ಪ್ರಧಾನ ಮಂತ್ರಿಯವರ ಕಛೇರಿ
2030ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಶತಮಾನೋತ್ಸವ ಬಿಡ್ ಅನ್ನು ಭಾರತವು ಗೆದ್ದಿದ್ದಕ್ಕಾಗಿ ರಾಷ್ಟ್ರವನ್ನು ಅಭಿನಂದಿಸಿದ ಪ್ರಧಾನಮಂತ್ರಿ
प्रविष्टि तिथि:
26 NOV 2025 7:58PM by PIB Bengaluru
2030ರಲ್ಲಿ ನಡೆಯಲಿರುವ ಶತಮಾನೋತ್ಸವ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವ ಬಿಡ್ ಅನ್ನು ಭಾರತವು ಗೆದ್ದಿದ್ದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಾಧನೆಯು ಭಾರತದ ಸಾಮೂಹಿಕ ಬದ್ಧತೆ ಮತ್ತು ಕ್ರೀಡಾ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಇದು ಭಾರತವನ್ನು ಜಾಗತಿಕ ಕ್ರೀಡಾ ನಕ್ಷೆಯಲ್ಲಿ ದೃಢವಾಗಿ ಇರಿಸಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.
ಎಕ್ಸ್ ತಾಣದ ಸಂದೇಶದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ:
“ಭಾರತವು ಶತಮಾನೋತ್ಸವ ಕಾಮನ್ವೆಲ್ತ್ ಕ್ರೀಡಾಕೂಟ 2030ರ ಆತಿಥ್ಯ ವಹಿಸುವ ಬಿಡ್ ಅನ್ನು ಗೆದ್ದಿದೆ ಎಂದು ತಿಳಿದು ಬಹಳಷ್ಟು ಸಂತೋಷವಾಯಿತು!
ಭಾರತದ ಜನರಿಗೆ ಮತ್ತು ಕ್ರೀಡಾ ಪೂರಕ ಪರಿಸರ ವ್ಯವಸ್ಥೆಗೆ ಅಭಿನಂದನೆಗಳು. ನಮ್ಮ ಸಾಮೂಹಿಕ ಬದ್ಧತೆ ಮತ್ತು ಕ್ರೀಡಾ ಮನೋಭಾವವೇ ಭಾರತವನ್ನು ಜಾಗತಿಕ ಕ್ರೀಡಾ ನಕ್ಷೆಯಲ್ಲಿ ದೃಢವಾಗಿ ಇರಿಸಿದೆ.
ವಸುಧೈವ ಕುಟುಂಬಕಂ ಎಂಬ ನೀತಿಯೊಂದಿಗೆ, ನಾವು ಈ ಐತಿಹಾಸಿಕ ಕ್ರೀಡೆಗಳನ್ನು ಬಹಳ ಉತ್ಸಾಹದಿಂದ ಆಚರಿಸಲು ಉತ್ಸುಕರಾಗಿದ್ದೇವೆ.
ನಾವು ಜಗತ್ತನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇವೆ!
https://www.commonwealthsport.com/news/4408937/commonwealth-sport-confirms-amdavad-india-as-host-of-the-2030-centenary-games”
*****
(रिलीज़ आईडी: 2195741)
आगंतुक पटल : 5
इस विज्ञप्ति को इन भाषाओं में पढ़ें:
Punjabi
,
Tamil
,
Telugu
,
Malayalam
,
Odia
,
English
,
Urdu
,
हिन्दी
,
Marathi
,
Manipuri
,
Bengali
,
Assamese
,
Gujarati