಂಗಾಣ: ರಾಜ್ಯವು ಕೊರೋನಾ ವೈರಾಣು ಹಬ್ಬುವಿಕೆ ತಡೆಯಲು 100 ಹಾಟ್ ಸ್ಪಾಟ್ ಗುರುತಿಸಿದೆ. ಈ ಪ್ರದೇಶಗಳಲ್ಲಿ ಹೆಚ್ಚಿನ ನಿರ್ಬಂಧಗಳನ್ನು ಹೇರಲಾಗಿದೆ. ಹೈದ್ರಾಬಾದ್ ನ ಕ್ರೀಡಾ ಗ್ರಾಮ ಗಚಿಬೌಲಿಯಲ್ಲಿ 1500 ಹಾಸಿಗೆಗಳ ಹೊಸ ಕೋವಿಡ್ ಆಸ್ಪತ್ರೆ ತಲೆ ಎತ್ತಲಿದೆ.
  • ಕರ್ನಾಟಕ: ಇಂದು ಈವರೆಗೆ ಆರು ಹೊಸ ಕೋವಿಡ್ ಸೋಂಕು ದೃಢಪಟ್ಟ ಪ್ರಕರಣ ವರದಿಯಾಗಿದೆ ಇದರಿಂದ ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ 181 ಆಗಿದೆ. ನಾಲ್ವರು ಸಾವಿಗೀಡಾಗಿದ್ದು, 28 ಮಂದಿ ಗುಣಮುಖರಾಗಿದ್ದಾರೆ.

Fact Check on #Covid19

 

https://ci3.googleusercontent.com/proxy/qpHg7ObcjC7QDYPepyb3oAGojwY2eIFuztWa97qacSQM6ZR93Co_hkrgrVp--PxToXOS3q1QM_txSeTNZhIXfklngT0tH9elPdC56kDvBrZPGto8BGH8=s0-d-e1-ft#https://static.pib.gov.in/WriteReadData/userfiles/image/image00533GV.jpg

https://ci6.googleusercontent.com/proxy/o2wQY3CGhzR0AHuBQGHIElKOi0m_hctbFY6P4uZFVQDUy7e152xIAVNjf_x3dq88dGHOdUWdXLCmz2h21VWLlf2xi1cjC0GcjFwmVIKCC99ceD9ZUVux=s0-d-e1-ft#https://static.pib.gov.in/WriteReadData/userfiles/image/image006CJ55.jpg

https://pbs.twimg.com/profile_banners/231033118/1584354869/1500x500

***



(Release ID: 1612389) Visitor Counter : 237