ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸರ್ಕಾರದಿಂದ ದೂರದರ್ಶನ ಮತ್ತು ಆಕಾಶವಾಣಿ ಆಧುನೀಕರಣ; 2,539.61 ಕೋಟಿ ರೂ. ಗಳ ಬಿಐಎನ್ ಡಿ ಯೋಜನೆ ಮೂಲಕ ಎಚ್ ಡಿ ಚಾನಲ್‌ಗಳು, ವೇವ್ಸ್ ಒಟಿಟಿ ಮತ್ತು ವಿಷಯಗಳ ಸುಧಾರಣೆ


ಮಹಾಕುಂಭ 2025 ರಿಂದ ಇಸ್ರೋ ಉಪಗ್ರಹಗಳ ಉಡಾವಣೆವರೆಗೆ: ಡಿಡಿ ಮತ್ತು ಆಕಾಶವಾಣಿ ನೇರ ಪ್ರಸಾರದ ಮೂಲಕ ಸಾರ್ವಜನಿಕ ಸಂಪರ್ಕ ಬಲವರ್ಧನೆ


ಸರ್ಕಾರೇತರ ಜಾಹೀರಾತುಗಳಿಂದ ಆಕಾಶವಾಣಿ ಮತ್ತು ದೂರದರ್ಶನ 587.78 ಕೋಟಿ ರೂ. ಆದಾಯ ಗಳಿಕೆ- ಸರ್ಕಾರದ ಮಾಹಿತಿ

प्रविष्टि तिथि: 18 DEC 2025 2:06PM by PIB Bengaluru

ಪ್ರಸಾರ ವಲಯದಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ, ದೂರದರ್ಶನ ಮತ್ತು ಆಕಾಶವಾಣಿಯ ಕಾರ್ಯನಿರ್ವಹಣೆ ಮತ್ತು ಪ್ರೇಕ್ಷಕರ ವ್ಯಾಪ್ತಿಯನ್ನು ಬಲವರ್ಧನೆಗೊಳಿಸಲು ನಿರಂತರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಕಂಟೆಂಟ್ ಗುಣಮಟ್ಟ ಮತ್ತು ವೈವಿಧ್ಯತೆಯನ್ನು ಸುಧಾರಿಸಲು, ವ್ಯಾಪಕ ಭಾಗವಹಿಸುವಿಕೆ ಮತ್ತು ಕಾರ್ಯಕ್ರಮಗಳ ವೇಗದ ಸ್ವಾಧೀನವನ್ನು ಸಕ್ರಿಯಗೊಳಿಸಲು 2024ರಲ್ಲಿ ಸರಳವಾದ ಕಂಟೆಂಟ್ ಸೋರ್ಸಿಂಗ್ ನೀತಿಯನ್ನು ಪರಿಚಯಿಸಲಾಯಿತು.

ಹೊಸ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆರಂಭಿಸಲಾಗುತ್ತದೆ ಮತ್ತು ಪ್ರಾದೇಶಿಕ ಮತ್ತು ರಾಜ್ಯ ಕೇಂದ್ರಗಳು, ಪ್ರಾದೇಶಿಕ ಭಾಷೆಗಳಲ್ಲಿ ಕಂಟೆಂಟ್ ಅನ್ನು ನಿರ್ಮಿಸಲು ಸ್ಥಳೀಯ ಕಲಾವಿದರನ್ನು ತೊಡಗಿಸಿಕೊಂಡಿವೆ. ದೂರದರ್ಶನದ 66 ಕಾರ್ಯಕ್ರಮ ಉತ್ಪಾದನಾ ಕೇಂದ್ರಗಳಲ್ಲಿ ಉತ್ತಮ ಪ್ರತಿಭೆಗಳನ್ನು ಆಕರ್ಷಿಸಲು ಮತ್ತು ಅಂತಿಮವಾಗಿ ಗುಣಮಟ್ಟದ ಸ್ಥಳೀಯ ಕಂಟೆಂಟ್ (ವಿಷಯ) ಅನ್ನು ಬೆಂಬಲಿಸಲು ಕಲಾವಿದ ಮತ್ತು ಕ್ಯಾಶುಯಲ್ ನಿಯೋಜಿತ ದರಗಳನ್ನು ಸಹ ಪರಿಷ್ಕರಿಸಲಾಗಿದೆ.

