ಪ್ರಧಾನ ಮಂತ್ರಿಯವರ ಕಛೇರಿ

2023-24ರಲ್ಲಿ ರಕ್ಷಣಾ ವಲಯ ಉತ್ಪಾದನೆಯಲ್ಲಿ ಭಾರತದ ಅತ್ಯಧಿಕ ಬೆಳವಣಿಗೆ: ಪ್ರಧಾನ ಮಂತ್ರಿ ಮೋದಿ ಶ್ಲಾಘನೆ 

Posted On: 05 JUL 2024 12:34PM by PIB Bengaluru

2023-24ರಲ್ಲಿ ರಕ್ಷಣಾ ವಲಯ ಉತ್ಪಾದನೆಯಲ್ಲಿ ಭಾರತ ಅತ್ಯಧಿಕ ಬೆಳವಣಿಗೆ ಕಂಡಿದ್ದು ಅದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ರಕ್ಷಣಾ ವಲಯದ ಉತ್ಪಾದನೆಯಲ್ಲಿ ಈ ವರ್ಷ 1,26,887 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 16.8ರಷ್ಟು ಹೆಚ್ಚಳವಾಗಿದೆ. 

ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹಂಚಿಕೊಂಡಿರುವ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿಗಳು:

“ಇದು ಉತ್ತಮ ಪ್ರೋತ್ಸಾಹದಾಯಕ ಅಭಿವೃದ್ಧಿಯಾಗಿದೆ. ಈ ಸಾಧನೆಗೆ ಕಾರಣಕರ್ತರಾದ ಎಲ್ಲರಿಗೂ ನಾನು ಅಭಿನಂದನೆ ಹೇಳುತ್ತೇನೆ. ನಮ್ಮ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಭಾರತವನ್ನು ಪ್ರಮುಖ ಜಾಗತಿಕ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ರೂಪಿಸಲು ಪೂರಕ ವಾತಾವರಣವನ್ನು ನಿರ್ಮಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಇದು ನಮ್ಮ ದೇಶದ ಭದ್ರತಾ ವಲಯವನ್ನು ವೃದ್ಧಿಸುವುದಲ್ಲದೆ ನಮ್ಮನ್ನು ಆತ್ಮನಿರ್ಭರರನ್ನಾಗಿ ಮಾಡುತ್ತದೆ! ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. 

 

 

*****



(Release ID: 2030986) Visitor Counter : 16