ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಮಾಸ್ಕೋದಲ್ಲಿ ನಡೆದ ವಿಟಿಬಿ ರಷ್ಯಾ ಕಾಲಿಂಗ್ ಇನ್ವೆಸ್ಟ್ ಮೆಂಟ್ ಫೋರಂನಲ್ಲಿ ಪ್ರಧಾನಮಂತ್ರಿ ಮೋದಿಯವರ "ಭಾರತ-ಮೊದಲು" ನೀತಿ ಮತ್ತು "ಮೇಕ್ ಇನ್ ಇಂಡಿಯಾ" ಉಪಕ್ರಮವನ್ನು ರಷ್ಯಾ ಅಧ್ಯಕ್ಷರಾದ ಪುಟಿನ್ ಶ್ಲಾಘಿಸಿದ್ದಾರೆ
ಭಾರತದಲ್ಲಿ ಉತ್ಪಾದನಾ ಕಾರ್ಯಾಚರಣೆಗಳನ್ನು ಸ್ಥಾಪಿಸುವ ರಷ್ಯಾದ ಇಚ್ಛೆಯನ್ನು ಅಧ್ಯಕ್ಷರಾದ ಪುಟಿನ್ ಎತ್ತಿ ತೋರಿಸಿದ್ದಾರೆ
ಎಸ್ ಎಂ ಇ ಗಳ ಬೆಳವಣಿಗೆಗಾಗಿ ರಷ್ಯಾ-ಭಾರತ ಸಹಕಾರಕ್ಕೆ ಅಧ್ಯಕ್ಷರಾದ ಪುಟಿನ್ ಒತ್ತು ನೀಡಿದ್ದಾರೆ
ಜಾಗತಿಕ ದಕ್ಷಿಣದ ಆರ್ಥಿಕತೆಯನ್ನು ಬೆಂಬಲಿಸಲು ಬ್ರಿಕ್ಸ್ ಹೂಡಿಕೆ ವೇದಿಕೆಯು ಪ್ರಮುಖವಾಗಿದೆ ಎಂದು ಅಧ್ಯಕ್ಷರಾದ ಪುಟಿನ್ ಅಭಿಪ್ರಾಯಪಟ್ಟಿದ್ದಾರೆ
Posted On:
05 DEC 2024 12:48PM by PIB Bengaluru
ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರು 15ನೇ ವಿಟಿಬಿ ರಷ್ಯಾ ಕಾಲಿಂಗ್ ಇನ್ವೆಸ್ಟ್ಮೆಂಟ್ ಫೋರಂನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಭಾರತ-ಮೊದಲು" ನೀತಿ ಮತ್ತು "ಮೇಕ್ ಇನ್ ಇಂಡಿಯಾ" ಉಪಕ್ರಮವನ್ನು ಶ್ಲಾಘಿಸಿದ್ದಾರೆ. ಬೆಳವಣಿಗೆಗೆ ಸ್ಥಿರವಾದ ವಾತಾವರಣವನ್ನು ಉತ್ತೇಜಿಸುವ ಭಾರತದ ಪ್ರಯತ್ನಗಳನ್ನು ಅಧ್ಯಕ್ಷರಾದ ಪುಟಿನ್ ಅವರು ಶ್ಲಾಘಿಸಿದರು, ಈ ನೀತಿಗಳು ಭಾರತದ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡಿವೆ ಎಂಬುದನ್ನು ಅವರು ಒತ್ತಿ ಹೇಳಿದರು.
ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ "ಮೇಕ್ ಇನ್ ಇಂಡಿಯಾ" ಉಪಕ್ರಮವು ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಒತ್ತಿ ಹೇಳಿದರು. ಅಧ್ಯಕ್ಷರಾದ ಪುಟಿನ್ ಅವರ ಹೇಳಿಕೆಗಳು ಪ್ರಧಾನಮಂತ್ರಿ ಮೋದಿಯವರ ನಾಯಕತ್ವದಲ್ಲಿ ಭಾರತದ ಆರ್ಥಿಕ ಪ್ರಗತಿಯನ್ನು ಒತ್ತಿಹೇಳಿವೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (ಎಸ್ ಎಂ ಇ) "ಸ್ಥಿರ ಪರಿಸ್ಥಿತಿಗಳನ್ನು" ನಿರ್ಮಿಸುವಲ್ಲಿ ಭಾರತ ಸರ್ಕಾರದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು, ವಿಶೇಷವಾಗಿ "ಮೇಕ್ ಇನ್ ಇಂಡಿಯಾ" ಕಾರ್ಯಕ್ರಮದ ಮೇಲೆ ವಿಶೇಷ ಗಮನಹರಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಆರ್ಥಿಕ ಉಪಕ್ರಮಗಳನ್ನು ಎತ್ತಿ ತೋರಿಸಿದರು.
