ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav AI Impact Summit 2026

ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ 'ವೇವ್ಸ್ ಕ್ರಿಯೇಟರ್ಸ್ ಕಾರ್ನರ್' ಅನ್ನು ಉದ್ಘಾಟಿಸಿದ ಶ್ರೀ ಅಶ್ವಿನಿ ವೈಷ್ಣವ್


ವೇವ್ಸ್ ನಲ್ಲಿ 51 ಮಾಧ್ಯಮ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳು ಮತ್ತು ಚಾಲೆಂಜ್ ವಿಜೇತರೊಂದಿಗೆ ಸಂವಾದ ನಡೆಸಿದ ಸಚಿವರು

ಸೃಜನಶೀಲ ಸಾಮರ್ಥ್ಯ ನಿರ್ಮಾಣಕ್ಕಾಗಿ IICT ಯಲ್ಲಿ ಕೃತಕ ಬುದ್ಧಿಮತ್ತೆಗೆ ಒತ್ತು ನೀಡುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ವೈಷ್ಣವ್

ಪ್ರಕಟಣಾ ದಿನಾಂಕ: 18 FEB 2026 11:06AM by PIB Bengaluru

ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ ಎರಡನೇ ದಿನದಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ವೇವ್ಸ್ ಕ್ರಿಯೇಟರ್ಸ್ ಕಾರ್ನರ್ ಅನ್ನು ಉದ್ಘಾಟಿಸಿದರು. ಸಂಪೂರ್ಣ ಕಾರ್ಯಾಚರಣೆಯ, ಪ್ರಾಯೋಗಿಕ ನಾವೀನ್ಯತೆ ಕಾರ್ಯಕ್ಷೇತ್ರವಾಗಿ ಪರಿಕಲ್ಪನೆಗೊಂಡ ಈ ಮಳಿಗೆ AVGC-XR (ಅನಿಮೇಷನ್, ವಿ ಎಫ್ ಎಕ್ಸ್, ಗೇಮಿಂಗ್,  ಕಾಮಿಕ್ಸ್ ಮತ್ತು ಎಕ್ಸಟೆಂಡೆಟ್‌ ರಿಯಾಲಿಟಿ) ಪೂರಕ ವ್ಯವಸ್ಥೆಯೊಳಗೆ ಕೃತಕ ಬುದ್ಧಿಮತ್ತೆಯ ಪರಿವರ್ತಕ ಅನ್ವಯಿಕೆಗಳನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಸಚಿವರು, ವೇವ್ಸ್ ಕ್ರಿಯೇಟರ್ಸ್ ಕಾರ್ನರ್, ವೇವ್ಎಕ್ಸ್, ವೇವ್ಸ್ ಬಜಾರ್ ಮತ್ತು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಸ್ ಸೇರಿದಂತೆ ಸಚಿವಾಲಯದ ಪ್ರಮುಖ ಉಪಕ್ರಮಗಳ ಕಾರ್ಯತಂತ್ರದ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಒತ್ತಿ ಹೇಳಿದರು. ಶ್ರೀ ವೈಷ್ಣವ್ ಅವರು ಭಾರತ ಮಂಟಪದಾದ್ಯಂತ ಸಂಚರಿಸಿ ಎಲ್ಲಾ ಪ್ರದರ್ಶನಗಳ ವೀಕ್ಷಿಸಿದರು, ವೇವ್ಎಕ್ಸ್ ಸ್ಟಾರ್ಟ್ಅಪ್ ಸಮೂಹದ ಉದಯೋನ್ಮುಖ ಉದ್ಯಮಿಗಳು ಮತ್ತು ಅಡೋಬ್, ನೆಟ್‌ಫ್ಲಿಕ್ಸ್, ಸೋನಿ ಮತ್ತು ಅಮೆಜಾನ್‌ನಂತಹ ಜಾಗತಿಕ ಸಂಸ್ಥೆಗಳ ಹಿರಿಯ ನಾಯಕತ್ವದೊಂದಿಗೆ ಸಂವಾದ ನಡೆಸಿದರು.

51 ನವೋದ್ಯಮಗಳಿಗೆ ಪ್ರದರ್ಶನಕ್ಕೆ ಅವಕಾಶ

ಮಾಧ್ಯಮ ಮತ್ತು ಮನರಂಜನಾ ಪರಿಸರ ವ್ಯವಸ್ಥೆಗೆ ಗಮನಾರ್ಹ ಉತ್ತೇಜನ ನೀಡುವ ಸಲುವಾಗಿ, ವೇವ್‌ಎಕ್ಸ್ ಬೆಂಬಲಿತ 51 ಭರವಸೆಯ AVGC-XR ಮತ್ತು ಮೀಡಿಯಾ ಟೆಕ್ ಸ್ಟಾರ್ಟ್‌ಅಪ್‌ಗಳು ಪೆವಿಲಿಯನ್‌ನಲ್ಲಿ AI-ಆಧರಿತ ಪರಿಹಾರಗಳು ಮತ್ತು ಗಮನಾರ್ಹ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತಿವೆ. ಭಾಷಾ ಸೇತು ಮತ್ತು ಕಲಾ ಸೇತು ಚಾಲೆಂಜ್ ಗಳ ವಿಜೇತರು ಸೇರಿದಂತೆ ಯುವ ಉದ್ಯಮಿಗಳೊಂದಿಗೆ ಶ್ರೀ ಅಶ್ವಿನಿ ವೈಷ್ಣವ್ ಸಂವಾದ ನಡೆಸಿದರು.

