ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಕಾಶ್ ಪುರಬ್ ಅಂಗವಾಗಿ ಶ್ರೀ ಗುರು ತೇಜ್ ಬಹದ್ದೂರ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 07 APR 2026 10:52AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪವಿತ್ರ ಪ್ರಕಾಶ್ ಪುರಬ್ ಅಂಗವಾಗಿ  ನಮ್ಮ ನಾಗರಿಕತೆಯ ಶ್ರೇಷ್ಠ ಧಾರ್ಮಿಕ ನಾಯಕ ಶ್ರೀ ಗುರು ತೇಜ್ ಬಹದ್ದೂರ್ ಅವರಿಗೆ ಗೌರವ ನಮನ  ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಪ್ರಕಾಶ್ ಪುರಬ್ ಅಂಗವಾಗಿ ಶ್ರೀ ಗುರು ತೇಜ್ ಬಹದ್ದೂರ್ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ.

ಅವರು ನಮ್ಮ ನಾಗರಿಕತೆಯ ಶ್ರೇಷ್ಠ ಆಧ್ಯಾತ್ಮಿಕ ನಾಯಕರಾಗಿದ್ದಾರೆ. ಅವರ ಜೀವನ ನಿರ್ಭಯ, ತ್ಯಾಗ ಮತ್ತು ಮನುಕುಲದ ಬಗ್ಗೆ ಆಳವಾದ ಕಾಳಜಿ ಹೊಂದಿರುವುದಕ್ಕೆ ಉದಾಹರಣೆಯಾಗಿದೆ. ಅವರು, ಪ್ರತೀಕೂಲ ಪರಿಸ್ಥಿತಿಗಳ ನಡುವೆಯೂ ಸತ್ಯ, ಘನತೆ ಮತ್ತು ವಿಶ್ವಾಸದ ಪರವಾಗಿ ದೃಢ ನಿಲುವು ಹೊಂದಿದ್ದರು.  ಸೌಹಾರ್ದ ಮತ್ತು ಅನುಕಂಪದ ಸಮಾಜ ನಿರ್ಮಾಣಕ್ಕೆ ಅವರ ಸಂದೇಶ ನಮಗೆ ದಾರಿದೀಪವಾಗಿದೆ.”

 

*****

 


(ಪ್ರಕಟಣೆ ಐ.ಡಿ.: 2249555) ವಿಸಿಟರ್ ಕೌಂಟರ್ : 6