ರಷ್ಯಾದ ಆಮದು ಪರ್ಯಾಯ ಕಾರ್ಯಕ್ರಮ ಮತ್ತು ಭಾರತದ "ಮೇಕ್ ಇನ್ ಇಂಡಿಯಾ" ಉಪಕ್ರಮಗಳು ಸಮಾನ ಅಂಶಗಳನ್ನು ಹೊಂದಿದ್ದು, ಭಾರತದಲ್ಲಿ ಉತ್ಪಾದನಾ ಕಾರ್ಯಾಚರಣೆಗಳನ್ನು ಸ್ಥಾಪಿಸುವ ರಷ್ಯಾದ ಇಚ್ಛೆಯನ್ನು ಅಧ್ಯಕ್ಷರಾದ ಪುಟಿನ್ ಅವರು ವ್ಯಕ್ತಪಡಿಸಿದರು. ಭಾರತದಲ್ಲಿ ಹೂಡಿಕೆ ಲಾಭದಾಯಕವಾಗಿದೆ ಎಂದು ಅವರು ಹೇಳಿದರು. ಭಾರತದ ನಾಯಕತ್ವವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುವತ್ತ ಗಮನಹರಿಸಿದೆ ಎಂದು ಅವರು ಒತ್ತಿ ಹೇಳಿದರು.
"ಪ್ರಧಾನಮಂತ್ರಿ ಮೋದಿ ಅವರು ಮೇಕ್ ಇನ್ ಇಂಡಿಯಾ ಎಂಬ ಇದೇ ರೀತಿಯ ಕಾರ್ಯಕ್ರಮವನ್ನು ಹೊಂದಿದ್ದಾರೆ. ನಾವು ಭಾರತದಲ್ಲಿ ನಮ್ಮ ಉತ್ಪಾದನಾ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಸಿದ್ಧರಿದ್ದೇವೆ. ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ʼಭಾರತ ಮೊದಲುʼ ನೀತಿಯಿಂದ ಸ್ಥಿರವಾದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಎಂದು ನಾವು ನಂಬುತ್ತೇವೆ" ಎಂದು ರಷ್ಯಾದ ಅಧ್ಯಕ್ಷರು ಹೇಳಿದರು. ರಷ್ಯಾದ ಕಂಪನಿ ರಾಸ್ನೆಫ್ಟ್ ಇತ್ತೀಚೆಗೆ ದೇಶದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ ಎಂದು ಅವರು ಹೇಳಿದರು.
ಬ್ರಿಕ್ಸ್ ವಿಕಸನಗೊಳ್ಳುತ್ತಿರುವ ಸಂದರ್ಭದಲ್ಲಿ ರಷ್ಯಾದ ಆಮದು ಪರ್ಯಾಯ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ಅಧ್ಯಕ್ಷರಾದ ಪುಟಿನ್ ಅವರು ಎತ್ತಿ ತೋರಿಸಿದರು, ಎಸ್ ಎಂ ಇ ಗಳ ಅಭಿವೃದ್ಧಿ ಮತ್ತು ಬ್ರಿಕ್ಸ್ + ದೇಶಗಳಲ್ಲಿ ಎಸ್ ಎಂ ಇ ಗಳಿಗೆ ವ್ಯಾಪಾರ ವಹಿವಾಟುಗಳನ್ನು ಸುಗಮಗೊಳಿಸಲು ತ್ವರಿತ ವಿವಾದ ಪರಿಹಾರ ಕಾರ್ಯವಿಧಾನದ ಅಗತ್ಯತೆಯ ಬಗ್ಗೆ ಕೇಂದ್ರೀಕರಿಸಿದರು.
ಮಾರುಕಟ್ಟೆಯಿಂದ ನಿರ್ಗಮಿಸಿದ ಪಾಶ್ಚಿಮಾತ್ಯ ಬ್ರಾಂಡ್ ಗಳನ್ನು ಬದಲಿಸಿದ ರಷ್ಯಾದ ಹೊಸ ಬ್ರ್ಯಾಂಡ್ ಗಳ ಏರಿಕೆಯ ಬಗ್ಗೆ ಅವರು ಗಮನಸೆಳೆದರು, ಗ್ರಾಹಕ ಸರಕುಗಳು, ಐಟಿ, ಹೈಟೆಕ್ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ರಷ್ಯಾದ ಸ್ಥಳೀಯ ತಯಾರಕರ ಯಶಸ್ಸನ್ನು ವಿವರಿಸಿದರು.
