ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಪ್ರಗತಿಯಲ್ಲಿ ನೀಲಿ ಆರ್ಥಿಕತೆಯು ಹೇಗೆ ಕೇಂದ್ರವಾಗಿದೆ ಎಂಬ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 19 SEP 2025 1:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಬರೆದ, ಭಾರತದ ಪ್ರಗತಿಯಲ್ಲಿ ನೀಲಿ ಆರ್ಥಿಕತೆಯು ಹೇಗೆ ಕೇಂದ್ರವಾಗಿ, ಸಮೃದ್ಧಿ, ಸುಸ್ಥಿರತೆ ಹಾಗೂ ರಾಷ್ಟ್ರೀಯ ಶಕ್ತಿಯನ್ನು ಒಂದುಗೂಡಿಸುತ್ತಿದೆ ಎಂಬ ಲೇಖನವನ್ನು ಹಂಚಿಕೊಂಡಿದ್ದಾರೆ. “ಸಾಗರಮಾಲಾ, ಆಳ ಸಾಗರ ಗುರಿ ಹಾಗೂ ಹರಿತ್ ಸಾಗರ ಮಾರ್ಗಸೂಚಿಗಳಂತಹ ಉಪಕ್ರಮಗಳ ಜೊತೆಗೆ ಸಮುದಾಯ ಸಬಲೀಕರಣ, ನಾವೀನ್ಯತೆ ಚಾಲನೆ ಹಾಗೂ ಜಾಗತಿಕ ಸಾಗರ ಆಡಳಿತದಲ್ಲಿ ಭಾರತದ ನಾಯಕತ್ವ ಬಲಪಡಿಸುವಲ್ಲಿ ಸಾಗರ ಸಂಪನ್ಮೂಲಗಳ ಬಳಕೆಯನ್ನು ಅವರು ಉಲ್ಲೇಖಿಸಿದ್ದಾರೆ” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. 

ಎಕ್ಸ್ ನಲ್ಲಿ ಡಾ. ಜಿತೇಂದ್ರ ಸಿಂಗ್ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿ, ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ: 

“ಕೇಂದ್ರ ರಾಜ್ಯ ಖಾತೆ ಸಚಿವರಾದ @DrJitendraSingh ಅವರು ಭಾರತದ ಪ್ರಗತಿಯಲ್ಲಿ ನೀಲಿ ಆರ್ಥಿಕತೆಯು ಹೇಗೆ ಕೇಂದ್ರವಾಗಿ, ಸಮೃದ್ಧಿ, ಸುಸ್ಥಿರತೆ ಹಾಗೂ ರಾಷ್ಟ್ರೀಯ ಶಕ್ತಿಯನ್ನು ಒಂದುಗೂಡಿಸುತ್ತಿದೆ ಎಂಬುದರ ಕುರಿತಾಗಿ ಬರೆದಿದ್ದಾರೆ. ಸಾಗರಮಾಲಾ, ಆಳ ಸಾಗರ ಗುರಿ ಹಾಗೂ ಹರಿತ್ ಸಾಗರ ಮಾರ್ಗಸೂಚಿಗಳಂತಹ ಉಪಕ್ರಮಗಳ ಜೊತೆಗೆ ಸಮುದಾಯ ಸಬಲೀಕರಣ, ನಾವೀನ್ಯತೆ ಚಾಲನೆ ಹಾಗೂ ಜಾಗತಿಕ ಸಾಗರ ಆಡಳಿತದಲ್ಲಿ ಭಾರತದ ನಾಯಕತ್ವ ಬಲಪಡಿಸುವಲ್ಲಿ ಸಾಗರ ಸಂಪನ್ಮೂಲಗಳ ಬಳಕೆಯನ್ನು ಅವರು ಉಲ್ಲೇಖಿಸಿದ್ದಾರೆ."

 

 

*****

 


(Release ID: 2168531)