ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ-2023 ಅಂಗೀಕಾರವು ನಮ್ಮ ಇತಿಹಾಸದಲ್ಲಿ ಒಂದು ಬಹುದೊಡ್ಡ ಬದಲಾವಣೆಯ ಕ್ಷಣವಾಗಿದೆ: ಪ್ರಧಾನಿ


ಸಾರ್ವಜನಿಕ ಸೇವೆ ಮತ್ತು ಕಲ್ಯಾಣ ಕೇಂದ್ರಿತ ಕಾನೂನುಗಳೊಂದಿಗೆ ಹೊಸ ಯುಗ ಪ್ರಾರಂಭವಾಗಿದೆ: ಪ್ರಧಾನಿ

Posted On: 21 DEC 2023 9:00PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ-2023 ಅನ್ನು ಸಂಸತ್ತು ಅಂಗೀಕರಿಸಿರುವುದನ್ನು ಶ್ಲಾಘಿಸಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಐತಿಹಾಸಿಕ(ಬಹುದೊಡ್ಡ ಬದಲಾವಣೆ) ಕ್ಷಣ ಎಂದು ಕರೆದಿದ್ದಾರೆ. ಈ ಮಸೂದೆಗಳು ಸಮಾಜದ ಬಡವರು, ನಿರ್ಲಕ್ಷಿತರು ಮತ್ತು ದುರ್ಬಲ ವರ್ಗಗಳಿಗೆ ಹೆಚ್ಚಿನ ರಕ್ಷಣೆ ಖಾತ್ರಿಪಡಿಸುತ್ತವೆ. ಸಂಘಟಿತ ಅಪರಾಧ, ಭಯೋತ್ಪಾದನೆ ಮತ್ತು ಇತರ ಅಪರಾಧಗಳ ನಿಯಂತ್ರಣಕ್ಕೆ ಅವಕಾಶ ಕಲ್ಪಿಸುತ್ತವೆ. ಈ ಕಾನೂನು ಸುಧಾರಣೆಗಳು ಭಾರತದ ಕಾನೂನು ಚೌಕಟ್ಟನ್ನು ಹೆಚ್ಚು ಪ್ರಸ್ತುತವಾಗುವಂತೆ ಮತ್ತು ಅಮೃತ ಕಾಲದಲ್ಲಿ ಪರಾನುಭೂತಿಯಿಂದ ಮರುವ್ಯಾಖ್ಯಾನಿಸುತ್ತವೆ ಎಂದು ಪ್ರಧಾನ ಮಂತ್ರಿ ಹೇಳಿದರು. ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 3 ವಿಧೇಯಕಗಳ ಕುರಿತು ಚರ್ಚೆ ನಡೆಸುತ್ತಿರುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ:

“ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ-2023ರ ಅಂಗೀಕಾರವು ನಮ್ಮ ಇತಿಹಾಸದಲ್ಲಿ ಒಂದು ಅದ್ಭುತ ಬದಲಾವಣೆಯ ಕ್ಷಣವಾಗಿದೆ. ಈ ಮಸೂದೆಗಳು ವಸಾಹತುಶಾಹಿ ಯುಗದ ಕಾನೂನುಗಳ ಅಂತ್ಯವನ್ನು ಸೂಚಿಸುತ್ತವೆ. ಸಾರ್ವಜನಿಕ ಸೇವೆ ಮತ್ತು ಕಲ್ಯಾಣ ಕೇಂದ್ರಿತ ಕಾನೂನುಗಳೊಂದಿಗೆ ಹೊಸ ಯುಗ ಪ್ರಾರಂಭವಾಗಿದೆ ಎಂದಿದ್ದಾರೆ.

ಈ ಪರಿವರ್ತನೀಯ ಮಸೂದೆಗಳು ಸುಧಾರಣೆಗಳನ್ನು ತರುವ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ. ತಂತ್ರಜ್ಞಾನ ಮತ್ತು ನ್ಯಾಯ ವಿಜ್ಞಾನದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ನಮ್ಮ ಕಾನೂನು, ಪೊಲೀಸ್ ಮತ್ತು ತನಿಖಾ ವ್ಯವಸ್ಥೆಗಳನ್ನು ಆಧುನಿಕ ಯುಗಕ್ಕೆ ತರಲಾಗಿದೆ. ಈ ಮಸೂದೆಗಳು ನಮ್ಮ ಸಮಾಜದ ಬಡವರು, ನಿರ್ಲಕ್ಷಿತರು ಮತ್ತು ದುರ್ಬಲ ವರ್ಗಗಳಿಗೆ ಹೆಚ್ಚಿನ ರಕ್ಷಣೆ ಖಚಿತಪಡಿಸುತ್ತವೆ ಎಂದು ಪ್ರಧಾನಿ ತಿಳಿಸಿದರು.

ಅದೇ ಸಮಯದಲ್ಲಿ, ಈ ಮಸೂದೆಗಳು ಸಂಘಟಿತ ಅಪರಾಧ, ಭಯೋತ್ಪಾದನೆ ಮತ್ತು ಪ್ರಗತಿಯತ್ತ ನಮ್ಮ ಶಾಂತಿಯುತ ಪ್ರಯಾಣದ ಮೂಲವನ್ನು ಒಡೆಯುವ ಇಂತಹ ಅಪರಾಧಗಳ ನಿಯಂತ್ರಣಕ್ಕೆ ಅವಕಾಶ ಕಲ್ಪಿಸುತ್ತವೆ. ಇದರ ಮೂಲಕ ನಾವು ದೇಶದ್ರೋಹದ ಹಳತಾದ ವಿಷಯಗಳಿಗೆ ವಿದಾಯ ಹೇಳಿದ್ದೇವೆ.

ನಮ್ಮ ಅಮೃತ ಕಾಲಘಟಟ್ದಲ್ಲಿ ಈ ಕಾನೂನು ಸುಧಾರಣೆಗಳು ನಮ್ಮ ಕಾನೂನು ಚೌಕಟ್ಟನ್ನು ಹೆಚ್ಚು ಪ್ರಸ್ತುತ ಮತ್ತು ಪರಾನುಭೂತಿ ಚಾಲಿತವಾಗುವಂತೆ ಮರುವ್ಯಾಖ್ಯಾನಿಸಿವೆ. ಗೃಹ ಸಚಿವ ಶ್ರೀ ಅಮಿತ್ ಶಾ ಜಿಯವರ ಭಾಷಣವು ಈ ಮಸೂದೆಗಳ ಪ್ರಮುಖ ಲಕ್ಷಣಗಳನ್ನು ಮತ್ತಷ್ಟು ವಿವರಿಸುತ್ತವೆ ಎಂದು ಪ್ರಧಾನಿ ತಿಳಿಸಿದರು.

***



(Release ID: 1989506) Visitor Counter : 225