ಹೆಚ್ಚಿನ ಸಾರ್ವಜನಿಕ ಸಂಪರ್ಕವನ್ನು ಖಾತ್ರಿಪಡಿಸಿಕೊಳ್ಳಲು ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳ ನೇರ ಪ್ರಸಾರವನ್ನು ನಿಯಮಿತವಾಗಿ ಕೈಗೊಳ್ಳಲಾಗುತ್ತದೆ. ಕೆಲವು ಉದಾಹರಣೆಗಳಲ್ಲಿ ಮಹಾಕುಂಭ 2025 (ಪ್ರಯಾಗರಾಜ್), ವೇವ್ಸ್ 2025 (ಮುಂಬೈ) ಮತ್ತು ಇಸ್ರೋ ಉಪಗ್ರಹ ಉಡಾವಣೆಗಳು ಸೇರಿವೆ.

ತಾಂತ್ರಿಕ ನವೀಕರಣವು ಹೈ ಡೆಫಿನಿಷನ್ (ಎಚ್ ಡಿ) ನಲ್ಲಿ ಹಲವು ಡಿಡಿ ಚಾನೆಲ್‌ಗಳ ಪ್ರಸಾರ ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ‘ವೇವ್ಸ್’ ಅನ್ನು ಆರಂಭಿಸುವ ಮೂಲಕ ಡಿಜಿಟಲ್ ಉಪಸ್ಥಿತಿಯನ್ನು ಬಲಪಡಿಸುವುದನ್ನು ಒಳಗೊಂಡಿದೆ. ಡಿಡಿ ಮತ್ತು ಇತರ ಚಾನೆಲ್‌ಗಳನ್ನು ವೇವ್ಸ್‌ ಒಟಿಟಿ ಆನ್‌ಲೈನ್ ನ್ಯೂಸ್‌ಆನ್ ಎಐಆರ್‌ ಮೊಬೈಲ್ ಅಪ್ಲಿಕೇಶನ್ ಇತ್ಯಾದಿಗಳಲ್ಲಿ ಸಂಯೋಜಿಸಲಾಗಿದೆ.

ಆಕಾಶವಾಣಿಯು ’ದಿ ಆಕಾಶವಾಣಿ ಪಾಡ್‌ಕ್ಯಾಸ್ಟ್‌’ ಮತ್ತು ’ಆಕಾಶವಾಣಿ ಒರಿಜಿನಲ್ಸ್’ ಎಂಬ ಆಡಿಯೋ-ವಿಶುವಲ್ ಪಾಡ್‌ಕ್ಯಾಸ್ಟ್ ಸರಣಿಯನ್ನು ಸಹ ಆರಂಭಿಸಿದೆ.

ಆಕಾಶವಾಣಿಯಲ್ಲಿ ಸಾಂಸ್ಥಿಕ ಸುಧಾರಣೆಗಳನ್ನು ಕೈಗೊಳ್ಳಲಾಗಿದ್ದು, ಅದರಲ್ಲಿ ಕ್ಲಸ್ಟರ್ ಮುಖ್ಯಸ್ಥರು/ಕಚೇರಿಗಳ ಮುಖ್ಯಸ್ಥರಿಗೆ ನಿಗದಿಪಡಿಸಲಾದ ಪಾತ್ರಗಳು, ಆದಾಯ ಸೃಷ್ಟಿ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವುದು, ಕಂಟೆಂಟ್‌ ಸುಧಾರಣೆ ಮತ್ತು ಮಾರುಕಟ್ಟೆ ಸಂಪರ್ಕ ಸೇರಿವೆ.

ಆ್ಯಪ್‌ಗಳು, ಒಟಿಟಿ ಮತ್ತು ಸಾಮಾಜಿಕ ಮಾಧ್ಯಮಗಳಂತಹ ಪರ್ಯಾಯ ಪ್ರಸಾರ ವಿಧಾನಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಇದನ್ನು ಕ್ರಾಸ್-ಚಾನೆಲ್ ಪ್ರಚಾರ ಮತ್ತು ಸಂಘಟಿತ ಮಾರ್ಕೆಟಿಂಗ್ ಪ್ರಯತ್ನಗಳಿಂದ ಬೆಂಬಲಿಸಲಾಗುತ್ತದೆ.

ಪ್ರಸಾರ ಭಾರತಿಯ ಪ್ರಸಾರ ಮೂಲಸೌಕರ್ಯ ಮತ್ತು ನೆಟ್‌ವರ್ಕ್ ಅಭಿವೃದ್ಧಿ (ಬಿಐಎನ್ ಡಿ) ಯೋಜನೆಯಡಿ (2021-26) ಅಡಿಯಲ್ಲಿ 2,539.61 ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನೀಕರಣ ಮತ್ತು ಉನ್ನತೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಇದು ಡಿಜಿಟಲೀಕರಣ, ಪರಂಪರೆ ವ್ಯವಸ್ಥೆಗಳ ಬದಲಿ, ಸ್ಟುಡಿಯೋ ಮತ್ತು ಟ್ರಾನ್ಸ್‌ಮಿಟರ್ ಉನ್ನತೀಕರಣ, ಕವರೇಜ್ ವಿಸ್ತರಣೆ ಮತ್ತು ಹೊಸ ತಂತ್ರಜ್ಞಾನಗಳ ಅಳವಡಿಕೆಯ ಮೇಲೆ ಕೇಂದ್ರೀಕರಿಸುತ್ತದೆ.

ಆದಾಯವನ್ನು ಮತ್ತಷ್ಟು ಹೆಚ್ಚಿಸುವ ಕ್ರಮಗಳಲ್ಲಿ ಸುಧಾರಿತ ಗ್ರಾಹಕರನ್ನು ತೊಡಗಿಸಿಕೊಳ್ಳುವಿಕೆ, ಆದಾಯ-ಆಧಾರಿತ ಕಂಟೆಂಟ್ ಯೋಜನೆ, ಬಹು-ವೇದಿಕೆ ಪ್ರಚಾರ ಮತ್ತು ಸಂಯೋಜಿತ ಜಾಹೀರಾತು ತಂತ್ರಗಳು ಸೇರಿವೆ.

ಆಕಾಶವಾಣಿ ಮತ್ತು ದೂರದರ್ಶನವು 2022–25ರ ಅವಧಿಯಲ್ಲಿ ಸರ್ಕಾರೇತರ ಜಾಹೀರಾತು ವಲಯದಿಂದ ಒಟ್ಟು ಆದಾಯ 587.78 ಕೋಟಿ ರೂಪಾಯಿಗಳಷ್ಟನ್ನು ಗಳಿಸಿದೆ.

ಶ್ರೀ ಪರಷೋತ್ತಮ ಭಾಯ್ ರೂಪಾಲಾ ಅವರು ಕೇಳಿದ ಪ್ರಶ್ನೆಗೆ ಲೋಕಸಭೆಯಲ್ಲಿ 2025ರ ಡಿಸೆಂಬರ್ 17ರಂದು ನೀಡಿರುವ ಉತ್ತರದಲ್ಲಿ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಈ ಮಾಹಿತಿ ನೀಡಿದ್ದಾರೆ.

 

*****

 


(रिलीज़ आईडी: 2205975) आगंतुक पटल : 7
इस विज्ञप्ति को इन भाषाओं में पढ़ें: Malayalam , Bengali-TR , English , Urdu , हिन्दी , Marathi , Assamese , Bengali-TR , Bengali , Gujarati , Tamil , Telugu