ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೂರದೃಷ್ಟಿಯ ನೇತ್ರತಜ್ಞ ಮತ್ತು ಶಂಕರ ನೇತ್ರಾಲಯದ ಸ್ಥಾಪಕ ಡಾ. ಎಸ್.ಎಸ್. ಬದರೀನಾಥ್ ಅವರ ನಿಧನಕ್ಕೆ ಪ್ರಧಾನಮಂತ್ರಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ

प्रविष्टि तिथि: 21 NOV 2023 1:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೂರದೃಷ್ಟಿಯ ನೇತ್ರತಜ್ಞ ಮತ್ತು ಶಂಕರ ನೇತ್ರಾಲಯದ ಸ್ಥಾಪಕ ಡಾ. ಎಸ್.ಎಸ್. ಬದ್ರಿನಾಥ್ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:

"ದೂರದೃಷ್ಟಿಯ, ನೇತ್ರಶಾಸ್ತ್ರದ ತಜ್ಞ ಮತ್ತು ಶಂಕರ ನೇತ್ರಾಲಯದ ಸಂಸ್ಥಾಪಕ ಡಾ.ಎಸ್.ಎಸ್.ಬದ್ರಿನಾಥ್ ಜೀ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಕಣ್ಣಿನ ಆರೈಕೆಗೆ ಅವರ ಕೊಡುಗೆಗಳು ಮತ್ತು ಸಮಾಜಕ್ಕೆ ಅವರ ಅವಿರತ ಸೇವೆ ಅಳಿಸಲಾಗದ ಗುರುತನ್ನು ಬಿಟ್ಟಿದೆ. ಅವರ ಕೆಲಸವು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಸಂತಾಪಗಳು. ಓಂ ಶಾಂತಿ," ಎಂದಿದ್ದಾರೆ.

***


(रिलीज़ आईडी: 1978503) आगंतुक पटल : 116
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Assamese , Bengali , Punjabi , Gujarati , Odia , Tamil , Telugu , Malayalam