ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪೋಲೆಂಡ್ ನ ವಾರ್ಸಾದ ಕೊಲ್ಹಾಪುರ ಸ್ಮಾರಕಕ್ಕೆ ಪ್ರಧಾನ ಮಂತ್ರಿಯವರಿಂದ ಗೌರವ ನಮನ

Posted On: 21 AUG 2024 10:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪೋಲೆಂಡ್ ನ ವಾರ್ಸಾದಲ್ಲಿರುವ ಕೊಲ್ಹಾಪುರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ದಾರೆ. ಈ ಸ್ಮಾರಕವು ಕೊಲ್ಹಾಪುರದ ಶ್ರೇಷ್ಠ ರಾಜಮನೆತನಕ್ಕೆ ಗೌರವಾರ್ಪಣೆಯಾಗಿದೆ ಎಂದು ಶ್ರೀ ಮೋದಿಯವರು ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಮಹಾಯುದ್ಧದ ಭೀಕರತೆಯಿಂದಾಗಿ ಸ್ಥಳಾಂತರಗೊಂಡ ಪೋಲೆಂಡ್ ನ ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ ನೀಡುವಲ್ಲಿ ಈ ರಾಜಮನೆತನವು ಮುಂಚೂಣಿಯಲ್ಲಿತ್ತು ಎಂದು ಶ್ರೀ ಮೋದಿಯವರು ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳಿಂದ ಪ್ರೇರಿತರಾದ ಕೊಲ್ಹಾಪುರದ ಮಹಾನ್ ರಾಜಮನೆತನವು ಮಾನವೀಯತೆಯೇ ಎಲ್ಲಕ್ಕಿಂತ ಹೆಚ್ಚು ಎಂದು ಪರಿಗಣಿಸಿ, ಪೋಲೆಂಡ್ ನ ಮಹಿಳೆಯರು ಮತ್ತು ಮಕ್ಕಳಿಗೆ ಘನತೆಯ ಜೀವನವನ್ನು ನೀಡುವುದರಲ್ಲಿ ಸಫಲವಾಗಿತ್ತು ಎಂದು ಪ್ರಧಾನಮಂತ್ರಿಯವರು ಹೇಳಿದರು.

ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿ;

"ವಾರ್ಸಾದ ಕೊಲ್ಹಾಪುರ ಸ್ಮಾರಕದಲ್ಲಿ ಗೌರವ ಸಲ್ಲಿಸಿದ್ದೇನೆ. ಈ ಸ್ಮಾರಕವು ಕೊಲ್ಹಾಪುರದ ಮಹಾನ್ ರಾಜಮನೆತನಕ್ಕೆ ಗೌರವಾರ್ಪಣೆಯ ಸಂಕೇತವಾಗಿದೆ. ಈ ರಾಜಮನೆತನವು ಎರಡನೇ ಮಹಾಯುದ್ಧದ ಭೀಕರತೆಯಿಂದಾಗಿ ಸ್ಥಳಾಂತರಗೊಂಡ ಪೋಲೆಂಡ್ ನ ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ ನೀಡುವಲ್ಲಿ ಮುಂಚೂಣಿಯಲ್ಲಿತ್ತು. ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳಿಂದ ಪ್ರೇರಿತರಾದ ಕೊಲ್ಹಾಪುರದ ಮಹಾನ್ ರಾಜಮನೆತನವು ಮಾನವೀಯತೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಪರಿಗಣಿಸಿ, ಪೋಲೆಂಡ್ ಮಹಿಳೆಯರು ಮತ್ತು ಮಕ್ಕಳಿಗೆ ಘನತೆಯ ಜೀವನವನ್ನು ನೀಡಿತ್ತು. ಈ ಸಹಾನುಭೂತಿಯ ಕಾರ್ಯವು ತಲೆಮಾರುಗಳಿಗೆ ಸ್ಫೂರ್ತಿದಾಯಕವಾಗಿದೆ" ಎಂದು ಹೇಳಿಕೊಂಡಿದ್ದಾರೆ.

 

 

*****


(Release ID: 2047644) Visitor Counter : 34