ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಸ್ಸಾಂನ ಚಹಾ ತೋಟದ ಗಾರ್ಡನ್ ಸಮುದಾಯವನ್ನು ಅವರ ಕಠಿಣ ಪರಿಶ್ರಮಕ್ಕಾಗಿ ಶ್ಲಾಘಿಸಿದ ಪ್ರಧಾನಮಂತ್ರಿ


ಚಹಾ ತೋಟಗಳಿಗೆ ಭೇಟಿ ನೀಡುವಂತೆ ಪ್ರವಾಸಿಗರನ್ನು ಒತ್ತಾಯಿಸಿದರು

प्रविष्टि तिथि: 09 MAR 2024 2:15PM by PIB Bengaluru

ಅಸ್ಸಾಂ ಚಹಾವು ಪ್ರಪಂಚದಾದ್ಯಂತ ತನ್ನ ಮಾರುಕಟ್ಟೆ ಕ್ಷೇತ್ರ ಹಿಡಿದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದರು. ಅಸ್ಸಾಂನ ಚಹಾ ತೋಟದ ಗಾರ್ಡನ್ ಸಮುದಾಯವನ್ನು ಅವರ ಕಠಿಣ ಪರಿಶ್ರಮಕ್ಕಾಗಿ ಪ್ರಧಾನಮಂತ್ರಿಯವರು ಶ್ಲಾಘಿಸಿದರು

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:

 "ಅಸ್ಸಾಂ ತನ್ನ ಭವ್ಯವಾದ ಚಹಾ ತೋಟಗಳಿಗೆ ಹೆಸರುವಾಸಿಯಾಗಿದೆ ಮತ್ತು ಅಸ್ಸಾಂ ಚಹಾವು ಪ್ರಪಂಚದಾದ್ಯಂತ ತನ್ನ ಮಾರುಕಟ್ಟೆ ದಾರಿಯನ್ನು ಮಾಡಿಕೊಂಡಿದೆ.

ಪ್ರಪಂಚದಾದ್ಯಂತ ಅಸ್ಸಾಂನ ಪ್ರತಿಷ್ಠೆಯನ್ನು ವರ್ಧಿಸುವ ಮತ್ತು ಶ್ರಮಿಸುತ್ತಿರುವ ಗಮನಾರ್ಹ ಅಸ್ಸಾಂನ ಚಹಾ ತೋಟದ ಗಾರ್ಡನ್ ಸಮುದಾಯವನ್ನು ಅವರ ಕಠಿಣ ಪರಿಶ್ರಮಕ್ಕಾಗಿ  ನಾನು ಶ್ಲಾಘಿಸಲು ಬಯಸುತ್ತೇನೆ.

ಪ್ರವಾಸಿಗರು ಅಸ್ಸಾಂ ರಾಜ್ಯಕ್ಕೆ ಭೇಟಿ ನೀಡುವಾಗ,  ಈ ಸುಂದರ ಚಹಾ ತೋಟಗಳಿಗೆ ಭೇಟಿ ನೀಡುವಂತೆ ನಾನು ಎಲ್ಲರನ್ನು ಒತ್ತಾಯಿಸುತ್ತೇನೆ.
 

***


(रिलीज़ आईडी: 2013038) आगंतुक पटल : 109
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam