ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2001ರ ಮಾರಕ ಭೂಕಂಪದಿಂದ ಕಚ್‌ನ ರೂಪಾಂತರದ ಕುರಿತು ಪ್ರಧಾನಮಂತ್ರಿ ಟ್ವೀಟ್

प्रविष्टि तिथि: 05 APR 2023 10:59AM by PIB Bengaluru

2001ರ ಭೂಕಂಪದ ವಿನಾಶದಿಂದ ಕಚ್ ಒಂದು ಉತ್ತಮ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿರುವುದನ್ನು ಮತ್ತು ಅಭಿವೃದ್ಧಿ ಕಂಡಿರುವುದನ್ನು ಕುರಿತು ಕಚ್ ಸಂಸದ ಶ್ರೀ ವಿನೋದ್ ಚಾವ್ಡಾ ಅವರ ಟ್ವೀಟ್‌ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಸಂಸದರ ಟ್ವೀಟ್ ಥ್ರೆಡ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:

"ಕಚ್ ಬಗ್ಗೆ ಒಂದು ಸುಂದರ ಥ್ರೆಡ್. 2001ರಲ್ಲಿ ಮಾರಕ ಭೂಕಂಪ ಅಪ್ಪಳಿಸಿದಾಗ, ಜನರು ಕಚ್‌ನ ಅಂತ್ಯವನ್ನು ಬರೆದರು. ಆದರೆ ಈ ಜಿಲ್ಲೆಯ ಜನರ ಬಗ್ಗೆ ಒಂದು ಗಮನಾರ್ಹ ವಿಷಯವಿದೆ. ಅವರು ಮತ್ತೆ ಎದ್ದು ನಿಂತು ಜಿಲ್ಲೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಇಂದು ಕಚ್ ಪ್ರವಾಸೋದ್ಯಮಕ್ಕೆ ಒಂದು ಉತ್ತಮ ತಾಣವಾಗಿದೆ."

 

*****

 


(रिलीज़ आईडी: 2188774) आगंतुक पटल : 16
इस विज्ञप्ति को इन भाषाओं में पढ़ें: Marathi , Tamil , Malayalam , Bengali , Manipuri , Odia , English , Urdu , हिन्दी , Assamese , Punjabi , Gujarati , Telugu