"ನಮಗೆ, ನಮ್ಮ ಆಮದು ಪರ್ಯಾಯ ಕಾರ್ಯಕ್ರಮದ ಭಾಗವಾಗಿ ಇದು ವಿಶೇಷವಾಗಿ ಮುಖ್ಯವಾಗಿದೆ. ರಷ್ಯಾದ ಹೊಸ ಬ್ರ್ಯಾಂಡ್ ಗಳ ಹೊರಹೊಮ್ಮುವಿಕೆಯು ನಮ್ಮ ಮಾರುಕಟ್ಟೆಯನ್ನು ಸ್ವಯಂಪ್ರೇರಣೆಯಿಂದ ತೊರೆದ ಪಾಶ್ಚಿಮಾತ್ಯ ಕಂಪನಿಗಳನ್ನು ಬದಲಿಸಲು ಸಹಾಯ ಮಾಡುತ್ತಿದೆ. ನಮ್ಮ ಸ್ಥಳೀಯ ತಯಾರಕರು ಗ್ರಾಹಕ ಸರಕುಗಳಲ್ಲಿ ಮಾತ್ರವಲ್ಲದೆ ಐಟಿ ಮತ್ತು ಹೈಟೆಕ್ ಉದ್ಯಮಗಳಲ್ಲಿಯೂ ಸಹ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ" ಎಂದು ಅವರು ಹೇಳಿದರು.
ಎಸ್ ಎಂ ಇ ಗಳ ಬೆಳವಣಿಗೆಯನ್ನು ಬೆಂಬಲಿಸಲು ಬ್ರಿಕ್ಸ್ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಕಾರಕ್ಕಾಗಿ ಅಧ್ಯಕ್ಷರಾದ ಪುಟಿನ್ ಕರೆ ನೀಡಿದರು ಮತ್ತು ಮುಂದಿನ ವರ್ಷ ಬ್ರೆಜಿಲ್ ನಲ್ಲಿ ನಡೆಯುವ ಶೃಂಗಸಭೆಯಲ್ಲಿ ಸಹಯೋಗಕ್ಕಾಗಿ ಪ್ರಮುಖ ಕ್ಷೇತ್ರಗಳನ್ನು ಗುರುತಿಸಲು ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದರು. ಬ್ರಿಕ್ಸ್ ನೊಂದಿಗೆ ರಷ್ಯಾ ಅಭಿವೃದ್ಧಿ ಪಡಿಸುತ್ತಿರುವ ಹೂಡಿಕೆ ವೇದಿಕೆಯನ್ನು ಉಲ್ಲೇಖಿಸಿದ ಅಧ್ಯಕ್ಷರಾದ ಪುಟಿನ್, ಇದು ಎಲ್ಲಾ ಪಾಲುದಾರ ದೇಶಗಳಿಗೆ ಪ್ರಯೋಜನವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ನಮ್ಮ ಆರ್ಥಿಕತೆಯನ್ನು ಬೆಂಬಲಿಸಲು ಮತ್ತು ಜಾಗತಿಕ ದಕ್ಷಿಣ ಮತ್ತು ಪೂರ್ವದ ದೇಶಗಳಿಗೆ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವ ಪ್ರಮುಖ ಸಾಧನವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
"ಸಹಕಾರದ ಪ್ರಮುಖ ಕ್ಷೇತ್ರಗಳಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ನಾನು ನಮ್ಮ ಬ್ರಿಕ್ಸ್ ಸಹೋದ್ಯೋಗಿಗಳನ್ನು ಒತ್ತಾಯಿಸುತ್ತೇನೆ ಮತ್ತು ಮುಂದಿನ ವರ್ಷ ಬ್ರಿಕ್ಸ್ ಅನ್ನು ಮುನ್ನಡೆಸುವ ನಮ್ಮ ಬ್ರೆಜಿಲಿಯನ್ ಸಹವರ್ತಿಯ ಗಮನಕ್ಕೆ ಇದನ್ನು ನಾವು ಖಂಡಿತವಾಗಿಯೂ ತರುತ್ತೇವೆ" ಎಂದು ಅವರು ಹೇಳಿದರು.
ವಿವರಗಳಿಗಾಗಿ ನೋಡಿ: http://en.kremlin.ru/events/president/news/75751
*****
(Release ID: 2081031)
Visitor Counter : 62
Read this release in:
Khasi
,
English
,
Urdu
,
Marathi
,
Nepali
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam