ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಜನ್ ಧನ್ ಯೋಜನೆಯ 11 ಪರಿವರ್ತನಾ ವರ್ಷಗಳನ್ನು ಆಚರಿಸಿದ ಪ್ರಧಾನಮಂತ್ರಿ
प्रविष्टि तिथि:
28 AUG 2025 1:20PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಧಾನಮಂತ್ರಿ ಜನ್ ಧನ್ ಯೋಜನೆಯ (ಪಿ.ಎಂ.ಜೆ.ಡಿ.ವೈ.) 11ನೇ ವಾರ್ಷಿಕೋತ್ಸವವನ್ನು ಆಚರಿಸಿದರು, ಇದು ಭಾರತದಾದ್ಯಂತ ಆರ್ಥಿಕ ಒಳಗೊಳ್ಳುವಿಕೆಯನ್ನು ಮರುರೂಪಿಸಿದ ಪರಿವರ್ತಕ ಉಪಕ್ರಮವಾಗಿದೆ. ಪಿ.ಎಂ.ಜೆ.ಡಿ.ವೈ. ಘನತೆಯನ್ನು ಹೆಚ್ಚಿಸಿದೆ ಮತ್ತು ಕೊನೆಯ ಮೈಲಿಗಳ ಆರ್ಥಿಕ ಒಳಗೊಳ್ಳುವಿಕೆಯನ್ನು ಸಾಧಿಸುವ ಮೂಲಕ ಜನರಿಗೆ ತಮ್ಮದೇ ಆದ ಹಣೆಬರಹವನ್ನು ಬರೆಯುವ ಶಕ್ತಿಯನ್ನು ನೀಡಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ದೃಢಪಡಿಸಿದರು.
X ಖಾತೆಯಲ್ಲಿ MyGovIndia ದ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:
"ಆರ್ಥಿಕ ಹೊರಗಿಡುವಿಕೆಯಿಂದ ಸಬಲೀಕರಣದವರೆಗೆ! ಪಿಎಂ ಜನ್ ಧನ್ ಯೋಜನೆಯು ಭಾರತದಾದ್ಯಂತ ಜೀವನವನ್ನು ಹೇಗೆ ಪರಿವರ್ತಿಸಿದೆ ಎಂಬುದರ ಒಂದು ನೋಟ ಇಲ್ಲಿದೆ.
#11YearsOfJanDhan “
"ಕೊನೆಯ ಮೈಲಿ ಆರ್ಥಿಕವಾಗಿ ಜೋಡಣೆಯಾದಾಗ, ಇಡೀ ರಾಷ್ಟ್ರವು ಒಟ್ಟಾಗಿ ಮುನ್ನಡೆಯುತ್ತದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ನಿಖರವಾಗಿ ಅದನ್ನೇ ಸಾಧಿಸಿದೆ. ಇದು ಘನತೆಯನ್ನು ಹೆಚ್ಚಿಸಿತು ಮತ್ತು ಜನರಿಗೆ ತಮ್ಮದೇ ಆದ ಹಣೆಬರಹವನ್ನು ಬರೆಯುವ ಶಕ್ತಿಯನ್ನು ನೀಡಿತು.
#11YearsOfJanDhan”
*****
(रिलीज़ आईडी: 2161473)
आगंतुक पटल : 37
इस विज्ञप्ति को इन भाषाओं में पढ़ें:
Assamese
,
English
,
Khasi
,
Urdu
,
Marathi
,
हिन्दी
,
Nepali
,
Manipuri
,
Bengali
,
Bengali-TR
,
Punjabi
,
Gujarati
,
Odia
,
Tamil
,
Telugu
,
Malayalam