ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಗೆ ಸ್ಲೋವಾಕ್ ಗಣರಾಜ್ಯದ ಅತ್ಯುನ್ನತ ರಾಷ್ಟ್ರೀಯ ಗೌರವ ''ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್, ಫಸ್ಟ್ ಕ್ಲಾಸ್'' ಪ್ರದಾನ

प्रविष्टि तिथि: 15 JUN 2026 11:35PM by PIB Bengaluru

ಸ್ಲೋವಾಕ್ ಗಣರಾಜ್ಯದ ಅಧ್ಯಕ್ಷರಾದ ಮಾನ್ಯ ಶ್ರೀ ಪೀಟರ್ ಪೆಲ್ಲೆಗ್ರಿನಿ ಅವರು ವಿಶೇಷ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸ್ಲೋವಾಕಿಯಾದ ಅತ್ಯುನ್ನತ ಗೌರವವಾದ "ದಿ ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್, ಫಸ್ಟ್ ಕ್ಲಾಸ್" ಅನ್ನು ಪ್ರದಾನ ಮಾಡಿದರು.

ಈ ವಿಶಿಷ್ಟ ಗೌರವಕ್ಕಾಗಿ ಸ್ಲೋವಾಕಿಯಾದ ಅಧ್ಯಕ್ಷರು, ಸರ್ಕಾರ ಮತ್ತು ಜನರಿಗೆ ಪ್ರಧಾನಮಂತ್ರಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಶಸ್ತಿಯನ್ನು ಸ್ವೀಕರಿಸುತ್ತಾ ಅವರು, ಈ ಗೌರವವು ಭಾರತದ 1.4 ಶತಕೋಟಿ ಜನರಿಗೆ ಹಾಗೂ ಭಾರತ ಮತ್ತು ಸ್ಲೋವಾಕಿಯಾ ನಡುವಿನ ಶಾಶ್ವತ ಸ್ನೇಹ ಬಂಧಗಳಿಗೆ ಸಂದ ಗೌರವವಾಗಿದೆ ಎಂದು ಹೇಳಿದರು.

ಭಾರತ ಮತ್ತು ಸ್ಲೋವಾಕಿಯಾದ ಜನರನ್ನು ಒಗ್ಗೂಡಿಸುವ ಆತ್ಮೀಯತೆ, ನಂಬಿಕೆ ಮತ್ತು ವಾತ್ಸಲ್ಯಕ್ಕೆ ಈ ಪ್ರಶಸ್ತಿ ಸಾಕ್ಷಿ ಎಂದು ಬಣ್ಣಿಸಿರುವ ಪ್ರಧಾನಮಂತ್ರಿಗಳು, ಎರಡೂ ದೇಶಗಳಲ್ಲಿನ ಭವಿಷ್ಯದ ಪೀಳಿಗೆಗಳ ಜನರು ಈ ವಿಶೇಷ ಸ್ನೇಹವನ್ನು ಪೋಷಿಸಲು ಈ ಗೌರವ ಸ್ಫೂರ್ತಿ ನೀಡಲಿದೆ ಎಂದು ಆಶಿಸಿದರು.

 

*****


(रिलीज़ आईडी: 2273613) आगंतुक पटल : 13
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Telugu , Malayalam