ಶ್ರದ್ಧಾ ಶರ್ಮಾ ಜೊತೆ ಸಂವಾದ

ಮೀಡಿಯಾ ಲೌಂಜ್‌ನಲ್ಲಿ ಯುವರ್‌ಸ್ಟೋರಿಯ ಶ್ರದ್ಧಾ ಶರ್ಮಾ ಅವರೊಂದಿಗೆ ನಡೆದ ಉನ್ನತ ಮಟ್ಟದ ಸಂವಾದದಲ್ಲಿ ಸಚಿವರು ಭಾಗವಹಿಸಿದ್ಧರು. ಈ ಗೋಷ್ಠಿಯಲ್ಲಿ ಸಮಾಜದ ಮೇಲೆ ಎಐ ನ ಆಳವಾದ ಪರಿಣಾಮದ ಕುರಿತು ತಮ್ಮ ದೂರದೃಷ್ಟಿಯನ್ನು ಹಂಚಿಕೊಂಡ ಅವರು, ತಂತ್ರಜ್ಞಾನವು ಗ್ರಾಮೀಣ ಭಾರತದ ಪ್ರತಿಭೆಗಳಿಗೆ ವಿಶ್ವ ದರ್ಜೆಯ ನವೋದ್ಯಮಗಳನ್ನು ಸ್ಥಾಪಿಸಲು ಇರುವ ಅಂತರವನ್ನು ಹೇಗೆ ಕಡಿಮೆ ಮಾಡುತ್ತಿದೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

ವೇವ್ಸ್  ಕ್ರಿಯೇಟರ್ಸ್ ಕಾರ್ನರ್ನಲ್ಲಿ ಪ್ರಮುಖ ತಾಂತ್ರಿಕ ಮುಖ್ಯಾಂಶಗಳು

ಪೆವಿಲಿಯನ್ ನಲ್ಲಿ ಅತ್ಯಾಧುನಿಕ AI ಅನುಭವಗಳನ್ನು ಪ್ರದರ್ಶಿಸಲಾಯಿತು, ನೈಜ-ಸಮಯದ ಗೇಮ್ ಗಳ ಅಭಿವೃದ್ಧಿ ಮತ್ತು ಸಿನಿಮಾದಿಂದ ಸಿನಿಮಾಗೆ ತ್ವರಿತಗತಿಯ ಲೈವ್ ಸ್ಟುಡಿಯೋಗಳಿಂದ ಹಿಡಿದು ಸ್ವಯಂಚಾಲಿತ ಸಂಪಾದಕೀಯ ಕಾರ್ಯಪ್ರವಾಹಗಳನ್ನು ಸಕ್ರಿಯಗೊಳಿಸುವ AWS ಮತ್ತು BharatGen ನಿಂದ ಏಜೆಂಟ್ AI-ಚಾಲಿತ ಸುದ್ದಿ ಕೊಠಡಿಯವರೆಗೆ ಹಲವು ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ. ನಾವೀನ್ಯತೆಗಳಲ್ಲಿ ಸರ್ವಮ್‌ನ ನೈಜ-ಸಮಯದ ಧ್ವನಿ ಕ್ಲೋನಿಂಗ್ ಮತ್ತು ಬಹುಭಾಷಾ ಸಂವಹನಕ್ಕಾಗಿ ಇಂಡಸ್ ಚಾಟ್ ಅಪ್ಲಿಕೇಶನ್, NFDC ನಿಂದ ಸಂಗ್ರಹಿಸಲಾದ 270-ಡಿಗ್ರಿ AI ಚಲನಚಿತ್ರ ಪ್ರದರ್ಶನಗಳು, ಸೋನಿ ರಿಸರ್ಚ್ ಇಂಡಿಯಾದ ಫೇಸ್ ಮತ್ತು ವಾಯ್ಸ್ ರಿ ಏಜಿಂಗ್ ತಂತ್ರಜ್ಞಾನ ಮತ್ತು ಡಿಎಸ್ ಎಲ್ ಆರ್ ಅಥವಾ ಐಫೋನ್ ಬಳಸಿ ವಿಸ್ಲಿಂಗ್ ವುಡ್ಸ್ ಇಂಟರ್ನ್ಯಾಷನಲ್‌ನ ಮಾರ್ಕರ್-ಲೆಸ್ ಮೋಷನ್ ಕ್ಯಾಪ್ಚರ್ ಸೇರಿವೆ.

ಸಾಮರ್ಥ್ಯವೃದ್ಧಿ ಮತ್ತು ಭವಿಷ್ಯಕ್ಕೆ ಸಿದ್ಧತೆ:

ವಿಕಸನಗೊಳ್ಳುತ್ತಿರುವ ಉದ್ಯಮದ ಬೇಡಿಕೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಸೃಜನಶೀಲ ಶಿಕ್ಷಣಕ್ಕೆ AI ಅನ್ನು ಸಂಯೋಜಿಸಿದ್ದಕ್ಕಾಗಿ ಸಚಿವರು ಐಐಸಿಟಿಯನ್ನು ಶ್ಲಾಘಿಸಿದರು.

ವೇವ್ಸ್ ಕ್ರಿಯೇಟರ್ಸ್ ಕಾರ್ನರ್‌:

ವೇದಿಕೆಯು ಶೃಂಗಸಭೆಯ ಉದ್ದಕ್ಕೂ ಜಾಗತಿಕ ನಾಯಕರಿಂದ ತಜ್ಞರ ಸಂವಾದಗಳು, ಚಲನಚಿತ್ರ ನಿರ್ಮಾಪಕರ ಮಾಸ್ಟರ್‌ಕ್ಲಾಸ್‌ಗಳು ಮತ್ತು ತಾಂತ್ರಿಕ ಗೋಷ್ಠಿಗಳ ಆಯೋಜನೆಯನ್ನು ಮುಂದುವರಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2229489) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , Khasi , English , Urdu , Marathi , हिन्दी , Bengali , Assamese , Punjabi , Gujarati , Odia , Telugu