ಪ್ರಧಾನ ಮಂತ್ರಿಯವರ ಕಛೇರಿ

ಪ್ಯಾರಾ ಬ್ಯಾಡ್ಮಿಂಟನ್ ಮಹಿಳಾ ಡಬಲ್ಸ್ SH6 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ನಿತ್ಯಾ ಶ್ರೀ ಶಿವನ್ ಮತ್ತು ರಚನಾ ಪಟೇಲ್ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು

Posted On: 26 OCT 2023 9:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಏಷ್ಯನ್ ಪ್ಯಾರಾ ಗೇಮ್ಸ್ ನ ಪ್ಯಾರಾ ಬ್ಯಾಡ್ಮಿಂಟನ್ ಮಹಿಳಾ ಡಬಲ್ಸ್ ಎಸ್ ಎಚ್ 6 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ನಿತ್ಯಾ ಶ್ರೀ ಶಿವನ್ ಮತ್ತು ರಚನಾ ಪಟೇಲ್ ಅವರನ್ನು ಅಭಿನಂದಿಸಿದರು.

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಮಹಿಳಾ ಡಬಲ್ಸ್ ಎಸ್ಎಚ್ 6 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ @07nithyasre ಮತ್ತು ರಚನಾ ಪಟೇಲ್ ಅವರಿಗೆ ಅಭಿನಂದನೆಗಳು.

ಈ ಸಾಧನೆಗೆ ಅವರ ಕೌಶಲ್ಯ ಮತ್ತು ಅವರ ತಂಡದ ಕೆಲಸದ ಶಕ್ತಿ ಕಾರಣವಾಗಿದೆ. ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಕೆಗಳು" ಎಂದು ಟ್ವೀಟ್ ಮಾಡಿದ್ದಾರೆ.

***

 

 



(Release ID: 1974060) Visitor Counter : 63