ಪ್ರಧಾನ ಮಂತ್ರಿಯವರ ಕಛೇರಿ

ಭಗವಾನ್ ಬುದ್ಧನ ಆದರ್ಶಗಳಿಗೆ ಪ್ರಧಾನಿ ಮೋದಿ ಶ್ಲಾಘನೆ

Posted On: 05 MAR 2024 9:47AM by PIB Bengaluru

 ಫೆಬ್ರವರಿ 23 ರಿಂದ ಮಾರ್ಚ್ 3, 2024 ರವರೆಗೆ ಬ್ಯಾಂಕಾಕ್‌ನಲ್ಲಿ ಭಗವಾನ್ ಬುದ್ಧ ಮತ್ತು ಅವರ ಶಿಷ್ಯರಾದ ಅರಹಂತ ಸಾರಿಪುತ್ತ ಮತ್ತು ಅರಹಂತ್ ಮಹಾ ಮೊಗ್ಗಲ್ಲಾನ ಅವರ ಪವಿತ್ರ ಸ್ಮಾರಕಗಳಿಗೆ ಥೈಲ್ಯಾಂಡ್‌ನ ಲಕ್ಷಾಂತರ ಭಕ್ತರು ಪೂಜೆ ಸಲ್ಲಿಸಿದ್ದು, ಭಗವಾನ್ ಬುದ್ಧನ ಆದರ್ಶಗಳನ್ನು ಪಾಲಿಸುತ್ತಿರುವ ಜನರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 

ಚಿಯಾಂಗ್ ಮಾಯ್, ಉಬೊನ್ ರಾಟ್ಚಥನಿ ಮತ್ತು ಕ್ರಾಬಿಯಲ್ಲಿ ಮುಂದಿನ ದಿನಗಳಲ್ಲಿ ಭಕ್ತರು ಸ್ಮಾರಕಗಳಿಗೆ ಭೇಟಿ ನೀಡಿ ನಮನ ಸಲ್ಲಿಸುವಂತೆ ಮನವಿ ಮಾಡಿದರು. 

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,

"ಭಗವಾನ್ ಬುದ್ಧನ ಆದರ್ಶಗಳು ಭಾರತ ಮತ್ತು ಥೈಲ್ಯಾಂಡ್ ನಡುವೆ ಆಧ್ಯಾತ್ಮಿಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ, ಆಳವಾದ ಬೇರೂರಿರುವ ಸಂಪರ್ಕವನ್ನು ಬೆಳೆಸುತ್ತವೆ. ಭಕ್ತರು ಆಧ್ಯಾತ್ಮಿಕವಾಗಿ ಶ್ರೀಮಂತ ಅನುಭವವನ್ನು ಹೊಂದಿದ್ದಾರೆಂದು ತಿಳಿದು ನನಗೆ ಖುಷಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿಯಾಂಗ್ ಮಾಯ್, ಉಬೊನ್ ರಾಟ್ಚಥನಿ ಮತ್ತು ಕ್ರಾಬಿಯಲ್ಲಿ ಸ್ಮಾರಕಗಳನ್ನು ನಿರ್ಮಿಸಲಾಗುತ್ತಿದ್ದು, ಭಕ್ತರು ಅಲ್ಲಿ ಪೂಜೆ ಸಲ್ಲಿಸುವಂತೆ ನಾನು ಕೋರುತ್ತೇನೆ.'' ಎಂದು ಬರೆದುಕೊಂಡಿದ್ದಾರೆ.



(Release ID: 2011691) Visitor Counter : 47